Home / ಲೇಖನಗಳು / ದೇವನವಿಧಿಯಿದ್ದರೆ ಮತ್ತೊಮ್ಮೆ ಭೇಟಿಯಾಗೋಣ….

ದೇವನವಿಧಿಯಿದ್ದರೆ ಮತ್ತೊಮ್ಮೆ ಭೇಟಿಯಾಗೋಣ….

ಕಾಲಕ್ಕೆ ಎಷ್ಟೊಂದು ಅವಸರ,ಎಷ್ಟು ವೇಗ ನೋಡಿ.
ನಿನ್ನೆ ತಾನೇ ನಾನು ಬಂದೆ ಎಂದೆನಿಸಿತು. ನನಗೆ ಮರಳಲು ಸಮಯವಾಗಿದೆ.
ಹೌದು ನಾನು ರಮಝಾನ್…

ನಿಮ್ಮ ಮನೆಯಿಂದ ವಿದಾಯ ಕೋರುತ್ತಿದ್ದೇನೆ.
ಈ ವರ್ಷ ನಾನು ಬಂದದ್ದು ನಿಮ್ಮ ಮನೆಗೆ ತಾನೇ.ಮಸೀದಿಗೆ ಬಂದಾಗ ಮಸೀದಿ ಮುಚ್ಚಲಾಗಿತ್ತು.ಎಲ್ಲಾ ವರ್ಷಗಳಿಗಿಂತಲೂ ಈ ವರ್ಷ ನಿಮ್ಮೊಂದಿಗೆ ಆತ್ಮೀಯವಾಗಿ ಇದ್ದೆ..ನಿಮ್ಮ ಸುಖ ದುಃಖಗಳನ್ನು ಹಂಚಬೇಕು ಎಂಬುದು ಇರಾದೆ ಆಗಿತ್ತು.ಹಾಗೇ ಹಂಚಿದೆ.ನಾವು ನೆನಸಿದಂತೆ ಅಲ್ಲ ತಾನೇ ಬದುಕು?.ಎಲ್ಲಾ ದೇವನ ತೀರ್ಮಾನದಂತೆ ನಡೆಯುವುದು.ನಾನು ನನ್ನ ಕೆಲಸ ಮುಗಿಸಿ ದೇವನೆಡೆಗೆ ಮರಳುತ್ತಿದ್ದೇನೆ

ಈ ಸಲದ ನನ್ನ ಬದುಕು ವಿಚಿತ್ರವಾಗಿತ್ತು.
ನನ್ನನ್ನು ನೀವು ಈ ಸಲ ಉಪಚರಿಸಿದ ರೀತಿ ಅದ್ಭುತವಾಗಿತ್ತು.
ಅದರ ಒಂದೆರಡು ವಿಚಾರ ನಿಮ್ಮೊಂದಿಗೆ ಹಂಚಬಯಸುವೆ.

ಕೊನೆಯ ಶುಕ್ರವಾರ ನನಗೆ ಇಮಾಮ್ ಮಿಂಬರ್ ಹತ್ತಿ ಸಲಾಮ್ ಹೇಳುತ್ತಿದ್ದರು.ಈ ವರ್ಷ ಅಂತಹ ಬೀಳ್ಕೊಡುಗೆ ನನಗೆ‌ ಸಿಗಲಿಲ್ಲ.ನೀವೆಲ್ಲರೂ ಕಣ್ಣೀರಿನೊಂದಿಗೆ ಅಸ್ಸಲಾಮ್ ಅಲೈಕುಮ್ ಯಾ ಶಹರ್ ರಮಝಾನ್ ಹೇಳುತ್ತಿದ್ದೀರಿ.
ಮಸೀದಿ ,ಮಿಹ್ರಾಬ್,ಮಿಂಬರ್,ಹೌಲ್,ಮಿನಾರ,
ಮಸೀದಿಯ ಚಾಪೆ ಎಲ್ಲವೂ ನನಗೆ ಕಣ್ಣೀರಿನ ವಿದಾಯ ಹೇಳುತ್ತಿತ್ತು.ಆದರೆ ಈ ಸಲ ಹಾಗಾಗಲಿಲ್ಲ.
ಮಸೀದಿಯಿಂದು ಬಿಕೋ ಅನ್ನುತ್ತಿದೆ.
ಆದರೂ ನಾನು ದೇವನ ಬಳಿ ಹೋದಾಗ ಈ ಸಲ ನಿಮ್ಮ ಬಗ್ಗೆ ಸಾಕಷ್ಟು ಶಿಫಾರಸು ಮಾಡುವೆನು.ಮಾಡಲಿಕ್ಕಿದೆ.
ನಿಮ್ಮೆಲ್ಲರ ಅವಸ್ಥೆ, ನಿಮ್ಮ ಸ್ಥಿತಿಗತಿ ನಾನು ಕಣ್ಣಾರೆ ಕಂಡಿದ್ದೇನೆ.

