ನಮ್ಮ ಸಮಾಜ ಬಹಳ ಮುಂದುವರಿದಿದೆ. ವಿಜ್ಞಾನವಂತೂ ದಿನ ಹೋದಂತೆ ಬೆಳೆಯುತ್ತಲೇ ಇದೆ. ಇಂದಿನ ಸಾಕಷ್ಟು ಮಂದಿ ದೇವರು, ಪವಾಡ, ಸ್ವರ್ಗ, ನರಕ ಮೊದಲಾದವುಗಳ ಮೇಲೆ ವಿಶ್ವಾಸವನ್ನಿಡದೆ, ವಿಜ್ಞಾನವೇ ಸರ್ವಸ್ವ ಎಂದು ನಂಬುತ್ತಾರೆ. ಇಂತಹ ಕಾಲದಲ್ಲಿ ನಾವು ಬದುಕುತ್ತಿರುವಾಗ ಒಂದು ಧರ್ಮದ ಬಗ್ಗೆ, ಅದರ ವಿಶೇಷತೆಯ ಬಗ್ಗೆ ವಿವರಿಸಬೇಕಾದರೆ ಆ ಧರ್ಮಗ್ರಂಥದಲ್ಲಿರುವ ವೈಜ್ಞಾನಿಕ ವಿಷಯಗಳು ಇವತ್ತಿನ ವಿಜ್ಞಾನಕ್ಕೆ ಪೂರಕವಾಗಿದೆಯೇ ಎಂಬುದಾಗಿ ಪರಿಶೀಲಿಸಬೇಕಾಗುತ್ತದೆ. ಏಕೆಂದರೆ, ಒಂದು ವೇಳೆ ಆ ಗ್ರಂಥ ನಮ್ಮ ನೈಜ ಸೃಷ್ಟಿಕರ್ತನಿಂದಾಗಿದ್ದರೆ ಅದರಲ್ಲಿರುವ ವೈಜ್ಞಾನಿಕ ವಿಷಯಗಳು ತಪ್ಪಾಗಿರಲು ಸಾಧ್ಯವಿಲ್ಲ. ಏಕೆಂದರೆ ಹಿಂದಿಯಲ್ಲಿ ಒಂದು ಮಾತಿದೆ ‘ಭಗ್ವಾನ್ಸೆ ಗಲ್ತೀ ನಹೀ ಹೋತಿ. ಗಲ್ತೀ ತೋ ಇನ್ಸಾನ್ ಸೆ ಹೋತಿ ಹೈ” (ದೇವನಿಂದ ತಪ್ಪು ಸಂಭವಿಸುವುದಿಲ್ಲ. ತಪ್ಪು ಮಾನವನಿಂದ ಸಂಭವಿಸುತ್ತದೆ.)
ನಮ್ಮ ಭೂಮಿಯಲ್ಲಿ ಅದೆಷ್ಟೋ ಧರ್ಮಗಳು ಒಬ್ಬ ಪವಾಡ ಪುರುಷ, ಮಹಾನ್ ವ್ಯಕ್ತಿ ಅಥವಾ ಮನೆತನಗಳಿಂದಾಗಿ ಸ್ಥಾಪಿಸಲ್ಪಟ್ಟಿವೆ. ಕೆಲವು ಧರ್ಮಗಳು ಗ್ರಂಥಗಳ ಆಧಾರದಲ್ಲಿ ಸೃಷ್ಟಿಸಲ್ಪಟ್ಟಿವೆ. ಕೆಲವು ಧರ್ಮಗಳಿಗೆ ಅದರ ಸ್ಪಾಪನೆಯ ಕಾರಣವೇ ತಿಳಿದಿರದಿದ್ದರೆ, ಇನ್ನು ಕೆಲವು ಧರ್ಮಾನುಯಾಯಿಗಳಿಗೆ ಅವರ ಧರ್ಮಗ್ರಂಥ ಯಾರಿಗೆ, ಯಾವಾಗ, ಹೇಗೆ ಅವತೀರ್ಣಗೊಂಡಿತು ಅಥವಾ ರಚನೆಗೊಂಡಿತು ಎಂಬುದೇ ತಿಳಿದಿಲ್ಲ. ಆದರೆ ಇಸ್ಲಾಮ್ ಧರ್ಮ ಹಾಗಲ್ಲ. ಇದರ ಸೃಷ್ಟಿಕರ್ತ, ಸಂಸ್ಥಾಪಕ ಅಲ್ಲಾಹನಾಗಿದ್ದಾನೆ.
ಕುರ್ಆನಿನ ಕೆಲವು ವಿಶೇಷ ಗುಣಗಳು:
*) ಅದು ತನ್ನ ಅವತೀರ್ಣ ದಿನದಿಂದ ಹಿಡಿದು ಈವರೆಗೂ ಸಂಪೂರ್ಣವಾಗಿ, ಸುರಕ್ಷಿತವಾಗಿರುವ ಜಗತ್ತಿನ ಏಕೈಕ ಗ್ರಂಥ. ಏಕೆಂದರೆ ಇದರ ಸಂರಕ್ಷಕ ಅಲ್ಲಾಹನಾಗಿದ್ದಾನೆ.
*) ಕುರ್ಆನಿನಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಆಡಳಿತಾತ್ಮಕ, ದೇವನ ಹಕ್ಕು, ಜನರ ಹಕ್ಕು, ಕುಟುಂಬ ಜೀವನ, ನಾಯಕ.. ಹೀಗೆ ಮಾನವನು ತನ್ನ ಹುಟ್ಟಿನಿಂದ ಹಿಡಿದು ಮರಣ ಹೊಂದುವವರೆಗೂ ಇರಬೇಕಾದ ನೀತಿ-ನಿಯಮಗಳನ್ನು ಸವಿವರವಾಗಿ ನೀಡಲಾಗಿದೆ.
*) ಕುರ್ಆನಿನಲ್ಲಿ 6,000 ಕ್ಕಿಂತಲೂ ಹೆಚ್ಚು ವಚನಗಳಿದ್ದು ಅವುಗಳಲ್ಲಿ 1000ಕ್ಕಿಂತಲೂ ಹೆಚ್ಚು ವಚನಗಳು ವೈಜ್ಞಾನಿಕವಾಗಿವೆ.
ನಮ್ಮ ವಿಜ್ಞಾನ ಗಾಳಿಯಂತೆ ದಿಕ್ಕು ಬದಲಾಯಿಸುತ್ತಾ ಇರುತ್ತದೆ. ಇವತ್ತು ಒಂದು ಮಾತನ್ನು ಹೇಳಿದರೆ, ನಾಳೆ ಅದಕ್ಕೆ ವ್ಯತಿರಿಕ್ತವಾದ ಮಾತನ್ನು ಹೇಳುತ್ತದೆ. ಆದ್ದರಿಂದ ವಿಜ್ಞಾನವು ಈಗಾಗಲೇ ಧೃಢೀಕರಿಸಿದ ವಿಷಯಗಳು ಕುರ್ಆನಿನ ಸೂಕ್ತಗಳೊಂದಿಗೆ ಯಾವ ರೀತಿ ಸಂಬಂಧವನ್ನು ಹೊಂದಿದೆ ಎಂಬುದನ್ನು ಪರಿಶೀಲಿಸೋಣ.
ಪವಿತ್ರ ಕುರ್ಆನ್ 1400 ವರ್ಷಗಳ ಹಿಂದೆ ಅವತೀರ್ಣವಾಯಿತ್ತಲ್ಲದೆ ಮಾನವಕೋಟಿಯ ಮುಂದೆ ಒಂದು ಸವಾಲನ್ನು ಎಸೆಯಿತು. ಆ ಸವಾಲು ಇಂದಿಗೂ ಕೂಡ ಅಸ್ವೀಕೃತವಾಗಿಯೇ ಉಳಿದಿದೆ. ಆ ಸವಾಲಿಗೆ ಪ್ರತ್ಯುತ್ತರ ನೀಡುವ ಶಕ್ತಿ-ಸಾಮರ್ಥ್ಯ ಯಾವ ಸಾಹಿತ್ಯಕಾರರಲ್ಲೂ, ಗ್ರಂಥ ರಚನಾಕಾರರಲ್ಲೂ ಇಲ್ಲವಾಗಿದೆ. ಈ ಸವಾಲಿಗೆ ಉತ್ತರ ನೀಡಲು ಅಂದಿನ ಅರಬರು ಬಹಳ ಪ್ರಯತ್ನಪಟ್ಟರು. ಅದಕ್ಕಾಗಿ ಹಣ, ಸಮಯ, ಹೆಂಡ, ಹೆಣ್ಣು ಎಲ್ಲವನ್ನೂ ಖರ್ಚು ಮಾಡಿದರು. ಆದರೆ ಅದು ವ್ಯರ್ಥವಾಗಿ ಹೋಯಿತು. ಸವಾಲು ಏನಾಗಿತ್ತು ಎಂಬುದನ್ನು ನೋಡೋಣ.
ಅಲ್ಲಾಹನು ಹೇಳಿದನು, “ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ. ಅಲ್ಲಾಹನ ಹೊರತು ನಿಮ್ಮೆಲ್ಲ ಸಾಕ್ಷಿಗಳನ್ನೂ ನಿಮ್ಮ ಸಹಾಯಕ್ಕಾಗಿ ಕರೆದು ತನ್ನಿರಿ. ನೀವು ಸತ್ಯವಾದಿಗಳಾಗಿದ್ದರೆ ಈ ಕಾರ್ಯವನ್ನು ಮಾಡಿ ತೋರಿಸಿ. ಆದರೆ ನೀವು ಹಾಗೆ ಮಾಡದಿದ್ದಲ್ಲಿ ಮತ್ತು ಖಂಡಿತವಾಗಿಯೂ ನೀವು ಹಾಗೆಂದೂ ಮಾಡಲಾರಿರಿ- ಸತ್ಯ ನಿಷೇಧಿಗಳಿಗಾಗಿ ಸಿದ್ಧಗೊಳಿಸಲ್ಪಟ್ಟಿರುವ ಹಾಗೂ ಮನುಷ್ಯರನ್ನೂ ಶಿಲೆಗಳನ್ನೂ ಇಂಧನವಾಗಿ ಉರಿಸುವ ಆ ನರಕವನ್ನು ಭಯ ಪಡಿರಿ.” (ಕುರ್ಆನ್, 2: 23-24)
ಇಲ್ಲಿ ಅಲ್ಲಾಹನು ಮುಂದಿಟ್ಟ ಸವಾಲು ಸರಳವಾಗಿದೆ. ಪ್ರವಾದಿ(ಸ) ಅವರಿಗೆ ಅವತೀರ್ಣಗೊಳಿಸುತ್ತಿರುವ ಕುರ್ಆನ್ ನನ್ನದು ಅಲ್ಲ ಮತ್ತು ಅದು ಮಾನವ ನಿರ್ಮಿತ ಗ್ರಂಥ ಎಂದು ತಿಳಿಯುವುದಾದರೆ ಅದಕ್ಕೆ ಸರಿಸಮಾನವಾದ ಅಥವಾ ಅದೇ ಶೈಲಿಯನ್ನು, ಅಪಾರ ಜ್ಞಾನವನ್ನು, ವಿವಿಧ ಅರ್ಥ ನೀಡುವ ವ್ಯಾಖ್ಯಾನವನ್ನು ಹೊಂದಿದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಎಂದು ಅಲ್ಲಾಹನು ಹೇಳುತ್ತಿದ್ದಾನೆ. ಕುರ್ಆನ್ನಲ್ಲಿರುವ ಅಧ್ಯಾಯಗಳಲ್ಲಿ ಅತ್ಯಂತ ಸಣ್ಣ ಅಧ್ಯಾಯ ಅಸ್ರ್ ಆಗಿದೆ. ಆದರೆ ಇಂದಿಗೂ ಕುರ್ಆನಿನಲ್ಲಿರುವಂತಹ ಅಧ್ಯಾಯಗಳನ್ನು ರಚಿಸಲು ಯಾರಿಗೂ ಸಾಧ್ಯವಾಗಿಲ್ಲ. ಪ್ರಸಿದ್ಧ ಭೌತ ಶಾಸ್ತ್ರ ವಿಜ್ಞಾನಿಯಾದ, ನೋಬೆಲ್ ಪುರಸ್ಕ್ರತ ಅಲ್ಬರ್ಟ್ ಐನ್ಸ್ಟೈನ್ ಹೇಳುತ್ತಾರೆ, “ಧರ್ಮರಹಿತ ವಿಜ್ಞಾನವು ವಿಕಲವೂ, ವಿಜ್ಞಾನ ರಹಿತ ಧರ್ಮವು ಕುರುಡೂ ಆಗಿರುತ್ತದೆ”. ಐನ್ಸ್ಟೈನ್ರ ಪ್ರಕಾರ ಯಾವ ವಿಜ್ಞಾನ ಅಥವಾ ವಿಜ್ಞಾನಿಗಳು ದೇವನನ್ನು ನಂಬುವುದಿಲ್ಲವೋ ಅವರು ವಿಕಲರಾಗಿದ್ದಾರೆ. ಅವರು ದೇಹದ ಯಾವುದೋ ಒಂದು ಅಂಗ ಕಳೆದುಕೊಂಡವರಂತಾಗಿದ್ದಾರೆ. ಅದೇ ರೀತಿ ಧರ್ಮದಲ್ಲಿ ಅಥವಾ ಧರ್ಮಗ್ರಂಥಗಳಲ್ಲಿ ವಿಜ್ಞಾನ ಅಥವಾ ವೈಜ್ಞಾನಿಕ ವಿಷಯಗಳಿಗೆ ಆಸ್ಪದವಿಲ್ಲವೋ ಆ ಧರ್ಮವು ಕುರುಡಾಗಿರುತ್ತದೆ. ಆ ಧರ್ಮವನ್ನು ಅನುಸರಿಸುವವರು ಅಂಧಕಾರದಲ್ಲಿ ಮುಂದುವರಿಯುತ್ತಾರೆ.
