“ಹೇಳಿರಿ, ಅವನು ಅಲ್ಲಾಹನು ಏಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ ಕುರ್ಆನ್: 112) ಕುರ್ಆನ್ನಲ್ಲಿ ಏಕದೇವ ಸಿದ್ಧಾಂತದ ಸಮಗ್ರ ಪರಿಕಲ್ಪನೆಯ ಸಂಕ್ಷಿಪ್ತ ರೂಪವಾಗಿದೆ ಈ ಅಧ್ಯಾಯ. `ಅಲ್ಲಾಹ್’ ಎಂಬುದು ಅರಬಿಕ್ ಪದವೇ ಹೊರತು ಅದು ಮುಸ್ಲಿಮರ ದೇವರಲ್ಲ. ಸೃಷ್ಟಿಕರ್ತ, ಒಡೆಯ, ಅನ್ನದಾತ, ಆರಾಧ್ಯ ದೇವ, ವ್ಯವಸ್ಥಾಪಕ ಇತ್ಯಾದಿ …
Read More »ಮೈಸೂರಿನ ಶಿವಮ್ಮ, ಇಂಗ್ಲೆಂಡಿನ ಬಟ್ಲರ್ ಮತ್ತು ಸಂದೇಶ
ಎರಡು ಘಟನೆಗಳು ನಡೆದುವು. 1. ಮೈಸೂರಿನ ಮಂಡಿ ಮೊಹಲ್ಲಾದ ಸುನ್ನಿ ಚೌಕ್ನಲ್ಲಿ ಶಿವಮ್ಮಾ ಎಂಬವರು ಮೃತಪಟ್ಟರು. 30 ವರ್ಷದಿಂದ ಅದೇ ಪರಿಸರದಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಅವರು ಒಂಟಿಯಾಗಿದ್ದರು. ಇಬ್ಬರು ಮಕ್ಕಳಿದ್ದು, ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಅವರಿಗೆ ಮಾಹಿತಿ ತಿಳಿಸಿದರೂ ಮೃತದೇಹವನ್ನು ಕೊಂಡೊಯ್ಯಲೋ ಸಂಸ್ಕಾರ ನಡೆಸಲೋ ಮುಂದಾಗಲಿಲ್ಲ. ಆಗ ಅಲ್ಲಿನ ಇಸ್ಲಾಮಿಯಾ ನೌಜವಾನ್ ಸಮಿತಿ ಸದಸ್ಯರು ಮೃತದೇಹಕ್ಕೆ ತಾವೇ ಹೆಗಲು ಕೊಟ್ಟು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಸ್ಮಶಾನಕ್ಕೆ 2,500 ರೂಪಾಯಿ …
Read More »ಇಸ್ಲಾಮ್ ನಲ್ಲಿ ಮಕ್ಕಳ ಹಕ್ಕಿನ ರಕ್ಷಣೆ
ನನ್ನ ಅಧ್ಯಯನದ ವ್ಯಾಪ್ತಿಯಲ್ಲಿ ಗಮನಿಸಿದಂತೆ ಜಗತ್ತಿನ ಹಲವು ಧರ್ಮಗಳು ಮತ್ತು ಸಿದ್ಧಾಂತಗಳು ಕಿರಿಯರಿಗೆ ದೊಡ್ಡವರನ್ನು ಹೇಗೆ ಗೌರವಿಸಬೇಕೆಂದು ಹೇಳಿಕೊಡುತ್ತದೆ. ಆದರೆ ಇಸ್ಲಾಮ್ ಮಕ್ಕಳನ್ನು ಹೇಗೆ ಗೌರವಿಸಬೇಕು, ಅವರನ್ನು ಹೆಂಗೆ ನಡೆಸಿಕೊಳ್ಳಬೇಕು ಎಂದು ಸೂಕ್ಷ್ಮತೆಗಳನ್ನು ತಿಳಿಸುತ್ತದೆ. ಹಾಗಾಗಿ ಮಕ್ಕಳ ದಿನಾಚರಣೆಯ ನೆಪದಲ್ಲಿ ಮಕ್ಕಳನ್ನು ಗೌರವಿಸುವ ಇಸ್ಲಾಮಿನ ಸೂಕ್ಷ್ಮತೆಗಳನ್ನು ಸಾರ್ವತ್ರಿಕವಾಗಿ ಅರಿಯುವ ಅಗತ್ಯವಿದೆ. ಅದಕ್ಕಾಗಿ ಈ ಲೇಖನ. ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂದು ತೈತ್ತಿರೀಯೋಪನಿಷತ್ನ ಶಿಕ್ಷಾವಲ್ಲಿಯಲ್ಲಿ …
Read More »ಜಿಝಿಯಾ ಧಾರ್ಮಿಕ ತೆರಿಗೆಯೇ?
