Home / ಲೇಖನಗಳು (page 44)

ಲೇಖನಗಳು

ಪ್ರಾರ್ಥನೆ ಸ್ವೀಕಾರವಾಗಬೇಕಾದರೆ…

@ ಶಿಹಾಬುದ್ದೀನ್ ಇಬ್ನು ಹಂಝ ಕೆಲವು ವರ್ಷಗಳ ಹಿಂದೆ ಕೇರಳದ ಕಡಲುಂಡಿಯಲ್ಲಿ ನಡೆದ ರೈಲು ಅಪಘಾತದ ಘಟನೆಯನ್ನು ಪ್ರಸ್ತಾಪಿಸಿ ಗೆಳೆಯ ಒಂದು ವಿಚಾರವನ್ನು ತಿಳಿಸಿದ್ದ. ಪ್ರಸ್ತುತ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದ್ದ ಆತ ಮನೆಯಿಂದ ಹೊರಡುವಾಗ ತಡವಾಗಿತ್ತು. ಗಡಿಬಿಡಿಯಿಂದ ರೈಲು ನಿಲ್ದಾಣದತ್ತ ಧಾವಿಸಿದ. ಓಡುತ್ತಾ ಬರುವಾಗ “ದೇವಾ ಆ ರೈಲು ಸಿಗುವಂತೆ ಮಾಡು ದೇವಾ” ಎಂದು ಪ್ರಾರ್ಥಿಸುತ್ತಾ ಲಗು ಬಗನೆ  ಧಾವಿಸಿದ್ದ. ಆದರೆ ರೈಲು ನಿಲ್ದಾಣ ತಲುಪುವಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟಿತ್ತು. …

Read More »

ಮನೆಯೇ ಆರಾಧನಾಲಯವಾಗುವಾಗ…

“ಇಹಲೋಕದಲ್ಲಿ ಒಂದು ಸ್ವರ್ಗವಿದೆ. ಆ ಸ್ವರ್ಗದಲ್ಲಿ ಪ್ರವೇಶಿಸದವನು ಪರಲೋಕದ ಸ್ವರ್ಗದಲ್ಲೂ ಪ್ರವೇಶಿಸಲಾರ.” ಹಿಂದೆ ಓರ್ವ ಜ್ಞಾನಿಯು ಹೇಳಿದ ಮಾತಿದು. ಇಹಲೋಕದ ಸ್ವರ್ಗವೇನೆಂದು ಅವರು ವಿವರಿಸಿದರು. ವಿಶ್ವಾಸ ಮತ್ತು ಅಲ್ಲಾಹನ ಸಾಮಿಪ್ಯ ಪಡೆಯುವ ಅಲೌಕಿಕ ಮಾಧುರ್ಯವದು. ಹೇಳಲು ಸಾಧ್ಯವಾಗದಂತಹ ಆಧ್ಯಾತ್ಮಿಕ ಅನುಭವ. ಕುರ್‍ಆನ್‍ನ ಭಾಷೆಯಲ್ಲಿ ಹೇಳುವುದಾದರೆ ಆಗ ಮಾತ್ರ  ಹೃದಯವು ಶಾಂತವಾಗುತ್ತದೆ. ಮಹಾನುಭಾವರಾದ ಓರ್ವ ವಿದ್ವಾಂಸರನ್ನು ಆಡಳಿತಗಾರರು ಅನ್ಯಾಯವಾಗಿ ಸೆರೆ ಮನೆಗೆ ತಳ್ಳಿದಾಗ ಆ ವ್ಯಕ್ತಿ ಕೇಳಿದ ಪ್ರಶ್ನೆಯೊಂದಿದೆ- ಸ್ವರ್ಗವು ನನ್ನ …

Read More »

ಕೊರೋನಾ ನಿವಾರಣೆಗೆ ಕುರ್‍ಆನಿನ ಪರಿಹಾರ

ಜಗತ್ತು ಇಂದು ಭಯಾನಕವಾದ ಮಾರಕ ಕಾಯಿಲೆಗೆ ಬಲಿಯಾಗಿದೆ. ಈ ಕಾಯಿಲೆಗೆ ಕಾರಣವಾದ ವೈರಸ್ ಮುಖ್ಯವಾಗಿ ಮನುಷ್ಯರನ್ನೇ ಬೇಟೆಯಾಡುತ್ತಿದೆ. ಅದು ಒಂದು ನಿರ್ದಿಷ್ಟ ಜಾತಿ, ಧರ್ಮ ಅಥವಾ ಒಂದು ನಿರ್ದಿಷ್ಟ ಜನಾಂಗವನ್ನು ಹುಡುಕಿ ಹೊರಟಿಲ್ಲ. ಜಾತಿ ಮತ ಧರ್ಮ ಭೇದವಿಲ್ಲದೆ ಸಮಾನವಾಗಿ ಕಾಡುತ್ತಿದೆ. ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ಈ ವೈರಸ್ ಹೊಸ ಸವಾಲನ್ನು ತಂದಿದೆ, ಮನುಷ್ಯನನ್ನು ಮುಂದೇನು ಎನ್ನುವ ಪ್ರಶ್ನಾರ್ಥಕ ಚಿಹ್ನೆಯಲ್ಲಿ ನಿಲ್ಲಿಸಿದೆ. ಜಗತ್ತು ತತ್ತರಿಸಿದೆ! ಜಗತ್ತಿನೆಲ್ಲೆಡೆ ಶುಚಿತ್ವ ಹಾಗೂ ಶುದ್ಧೀಕರಣದ …

Read More »

ಕೋವಿಡ್- 19 ಮತ್ತು ಪ್ರವಾದಿ ಅಯ್ಯೂಬ್(ಅ)

ಪ್ರವಾದಿ ಅಯ್ಯೂಬ್(ಅ)ರಿಗೆ ಸಂಬಂಧಿಸಿದ ಹಲವು ವಿಷಯಗಳು ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ವಚನಗಳಲ್ಲಿ ಪ್ರಸ್ತಾವಿಸಲಾಗಿದೆ. ಪ್ರವಾದಿಗಳಲ್ಲಿ ಅತ್ಯಂತ ದೀರ್ಘ ಕಾಲ ರೋಗವನ್ನು ಅನುಭವಿಸಿರುವ ವ್ಯಕ್ತಿಯಾಗಿ ಇಂದಿನ ಈ ಕಾಲದಲ್ಲಿ ಅವರ ಜೀವನವು ಚರಿತ್ರೆಯು ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ. ಕುರ್‍ಆನ್‍ನಲ್ಲಿ ಎರಡು ಸೂರಃಗಳಲ್ಲಿ ಅಯ್ಯೂಬ್(ಅ)ರಿಗೆ ಸಂಬಂಧಿಸಿದ ಸ್ವಾದ್ 40 ನೇ ಸೂಕ್ತವು ಆ ಕುರಿತು ಬೆಳಕು ಚೆಲ್ಲುತ್ತದೆ. ಅಯ್ಯೂಬ್(ಅ)ರು ಅಂದಿನ ಸಮಾಜದಲ್ಲಿ ಆರ್ಥಿಕವಾಗಿ ಉತ್ತಮ ಸ್ತರದಲ್ಲಿದ್ದರು. ವಿಶಾಲವಾದ ಕೃಷಿ ಭೂಮಿ, ಅಸಂಖ್ಯಾತ …

Read More »

ನ್ಯಾಯ ಪರಿಪಾಲನೆ

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬ್ದುಲ್ಲಾಹಿಬ್ನು ಅಮ್ರ್ ಬಿನ್ ಆಸ್ ರದಿಯಲ್ಲಾಹು ಅನ್ಹುಮ ಕಾಲ; ಕಾಲ ರಸೂಲುಲ್ಲಾಹಿ(ಸ) ಇನ್ನಲ್ ಮುಕ್ಸಿತೀನ ಇಂದಲ್ಲಾಹಿ ಅಲಾ ಮನಾಬಿರ ಮಿನ್ನೂರ್ ಅಲ್ಲಝೀನ ಯಅದಿಲೂನ ಫೀ  ಹುಕ್ಮಿಹಿಂ ವಅಹ್‍ಲೀಹಿಮ್ ವಮಾ ವಲ್ಲೂ (ರವಾಹು ಮುಸ್ಲಿಮ್) ನ್ಯಾಯಪಾಲಕರು ಅಲ್ಲಾಹನ ಪ್ರಕಾಶಧಾರೆಯಲ್ಲಿರುತ್ತಾರೆ. ಅವರು ಅಧಿಕಾರ ದೊರೆತಾಗ ತಮ್ಮ ಅವಧಿಯಲ್ಲಿ ತಮ್ಮ ಪ್ರಜೆಗಳನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಾರೆ. ಫೆಬ್ರವರಿ 20ನ್ನು ಸಾಮಾಜಿಕ ನ್ಯಾಯ ದಿನವೆಂದು ಆಚರಿಸಲಾಯಿತು. 2007ರಲ್ಲಿ ವಿಶ್ವಸಂಸ್ಥೆಯು ಪ್ರತಿ ವರ್ಷ …

Read More »

ಅವರು ಗಾಳ ಎಸೆದರು, ಇವರು ಗಾಳವನ್ನೇ ನುಂಗಿ ಪ್ರೀತಿಸಿದರು: ನನ್ನ ಭಾರತವೇ, ಒಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟು…

ಏ.ಕೆ.ಕುಕ್ಕಿಲ ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಎಂಬಲ್ಲಿಯ ನಾಲ್ವರು ಮುಸ್ಲಿಮ್ ಯುವಕರು ಇವತ್ತು ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರನ್ನು ಟಿ.ವಿ. ಚಾನೆಲ್‍ಗಳು ಮಾತಾಡಿಸುತ್ತಿವೆ. ಬೈಟ್ ಪಡಕೊಳ್ಳುತ್ತಿವೆ. ಪತ್ರಿಕೆಗಳು ಅವರನ್ನು ಗುರುತಿಸಿ ಕೊಂಡಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರು ತುಂಬಿಹೋಗಿದ್ದಾರೆ. ಕರಾವಳಿ ಭಾಗದ ಪ್ರತಿ ಮನೆಯೂ ಅವರ ಬಗ್ಗೆ ಮಾತಾಡುತ್ತಿದೆ. ಘಟನೆ ಇಷ್ಟೇ- ಆತ್ಮಹತ್ಯೆ ಮಾಡಲೆಂದು ನಿಶಾಂತ್ ಎಂಬ ತರುಣ ಇಲ್ಲಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾನೆ. ಈದ್‍ನ ಸಂಭ್ರಮದಲ್ಲಿದ್ದ ಈ …

Read More »

ಕುರ್ ಆನ್ ಅವತೀರ್ಣದ ವಾರ್ಷಿಕೋತ್ಸವಕ್ಕೆ ವಿದಾಯ ಹೇಳುವ ಮುನ್ನ…

ಹಿಜರಿಶಕೆಯ ರಮಝಾನ್ ತಿಂಗಳಲ್ಲಿ ಕುರ್ ಆನ್ ಅವತೀರ್ಣ ಆರಂಭಗೊಂಡಿತು ಎಂಬ ಕಾರಣಕ್ಕಾಗಿ ಜಗತ್ತಿನಾದ್ಯಂತ ಮುಸ್ಲಿಮರು ಆ ತಿಂಗಳು ಪೂರ್ತಿ ಪ್ರತಿವರ್ಷ ಉಪವಾಸ ವೃತ ಆಚರಿಸಬೇಕೆಂಬುದು ಸ್ವತಃ ಕುರ್ ಆನ್ ತಿಳಿಸುವ ಆದೇಶ. ಮಾತ್ರವಲ್ಲ, ಈ ತಿಂಗಳ ಒಂದು ನಿರ್ದಿಷ್ಟವಾದ, ಖದ್ರ್ ನ ರಾತ್ರಿ (ಖದ್ರ್ = ನಿರ್ಣಾಯಕ) ಕುರ್ ಆನಿನ ಅವತೀರ್ಣ ಆರಂಭಗೊಂಡಿತೆಂದೂ, ಆ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವೆಂದೂ, ಅಂದು ರೂಹ್ (ಜಿಬ್ರೀಲ್ ಅ.)ರವರ ನೇತ್ರತ್ವದ ದೇವಚರರ ತಂಡ …

Read More »

ದೇವನವಿಧಿಯಿದ್ದರೆ ಮತ್ತೊಮ್ಮೆ ಭೇಟಿಯಾಗೋಣ….

ಕಾಲಕ್ಕೆ ಎಷ್ಟೊಂದು ಅವಸರ,ಎಷ್ಟು ವೇಗ ನೋಡಿ. ನಿನ್ನೆ ತಾನೇ ನಾನು ಬಂದೆ ಎಂದೆನಿಸಿತು. ನನಗೆ ಮರಳಲು ಸಮಯವಾಗಿದೆ. ಹೌದು ನಾನು ರಮಝಾನ್… ನಿಮ್ಮ ಮನೆಯಿಂದ ವಿದಾಯ ಕೋರುತ್ತಿದ್ದೇನೆ. ಈ ವರ್ಷ ನಾನು ಬಂದದ್ದು ನಿಮ್ಮ ಮನೆಗೆ ತಾನೇ.ಮಸೀದಿಗೆ ಬಂದಾಗ ಮಸೀದಿ ಮುಚ್ಚಲಾಗಿತ್ತು.ಎಲ್ಲಾ ವರ್ಷಗಳಿಗಿಂತಲೂ ಈ ವರ್ಷ ನಿಮ್ಮೊಂದಿಗೆ ಆತ್ಮೀಯವಾಗಿ ಇದ್ದೆ..ನಿಮ್ಮ ಸುಖ ದುಃಖಗಳನ್ನು ಹಂಚಬೇಕು ಎಂಬುದು ಇರಾದೆ ಆಗಿತ್ತು.ಹಾಗೇ ಹಂಚಿದೆ.ನಾವು ನೆನಸಿದಂತೆ ಅಲ್ಲ ತಾನೇ ಬದುಕು?.ಎಲ್ಲಾ ದೇವನ ತೀರ್ಮಾನದಂತೆ ನಡೆಯುವುದು.ನಾನು …

Read More »

ಕೋವಿಡ್ ಕಾಲದ ಝಕಾತ್

ಸತ್ಯವಿಶ್ವಾಸಿಗಳ ಅತ್ಯಂತ ಸುಪ್ರಧಾನವಾದ ಆರ್ಥಿಕ ಹೊಣೆಗಾರಿಕೆಯೆಂದು ಪವಿತ್ರ ಕುರ್‍ಆನ್ ಝಕಾತನ್ನು ಎತ್ತಿ ತೋರಿಸುತ್ತದೆ. ಇಸ್ಲಾಮಿನ ಪಂಚ ಆಧಾರ ಸ್ತಂಭಗಳಲ್ಲಿ ಒಂದೆಂದು ಪ್ರವಾದಿ(ಸ)ರು ಕಲಿಸಿಕೊಟ್ಟಿದ್ದಾರೆ. ಪವಿತ್ರ ಕುರ್‍ಆನ್‍ನ ಹೆಚ್ಚಿನ ಕಡೆಗಳಲ್ಲಿ ನಮಾಝ್ ನೊಂದಿಗೆ ಝಕಾತನ್ನು ಸೇರಿಸಿ ಹೇಳಲಾಗಿದೆ. ನಮಾಝನ್ನು ಅದರ ಸಂಪೂರ್ಣ ಚೈತನ್ಯದೊಂದಿಗೆ ನೆರವೇರಿಸುವ ವ್ಯಕ್ತಿಯು ಝಕಾತನ್ನು ಸರಿಯಾಗಿ ಪಾವತಿಸುತ್ತಾನೆ ಎಂಬುದೇ ಅದರ ತಿರುಳು. ಆದರೆ ಇಂದು ಮುಸ್ಲಿಮ್ ಸಮುದಾಯದಲ್ಲಿ ನಮಾಝ್‍ನ ಕುರಿತು ಸೂಕ್ಷ್ಮತೆಯನ್ನು ಪಾಲಿಸುವವರ ಸಂಖ್ಯೆ ಅಧಿಕವಿದ್ದು  ಝಕಾತ್‍ನ ವಿಷಯದಲ್ಲಿ …

Read More »

`ಪ್ರಭುವೇ ಕೊರೊನಾಕ್ಕೊಂದು ಪುಲ್‍ಸ್ಟಾಪ್ ಕೊಡು’- ಆಮೀನ್

– ಅರಫಾ ಮಂಚಿ ನೂಹರ ಕಾಲದ ವಿನಾಶಕಾರಿ ಜಲ ಪ್ರಳಯಕ್ಕೆ ಅಲ್ಲಾಹನು ಪುಲ್‍ಸ್ಟಾಪ್ ಕೊಟ್ಟ. ಪವಿತ್ರ ಕುರ್‍ಆನ್ ಅದನ್ನು ಹೀಗೆ  ವಿವರಿಸಿದೆ- “ಓ ಭೂಮಿಯೇ, ನಿನ್ನ ನೀರನ್ನೆಲ್ಲ ಹೀರಿಕೊ, ಮತ್ತು ಆಕಾಶವೇ ತಡೆ!  ಎಂದು ಅಪ್ಪಣೆಯಾಯಿತು. ಆ ಪ್ರಕಾರ ನೀರು ನೆಲದೊಳಗೆ ಇಂಗಿತು. ತೀರ್ಮಾನ ಆಗಿ ಹೋಯಿತು. ನೌಕೆಯು ಜೂದಿಯಲ್ಲಿ ತಂಗಿತು. ಅಕ್ರಮಿಗಳ ಜನಾಂಗ ದೂರ ತೊಲಗಿತೆಂದು ಹೇಳಲಾಯಿತು.”  (11:44) ಇಂತಹದೇ ಒಂದು ಕೊನೆ ಕೊರೊನಾ ಸೋಂಕಿನ ಕೊನೆಗೂ ಆಗಿಬಿಟ್ಟಿದ್ದರೆ… …

Read More »