ಕುರ್ಆನ್ ಒಂದು ವಿಜ್ಞಾನ ಗ್ರಂಥವಲ್ಲ. ಅದು ಆಯಾತ್ಗಳ(ನಿದರ್ಶನಗಳು) ಗ್ರಂಥವಾಗಿದೆ. (Iಣ is ಟಿoಣ ಚಿ ಃooಞ oಜಿ sಛಿieಟಿಛಿe, ಃuಣ iಣ is ಚಿ ಃooಞ oಜಿ Sigಟಿs) ಕುರ್ಆನ್ ವೈಜ್ಞಾನಿಕ ವಿಷಯಗಳನ್ನು ಒಳಗೊಂಡಿದೆಯಾದರೂ ಅದು ವಿಜ್ಞಾನ ಗ್ರಂಥವಲ್ಲ. ಅದು ಅಲ್ಲಾಹನ ನಿದರ್ಶನಗಳನ್ನು ತೋರಿಸುವಂತಹ ಗ್ರಂಥವಾಗಿದೆ. ಅದು ನೈಜ ಒಡೆಯನಾದ ಅಲ್ಲಾಹನನ್ನು ಕಂಡುಕೊಳ್ಳಲು ಸಹಾಯವಾಗುವ ಕುರುಹುಗಳನ್ನು ತೋರಿಸುತ್ತಿದೆ.
ಜಗತ್ತಿನ ಸೃಷ್ಟಿಯನ್ನು ಬಿಗ್ಬ್ಯಾಂಗ್ ಎಂಬ ಥಿಯರಿಯ ಮೂಲಕ ವಿವರಿಸಲಾಗುತ್ತಿದೆ. ಅದರ ಪ್ರಕಾರ ಮೊದಲು ಇಡೀ ವಿಶ್ವವು ಒಂದು ಬೃಹತ್ ಸ್ವರೂಪದ ಬಿಂದುವಾಗಿತ್ತು. ನಂತರ ಒಂದು ಮಹಾ ಸ್ಫೋಟ ಸಂಭವಿಸಿತು. ಅದರಿಂದಾಗಿ ಭೂಮಿ, ಆಕಾಶ, ಚಂದ್ರ, ನಕ್ಷತ್ರ ಹೀಗೆ ವಿಶ್ವದ ಪ್ರತಿಯೊಂದು ವಸ್ತುವೂ ಸೃಷ್ಟಿಸಲ್ಪಟ್ಟಿತು. ನಿಜವಾಗಿ ಈ ವಿಷಯವು ಕೆಲವು ವರ್ಷಗಳ ಹಿಂದಷ್ಟೇ ಬೆಳಕಿಗೆ ಬಂತು. ಇದನ್ನು ಅಲ್ಲಾಹನು ಈ ರೀತಿ ವಿವರಿಸಿದ್ದಾನೆ `ಆಕಾಶಗಳೂ ಭೂಮಿಯೂ ಕೂಡಿಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನೂ, ಪ್ರತಿಯೊಂದು ಜೀವಿಯನ್ನೂ ನೀರಿನಿಂದ ಸೃಷ್ಟಿಸಿದ್ದನ್ನೂ ಕಾಣಲಿಲ್ಲವೇ? ಅವರು ವಿಶ್ವಾಸವಿರಿಸುವುದಿಲ್ಲವೇ?’ (ಕುರ್ಆನ್: 21:30)
ಕಣ್ಣು ಕುಕ್ಕುವಂತಿರುವ ಕುರ್ಆನಿನ ಈ ವಚನ ಹಾಗೂ ಆಧುನಿಕ ವಿಜ್ಞಾನದ ನಡುವಿನ ಹೊಂದಾಣಿ ಕೆಗಳನ್ನು ನೋಡಿ. ಆಕಾಶಗಳು ಮತ್ತು ಭೂಮಿ ಮೊದಲು ಕೂಡಿಕೊಂಡಿತ್ತು. ಅದು ಬೃಹತ್ ಸ್ವರೂಪದ ಬಿಂದುವಾಗಿತ್ತು. ನಂತರ ಅವುಗಳು ಬೇರ್ಪಟ್ಟವು ಎಂದು ಅಲ್ಲಾಹನು ಸವಿವರವಾಗಿ ತಿಳಿಸುತ್ತಾ 1500 ವರ್ಷಗಳ ಹಿಂದೆ ಅಲ್ಲಾಹನು ಅರೇಬಿಯಾದಲ್ಲಿ ಪ್ರವಾದಿ(ಸ) ಅವರಿಗೆ ಇದನ್ನು ಅವತೀರ್ಣಗೊಳಿಸಿದನು. ಅವರು ವಿಜ್ಞಾನಿ ಆಗಿರಲಿಲ್ಲ. ಅವರಿಗೆ ಈ ವಿಷಯವನ್ನು ತಿಳಿಸುವ ಅಗತ್ಯವೂ ಇರಲಿಲ್ಲ. ಅವನು ಯಾಕೆ ಇದನ್ನು ಉಲ್ಲೇಖಿಸಿದನೆಂದರೆ, ಜಗತ್ತು ಇದನ್ನು ತಿಳಿದುಕೊಳ್ಳಲಿ ಎಂದು.
ಆಕಾಶಗಂಗೆ:
ನಮ್ಮ ಆಧುನಿಕ ವಿಜ್ಞಾನದ ಪ್ರಕಾರ ಮೊದಲು ಆಕಾಶ ಗಂಗೆಗಳು ಕೇವಲ ಅನಿಲ ರೂಪದಲ್ಲಿದ್ದವು. ಅವುಗಳು ಅನೇಕ ಅನಿಲಗಳ ಮಿಶ್ರಣವಾಗಿದ್ದವು. ಅವು ಮತ್ತೆ ಅದು ಆಕಾಶಗಂಗೆಗಳಾಗಿ ಪರಿವರ್ತನೆ ಹೊಂದಿದವು. ಇದನ್ನು ಅಲ್ಲಾಹನು ಈ ರೀತಿ ವಿವರಿಸಿದ್ದಾನೆ
‘ತರುವಾಯ ಅವನು ಆಕಾಶದ ಕಡೆಗೆ ಗಮನ ಹರಿಸಿದನು. ಆಗ ಅದು ಕೇವಲ ಹೊಗೆಯಾಗಿತ್ತು. ಅವನು ಆಕಾಶ-ಭೂಮಿಯೊಡನೆ, ‘ನೀವು ಬಯಸಿದರೂ ಬಯಸದಿದ್ದರೂ ಅಸ್ತಿತ್ವಕ್ಕೆ ಬಂದು ಬಿಡಿರಿ’ ಎಂದನು. ಅವೆರಡೂ, ನಾವು ಆಜ್ಞಾಪಾಲಕರಂತೆ ಬಂದು ಬಿಟ್ಟೆವು’ ಎಂದವು. (ಕುರ್ಆನ್ 41: 11)
ಇಲ್ಲಿ ಆಕಾಶವನ್ನು ಹೊಗೆಯಂತೆ ಎನ್ನಲಾಗಿದೆ. ಇದನ್ನು ಧೂಮ ಎಂದು ಅರ್ಥೈಸಿದರೆ ಇನ್ನೂ ಉತ್ತಮ. ಇದು ಅನೇಕ ಅನಿಲಗಳಿಂದ ಮಿಶ್ರಿತವಾದ ಒಂದು ಧೂಮ ಆಗಿತ್ತು. ಅವು ಯಾವಾಗ ಅಲ್ಲಾಹನು ಆಜ್ಞೆ ಮಾಡಿದನೋ ಆಗ ಅವು ತಮ್ಮ ರೂಪವನ್ನು ಪಡೆದುಕೊಂಡವು. ಇಲ್ಲಿ ಆಕಾಶದಲ್ಲಿರುವ ಪ್ರತಿಯೊಂದು ವಸ್ತುವೂ ಆ ಧೂಮದಿಂದ ಉಂಟಾಗಿದೆ ಎನ್ನಲಾಗಿದೆ. ಆದ್ದರಿಂದ ವಿಶ್ವದ ಆರಂಭದಲ್ಲಿ ಬೃಹತ್ ಸ್ವರೂಪದ ಬಿಂದು ಸ್ಫೋಟಗೊಂಡು ಚಂದ್ರ, ಸೂರ್ಯ, ನಕ್ಷತ್ರ, ಆಕಾಶ ಗಂಗೆಗಳು, ಧೂಮಕೇತುಗಳು ಸೃಷ್ಟಿಸಲ್ಪಟ್ಟವು ಎಂಬುದು ಈಗ ಖಾತ್ರಿಯಾಯಿತು. ಇದನ್ನು ಕುರ್ಆನ್ 1500 ವರ್ಷಗಳ ಹಿಂದೆಯೇ ಜನರಿಗೆ ತಿಳಿಸಿಕೊಟ್ಟಿತ್ತು.
ಭದ್ರವಾಗಿ ನಾಟಲ್ಪಟ್ಟ ಪರ್ವತಗಳು:
ಭೂಮಿಯ ಬಗ್ಗೆ ತಿಳಿದುಕೊಳ್ಳಲು ‘ಅರ್ತ್’ ಎಂಬ ಹೆಸರಿನ ಪುಸ್ತಕವನ್ನು ಜಗತ್ತಿನಾದ್ಯಂತ ಉಪಯೋಗಿಸಲಾಗುತ್ತಿದೆ. ಇದರ ಇಬ್ಬರು ಬರಹಗಾರರಲ್ಲಿ ಫ್ರೊಫೆಸರ್ ಎಮೆರಿಟಸ್ ಫ್ರಾಂಕ್ ಪ್ರಸ್ಸ್ ಒಬ್ಬರು. ಇವರು 12 ವರ್ಷಗಳ ಕಾಲ ನ್ಯಾಶನಲ್ ಅಕಾಡಮಿ ಆಫ್ ಸೈನ್ಸ್ನ (ಓಚಿಣioಟಿಚಿಟ ಂಛಿಚಿಜemಥಿ oಜಿ Sಛಿiಟಿಛಿe) ಅಧ್ಯಕ್ಷರಾಗಿದ್ದರು. ಇವರ ಪ್ರಕಾರ ಪರ್ವತಗಳಿಗೆ ಆಳವಾದ ಬುಡವಿದೆ. ಈ ಬುಡಗಳು ಭೂಮಿಯ ಆಳದಲ್ಲಿ ನಾಟಲ್ಪಟ್ಟಿವೆ. ಭೂಮಿಯ ಒಳಗೆ ನಾಟಲ್ಪಟ್ಟಿರುವ ಪರ್ವತದ ಬುಡವನ್ನು ಪೆಗ್ ಎನ್ನುವರು. ನಮ್ಮ ವಿಜ್ಞಾನ ಈ ವಿಷಯವನ್ನು 1865ರಲ್ಲಿ ಧೃಢೀಕರಿಸಿತು. ವಿಜ್ಞಾನಿಗಳಾದ ಆಸ್ಟ್ರೋನೋಮರ್ ರೋಯಲ್ ಮತ್ತು ಸರ್ ಜೋರ್ಜ್ ಐರಿಯಾನರ ಪ್ರಕಾರ ಪರ್ವತಗಳು ಭೂಮಿಗೆ ಭದ್ರತೆಯನ್ನು ನೀಡುತ್ತವೆ. ಮತ್ತು ಭೂಮಿ ಅಲುಗಾಡದಂತೆ ತಡೆಯುತ್ತವೆ ಅಥವಾ ಭೂಕಂಪವಾಗದಂತೆ ತಡೆಯುತ್ತವೆ.
ಇದನ್ನು ಅಲ್ಲಾಹನು ಈ ರೀತಿ ವಿವರಿಸಿದ್ದಾನೆ ‘ನಾವು ಭೂಮಿಯನ್ನು ಹಾಸನ್ನಾಗಿಯೂ ಮತ್ತು ಪರ್ವತಗಳನ್ನು ಗೂಟಗಳನ್ನಾಗಿಯೂ ಮಾಡಲಿಲ್ಲವೇ? (ಕುರ್ಆನ್ 78: 6-7)
‘ಮತ್ತು ನಾವು ಪರ್ವತಗಳನ್ನು ಭೂಮಿಯ ಮೇಲೆ ಭದ್ರವಾಗಿ ನಾಟಿಬಿಟ್ಟೆವು. ಅವು ಅದರೊಂದಿಗೆ ಅಲುಗಾಡಿ ಬೀಳದಿರಲೆಂದು.” (ಕುರ್ಆನ್ 21:31)
ಇಲ್ಲಿ ಪರ್ವತಗಳನ್ನು ಗೂಟಗಳಂತೆ ಎನ್ನಲಾಗಿದೆ. ಇದನ್ನೇ ಪೆಗ್ ಎನ್ನುವರು. ನಮಗೆ ಕಣ್ಣಿಗೆ ಕಾಣುವುದು ಪರ್ವತಗಳ ಮೇಲ್ಪದರ ಮಾತ್ರ. ಅದರ ದೊಡ್ಡ ಭಾಗವಾದ ಬೇರುಗಳು ಭೂಮಿಯ ಆಳಕ್ಕಿಳಿದು ಭೂಮಿಯನ್ನು ಭದ್ರವಾಗಿರಿಸುತ್ತದೆ. (ಇಚಿಡಿಣh. P. 435)
ಭೂಮಿಯ ಆಕಾರ:
ಪ್ರಾಚೀನ ಕಾಲದಲ್ಲಿ ಜನರು ಭೂಮಿಯು ಚಪ್ಪಟೆಯಾಗಿದೆ ಎಂದು ನಂಬಿದ್ದರು. ಆದ್ದರಿಂದ ಅವರು ದೂರದ ಪ್ರಯಾಣವನ್ನು ಕೈಗೊಳ್ಳುತಿರಲಿಲ್ಲ. ಭೂಮಿಯ ಅಂಚಿನಿಂದ ಕೆಳಗೆ ಬಿದ್ದು ಬಿಡುವೆವು ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಭೂಮಿಯು ಚಪ್ಪಟೆಯಾಗಿದೆ ಎಂಬ ಪ್ರಸ್ತಾಪ ಬೈಬಲಿನಲ್ಲೂ ಬಂದಿದೆ. ಆದರೆ ಭೂಮಿಯು ಗೋಳಾಕಾರವಾಗಿದೆ ಎಂಬ ವಿಷಯ ಬೆಳಕಿಗೆ ಬಂದದ್ದು 1597ರ ಸುಮಾರಿಗೆ. ಸರ್ ಫ್ರಾನ್ಸಿಸ್ ಡ್ರೇಕ್ ಎಂಬವರು ಮೊತ್ತ ಮೊದಲ ಭಾರಿ ಭೂಮಿಯ ಸುತ್ತ ಸಂಚರಿಸಿ ಭೂಮಿಯು ಗೋಳಾಕಾರವಾಗಿದೆ ಎಂಬುದನ್ನು ಕಂಡು ಹಿಡಿದರು.