ಮುಸ್ಲಿಮ್ ರಾಷ್ಟ್ರದಲ್ಲಿ ದೇವಾಲಯಗಳಿಗೆ ಅನುಮತಿಯಿದೆಯೇ? ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಸ್ಲಾಮೀ ರಾಷ್ಟ್ರಗಳಲ್ಲಿ ಜಾತ್ಯತೀತ ರಾಷ್ಟ್ರಗಳಂತೆ ಅಥವಾ ಅದಕ್ಕಿಂತಲೂ ಹೆಚ್ಚಾದ ಧಾರ್ಮಿಕ ಸ್ವಾತಂತ್ರವಿದೆಯೆಂದು ನೀವು ಹೇಳಿದ್ದೀರಿ? ಆದರೆ ವಿಶ್ವದ ಯಾವುದಾದರೂ ಮುಸ್ಲಿಮ್ ರಾಷ್ಟ್ರಗಳಲ್ಲಿ ಹಿಂದುಗಳ ದೇವಾಲಯ ನಿರ್ಮಾಣಕ್ಕೆ ಅನುಮತಿಯಿದೆಯೇ? ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ದೇವಾಲಯಗಳನ್ನು ನಾಶಗೊಳಿಸಲಾಗುತ್ತಿದೆಯಲ್ಲವೇ? ಪಾಕಿಸ್ತಾನ, ಬಾಂಗ್ಲಾದೇಶವೂ ಸೇರಿದಂತೆ ವಿಶ್ವದಲ್ಲಿ ಹಿಂದೂ ಪ್ರಜೆಗಳಿರುವ ಮುಸ್ಲಿಮ್ ರಾಷ್ಟ್ರಗಳಲ್ಲೆಲ್ಲಾ ದೇವಾಲಯ ನಿರ್ಮಾಣಕ್ಕೆ ಹಾಗೂ ಪ್ರಾರ್ಥನೆ, ಹಬ್ಬಗಳನ್ನು ನಡೆಸಲು ಅನುಮತಿಯಿದೆ. ಸರಕಾರ ಹಾಗೂ ಜನರು ಅದಕ್ಕೆ …
Read More »ವಿವಾಹ : ಅದೊಂದು ಪ್ರಬಲ ಕರಾರು
ಇಸ್ಲಾಮಿನಲ್ಲಿ ಮದುವೆಗೆ ಮಹತ್ತರವಾದ ಸ್ಥಾನವಿದೆ ಮತ್ತು ಪವಿತ್ರ ಕುರ್ ಆನ್ ನಲ್ಲಿ ವಿವಾಹವನ್ನು ಪ್ರಬಲ ಕರಾರು ಎಂದು ಹೇಳಲಾಗಿದೆ. ಪವಿತ್ರ ಕುರ್ ಆನ್ ನ ಸೂಕ್ತಗಳು ಮತ್ತು ಪ್ರವಾದಿ ವಚನಗಳು ವಿವಾಹವನ್ನು ಸಮೃದ್ಧಿಗೊಳಿಸುವ ಹಾಗೂ ಕುಟುಂಬ ಜೀವನವನ್ನು ವಿಜಯಗೊಳಿಸುವ ಉಪದೇಶವನ್ನು ನೀಡುತ್ತದೆ. ಅವುಗಳ ಉದ್ದೇಶ ಪತಿ ಪತ್ನಿಯರ ಮಧ್ಯೆ ಪ್ರೀತಿ , ವಿಶ್ವಾಸ, ಗೌರವ ಮತ್ತು ಉತ್ತಮ ಬಂಧವನ್ನುಂಟು ಮಾಡುವುದಾಗಿದೆ. ಪತಿ ಪತ್ನಿಯರ ನಡುವಿನ ಉತ್ತಮ ಸಂಬಂಧವು ಮಕ್ಕಳು, ಕುಟುಂಬ …
Read More »ಸೌಹಾರ್ದ ಅಂದ್ರೆ⁉️