ರೋಗದ ಭೀತಿ,ಹಸಿವೆ,ಕಾರ್ಮಿಕರ ಕಷ್ಟ, ಸೀಲ್ ಡೌನ್,ಲಾಕ್ ಡೌನ್, ಮೈಲುಗಟ್ಟಲೆ ನಗ್ನ ಪಾದದಿ, ರಕ್ತ ಓಸರುತ್ತಾ,ಡೊಂಕು ಹಾಕುತ್ತಾ ನಡೆದದ್ದು,ಲಾಠೀಚಾರ್ಜ್, ಸರ್ಕಾರದ ನಿಷ್ಕ್ರಿಯತೆ,ಕೋಮು ವೈರಸ್, ಎಲ್ಲವನ್ನೂ ಹತ್ತಿರದಲ್ಲಿ ನೋಡಿದ್ದೇನೆ.
ಇದರ ನಡುವೆ ನಿಮ್ಮ ತರಾವೀಹ್, ತಹಜ್ಜುದ್,ಕುರ್ ಆನ್ ಪಾರಾಯಣ,ಸಮಾಜಸೇವೆ,ನಿಮ್ಮ ಕಿಟ್ ಎಲ್ಲವನ್ನೂ ನಾನು ಅರ್ಥೈಸಿದ್ದೇನೆ. ಹಸಿದವರ ಹುಡುಕಿ ಹುಡುಕಿ ಜಾತಿ ಧರ್ಮವೆನ್ನದೆ ಆಹಾರ ಸಾಮಾಗ್ರಿ ಮುಟ್ಟಿಸಿದ ನಿಮ್ಮ ಕಾರ್ಯ ಅತ್ಯದ್ಬುತ.ನಾನು ವರ್ಷಂಪ್ರತಿ ಬಂದು ನಿಮಗೆ ನೀಡುವ ಭೋದನೆ ಕೂಡ ಇದೇ ಆಗಿದೆ.
ಇತರ ವರ್ಷಗಳಲ್ಲಿ ಪರದೂಷಣೆ,ಹರಟೆ, ನಿದ್ರೆಯಲ್ಲಿ ಕಳೆದವರು ಈ ವರ್ಷ ಕೊರೊನದಿಂದಾಗಿ ದೇವನ ಅತ್ಯಂತ ಸಮೀಪ ಬಂದಿದ್ದೀರಿ.ನನ್ನನ್ನು ಅತಿಯಾಗಿ ಗೌರವಿಸಿದ್ದೀರಿ.ಖಂಡಿತವಾಗಿ ನಿಮ್ಮ ಆರಾಧನೆಯಿಂದ ದೇವನು ಸಂತೃಪ್ತನಾಗಿರಬಹುದು.

ಈ ಸಲದ ರಮಝಾನ್ ಬಗ್ಗೆ ದೇವನಲ್ಲಿ ಹೇಳಲಿಕ್ಕಿರುವ ಕೆಲವು ವಿಶೇಷ ಸಂಗತಿಗಳಿವೆ.
ಅದು ನೆನೆಯುವಾಗಲೇ ನನ್ನ ಕಣ್ಣು ನೀರಾಟವಾಡುತ್ತದೆ.
ರೋಗದಿಂದ ಶ್ವಾಸೋಚ್ಚಾಸ ಸಿಗದೆ ಜೀವನ್ಮರಣ ಹೋರಾಟ ಮಾಡಿದವರು,
ಹಸಿವಿನಿಂದ ಪ್ರಾಣತೆತ್ತವರು,
ಹಸಿವೆಗಾಗಿ ಸತ್ತ ನಾಯಿಯ ಮಾಂಸ ತಿಂದವರು,
ಊರಿಗೆ ಹೋಗಲು ದೇಶದಲ್ಲೂ ವಿದೇಶದಲ್ಲೂ ಬವಣೆ ಪಡುವವರು,
ಕೊರೋನದಿಂದ ತಾಯಿಯಿಂದ ದೂರವಾದ ಎದೆಹಾಲು ಉಣ್ಣುವ ಕಂದಮ್ಮ,
ರೋಗಿ ತಂದೆಯನ್ನು ಹೆಗಲು ಮೇಲೆ ಹೊತ್ತು ನಡೆದ ಮಗ,
ನಡೆಯುತ್ತಾ ಪ್ರಸವಿಸಿದ ಮಹಾ ತಾಯಿ,
ಶವ ಸುಡಲು ಅವಕಾಶ ಕೊಡದ ತಮ್ಮವರು,
ರೋಗಿಗಳು ಬರದಂತೆ ಅಂಬುಲೆನ್ಸ್ ತಡೆದವರು,
ಗಡಿ ಗುರುತು ಹಾಕಿ ಆ ಊರಿನವರು ಈ ಊರಿಗೆ ಬರದಂತೆ ತಡೆದವರು, ಸುಪ್ರೀಮ್ ಕೋರ್ಟ್ ಹೋದವರು,ಕೊರೋನಕ್ಕೆ ಗಡ್ಡ ಬೆಳೆಸಿದವರು,
ಹೀಗೇ ಸಾಕಷ್ಟು ರಿಪೋರ್ಟ್ ದೇವನಿಗೆ ಕೊಡಲಿಕ್ಕಿದೆ