ಭೂಮಿಯು ಗೋಳಾಕಾರವಾಗಿರುವುದಕ್ಕೆ ಕುರ್ಆನಿನಲ್ಲಿ ಅನೇಕ ಪುರಾವೆಗಳಿವೆ. ಅವುಗಳಲ್ಲಿ ಕೆಲವನ್ನು ಪರಿಶೀಲಿಸೋಣ.
‘ಅಲ್ಲಾಹನು ಇರುಳನ್ನು ಹಗಲಿನೊಂದಿಗೂ, ಹಗಲನ್ನು ಇರುಳಿನೊಂದಿಗೂ ವಿಲೀನವಾಗಿಸುವುದನ್ನು ನೀವು ನೋಡುವುದಿಲ್ಲವೇ? (ಕುರ್ಆನ್ 31: 29) ಇಲ್ಲಿ ಯೂಲಿಜ್ ಎಂಬ ಪದವನ್ನು ಬಳಸಲಾಗಿದೆ. ಯೂಲಿಜ್ ಎಂದರೆ ಹಗಲು ರಾತ್ರಿಯಾಗಿಯೂ, ರಾತ್ರಿ ಹಗಲಾಗಿಯೂ ಬದಲಾಗುವುದು. ಭೂಮಿಯು ಗೋಳಾಕಾರವಾಗಿದ್ದರೆ ಮಾತ್ರ ಈ ಕಾರ್ಯ ಸಾಧ್ಯ. ಇಲ್ಲಿ ಬೆಳಗಾಗುವುದು ಹಾಗೂ ಇರುಳಾಗುವುದು ಥಟ್ಟನೆ, ಕ್ಷಣಾರ್ಧದಲ್ಲಿ ಆಗುವಂತಹ ಕಾರ್ಯವಲ್ಲ. ಅದು ಅನುಕ್ರಮವಾಗಿ ನಡೆಯುತ್ತದೆ ಎನ್ನಲಾಗಿದೆ.
‘ಅವನು ಆಕಾಶಗಳನ್ನು ಮತ್ತು ಭೂಮಿಯನ್ನು ಸತ್ಯಪೂರ್ಣವಾಗಿ ಸೃಷ್ಟಿಸಿರುವನು. ಅವನು ಇರುಳನ್ನು ಹಗಲಿನ ಮೇಲೂ ಹಗಲನ್ನು ಇರುಳಿನ ಮೇಲೂ ಆವರಿಸುವಂತೆ ಮಾಡಿದನು.” (ಕುರ್ಆನ್: 39: 5) ಇಲ್ಲಿ ಬಳಸಿರುವ ಅರಬಿ ಪದ `ಕವ್ವರ’ ಆಗಿದ್ದು ಇದರ ಅರ್ಥ ಆವರಿಸುವುದು ಎಂದಾಗಿದೆ. ಭೂಮಿ ಯು ಗೋಳಾಕಾರವಾಗಿರುವುದರಿಂದ ಮಾತ್ರ ಬೆಳಕು ಮೆಲ್ಲನೇ ಆವರಿಸಲು ಸಾಧ್ಯ.
ಭೂಮಿಯು ಗೋಳಾಕಾರವಾಗಿದ್ದರೂ ಅದು ಸಂಪೂರ್ಣವಾಗಿ ಚೆಂಡಿನಂತೆ ಇಲ್ಲ. ಅದರ ಎರಡು ಧ್ರುವಗಳು ತುಸು ಚಪ್ಪಟೆಯಾಗಿದ್ದು ನಡುವೆ ಸ್ವಲ್ಪ ಉಬ್ಬಿಕೊಂಡಿದೆ. ಅದು ಒಂದು ಕಿತ್ತಳೆ ಹಣ್ಣಿನ ರೂಪ ಅಥವಾ ಉಷ್ಟ್ರ ಪಕ್ಷಿಯ ಮೊಟ್ಟೆಯ ರೂಪವನ್ನು ಹೋಲುತ್ತದೆ. ಇದು ನಮ್ಮ ಆಧುನಿಕ ವಿಜ್ಞಾನ ಹೇಳಿರುವ ವಿಷಯ. ಇದನ್ನು ಕುರ್ಆನ್ ಈ ರೀತಿ ವಿವರಿಸಿದೆ, “ಮತ್ತು ಭೂಮಿಯನ್ನು ಆ ಬಳಿಕ ಅವನು ಹಾಸ(ದಹಾಹ)ನ್ನಾಗಿ ಮಾಡಿದನು. (ಕುರ್ಆನ್: 79: 30)
`ದಹಾಹಾ’ ಎಂಬ ಅರಬಿ ಪದಕ್ಕೆ ಎರಡು ಅರ್ಥಗಳಿವೆ. ಒಂದು ವಿಸ್ತರಿಸುವುದು ಎಂದಾದರೆ ಮತ್ತೊಂದು ಉಷ್ಟ್ರಪಕ್ಷಿಯ ಮೊಟ್ಟೆ. ಈ ಎರಡು ಅರ್ಥಗಳೂ ಸರಿಯಾಗಿವೆ. ಕುರ್ಆನಿನ ಅವತೀರ್ಣ ಕಾಲದಲ್ಲಿ ಭೂಮಿ ಚಪ್ಪಟೆಯಾಗಿದೆ ಎಂಬ ಮಾತು ಪ್ರಚಲಿತದಲ್ಲಿತ್ತಾದರೂ ಕುರ್ಆನ್ ಮಾತ್ರ ಭೂಮಿಯ ಸರಿಯಾದ ಆಕಾರವನ್ನು ತಿಳಿಸಿತು.
ಸೂರ್ಯ ಮತ್ತು ಚಂದ್ರ:
ಪ್ರಾಚೀನ ಕಾಲದಲ್ಲಿ ಚಂದ್ರನು ಸ್ವಯಂ ಪ್ರಕಾಶ ಹೊಂದಿದ್ದಾನೆ, ಸೂರ್ಯ ದಿನದಲ್ಲಿ ಮತ್ತು ಚಂದ್ರ ರಾತ್ರಿಯಲ್ಲಿ ಕಾಣಿಸುತ್ತಾನೆ ಎಂಬುದು ಅವರ ನಂಬಿಕೆಯಾಗಿತ್ತು. ಚಂದ್ರ ಸೂರ್ಯನಿಂದ ಯಾವ ಬೆಳಕನ್ನು ಪಡೆಯುತ್ತದೋ ಕೇವಲ ಅದನ್ನೇ ಅದು ಪ್ರತಿಫಲಿಸುತ್ತದೆ ಎಂದು ಆಧುನಿಕ ವಿಜ್ಞಾನ ಧೃಡೀಕರಿಸಿದೆ. ಅಲ್ಲಾಹನು ಈ ರೀತಿ ಹೇಳಿರುವನು,
“ಆಕಾಶದಲ್ಲಿ ನಕ್ಷತ್ರ ಪುಂಜಗಳನ್ನು ಮಾಡಿದವನು ಮತ್ತು ಅದರಲ್ಲೊಂದು ದೀಪವನ್ನು ಹಾಗೂ ಬೆಳಕನ್ನು ನೀಡುವ ಚಂದ್ರನನ್ನು ಮಾಡಿದವನು ಅನುಗ್ರಹೀತನಾಗಿದ್ದಾನೆ.” (ಕುರ್ಆನ್: 25: 61) ಇಲ್ಲಿ ಸೂರ್ಯನಿಗೆ `ಶಂಸ್’ ಎಂಬ ಅರಬಿ ಪದ ಬಳಿಕೆಯಾಗಿದೆ. ಇದನ್ನು ಸಿರಾಜ್ ಎಂದೂ ಹೇಳುತ್ತಾರೆ. ಸಿರಾಜ್ ಎಂದರೆ ಪಂಜು ಎಂದರ್ಥ.
ಸೂರ್ಯನನ್ನು `ವಹ್ಹಾಜ್’ ಎಂದೂ ಉಲ್ಲೇಖಿಸಲಾಗಿದೆ. ಇದರರ್ಥ ಪ್ರಜ್ವಲಿಸುವ ದೀಪ. ಸೂರ್ಯನನ್ನು `ದಿಯಾತ್’ ಎಂದೂ ಹೇಳಿತ್ತಾರೆ. ಇದರರ್ಥ `ಹೊಳೆಯುತ್ತಿರುವ ಶೋಭೆ’ ಎಂದಾಗಿದೆ. ಇವೆಲ್ಲವೂ ಸೂರ್ಯನ ವಿವರಣೆ ಗಳಾಗಿವೆ. ಸೂರ್ಯನನ್ನು `ಪ್ರಜ್ವಲಿಸುವ ದೀಪ’ ಎನ್ನಲಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ ದೀಪ ಸ್ವತಃ ಸುಟ್ಟು ನಮಗೆ ಪ್ರಕಾಶವನ್ನು ನೀಡುತ್ತದೆ. ಸೂರ್ಯನಲ್ಲಿ ನಡೆಯುತ್ತಿರುವ ಆಂತರಿಕ ದಹನ ಕ್ರಿಯೆಯಿಂದಾಗಿ ಅತೀವ ಉಷ್ಣತೆ ಬಿಡುಗಡೆಯಾಗುತ್ತದೆ ಮತ್ತು ಅದು ಬೆಳಕನ್ನು ಉಂಟು ಮಾಡುತ್ತದೆ. ‘ಸೂರ್ಯನನ್ನು ಪ್ರಕಾಶಮಾನವನ್ನಾಗಿ ಮಾಡಿದವನೂ ಚಂದ್ರನಿಗೆ ಹೊಳಪನ್ನು ಕೊಟ್ಟವನೂ ಅವನೇ.’ (ಕುರ್ಆನ್: 10:5) ಇಲ್ಲಿ ಸೂರ್ಯನನ್ನು ಪ್ರಕಾಶಮಾನವನ್ನಾಗಿ ಮಾಡಲಾಗಿದೆ ಹಾಗೂ ಚಂದ್ರನಿಗೆ ಕೇವಲ ಹೊಳಪನ್ನು ನೀಡಲಾಗಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಒಂದು ವಸ್ತುವನ್ನು ಹೊಳೆಯುವಂತೆ ಮಾಡಲು ಬೇರಾವುದೇ ವಸ್ತುವಿನ ಲೇಪನ ನೀಡಬೇಕಾಗುತ್ತದೆ ಅಥವಾ ಅದನ್ನು ಉಜ್ಜಬೇಕಾಗುತ್ತದೆ. ಅದೇ ರೀತಿ ಚಂದ್ರ ಸೂರ್ಯನಿಂದ ಪಡೆದ ಬೆಳಕನ್ನು ನಮಗೆ ಪ್ರತಿಫಲಿಸುತ್ತದೆ ಎಂದು ಕುರ್ಆನ್ ಸುಸ್ಪಷ್ಟವಾಗಿ, ಸವಿವರವಾಗಿ 1400 ವರ್ಷಗಳ ಹಿಂದೆ ಹೇಳಿದೆ. ಹೀಗೆ ಅಲ್ಲಾಹನು ತಾನು ಸೃಷ್ಟಿಸಿದ ವಸ್ತುಗಳ ಬಗ್ಗೆ ಜನರಿಗೆ ಜ್ಞಾನವನ್ನು ನೀಡುತ್ತಾನೆ.
ಸೂರ್ಯನ ಭ್ರಮಣೆ:
ಪ್ರಾಚೀನ ಕಾಲದಲ್ಲಿ ಜನರು ಭೂಮಿಯು ವಿಶ್ವದ ಕೇಂದ್ರವಾಗಿದೆ ಎಂದು ನಂಬಿದ್ದರು. ಸೂರ್ಯನೂ ಸೇರಿದಂತೆ ಎಲ್ಲಾ ಆಕಾಶಕಾಯಗಳೂ ಭೂಮಿಯ ಸುತ್ತ ಪರಿಭ್ರಮಿಸುತ್ತದೆ ಎಂಬುದು ಅವರ ನಂಬಿಕೆ ಯಾಗಿತ್ತು. ಇದನ್ನು ಜಿಯೋ ಸೆಂಟ್ರಿಕ್ ಕಾಂಸೆಪ್ಟ್ (ಉeoಛಿeಟಿಣಡಿiಛಿ ಅoಟಿಛಿeಠಿ) ಎನ್ನುತ್ತಾರೆ. ಆದರೆ 1512 ರಲ್ಲಿ ಹೀಲಿಯೋ ಸೆಂಟ್ರಿಕ್ ಥಿಯರಿ ಪ್ರಚಲಿತವಾಯಿತು. ನಿಕೋಲಸ್ ಕೊಪರ್ನಿಕಸ್ ‘ಸೂರ್ಯನು ವಿಶ್ವದ ಕೇಂದ್ರ’ ಎಂದು ಧೃಢೀಕರಿಸಿದನು. ಅವರ ಪ್ರಕಾರ ಸೂರ್ಯ. ಚಲನ ರಹಿತವಾಗಿ ವಿಶ್ವದ ಕೇಂದ್ರದಲ್ಲಿದ್ದು ಉಳಿದ ಗ್ರಹಗಳೆಲ್ಲವೂ ಅದರ ಸುತ್ತ ಸುತ್ತುತ್ತದೆ. ಆದರೆ ನಮ್ಮ ವಿಜ್ಞಾನ ಇದರಿಂದಲೂ ಮುಂದುವರಿದು ‘ಆಸ್ಟೋನೋಮಿ ಯ ನೋವಾ’ ಎಂಬ ಸಿದ್ಧಾಂತವನ್ನು ಹೊರತಂದಿತು. ಇದನ್ನು ಜರ್ಮನಿಯ ವಿಜ್ಞಾನಿಯಾಗಿದ್ದ ಯೋಹಿನಾಸ್ ಕೆಪ್ಲರ್ ಧೃಢೀಕರಿಸಿದರು. ಇವರ ಪ್ರಕಾರ ಎಲ್ಲಾ ಗ್ರಹಗಳು ಸ್ಥಿರವಾಗಿರುವ ಸೂರ್ಯನ ಸುತ್ತ ಧೀರ್ಘ ವೃತ್ತಾಕಾರದಲ್ಲಿ ಸುತ್ತುವುದಲ್ಲದೆ ಅವು ತಮ್ಮದೇ ಕಕ್ಷೆಯಲ್ಲಿ, ವಿವಿಧ ಗತಿಗಳಲ್ಲಿ ತಿರುಗುತ್ತಿವೆ. ಹೀಗೆ ನಮ್ಮ ವಿಜ್ಞಾನ ಗ್ರಹಗಳ ಚಲನೆಯ ಬಗ್ಗೆ ತಿಳಿಸಿತ್ತಾದರೂ, ಸೂರ್ಯನ ಚಲನೆಯ ಬಗ್ಗೆ ತಿಳಿಸಿರಲಿಲ್ಲ. ನಾವು ಈಗ ಕುರ್ಆನಿನ ಸೂಕ್ತವನ್ನು ಪರಿಶೀಲಿಸೋಣ.
‘ರಾತ್ರಿ ಹಗಲುಗಳನ್ನು ಉಂಟು ಮಾಡಿದವನೂ ಸೂರ್ಯ ಚಂದ್ರನನ್ನು ಸೃಷ್ಟಿಸಿದವನೂ ಅಲ್ಲಾಹನೇ, ಎಲ್ಲವೂ ಒಂದೊಂದು ಕಕ್ಷೆಯಲ್ಲಿ ತೇಲುತ್ತಿವೆ.”
ಈ ಸೂಕ್ತದಿಂದ ಒಂದು ಮಾತು ಸ್ಪಷ್ಟವಾಗಿದೆ. ಅದೇನೆಂದರೆ ಸೂರ್ಯ ಮತ್ತು ಚಂದ್ರ ಒಂದೇ ಕಕ್ಷೆಯಲ್ಲಿ ತೇಲುತ್ತಿಲ್ಲ. ಅವೆಲ್ಲವೂ ತನ್ನದೇ ಕಕ್ಷೆಗಳನ್ನು ಹೊಂದಿವೆ. ಅವು ತಮ್ಮ ಸ್ವಂತ ಕಕ್ಷೆಯ ಸುತ್ತ ಸುತ್ತುತ್ತವೆ. ಇಲ್ಲಿ ಬಳಸಲಾಗಿರುವ ಪದ `ಯಸ್ಬಹೂನ್’ ಆಗಿದ್ದು, ಮೂಲ ಪದವು `ಸಬಹ’ ಆಗಿದೆ. ಈ ಪದವು ಚಲಿಸುತ್ತಿರುವ ವಸ್ತುವಿನಲ್ಲಿರುವ ಅಪರವಾಗಿರುವ ಚಲನೆಯನ್ನು ಸೂಚಿಸುತ್ತದೆ.
ಕೆಲವು ವರ್ಷಗಳ ಹಿಂದೆಯಷ್ಟೇ ಆಧುನಿಕ ವಿಜ್ಞಾನ ‘ಸೂರ್ಯ ತನ್ನ ಅಕ್ಷದಲ್ಲಿ ಸುತ್ತುವುದು ಮಾತ್ರವಲ್ಲ ಅದು ತಾನು ಇರುವ ಗ್ಯಾಲಕ್ಸಿಯ ಸುತ್ತ ಸುತ್ತತ್ತದೆ’ ಎಂದು ಧೃಢೀಕರಿಸಿತು.
ನಾವು ಸಮುದ್ರದಲ್ಲಿ ಈಜುವುದಾದರೆ ಕೇವಲ 10-20 ವಿೂಟರ್ ಆಳದವರೆಗೆ ಹೋಗಲು ಸಾಧ್ಯ. ಅದಕ್ಕಿಂತ ಆಳ ಹೋಗಲು ಆಕ್ಸಿಜನ್ ಮಾಸ್ಕ್ ಬೇಕಾಗುತ್ತದೆ. ಸಮುದ್ರದ ಮೇಲ್ಮೈಯಲ್ಲಿ ಸೂರ್ಯನ ಪ್ರಕಾಶವಿರುತ್ತದೆ. ಆಳಕ್ಕೆ ಹೋದಂತೆ ಆ ಪ್ರಕಾಶ ಕಡಿಮೆಯಾಗುತ್ತಾ ಹೋಗಿ ಕೊನೆಗೆ ಗಾಢ ಅಂಧಕಾರ ಸಿಗುತ್ತದೆ. 200 ವಿೂಟರ್ಗಿಂತಲೂ ಆಳಕ್ಕೆ ಹೋದರೆ ಮಾನವನು ಸ್ವತಃ ತನ್ನ ಕೈಯನ್ನು ಕೂಡ ನೋಡಲು ಅಸಮರ್ಥನಾಗುತ್ತಾನೆ ಮತ್ತು 1000ವಿೂ. ಗಿಂತಲೂ ಆಳಕ್ಕೆ ಹೋದರೆ ಅಲ್ಲಿರುವುದು ಕೇವಲ ಅಂಧಕಾರ. (ಔಛಿeಚಿಟಿs ಇಟಜeಡಿ & Peಡಿಟಿeಣಣಚಿ P. 27) ಸಮುದ್ರದ ಆಳದಲ್ಲಿ ಇರುವ ಅಂಧಕಾರವನ್ನು ನಮ್ಮ ವಿಜ್ಞಾನವು ಕೆಲವು ವರ್ಷಗಳ ಹಿಂದೆಯಷ್ಟೇ ಕಂಡು ಹಿಡಿಯಿತು. ಅದೂ ಕೂಡ ಸಬ್ಮೆರಿನ್ ಹಾಗೂ ವಿಶೇಷ ತಂತ್ರಜ್ಞಾನವನ್ನು ಅಳವಡಿಸಿಕೊಂಡು. ಆದರೆ ಇವೆಲ್ಲವೂ ಇಲ್ಲದ 1400 ವರ್ಷಗಳ ಹಿಂದಿನ ಕಾಲದಲ್ಲಿ ಅರೇಬಿಯಾದ ಒಬ್ಬ ಪ್ರವಾದಿಗೆ ಈ ವಿಷಯವನ್ನು ತಿಳಿಸಲಾಯಿತು. ಅದನ್ನು ಅಲ್ಲಾಹನು ಸ್ವತಃ ತಿಳಿಸಿದನು.
“ಅಥವಾ ಅವನ ಉದಾಹರಣೆ ಹೀಗಿದೆ: ಒಂದು ಆಳವಾದ ಸಾಗರದಲ್ಲಿ ಅಂಧಕಾರ, ಮೇಲೊಂದು ತೆರೆ ಆವರಿಸಿದೆ, ಅದರ ಮೇಲೆ ಇನ್ನೊಂದು ತೆರೆ ಮತ್ತು ಅದರ ಮೇಲೆ ಮೋಡ ಆವರಿಸಿಕೊಂಡಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಮನುಷ್ಯನು ತನ್ನ ಕೈಯನ್ನು ಹೊರ ಚಾಚಿದರೆ ಅದೂ ಅವನಿಗೆ ಕಾಣದು. ಯಾರಿಗೆ ಅಲ್ಲಾಹನು ಪ್ರಕಾಶವನ್ನು ದಯಪಾಲಿಸಲಿಲ್ಲವೋ ಅವನಿಗೆ ಬೇರಾವ ಪ್ರಕಾಶವೂ ಇಲ್ಲ.” (24: 40)
ಇಲ್ಲಿ ಅಲ್ಲಾಹನು ನಿಖರವಾಗಿ ಆಳವಾದ ಸಮುದ್ರದ ಅಂಧಕಾರದ ಬಗ್ಗೆ ಹೇಳುತ್ತಿದ್ದಾನೆ. ಈ ಅಂಧಕಾರ ಚಿಕ್ಕ ನದಿಗಳಿಗೆ ಅಥವಾ ಸಮುದ್ರಗಳಿಗೆ ಅನ್ವಯವಾಗುವುದಿಲ್ಲ. ಆದರೆ ಕೆಲವರು ಹೀಗೂ ಹೇಳುವವರಿದ್ದಾರೆ- “ಪ್ರವಾದಿಯವರ(ಸ) ಕಾಲದ ಸಹಾಬಿಗಳು ಸಮುದ್ರದ ಆಳಕ್ಕೆ ಹೋಗಿ ಅಂಧಕಾರ ನೋಡಿ ಮೇಲೆದ್ದು ಬಂದು ಈ ವಿಷಯವನ್ನು ಬರೆದಿಟ್ಟಿರಬಹುದು.” ಆದರೆ ನಮ್ಮ ಆಧುನಿಕ ವಿಜ್ಞಾನದ ಪ್ರಕಾರ 200ವಿೂ. ಆಳದಲ್ಲಿ ಮಾನವನಿಗೆ ಬದುಕುಳಿಯಲು ಸಾಧ್ಯವಿಲ್ಲ.
ಇಲ್ಲಿ ಅಂಧಕಾರವನ್ನು ಒಂದರ ಮೇಲೊಂದರಂತೆ ಎಂದು ಹೇಳಲಾಗಿದೆ. ಇದರರ್ಥ ಸಮುದ್ರದ ಆಳಕ್ಕೆ ಹೋದಂತೆ ಬೆಳಕಿನಲ್ಲಿರುವ 7 ಬಣ್ಣಗಳಲ್ಲಿ ಒಂದೊಂದು ಬಣ್ಣ ಮಾಯವಾಗುತ್ತಾ ಹೋಗಿ ಕೊನೆಗೆ ಅಂದರೆ 200ವಿೂ. ಆಳದಲ್ಲಿ ಕೇವಲ ಗಾಢ ನೀಲಿ ಬಣ್ಣ ಚದುರುತ್ತದೆ ಹಾಗೂ ಸಮುದ್ರದಲ್ಲಿ ಗಾಢ ಅಂಧಕಾರ ಕವಿಯುತ್ತದೆ. ಆದ್ದರಿಂದ ಇಷ್ಟು ನಿಖರತೆಯೊಂದಿಗೆ ಸಮುದ್ರಶಾಸ್ತ್ರವನ್ನು ವಿವರಿಸಲು ನಮ್ಮ ನೈಜ ಸೃಷ್ಟಿಕರ್ತನಿಗೆ ಮಾತ್ರ ಸಾಧ್ಯ ಎಂಬುದು ಪರಮಸತ್ಯವಾಗಿದೆ.
ಆಳ(ವಿೂ.ಗಳಲ್ಲಿ) ಹೀರಲ್ಪಡುವ ಬಣ್ಣಗಳು
10-15 ಕೆಂಪು
30-50 ಕಿತ್ತಳೆ
50-100 ಹಳದಿ
100-200 ಹಸಿರು
200ವಿೂ ಕಡುನೀಲಿ ಮತ್ತು ನೇರಳೆ
ಸಮುದ್ರದಲ್ಲಿರುವ 2 ರೀತಿಯ ಅಲೆಗಳು:
ಸಾಮಾನ್ಯವಾಗಿ ಎಲ್ಲರೂ ಸಮುದ್ರವನ್ನು ಕಂಡವರೇ ಆಗಿದ್ದಾರೆ. ಅಲೆಗಳು ಬಂಡೆಗೆ ಅಪ್ಪಳಿಸುವ, ಕಾಲಿಗೆ ಕಚಗುಳಿಯ ಅನುಭವ ಎಲ್ಲರಿಗೂ ಆಗಿದೆ. ಆದರೆ ನಾವು ಯಾವತ್ತೂ ಈ ಅಲೆಗಳು ಹೇಗೆ ಸೃಷ್ಟಿಯಾಗುತ್ತವೆ, ಅವುಗಳ ಹಿಂದಿನ ರಹಸ್ಯ ಏನು, ಈ ಅಲೆಗಳ ಕೆಳಗೆ ಏನಿದೆ ಎಂಬುದನ್ನು ಯೋಚಿಸಿದ್ದು ಕಡಿಮೆ.
ಆಧುನಿಕ ವಿಜ್ಞಾನದ ಪ್ರಕಾರ ಸಮುದ್ರದ ಅಲೆಗಳಲ್ಲಿ ಎರಡು ವಿಧಗಳಿವೆ. ಒಂದು ಮೇಲ್ಮೈಯಲ್ಲಿ ಕಾಣಿಸುವ ಅಲೆ. ಇನ್ನೊಂದು ಆಂತರಿಕ ಅಲೆ. (Suಡಿಜಿಚಿಛಿe ತಿಚಿves & Iಟಿಣeಡಿಟಿಚಿಟ ತಿಚಿves) ಸಮುದ್ರ ಮತ್ತು ಸಾಗರದಾಳದ ನೀರಿನ ಸಾಂದ್ರತೆಯು ಮೇಲ್ಮೈಯ ನೀರಿನ ಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ಆಳಭಾಗದಲ್ಲಿ ಆಂತರಿಕ ಅಲೆಗಳು ಆವರಿಸಿಕೊಂಡಿರುತ್ತವೆ. ಆದ್ದರಿಂದ ಅದರ ಮೇಲ್ಮೈ ಅಲೆಯು ಬೆಳಕಿನಿಂದ ಮತ್ತು ಅಲ್ಪ ಉಷ್ಣತೆಯಿಂದ ಕೂಡಿದ್ದು ಆಂತರಿಕ ಅಲೆಯಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ.
ಅಲ್ಲಾಹನು ಹೇಳುತ್ತಾನೆ, ಅಥವಾ ಅವನ ಉದಾಹರಣೆ ಹೀಗಿದೆ: ಒಂದು ಆಳವಾದ ಸಾಗರದಲ್ಲಿ ಅಂಧಕಾರ, ಮೇಲೊಂದು ತೆರೆ ಆವರಿಸಿದೆ, ಅದರ ಮೇಲೆ ಇನ್ನೊಂದು ತೆರೆ ಮತ್ತು ಅದರ ಮೇಲೆ ಮೋಡ ಆವರಿಸಿಕೊಂಡಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಮನುಷ್ಯನು ತನ್ನ ಕೈಯನ್ನು ಹೊರ ಚಾಚಿದರೆ ಅದೂ ಅವನಿಗೆ ಕಾಣದು. ಯಾರಿಗೆ ಅಲ್ಲಾಹನು ಪ್ರಕಾಶವನ್ನು ದಯಪಾಲಿಸಲಿಲ್ಲವೋ ಅವನಿಗೆ ಬೇರಾವ ಪ್ರಕಾಶವೂ ಇಲ್ಲ. (ಪವಿತ್ರ ಕುರ್ಆನ್ 24:40)
ಆಧುನಿಕ ವಿಜ್ಞಾನದ ಪ್ರಕಾರ ಆಂತರಿಕ ಅಲೆಯು ಪ್ರಾರಂಭವಾಗುವುದು ಸಾಗರದಾಳದ ಅಂಧಕಾರ ಕೊನೆಯಾಗುವಲ್ಲಿಂದ, ಆದ್ದರಿಂದ ಕುರ್ಆನ್ ಈ ನಿಟ್ಟಿನಲ್ಲಿ ನೀಡಿರುವ ವಿವರಣೆ ನೂರು ಶೇಕಡಾ ಸರಿಯಾಗಿದೆ. ಅಂಧಕಾರದ ಮೇಲೆ ಒಂದು ಅಲೆಯಿದೆ. ಅದರ ಮೇಲೆ ಇನ್ನೊಂದು ಅಲೆ ಅಂದರೆ ಮೇಲ್ಮೈ ಅಲೆ. ನಂತರ ಅದರ ಮೇಲೆ ಮೋಡಗಳಿವೆ ಎಂದು ಹೇಳಲಾಗಿದೆ. ಆದುದರಿಂದ ಈ ಜ್ಞಾನವು ಅಲೌಕಿಕ ಮೂಲದಿಂದ ಮಾತ್ರವೇ ಬಂದಿರಲು ಸಾಧ್ಯ. ಹೀಗೆಂದು ಫ್ರೊ. ದುರ್ಗಾರಾವ್ ತಮ್ಮ ಮಾತನ್ನು ಮುಗಿಸುತ್ತಾರೆ.
ಸೂರ್ಯನು ಒಂದು ನಿಗದಿತ ಸ್ಥಾನದ ಕಡೆಗೆ ಚಲಿಸುತ್ತಾನೆ:
ಇವತ್ತು ವಿಜ್ಞಾನವು ಸೌರ ಮಂಡಲದ ಬಗ್ಗೆ ಸಾಕಷ್ಟು ತಿಳಿದುಕೊಂಡಿದೆ. ಅದರ ಪ್ರಕಾರ ಸೂರ್ಯನು ಸೌರವ್ಯೂಹದೊಂದಿಗೆ ಒಂದು ನಿಗದಿತ ಸ್ಥಳದತ್ತ ಪಯಣಿಸುತ್ತಿದ್ದು, ಈ ನಿಗದಿತ ಸ್ಥಳವು ಆಧುನಿಕ ಖಗೋಳ ಶಾಸ್ತ್ರಜ್ಞರಿಂದ ಗುರುತಿಸಲ್ಪಟ್ಟಿದೆ. ಅದನ್ನು ಸೋಲಾರ್ ಅಪೆಕ್ಸ್ (Soಟಚಿಡಿ ಂಠಿex) ಎಂದು ಕರೆಯಲಾಗಿದೆ. ಸೌರಮಂಡಲವು ಪುಂಜದ ಒಂದು ಬಿಂದು ವಿನತ್ತ ಪಯಣಿಸುತ್ತಿದ್ದು ಈ ಪುಂಜದ ಸ್ಥಾನವನ್ನು ನಿಖರವಾಗಿ ಗುರುತಿಸಲಾಗಿದೆ.
ಅದೇ ರೀತಿ ಸೂರ್ಯ ಒಂದು ನಿಗದಿತ ಅವಧಿಯ ತನಕ ಉರಿಯುತ್ತಿದ್ದು ಅದು ಕೊನೆಗೆ ನಂದಿ ಹೋಗಲಿದೆ ಎಂದು ಕೂಡ ಧೃಢೀಕರಿಸಲ್ಪಟ್ಟಿದೆ. ಸೂರ್ಯನ ಮೇಲ್ಮೈಯಲ್ಲಿ ಸುಮಾರು 5 ಮಿಲಿಯನ್ ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿರುವ ರಾಸಾಯನಿಕ ಕ್ರಿಯೆಯೇ ಅದರ ಪ್ರಕಾಶಕ್ಕೆ ಕಾರಣವಾಗಿರುತ್ತದೆ. ಅದೇ ರೀತಿ ಭೂಮಿಯಲ್ಲಿರುವ ಎಲ್ಲಾ ಜೀವಿಗಳೂ ನಾಶವಾಗಲಿವೆ. ಸೂರ್ಯನ ನಶ್ವರತೆಯ ಬಗ್ಗೆ ಅಲ್ಲಾಹನು ಹೇಳಿದನು,
“ತನಗೆ ನಿಶ್ಚಯಿಸಲಾದ ಸ್ಥಾನದ ಕಡೆಗೆ (ಅವಧಿಯ ತನಕ) ಸೂರ್ಯ ಚಲಿಸುತ್ತಿದೆ. ಇದು ಪ್ರಬಲನೂ ಸರ್ವಜ್ಞನೂ ಅದವನ ನಿರ್ಣಯವಾಗಿದೆ.” (ಪವಿತ್ರ ಕುರ್ಆನ್, 36: 38)
ಇಲ್ಲಿ ಬಳಸಲಾಗಿರುವ ಅರಬಿ ಪದವು ‘ಮುಸ್ತಖರ್ರ್’ ಆಗಿದ್ದು ಅದರರ್ಥ ಒಂದು ನಿಗದಿತ ಸ್ಥಳ ಅಥವಾ ಅವಧಿಯಾಗಿದೆ. ಈ ಎರಡೂ ಅರ್ಥಗಳು ಸೂರ್ಯನಿಗೆ ಸರಿ ಹೊಂದುತ್ತವೆ. ಆದ್ದರಿಂದ ಈ ಚಲನೆ ಒಂದು ಪೂರ್ವ ನಿರ್ಧರಿತ ಸಮಯದವರೆಗೆ ಮಾತ್ರ ಇದೆ ಎಂಬುದು ಖಚಿತವಾಗಿದೆ. ಇಂತಹದೇ ಸೂಚನೆಗಳನ್ನು ಕುರ್ಆನಿ ನ ಇತರೆಡಗಳಲ್ಲಿ (13:2, 35:13, 39:5, 39:21) ಕಾಣಬಹುದು.
ವಿಕಸನಗೊಳ್ಳುತ್ತಿರುವ ವಿಶ್ವ:
ನಿಮ್ಮ ಕೈಯಲ್ಲಿ ಚುಕ್ಕೆಗಳಿರುವ ಒಂದು ಬಲೂನ್ ಇದೆ ಎಂದು ಯೋಚಿಸಿ. ಅದಕ್ಕೆ ನೀವು ಗಾಳಿ ಊದುತ್ತಾ ಹೋದಂತೆ ಅದು ವಿಕಸಿಸುತ್ತಾ ಹೋಗುತ್ತದೆ. ಅದು ವಿಕಸಿಸಿದಂತೆ ಅದರಲ್ಲಿರುವ ಚುಕ್ಕೆಗಳು ಒಂದರಿಂದ ಒಂದು ದೂರ ಸರಿಯುತ್ತಾ ಹೋಗುತ್ತದೆ. ಈ ಸರಿಯುವಿಕೆಯು ಬಲೂನ್ ವಿಕಸನಗೊಳ್ಳುತ್ತಿರುವುದಕ್ಕೆ ಪುರಾವೆಯಾಗಿದೆ. ಅದೇ ರೀತಿ ಕ್ರಿ.ಶ. 1925ರಲ್ಲಿ ಎಡ್ವಿನ್ ಹಬಲ್ ಎಂಬ ಅಮೇರಿಕನ್ ಖಗೋಳ ಶಾಸ್ತ್ರಜ್ಞ ಆಕಾಶಗಂಗೆಗಳು ಪರಸ್ಪರ ದೂರ ಸರಿಯುತ್ತಿರುವುದನ್ನು ಕಂಡು ವಿಶ್ವವು ವಿಕಸಿಸುತ್ತಿದೆ ಎಂದು ಧೃಢೀಕರಿಸಿದರು.
ಸ್ಟೀಫನ್ ಹಾಕಿಂಗ್ ತನ್ನ ಗ್ರಂಥವಾದ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ಸ್’ (ಂ ಃಡಿieಜಿ ಊisಣoಡಿಥಿ oಜಿ ಖಿimes)ನಲ್ಲಿ ಹೀಗೆ ಬರೆದಿದ್ದಾರೆ. “ವಿಶ್ವವು ವಿಕಸನಗೊಳ್ಳುತ್ತಿದೆ ಎಂಬ ಸಂಶೋಧನೆಯು 20ನೇ ಶತಮಾನದ ಅತೀ ದೊಡ್ಡ ವೈಜ್ಞಾನಿಕ ಕ್ರಾಂತಿಯಾಗಿದೆ.” ಮಾನವನು ದೂರದರ್ಶಕವನ್ನು ಕಂಡು ಹಿಡಿಯುವ ಮೊದಲೇ ವಿಶ್ವವು ವಿಕಸನಗೊಳ್ಳುತ್ತಿದೆ ಎಂಬುದನ್ನು ಅದೂ ಕೂಡ ಸರಾಸರಿ 1,300 ವರ್ಷಗಳ ಹಿಂದೆ ಕುರ್ಆನ್ ಈ ರೀತಿ ವರ್ಣಿಸಿದೆ.
“ಮತ್ತು ಆಕಾಶವನ್ನು ನಮ್ಮ ಸಾಮರ್ಥ್ಯದಿಂದ ಅದನ್ನು ನಿರ್ಮಿಸಿರುತ್ತೇವೆ ಮತ್ತು ನಿಶ್ಚಯವಾಗಿಯೂ ನಾವು (ಅದನ್ನು) ವಿಕಸಗೊಳಿಸುತ್ತಿದ್ದೇವೆ” (ಪವಿತ್ರ ಕುರ್ಆನ್, 51: 47)
ಈ ಮೇಲಿನ ಸೂಕ್ತವು ಜಗತ್ತಿನ ಸತ್ಯಾಸತ್ಯಾತೆಯನ್ನು ಬಯಲು ಪಡಿಸುತ್ತದೆ. ಪವಿತ್ರ ಕುರ್ಆನ್ ಈ ಜಗತ್ತಿನ ನೈಜ ಸೃಷ್ಟಿಕರ್ತನ ಗ್ರಂಥವಾಗಿದೆ ಎಂಬುದಕ್ಕೆ ಈ ಮೇಲಿನ ವೈಜ್ಞಾನಿಕ ವಿಷಯಗಳು ಪುರಾವೆಯಾಗಿದೆ.
ಭೌತಶಾಸ್ತ್ರ:
ಹಿಂದಿನ ಕಾಲದಿಂದಲೂ ‘ಅಣುಸಿದ್ಧಾಂತವು’ ಪ್ರಚಲಿತದಲ್ಲಿತ್ತು. ಯಾವುದೇ ವಸ್ತುವಿನ ಅತೀ ಚಿಕ್ಕ ಕಣ ಅಣುವಾಗಿದೆ. ಅನೇಕ ಅಣುಗಳು ಸೇರಿದಾಗ ಪರಮಾಣು ಉಂಟಾಗುತ್ತದೆ. ಅದೇ ರೀತಿ ಅನೇಕ ಪರಮಾಣುಗಳು ಸೇರಿದಾಗ ಸಂಯುಕ್ತ ವಸ್ತು ಉಂಟಾಗುತ್ತದೆ. ಜನರ ಪ್ರಕಾರ ಅಣುವಿಗಿಂತ ಚಿಕ್ಕ ವಸ್ತು ಯಾವುದೂ ಇರಲಿಲ್ಲ. ಅರಬರು ಕೂಡ ಇದನ್ನೇ ನಂಬಿದ್ದರು. ಈ ಸಿದ್ಧಾಂತವು 230 ವರ್ಷಗಳ ಹಿಂದೆ ಜೀವಿಸಿದ್ದ ಡಮೋಕ್ರಿಟಸ್ ಎಂಬವರಿಂದ ಧೃಢೀಕರಿಸಲಾಗಿತ್ತು. ಅರಬರು ‘ಝರ್ರಹ್’ ಎಂಬ ಪದವನ್ನು ಅಣುವಿನ ಪರ್ಯಯವಾಗಿ ಬಳಸುತ್ತಿದ್ದರು. ಆದರೆ ಅಣುವಿಗಿಂತ ಚಿಕ್ಕದಾದ ವಸ್ತು ಕೂಡ ಇದೆ. ಅಣುವನ್ನು ವಿಭಜಿಸಲು ಸಾಧ್ಯವಿದೆ ಎಂಬುದು 20ನೇ ಶತಮಾನದ ಸಂಶೋಧನೆ ಯಾಗಿದೆ. ಇದೊಂದು ವಿಚಿತ್ರ ಸತ್ಯವಾಗಿದೆ. ಈ ಸತ್ಯವನ್ನು ಪವಿತ್ರ ಕುರ್ಆನ್ ಈ ರೀತಿ ವರ್ಣಿಸಿದೆ,
“ಸತ್ಯನಿಷೇಧಿಗಳು ಹೇಳುವರು ನಮ್ಮ ಮೇಲೆ ಆ ಅಂತ್ಯ ಘಳಿಗೆಯು ಬರಲಾರದು. ಹೇಳಿರಿ, ಯಾರೆಲ್ಲ ಪರೋಕ್ಷ ಜ್ಞಾನಿಯಾದ ನನ್ನ ಪ್ರಭುವಿನಾಣೆಗೂ ಅದು ನಿಮ್ಮ ಮೇಲೆ ಬಂದೇ ತೀರುವುದು. ಆಕಾಶಗಳಲ್ಲಾಗಿಲೀ, ಭೂಮಿಯಲ್ಲಾಗಲೀ ಅಣುವಿನಷ್ಟು ಚಿಕ್ಕ ವಸ್ತುವೂ ಅವನಿಂದ ಮರೆಯಾಗಿಲ್ಲ ಅಥವಾ ಅದು ಅಣುವಿಗಿಂತ ಚಿಕ್ಕದೇ ಆಗಿರಲಿ, ದೊಡ್ಡದೇ ಆಗಿರಲಿ ಸ್ಪಷ್ಟವಾದ ಒಂದು ದಾಖಲೆಯಲ್ಲಿದೆ.” (ಪವಿತ್ರ ಕುರ್ಆನ್ 34:3)
ಇಂದು ಪ್ರಚಲಿತದಲ್ಲಿರುವ ‘ಜಲಚಕ್ರ’ ಎಂಬ ವಿಷಯವನ್ನು ಮೊತ್ತ ಮೊದಲು ಪ್ರತಿಪಾದಿಸಿದವನು ಬರ್ನಾಡ್ ಪಲಿಸ್ಸಿ. ಸಾಗರಗಳಿಂದ ಆವಿಯಾದ ನೀರು ತಂಪಾದ ಮೋಡಗಳಾಗಿ ಬಿಡುವ ಕ್ರಿಯೆಯನ್ನು ಇವರು ವಿವರಿಸಿಕೊಟ್ಟರು. ಇವು ತಾವು ಉಂಟಾದ ಸ್ಥಳಗಳಿಂದ ಒಳನಾಡುಗಳಿಗೆ ಪ್ರವೇಶಿಸಿ ಘನೀಕೃತಗೊಂಡು ಮಳೆಯಾಗಿ ಬೀಳುತ್ತವೆ. ಬಿದ್ದ ಮಳೆ ಭೂಮಿಯೊಳಗೆ ಇಂಗಿ ಬಿಡುತ್ತದೆ ಎಂಬುದನ್ನು ಜನರು ನಂಬಿರಲಿಲ್ಲ. ಅವರ ಪ್ರಕಾರ ಭೂಗರ್ಭಗಳಲ್ಲಿ ರಹಸ್ಯ ಮಾರ್ಗಗಳಿದ್ದು ಸಾಗರತಳಗಳಿಗೆ ಜೋಡಿಸಲ್ಪಟ್ಟ ಈ ಮಾರ್ಗಗಳಿಂದಾಗಿ ನೀರು ಹರಿದು ಬರುತ್ತದೆ. ಈ ರಹಸ್ಯ ಮಾರ್ಗಗಳನ್ನು ಟರ್ಟಾರಸ್ ಎಂದು ಕರೆಯುತ್ತಿದ್ದರು. ಮಳೆಯ ನೀರು ಮಣ್ಣಿನ ಬಿರುಕುಗಳ ಮೂಲಕ ಹರಿದು ಅಂತರ್ಜಲಗಳಾಗಿ ಮಾರ್ಪಡುತ್ತವೆ ಎಂಬುದನ್ನು ನಾವು ಇಂದು ಅರಿತು ಕೊಂಡಿದ್ದೇವೆ. ಕುರ್ಆನ್ ಇದನ್ನು ಈ ರೀತಿ ವರ್ಣಿಸಿದೆ, “ಮತ್ತು ನಾವು ಆಕಾಶದಿಂದ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಇಳಿಸಿದೆವು ಮತ್ತು ಅದನ್ನು ಭೂಮಿಯೊಳಗೆ ಇಂಗಿಸಿ ಬಿಡುವೆವು ಮತ್ತು ಅದನ್ನು ಮರಳಿ ಕೊಂಡೊಯ್ಯಲೂ ನಾವು ಶಕ್ತರು.” (ಪವಿತ್ರ ಕುರ್ಆನ್, 23: 18)
ನೋಡಿ ಜಲಚಕ್ರದ ಬಗ್ಗೆ ಇಷ್ಟೊಂದು ನಿಖರವಾಗಿ ತಿಳಿಸಲು 1,400 ವರ್ಷಗಳ ಹಿಂದೆ ಯಾರಿಗೆ ತಾನೆ ಸಾಧ್ಯ? ಇದೇ ರೀತಿಯ ಕುರುಹುಗಳನ್ನು ಪವಿತ್ರ ಕುರ್ಆನ್ನ 30:21, 30: 24 ಸೂಕ್ತಗಳಲ್ಲಿ ಕಾಣಬಹುದು. ಇದು ನಮ್ಮ ನೈಜ ಸೃಷ್ಟಿಕರ್ತನ ಅಸ್ತಿತ್ವವನ್ನು ಬಯಲು ಪಡಿಸುತ್ತದೆ.
ಮೋಡಗಳು ಫಲಿತಗೊಳ್ಳುವುದು:
ಹಿಂದಿನ ಜನರಲ್ಲಿ ಮಳೆ ಹೇಗಾಗುತ್ತದೆ ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಬೇರೆ ಬೇರೆ ಮಂದಿಯಲ್ಲಿ ಬೇರೆ ಬೇರೆ ತರಹದ ಊಹೆಗಳಿದ್ದವು. ಬರುಬರುತ್ತಾ ಜನರು ನೀರು ಸೂರ್ಯನ ಶಾಖಕ್ಕೆ ಆವಿಯಾಗಿ ಮೇಲೇರಿ, ಮೋಡಗಳಾಗಿ ಮಳೆ ಬರುತ್ತದೆ ಎಂದು ತಿಳಿದುಕೊಂಡರು. ಆದರೆ ಮೋಡಗಳಿಂದ ಯಾವ ರೀತಿ ನೀರು ಹೊರಬರುತ್ತದೆ ಎಂಬುದಕ್ಕೆ ವಿವರಣೆ ಯಿರಲಿಲ್ಲ. ಆಧುನಿಕ ವಿಜ್ಞಾನದ ಪ್ರಕಾರ ಮಳೆಯಾಗಲು 3 ಕ್ರಿಯೆಗಳು ನಡೆಯಬೇಕಾಗಿದೆ. ಮೊದಲು ಚಿಕ್ಕಚಿಕ್ಕ ಮೋಡದ ತುಂಡುಗಳು ಮೆಲ್ಲಮೆಲ್ಲನೇ ಚಲಿಸಿ ಒಂದು ಪ್ರದೇಶದಲ್ಲಿ ಒಟ್ಟುಗೂಡುತ್ತವೆ. ನಂತರ ಒಟ್ಟುಗೊಂಡ ಈ ಸಣ್ಣ ಮೋಡದ ತುಂಡುಗಳು ಜೋಡಣೆಯಾಗಿ ಒಂದು ದೊಡ್ಡ ಮೋಡವಾಗಿ ಪರಿವರ್ತನೆ ಹೊಂದುತ್ತದೆ. ನಂತರ ಮೋಡದ ಘನೀಕರಣ ಪ್ರಕ್ರಿಯೆ ಆರಂಭವಾಗುತ್ತದೆ. ಮೋಡದ ಮಧ್ಯಕೇಂದ್ರದಲ್ಲಿ ಘನತ್ವ ಹೆಚ್ಚಿದ್ದು ಮಳೆಯ ಹನಿಗಳು ಮೋಡದ ಹೊರಾವ ರಣದಲ್ಲಿ ರೂಪುಗೊಳ್ಳುತ್ತದೆ. ಅವುಗಳ ಭಾರ ಹೆಚ್ಚಾದಾಗ ಅವು ಹನಿ ಹನಿಯಾಗಿ ಭೂಮಿಯ ಮೇಲೆ ಬೀಳ ತೊಡಗುತ್ತದೆ.
ಕುರ್ಆನ್ ಈ ವೈಜ್ಞಾನಿಕ ವಿಷಯವನ್ನು ಅಷ್ಟೇ ನಿಖರವಾಗಿ ತಿಳಿಸಿದೆ- “ನೀವು ನೋಡುತ್ತಿಲ್ಲವೇ? ಅಲ್ಲಾಹನು ಮೋಡವನ್ನು ಮೆಲ್ಲಮೆಲ್ಲನೇ ಚಲಾಯಿಸುತ್ತಾನೆ. ಅನಂತರ ಅದರ ತುಂಡುಗಳನ್ನು ಪರಸ್ಪರ ಜೋಡಿಸುತ್ತಾನೆ. ತರುವಾಯ ಅದನ್ನು ಒಟ್ಟುಗೂಡಿಸಿ ಒಂದು ಘನೀಕೃತ ಮೋಡವನ್ನಾಗಿ ಮಾಡುತ್ತಾನೆ. ಆ ಬಳಿಕ ಅದರ ಹೊರಾವರಣದಿಂದ ಮಳೆಯ ಬಿಂದುಗಳು ಹನಿಹನಿಯಾಗಿ ಬೀಳುತ್ತಿರುವುದನ್ನು ನೀವು ನೋಡುತ್ತೀರಿ…” (24: 43)
ಇದೇ ರೀತಿ ಮಳೆಯ ವಿವರಣೆ ಅಥವಾ ಮೋಡಗಳು ಫಲಿತಗೊಳ್ಳುವುದರ ಬಗೆಗಿನ ವಿವರಣೆಯನ್ನು 3:9, 7:57, 13: 17, 25, 48, 49, 36: 34, 50:9-11, 56: 68-70 ಮತ್ತು 86:11ರಲ್ಲಿಯೂ ಕಾಣಬಹುದು.
ಪವಿತ್ರ ಕುರ್ಆನ್ ಹೇಳುತ್ತದೆ,“…ಮತ್ತು ಅವನು ಆಕಾಶದಿಂದ ಅದರಲ್ಲಿ ಉನ್ನತವಾಗಿರುವ ಪರ್ವತಗಳಿಂದಾಗಿ ಆಲಿಕಲ್ಲು ಗಳನ್ನು ಬೀಳಿಸಿ ಅದರಿಂದ ತಾನಿಚ್ಛಿಸುವವರಿಗೆ ಹಾನಿಯುಂಟು ಮಾಡುತ್ತಾನೆ ಮತ್ತು ತಾನಿಚ್ಛಿಸುವವರನ್ನು ಅವುಗಳಿಂದ ರಕ್ಷಿಸುತ್ತಾನೆ. ಅದರ ಮಿಂಚಿನ ಹೊಳಪು ಕಣ್ಣುಗಳನ್ನು ಕೋರೈಸಿ ಬಿಡುತ್ತದೆ.”
(ಪವಿತ್ರ ಕುರ್ಆನ್ 24: 43) ಇಲ್ಲಿ ಅಲ್ಲಾಹನು ಉನ್ನತವಾಗಿರುವ ಶಿಖರ ಗಳಿಂದ ಆಲಿಕಲ್ಲುಗಳನ್ನು ಬೀಳಿಸುವುದಾಗಿ ಹೇಳುತ್ತಾನೆ. ಹೀಗೆ ಹೇಳಲು ಕಾರಣವೇನು? ಆಧುನಿಕ ವಿಜ್ಞಾನದ ಪ್ರಕಾರ ಆಲಿಕಲ್ಲುಗಳನ್ನು ಬೀಳಿಸುವ ಮೋಡಗಳು 25,000-30,000 ಅಡಿ ಎತ್ತರದಲ್ಲಿರುತ್ತವೆ. ಆ ಪ್ರದೇಶದಲ್ಲಿ ಗಾಳಿ ಅತೀ ತಂಪಾಗಿರುತ್ತದೆ. [ಖಿhe ಂಣmosಠಿheಡಿe (ಂಟಿಣhes & ಔಣheಡಿs) P. 269 & ಇಟemeಟಿಣs ಔಜಿ ಒeಣeoಡಿoಟogಥಿ (ಒiಟಟeಡಿ & ಖಿhomಠಿsoಟಿ ಕಿP. 141-142]
(ಇಟemeಟಿಣs ಔಜಿ ಒeಣeoಡಿoಟogಥಿ, ಒiಟಟeಡಿ & ಖಿhomಠಿsoಟಿ P. 141)
ಅಷ್ಟು ಎತ್ತರದಲ್ಲಿರುವ ಮೋಡಗಳಿಂದ ಮಾತ್ರ ಆಲಿಕಲ್ಲುಗಳು ಬೀಳಲು ಸಾಧ್ಯ ಎಂಬುದನ್ನು ಪವಿತ್ರ ಕುರ್ಆನ್ ಹೇಳುತ್ತದೆ.
ಇಲ್ಲಿ ನಮಗೊಂದು ಪ್ರಶ್ನೆ ಇದೆ. ಅಲ್ಲಾಹನು ಮಿಂಚಿನ ಹೊಳಪನ್ನು ಆಲಿಕಲ್ಲುಗಳೊಂದಿಗೆ ಸೇರಿಸಿ ಹೇಳಿದ್ದಾನೆ. ನಮ್ಮ ವಿಜ್ಞಾನದ ಪ್ರಕಾರ ತಂಪಾದ ನೀರಿನ ಹನಿ ಆಲಿಕಲ್ಲುಗೊಂದಿಗೆ ಡಿಕ್ಕಿ ಹೊಡೆದಾಗ ಖಿhe ಅhಚಿಡಿgeಜ Pಚಿಡಿಣiಛಿuಟeಡಿ ಗಳು ಮೋಡದ ಮೇಲಿನ ಭಾಗದಲ್ಲೂ, ಅದೇ ರೀತಿ ಆಲಿಕಲ್ಲು ಹಾಗೂ ಖಿhe ಅhಚಿಡಿgeಜ Pಚಿಡಿಣiಛಿuಟeಡಿ ತಳ ಭಾಗದಲ್ಲೂ ಶೇಖರಣೆಯಾಗುತ್ತವೆ. ಯಾವಾಗ ಈ ಆಲಿಕಲ್ಲು ಬೀಳ ತೊಡಗುತ್ತದೆಯೋ ಅದೇ ಸಮಯದಲ್ಲಿ ಖಿhe ಅhಚಿಡಿge ಮಿಂಚಿನ ರೂಪದಲ್ಲಿ ಭೂಮಿಯನ್ನು ತಲುಪುತ್ತದೆ. ಆದ್ದರಿಂದ ಆಲಿಕಲ್ಲನ್ನು ಮಿಂಚಿನೊಂದಿಗೆ ಸೇರಿಸಿ ಹೇಳಲಾಗಿದೆ. ಇದರಿಂದ ಪವಿತ್ರ ಕುರ್ಆನ್ನ ವೈಜ್ಞಾನಿಕ ವಿಷಯಗಳ ಬಗೆಗಿನ ನಿಖರತೆಯನ್ನು ತಿಳಿಯಲು ಸಾಧ್ಯವಾಗಿದೆ.
‘…ಮತ್ತು ಎಲ್ಲಾ ಜೀವಿಗಳನ್ನು ನಾವು ನೀರಿನಿಂದ ಉಂಟುಮಾಡಿರುವೆವು. ಅವರು ವಿಶ್ವಾಸವಿಡುವುದಿಲ್ಲವೇ?’ (ಪವಿತ್ರ ಕುರ್ಆನ್ 21:30)
‘ಮತ್ತು ಅಲ್ಲಾಹನು ಎಲ್ಲಾ ಪ್ರಾಣಿಗಳನ್ನು ನೀರಿನಿಂದ ಸೃಷ್ಟಿಸಿದನು… (ಪವಿತ್ರ ಕುರ್ಆನ್ 24: 45)
`ಅವನೇ ಆಗಿರುವನು ಮಾನವನನ್ನು ನೀರಿನಿಂದ ಸೃಷ್ಟಿಸಿದನು’ (ಪವಿತ್ರ ಕುರ್ಆನ್ 25: 54)
ನಾವು ಇವತ್ತು ಒಂದು ಜೀವಕೋಶವನ್ನು ಮೈಕ್ರೋಸ್ಕೋಪ್ನ ಕೆಳಗೆ ಇಟ್ಟು ನೋಡಿದರೆ ಅದರಲ್ಲಿ ಅಂದರೆ ಜೀವಕೋಶದ ಕೋಶ ಕೇಂದ್ರವಾದ ಸೈಟೋಪ್ಲಾಸಂ ಶೇ. 80ರಷ್ಟು ನೀರಿನಿಂದಲೇ ಮಾಡಲ್ಪಟ್ಟಿದೆ. ಅದೇ ರೀತಿ ಹೆಚ್ಚಿನ ಎಲ್ಲಾ ಸಾವಯವಗಳು 50-90% ರಷ್ಟು ನೀರನ್ನು ಹೊಂದಿರುತ್ತವೆ. ಅದೇ ರೀತಿ ಎಲ್ಲಾ ಜೀವಿಗಳು ಜೀವಂತವಾಗಿರಲು ನೀರನ್ನೇ ಅವಲಂಭಿಸಿವೆ. ಮಾನವನು, ಅದೇ ರೀತಿ ಪ್ರಾಣಿ ಹೀಗೆ ಪ್ರತಿಯೊಂದು ಜೀವಿಯೂ ನೀರಿನಿಂದ ಸೃಷ್ಟಿಯಾಗಿರುವುದಕ್ಕೆ ಪವಿತ್ರ ಕುರ್ಆನ್ ಪುರಾವೆಯಾಗಿದೆ. 14 ಶತಮಾನಗಳ ಹಿಂದೆ ನೀರು ತೀರಾ ಕಡಿಮೆಯಿದ್ದ ಅರಬ್ ಪ್ರದೇಶದ ಒಬ್ಬ ಪ್ರವಾದಿಗೆ ಈ ಅಗೋಚರ ವಿಷಯಗಳ ತಿಳಿವು ಬಂದುದಾದರೂ ಹೇಗೆ? ಚಿಂತನಶೀಲರಿಗೆ ಉತ್ತರವಿದೆ. # (ಒeಣeoಡಿoಟogಥಿ ಣoಜಚಿಥಿ, ಂhಡಿeಟಿs P. 437)
ಸಸ್ಯಶಾಸ್ತ್ರ:
ಸಸ್ಯಗಳಲ್ಲಿ ಜೋಡಿ: ಪುರಾತನ ಕಾಲದಿಂದಲೂ ಮಾನವನು ಸಸ್ಯಗಳಲ್ಲಿ ಹೆಣ್ಣು ಗಂಡೆಂಬ ಜೋಡಿಗಳಿವೆ ಎಂಬ ಸತ್ಯವನ್ನು ಅರಿತಿರಲಿಲ್ಲ. ಆಧುನಿಕ ವಿಜ್ಞಾನ ಮಾತ್ರ ಈ ವಿಷಯವನ್ನು ಧೃಢೀಕರಿಸಿದೆ. ಅದೇ ರೀತಿ ಏಕಲಿಂಗ (Uಟಿisexuಚಿಟ) ಸಸ್ಯಗಳಲ್ಲೂ ಗಂಡು, ಹೆಣ್ಣುಗಳೆಂಬ ಬೇರೆ ಬೇರೆ ಅಂಗಗಳಿವೆ. ಉನ್ನತ ವರ್ಗದ ಸಸ್ಯಗಳ ಹೂಗಳಲ್ಲಿ ಪರಾಗ ಮತ್ತು ಅಂಡಗಳು (Sಣಚಿmeಟಿs ಚಿಟಿಜ ಔveಡಿಚಿಟಟs) ಎಂಬ ಅಂಗಗಳಿವೆ. ಒಂದು ಸಲ ಪುಷ್ಪರೇಣುಗಳು (Poಟಟeಟಿ ಉಡಿಚಿiಟಿs) ಪುಷ್ಪವನ್ನು ತಲುಪಿದರೆ ಅದು ಫಲೀಕರಣಗೊಂಡು ಹಣ್ಣು ಉಂಟಾಗುತ್ತದೆ.
‘ನಾವು ಆಕಾಶದಿಂದ ನೀರನ್ನು ಇಳಿಸಿದೆವು. ಆ ಮೂಲಕ ವಿವಿಧ ಸಸ್ಯಗಳ ಜೋಡಿಗಳನ್ನು ಉಂಟುಮಾಡಿದೆವು’ (20: 53)
‘ಅದರಲ್ಲಿ (ಭೂಮಿಯಲ್ಲಿ) ಪ್ರತಿಯೊಂದು ಫಲಗಳಿಂದಲೂ ಎರಡರ ಜೋಡಿಗಳನ್ನು ಉಂಟು ಮಾಡಿದನು” (13:3)
ಎಲ್ಲಾ ವಸ್ತುಗಳೂ ಕೂಡ ಜೋಡಿಗಳಾಗಿ ಸೃಷ್ಟಿಯಾಗಿವೆ.
ಇವತ್ತು ನಾವು ವಿಜ್ಞಾನ ಕಲಿಯುವುದಾದರೆ ಧನಾತ್ಮಕ ಮತ್ತು ಋಣಾತ್ಮಕ ಎಂಬ ಎರಡು ವಿಧ್ಯುದಾಹಿ ಕಣಗಳಿರುವುದು ಗೊತ್ತಾಗುತ್ತದೆ. ಅದೇ ರೀತಿ ಪ್ರೋಟಾನ್ಗೆ ಆ್ಯಂಟಿ ಪ್ರೋಟಾನ್ ಜೋಡಿಯಾದರೆ, ನ್ಯೂಟ್ರಾನ್ಗೆ ಆ್ಯಂಟಿ ನ್ಯೂಟ್ರಿನೋ ಜೋಡಿಯಾಗಿದೆ. ಪಾರ್ಟಿಕಲ್ಗೆ (Pಚಿಡಿಣiಛಿಟes) ಆ್ಯಂಟಿ ಪಾರ್ಟಿಕಲ್ ಜೋಡಿಯಾದರೆ, ಇಲೆಕ್ಟ್ರಾನ್ಗೆ ಪಾಸಿಟ್ರಾನ್ (Posiಣಡಿoಟಿ) ಜೋಡಿಯಾಗಿದೆ. ಇದೇ ರೀತಿ ನಾವು ಭೌತಶಾಸ್ತ್ರದ ಒಳಕ್ಕೆ ಹೋದರೆ ನಮಗೆ ತಿಳಿದು ಬರುವ ಒಂದು ಸತ್ಯ ಏನೆಂದರೆ ಎಲ್ಲಾ ವಸ್ತುಗಳು ಜೋಡಿಗಳಾಗಿ ಸೃಷ್ಟಿಯಾಗಿವೆ ಎಂಬುದಾಗಿದೆ. ಆದ್ದರಿಂದ ಪವಿತ್ರ ಕುರ್ಆನ್ ಅದನ್ನು ಈ ರೀತಿ ವರ್ಣಿಸಿದೆ.
‘ಪ್ರತಿಯೊಂದನ್ನು ನಾವು ಜೋಡಿಗಳಾಗಿ ಸೃಷ್ಟಿಸಿದೆವು’ (51:49) ಪ್ರಾಣಿ, ಪಕ್ಷಿ, ಮನುಷ್ಯರು ಮಾತ್ರವಲ್ಲದೆ ನಿರ್ಜೀವ ವಸ್ತುಗಳು ಕೂಡ ಜೋಡಿಗಳಾಗಿ ಸೃಷ್ಟಿಯಾಗಿವೆ ಎಂಬುದು ಈಗಾಗಲೇ ನಮಗೆ ತಿಳಿದಿದೆ. ಆದ್ದರಿಂದ ಪವಿತ್ರ ಕುರ್ಆನ್ ನೈಜ ಆರಾಧ್ಯನ ಸಂದೇಶ ಎಂಬುವುದರಲ್ಲಿ ಏನೂ ಸಂಶಯವಿಲ್ಲ.
ಇರುವೆಗಳ ಮಾಹಿತಿ ವಿನಿಮಯ:
ಪವಿತ್ರ ಕುರ್ಆನ್ ಹೀಗೆ ಹೇಳುತ್ತದೆ. ‘ಇವರೆಲ್ಲರೂ ಇರುವೆಗಳ ಕಣಿವೆಯ ಬಳಿ ಬಂದಾಗ ಒಂದು ಇರುವೆಯು ಹೇಳಿತು. ಓ ಇರುವೆಗಳೇ ನಿಮ್ಮ ವಾಸಸ್ಥಾನವನ್ನು ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಸೇನೆಗಳು ಅರಿಯದೆ ನಿಮ್ಮನ್ನು ತುಳಿದು ಬಿಡುವಂತಾಗದಿರಲಿ’ (27: 18)
ಪವಿತ್ರ ಕುರ್ಆನಿನ ಮೇಲಿನ ಸೂಕ್ತ 1400 ವರ್ಷಗಳ ಹಿಂದೆ ಅವತೀರ್ಣಗೊಂಡಿತು. ಈ ಸೂಕ್ತವನ್ನು ಕೇಳಿ ಕುರ್ಆನ್ ‘ಮಾಯಾಲೋಕದ ಕೆಲವು ಕಟ್ಟುಕತೆಗಳನ್ನು ಹೇಳುತ್ತಿದೆ.’ ಎಂದು ಅಪಹಾಸ್ಯ ಮಾಡುತ್ತಿದ್ದ ಜನರ ಕಾಲವೊಂದು ಕಳೆದು ಹೋಗಿದೆ. ಅಪಹಾಸ್ಯ ಮಾಡುತ್ತಿದ್ದ ಜನರು ಈಗ ಚಿಂತನಾಶೀಲರಾಗಿದ್ದಾರೆ. ಇರುವೆಗಳು ಪರಸ್ಪರ ಮಾತನಾಡುತ್ತವೆ ವಿಚಾರ ವಿನಿಮಯ ಮಾಡುತ್ತವೆ ವ್ಯವಹಾರಗಳನ್ನು ನಡೆಸುತ್ತವೆ ಎಂಬ ಈ ಮಾತು ಅಕ್ಷರಶಃ ಸತ್ಯವಾಗಿದೆ. ಇರುವೆಗಳ ಬಗ್ಗೆ ಧೃಢೀಕರಿಸಲ್ಪಟ್ಟ ಕೆಲವು ಮಾಹಿತಿಗಳು ಹೀಗಿವೆ.
1) ಇರುವೆಗಳು ಸತ್ತು ಹೋದ ತಮ್ಮ ಜತೆಗಾರನನ್ನು ಮನುಷ್ಯರ ಹಾಗೆಯೇ ಸಮಾಧಿ ಮಾಡುತ್ತವೆ.
2) ಇರುವೆಗಳು ದುಡಿಮೆಯ ಪದ್ಧತಿಯನ್ನು ವಿಶಿಷ್ಟ ರೀತಿಯಲ್ಲಿ ವಿಂಗಡಿಸಿಕೊಂಡಿವೆ. ಇವುಗಳಲ್ಲಿ ನಿರ್ವಾಹಕರು, ಕಾರ್ಮಿಕರು, ಅಗ್ರ ಕಾರ್ಮಿಕರು ಸಹಾ ಇರುವರು.
3) ಕೆಲವೊಮ್ಮೆ ಇರುವೆಗಳು ಪರಸ್ಪರ ಭೇಟಿಯಾಗಿ ಹರಟೆಯಲ್ಲಿ ಕಾಲ ಕಳೆಯುತ್ತವೆ.
4) ಇರುವೆಗಳು ವ್ಯವಸ್ಥಿತ ಸಂತೆಗಳ ಮೂಲಕ ತಮ್ಮ ಸರಕು ವಿನಿಮಯ ಮಾಡಿಕೊಳ್ಳುತ್ತವೆ.
5) ಚಳಿಗಾಲದಲ್ಲಿ ಇರುವೆಗಳು ಕಾಳುಗಳನ್ನು ಶೇಖರಿಸಿಡುತ್ತವೆ. ಈ ಕಾಳುಗಳು ಮೊಳಕೆಯೊಡೆಯಲು ಪ್ರಾರಂಭಿಸಿದರೆ, ಅವುಗಳ ಬೇರುಗಳನ್ನು ಕತ್ತರಿಸಿ ಹಾಕಿ ಕಾಳನ್ನು ಸಂರಕ್ಷಿಸುತ್ತವೆ. ಶೇಖರಿಸಲ್ಪಟ್ಟ ಕಾಳುಗಳು ಮಳೆಯಿಂದಾಗಿ ನೆನೆದು ಒದ್ದೆಯಾದಲ್ಲಿ ತೇವಾಂಶವು ಮೊಳಕೆಯೊಡೆಯಲು ಕಾರಣವಾಗಿ ಆ ಮೂಲಕ ಕಾಳುಗಳು ಕೊಳೆತು ಹೋಗಬಹುದೆಂಬ ಜ್ಞಾನವುಳ್ಳವರಂತೆ, ಆ ಕಾಳುಗಳನ್ನು ಸೂರ್ಯನ ಬಿಸಿಲಿಗಾಗಿ ಹೊರತಂದು ಒಣಗಿಸಿ ಮರಳಿ ತಮ್ಮ ಗೋದಾಮಿಗೆ ಹೊತ್ತೊಯ್ಯುತ್ತವೆ.
ಕೆಲವು ವರ್ಷಗಳ ಹಿಂದೆ ಅರಬ್ಬಿ ಜನರ ಸಣ್ಣದೊಂದು ತಂಡ ಭ್ರೂಣಶಾಸ್ತ್ರದ ಬಗ್ಗೆ ಕುರ್ ಆನ್ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿ ಕೊಂಡು ಕುರ್ಆನಿನ 16:43 ಮತ್ತು 21:7ನೇ ಸೂಕ್ತದಲ್ಲಿರುವ ‘ನೀವು ಅರಿತಿರದಿದ್ದಲ್ಲಿ ಜ್ಞಾನವುಳ್ಳವರೊಂದಿಗೆ ಕೇಳಿ ನೋಡಿರಿ’ ಎಂಬ ವಿಷಯವನ್ನು ಒರೆಗೆ ಹಚ್ಚಿ ಪರೀಕ್ಷಿಸಲು ನಿರ್ಧರಿಸಿತು. ಭ್ರೂಣ ಶಾಸ್ತ್ರದ ಮಾಹಿತಿಗಳನ್ನೆಲ್ಲ ಆಂಗ್ಲಭಾಷೆಗೆ ಭಾಷಾಂತರಿಸಿ ಕೆನಡಾದ ಟೊರೆಂಟೋ ಯೂನಿವರ್ಸಿಟಿಯಲ್ಲಿ ಶರೀರಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಭ್ರೂಣಶಾಸ್ತ್ರದ ಪ್ರಾಧ್ಯಾಪಕರೂ ಆಗಿದ್ದ ಫ್ರೊ.ಕೀತ್ಮೂರ್ರವರ ಮುಂದೆ ಸಾದರಪಡಿಸಲಾಯಿತು. ಅವರು ಭ್ರೂಣಶಾಸ್ತ್ರ ವಿಭಾಗದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದರು.
ಕುರ್ಆನಿನ ಭ್ರೂಣಶಾಸ್ತ್ರದ ಕುರಿತಾದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಲು ಅವರನ್ನು ಕೇಳಿಕೊಳ್ಳಲಾಯಿತು. ತಮಗೆ ನೀಡಿರುವ ಕುರ್ಆನಿನ ಭಾಷಾಂತರವನ್ನು ಕೂಲಂಕಷವಾಗಿ ಪರಿಶೀಲಿಸಿದ ಡಾ| ಕೀತ್ಮೂರ್ ಕುರ್ಆನ್ನಲ್ಲಿರುವ ಭ್ರೂಣಶಾಸ್ತ್ರದ ಕುರಿತಾದ ಹೆಚ್ಚಿನ ಎಲ್ಲಾ ಮಾಹಿತಿಗಳು ಈ ಕ್ಷೇತ್ರದಲ್ಲಿ ಆಧುನಿಕವಾಗಿ ಧೃಢೀಕರಿಸಲ್ಪಟ್ಟ ಸಂಶೋಧನೆಗಳೊಂದಿಗೆ ಯಾವುದೇ ಸಂಘರ್ಷಗಳಿಲ್ಲದೆ ತಾಳೆ ಹೊಂದುತ್ತವೆ ಎಂದು ಹೇಳಿದರು. ಅವರು ಮುಂದುವರಿದು ಹೇಳಿದರು, ಆದರೂ ಇದರಲ್ಲಿರುವ ಇನ್ನು ಕೆಲವು ಸೂಕ್ತಗಳ ವೈಜ್ಞಾನಿಕ ನಿಖರತೆಯನ್ನು ನಾನೇನೂ ಹೇಳಲಾರೆ. ಏಕೆಂದರೆ ಅವುಗಳ ಬಗ್ಗೆ ಅವರಿಗೂ ಹೆಚ್ಚು ಅರಿವಿಲ್ಲ. ಇಂತಹ ಕೆಲವು ಮಾಹಿತಿಗಳ ಬಗ್ಗೆ ಯಾವುದೇ ಅಭಿಪ್ರಾಯಗಳನ್ನು ನೀಡಲು ಆಧುನಿಕ ವಿಜ್ಞಾನವೂ ಶಕ್ತವಾಗಿಲ್ಲ. ಮುಂದಿನ ದಿನಗಳಲ್ಲಿ ಅದು ಶಕ್ತವಾಗಬಹುದು.
‘ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ. ಅವನು ಅಲಕ್ನಿಂದ ಮಾನವನನ್ನು ಸೃಷ್ಟಿಸಿದನು’ (96: 1-2)
ಇಲ್ಲಿ ಉಪಯೋಗಿಸಲ್ಪಟ್ಟ ಅಲಕ್ ಎಂಬ ಪದಕ್ಕೆ 3 ಅರ್ಥಗಳಿವೆ.
1) ಜಿಗಣೆ. 2) ಅಂಟಿಕೊಳ್ಳುವ ವಸ್ತು. 3) ಹೆಪ್ಪುಗಟ್ಟಿದ ರಕ್ತದ ಪಿಂಡ.
ಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದ ಚಿತ್ರವು ಪ್ರಾಥಮಿಕ ಹಂತದಲ್ಲಿ ಒಂದು ಜಿಗಣೆಯ ಚಿತ್ರದಂತೆ ತೋರುತ್ತದೆ ಎಂಬ ವಿಷಯದ ಅರಿವೇ ಡಾ| ಕೀತ್ಮೂರ್ಗಿರಲಿಲ್ಲ. ಇದರ ನಿಜಸ್ಥಿತಿಯನ್ನು ಅರಿಯಲು ಭ್ರೂಣ ಬೆಳವಣಿಗೆಯ ಪ್ರಾಥಮಿಕ ಹಂತಗಳನ್ನು ಪ್ರಬಲವಾದ ಸೂಕ್ಷ್ದದರ್ಶಕದಿಂದ ಅಭ್ಯಸಿಸಲು ಆರಂಭಿಸಿದ ಡಾ| ಕೀತ್ ಮೂರ್ ಭ್ರೂಣದ ಚಿತ್ರಗಳನ್ನು ಒಂದು ಜಿಗಣಿಯ ಚಿತ್ರದ ಪಕ್ಕದಲ್ಲಿಟ್ಟು ನೋಡಿದಾಗ ಆಶ್ಚರ್ಯ ಕಾದಿತ್ತು. ಅವೆರಡಕ್ಕೂ ಅಸಾಧಾರಣ ಸಾಮ್ಯತೆಯಿತ್ತು. ಹೀಗೇ ಡಾ| ಕೀತ್ಮೂರ್ ಭ್ರೂಣಶಾಸ್ತ್ರದ ಬಗ್ಗೆ ತಾನು ಅರಿತೇ ಇಲ್ಲದ ಇನ್ನಷ್ಟು ಮಾಹಿತಿಗಳನ್ನು ಕುರ್ಆನ್ನಿಂದಲೇ ಪಡೆದರು.
‘ದಿ ಡೆವಲಪಿಂಗ್ ಹ್ಯೂಮನ್’ ಎಂಬ ಗ್ರಂಥವನ್ನು ಬರೆದಿದ್ದ ಡಾ.ಕೀತ್ಮೂರ್ ಕುರ್ಆನಿನಿಂದ ಇನ್ನಷ್ಟು ಮಾಹಿತಿಗಳನ್ನು ಪಡೆದು ಇದೇ ಗ್ರಂಥದ 3ನೇ ಆವೃತ್ತಿಯನ್ನೂ 1982ರಲ್ಲಿ ಹೊರತಂದರು. ಈ ಗ್ರಂಥವು ಅತ್ಯುತ್ತಮ ವೈದ್ಯಕೀಯ ಗ್ರಂಥವೆಂದು ಪುರಸ್ಕರಿಸಲ್ಪಟ್ಟಿದೆ. ಜಗತ್ತಿನ ಹಲವಾರು ಪ್ರಮುಖ ಭಾಷೆಗಳಿಗೆ ಭಾಷಾಂತರಗೊಂಡಿದೆ. ಇದು ಭ್ರೂಣಶಾಸ್ತ್ರ ಅಧ್ಯಯನದ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಾಗಿ ಆರಿಸಲ್ಪಟ್ಟಿದೆ.
1981ರಲ್ಲಿ ಸೌದಿ ಅರೇಬಿಯಾದ ದಮಾಮ್ ನಲ್ಲಿ ಜರುಗಿದ ಮೆಡಿಕಲ್ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಡಾ| ಕೀತ್ ಮೂರ್, ‘ಗರ್ಭದಲ್ಲಿ ಬೆಳವಣಿಗೆ ಹೊಂದುತ್ತಿರುವ ಮಾನವರ ಕುರಿತಾಗಿ ಕುರ್ಆನಿನಲ್ಲಿರುವ ಮಾಹಿತಿಗಳನ್ನು ಪರೀಕ್ಷಿಸಿ ವಿವರಿಸಿ ಕೊಡುವ ಕಾರ್ಯದಲ್ಲಿ ಭಾಗಿಯಾದ ವಿಷಯವು ನನಗೆ ಅತೀವ ಆನಂದವನ್ನು ತಂದುಕೊಟ್ಟಿದೆ. ಈ ಮಾಹಿತಿಗಳಲ್ಲಿ ಹೆಚ್ಚಿನೆಲ್ಲವೂ ಇತ್ತೀಚೆಗಷ್ಟೆ ಸಂಶೋಧಿಸಲ್ಪಟ್ಟ ವಿಷಯಗಳಾದುದರಿಂದ ಇವುಗಳು ಪ್ರವಾದಿ ಮುಹಮ್ಮದ್(ಸ) ರಿಗೆ ದೇವನಾದ ಅಲ್ಲಾಹನಿಂದ ಮಾತ್ರ ಬಂದಿರಲು ಸಾಧ್ಯ. ಆದುದರಿಂದ ಮುಹಮ್ಮದ್(ಸ) ಖಂಡಿತವಾಗಿಯೂ ಅಲ್ಲಾಹನ ಪ್ರವಾದಿಯಾಗಿರುವರು ಎಂಬುದು ಸ್ಪಷ್ಟ.
ಅಲಕ ಶಬ್ದದ ಎರಡನೇ ಅರ್ಥ ಅಂಟಿಕೊಳ್ಳುವ ಪದಾರ್ಥ. ನಾವು ಬೆಳೆಯುತ್ತಿರುವ ಭ್ರೂಣದ ಚಿತ್ರವನ್ನು ನೋಡಿದರೆ (12 ದಿನವಾದ ಭ್ರೂಣ) ಅದು ತಾಯಿಯ ಉದರಕ್ಕೆ ಅಂಟಿ ಕೊಂಡಿರುವಂತೆ ಭಾಸವಾಗುತ್ತದೆ.
ಅಲಕ್ ಶಬ್ದದ ಮೂರನೇ ಅರ್ಥ ರಕ್ತದ ಒಂದು ಪಿಂಡ, ಬೆಳೆಯುತ್ತಿರುವ ಭ್ರೂಣದ ಬಹುತೇಕ ಭಾಗಗಳಲ್ಲಿ ರಕ್ತ ತುಂಬಿಕೊಂಡಿರುವುದರಿಂದ ಅದು ಒಂದು ರಕ್ತದ ಪಿಂಡದಂತೆ ಗೋಚರವಾಗುತ್ತದೆ ಎಂದು ಆಧುನಿಕ ವಿಜ್ಞಾನ ಹೇಳುತ್ತದೆ.
ಅಸ್ಕಾನ್ ಶೇಖ್
IslamKannada News Portal