ಸೌಹಾರ್ದವೆಂದರೆ….. ನಾನು ನಾಮ ಹಾಕುವುದು! ನೀನು ಟೊಪ್ಪಿ ದರಿಸುವುದಲ್ಲ!! ನಾನು ನಾಮವ ,ನೀನು ಟೊಪ್ಪಿಯ ಗೌರವಿಸುವುದು… ಸೌಹಾರ್ದವೆಂದರೆ….. ನಾನು ಪೂಜೆ ಮಾಡುವುದು! ನೀನು ನಮಾಝ್ ಮಾಡುವುದಲ್ಲ!! ನಾನು ಪೂಜೆಯ, ನೀನು ನಮಾಝನ್ನು ಗೌರವಿಸುವುದು…. ಸೌಹಾರ್ದವೆಂದರೆ…. ನಾನು ಸಸ್ಯಾಹಾರಿ ಆಗುವುದು! ನೀನು ಮಾಂಸಾಹಾರಿ ಆಗುವುದಲ್ಲ!! ನಾನು ಸಸ್ಯಾಹಾರ ,ನೀನು ಮಾಂಸಾಹಾರವ ಗೌರವಿಸುವುದು… ಸೌಹಾರ್ದವೆಂದರೆ… ನಾನು ಭಗವದ್ಗೀತೆ ಓದುವುದು! ನೀನು ಕುರ್ ಆನ್ ಓದುವುದಲ್ಲ!! ನಾನು ಗೀತೆಯ ,ನೀನು ಕುರ್ ಆನ್ ಅರ್ಥೈಸುವುದು… …
Read More »ಇಸ್ಲಾಮೀ ರಾಷ್ಟ್ರದ ಧಾರ್ಮಿಕ ಅಲ್ಪಸಂಖ್ಯಾತರು
ಭಾರತದಲ್ಲಿ ಸರ್ವಧರ್ಮಿಯರಿಗೂ ಸಮಾನ ಅವಕಾಶವಿರಲು ಇಲ್ಲಿ ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿರುವುದು ಕಾರಣವಲ್ಲವೇ.? ಇಲ್ಲಿ ಮುಸ್ಲಿಮರು ಬಹು ಸಂಖ್ಯಾತರಾಗಿದ್ದರೆ ಇದೊಂದು ಇಸ್ಲಾಮೀ ರಾಷ್ಟ್ರವಾಗಿ ಮಾರ್ಪಟ್ಟು ಇತರ ಧರ್ಮೀಯರು ಎರಡನೇ ದರ್ಜೆಯ ಪೌರರಾಗುತ್ತಿರಲಿಲ್ಲವೇ ಅಥವಾ ಇಸ್ಲಾಮ್ ಗೆ ಬಲವಂತವಾಗಿ ಮತಾಂತರಕ್ಕೊಳಪಡುತ್ತಿರಲಿಲ್ಲವೇ? ಸಮಾಜದಲ್ಲಿ ಗಾಢವಾಗಿ ಬೇರೂರಿರುವ ತಪ್ಪುಕಲ್ಪನೆಗಳೇ ಇಂತಹ ಪ್ರಶ್ನೆಗಳಿಗೆ ಕಾರಣ, ಮುಸ್ಲಿಮರು ಬಹುಸಂಖ್ಯಾತರಾಗಿರುವ ರಾಷ್ಟ್ರಗಳು ಧರ್ಮಾಧಾರಿತ ಇಸ್ಲಾಮೀ ರಾಷ್ಟ್ರಗಳೆಂಬ ಭಾವನೆ ಸರಿಯಲ್ಲ, ಇಸ್ಲಾಮೀ ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೆ ತರುವ ರಾಷ್ಟ್ರಗಳು ಮಾತ್ರ ಇಸ್ಲಾಮೀ …
Read More »ಜೇನ್ನೊಣ ಹಾಗೂ ಸತ್ಯವಿಶ್ವಾಸಿ
@ ಅಬೂ ಝೀಶಾನ್ ಪ್ರವಾದಿ(ಸ) ಹೇಳುತ್ತಾರೆ, ಮುಹಮ್ಮದ್ನ(ಸ) ಆತ್ಮ ಯಾರ ಕೈಯಲ್ಲಿದೆಯೋ ಆತನಾಣೆ, ಸತ್ಯವಿಶ್ವಾಸಿ ಜೇನ್ನೊಣದ ಹಾಗೆ. ಜೇನ್ನೊಣ ಶುದ್ಧ ಹಾಗೂ ಆರೋಗ್ಯಕರವಾದುದನ್ನು ತಿನ್ನುತ್ತದೆ. ಮತ್ತು ಶುದ್ಧ ಹಾಗೂ ಆರೋಗ್ಯಕರವಾದುದರ ಮೇಲೆ ಕುಳಿತುಕೊಳ್ಳುತ್ತದೆ. ಹಾಗೆಯೇ ಜೇನ್ನೊಣ ಯಾವುದರ ಮೇಲೆ ಕುಳಿತುಕೊಳ್ಳುವುದೋ ಅದನ್ನು ಮುರಿಯುವುದಿಲ್ಲ ಅಥವಾ ಅದನ್ನು ಹಾಳು ಮಾಡುವುದಿಲ್ಲ. ಪವಿತ್ರ ಕುರ್ಆನಿನಲ್ಲಿ ಕೂಡಾ ಜೇನ್ನೊಣದ ಹೆಸರಿನ ಅನ್ನಹ್ಲ್ ಎಂಬ ಅಧ್ಯಾಯವಿದೆ. ಅದರಲ್ಲಿ ಅಲ್ಲಾಹನು ಜೇನ್ನೊಣದ ಕಾರ್ಯ ವಿಧಾನವನ್ನು ಅದಕ್ಕೆ ಹೇಗೆ …
Read More »ಸಮಾಜ ಸುಧಾರಣೆ: ಪ್ರವಾದಿ(ಸ) ಕೊಡುಗೆ
ರಕ್ಷಾ, ಬೆಳ್ತಂಗಡಿ ‘ನೆರೆಮನೆಯಲ್ಲಿ ಹಸಿದವರಿದ್ದರೆ ಹೊಟ್ಟೆ ತುಂಬಾ ತಿಂದು ಉಣ್ಣುವವನು ನಮ್ಮವನಲ್ಲ’ ಎಂಬ ಮಾನವೀಯತೆಯ ಮಾತಿನ ಮುಖೇನ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೆ ಗೌರವಿಸಲ್ಪಡುವ ಅದಮ್ಯ ಚೇತನವೇ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಆರನೆಯ ಶತಮಾನದಲ್ಲಿ ಅಧರ್ಮದ ಅಂಧಕಾರದಲ್ಲಿ ಮುಳುಗಿದ್ದ ಅರೇಬಿಯನ್ನರನ್ನು ಧರ್ಮವೆಂಬ ಬೆಳಕಿನೆಡೆಗೆ ಒಯ್ಯಲು ಮಕ್ಕಾದ ಪ್ರತಿಷ್ಠಿತ ಕುರೈಶಿ ವಂಶದ ಅಬ್ದುಲ್ಲಾ -ಆಮಿನಾ ದಂಪತಿಗಳ ಸುಪುತ್ರರಾಗಿ ಕ್ರಿ.ಶ. 571 ಎಪ್ರಿಲ್ 20ರಂದು ಸೋಮವಾರದ ಶುಭ ಪ್ರಾತಃಕಾಲದಲ್ಲಿ ಪ್ರವಾದಿಯವರ(ಸ) ಜನನವಾಗುತ್ತದೆ. …
Read More »ಕುರ್ಆನ್ ಮುಸ್ಲಿಮರಿಗೆ ಮಾತ್ರವೇ?
ಖದೀಜಾ ನುಸ್ರತ್ ಮಾನವಕುಲದ ಮಾರ್ಗದರ್ಶನಕ್ಕಾಗಿ ಸೃಷ್ಟಿಕರ್ತನು ಅವತೀರ್ಣಗೊಳಿಸಿದಂತಹ ಗ್ರಂಥವಾಗಿದೆ ಪವಿತ್ರ ಕುರ್ಆನ್. ಸೃಷ್ಟಿಕರ್ತನು ಮಾನವರಿಗೆ ಮಾರ್ಗದರ್ಶನ ನೀಡಬೇಕೆಂಬುದು ಅವನ ದೇವತ್ವದ, ಕರುಣೆಯ ಬೇಡಿಕೆಯಾಗಿದೆ. ತನ್ನ ಸೃಷ್ಟಿಯ ಭೂತ, ವರ್ತಮಾನ ಮತ್ತು ಭವಿಷ್ಯಗಳೆಲ್ಲವೂ ಪರಿಪೂರ್ಣವಾಗಿ ಸೃಷ್ಟಿಕರ್ತನಿಗೆ ಮಾತ್ರ ತಿಳಿದಿದೆ. ಈ ಕಾರಣದಿಂದಾಗಿಯೇ ಎಲ್ಲಾ ಕಾಲದಲ್ಲೂ ನಿರಂತರವಾಗಿ ಎಲ್ಲಾ ಜನಾಂಗಗಳಿಗೂ ಸಂದೇಶವಾಹಕರನ್ನು ಕಳುಹಿಸುತ್ತಿದ್ದನು. ಪ್ರಥಮ ಮನುಷ್ಯರಾದ ಆದಮ್(ಅ) ಪ್ರವಾದಿಯಾಗಿದ್ದರು. ಅಲ್ಲಾಹನ ಕಡೆಯಿಂದ ವಿವಿಧ ಕಾಲಗಳಲ್ಲಿ ನಾನಾ ಪ್ರದೇಶಗಳ ಮತ್ತು ಜನಾಂಗಗಳ ಮಾರ್ಗದರ್ಶನಕ್ಕಾಗಿ ಬೇರೆ …
Read More »
IslamKannada News Portal