ಈ ಸಲ ನನಗಂತೂ ಅಭಿಮಾನವಿದೆ,ಹೆಮ್ಮೆಯಿದೆ.
ಸುತ್ತಾಟ, ಸಿನೇಮಾಗೃಹ,ಮಾಲ್,ಅನಗತ್ಯ ವಿಚಾರಗಳೆಲ್ಲಾ ಲಾಕ್ ಡೌನ್ ಹೆಸರಲ್ಲಿ ಕಡಿವಾಣ ಬಿದ್ದು ಮನೆಯಲ್ಲೇ ಇದ್ದೀರಿ ತಾನೆ.ಉಪವಾಸ ದಿಕ್ಕರಿಸಿ ಕದ್ದು ಹೋಟೆಲಲ್ಲಿ ತಿನ್ನುವವನೂ ಅಲ್ಪ ಮಟ್ಟದಲ್ಲಿ ಸರಿಯಾಗಿರಬೇಕು ತಾನೇ.ಇನ್ನೂ ಬದಲಾಗದಿದ್ದರೆ ನಾನೇನು ಮಾಡಲಿ.
ಇನ್ನು ವಿಶೇಷವಾಗಿ ಏನೂ ಹೇಳಲಿಕ್ಕಿಲ್ಲ.ನನ್ನನ್ನು ಗೌರವದಿಂದ ಬೀಳ್ಕೋಡಬೇಕು.ಅದರ ಭಾಗವೇ ಆಗಿದೆ ಪೆರ್ನಾಲ್.ನಾನು ನೀಡಿದ ಅನುಗ್ರಹಗಳಿಗೆ ಕೃತಜ್ಞತೆಗಳು ಹೇಳುವುದೇ ಪೆರ್ನಾಲ್ ಆಗಿದೆ.
ಮಾನವ ಕೃತಜ್ಞನಾಗಿದ್ದರೆ ದೇವನು ಇನ್ನಷ್ಟು ಅನುಗ್ರಹ ಸುರಿಸುತ್ತಾನೆ.ಕೃತಘ್ನನಾದರೆ ಕೋರೋನವನ್ನು ಕಳುಹಿಸುತ್ತಾನೆ.ಕಷ್ಟ,ಆಪತ್ತು ,ವಿಪತ್ತು ಬಂದಾಗ ದೇವನು ಕೃತಜ್ಞತಾ ಜನರಿಗೆ ದೇವದೂತರು ಮೂಲಕ ಸಹಾಯ ಮಾಡುತ್ತಾನೆ.

ಈ ಸಲದ ಈದ್ ನಮಾಝ್ ಕೂಡ ಇಲ್ಲ ಎಂದು ಪೆರ್ನಾಳಿನ ಬೇಸರ ಬೇಡ.ಸರಳವಾಗಿ ಆಚರಿಸುವುದೆಂದರೆ ಬೇಸರದಿಂದ ಆಚರಿಸುವುದು ಎಂದರ್ಥವಲ್ಲ.ಪೆರ್ನಾಲ್ ಸಂತೋಷದಿಂದಲೇ ಆಚರಿಸಿರಿ.ನಿಮ್ಮ ಸಂತೋಷವೇ ಅಲ್ಲಾಹನ ಸಂತೋಷ ಮರೆಯದಿರಿ.
ಸಂತೋಷದಿಂದ ನನ್ನನ್ನು ಬೀಳ್ಕೊಡುತ್ತೀರಿ ತಾನೆ.
ಮುಂದಿನ ವರ್ಷ ದೇವನ ವಿಧಿಯಿದ್ದರೆ ನಾನು ಬರುತ್ತೇನೆ. ನೀವೂ ಇರುತ್ತೀರಿ.

ಸರಿ ಹೋಗಿ ಬರಲಾ….ನಿಮಗೆ ಅನುಕೂಲಕರವಾಗಿ ನಾನು ಸಾಕ್ಷ್ಯ ವಹಿಸುತ್ತೇನೆ.ಕೊರೋನ ಬಗ್ಗೆ ಜಾಗೃತೆಯಿರಲಿ.ದೇವನಲ್ಲಿ ನಂಬಿಕೆಯಿರಲಿ

ಮಅಸ್ಸಲಾಮ
2020 ರಮಳಾನ್.

  • ಜಲೀಲ್ ಮುಕ್ರಿ
    (ಮೂಲ ಮಳಯಾಲಮ್)
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …