Home / ಲೇಖನಗಳು (page 3)

ಲೇಖನಗಳು

ಪ್ರವಾದಿಯ(ಸ) ಹಾಸ್ಯ ಮತ್ತು ವರ್ತಮಾನ

✍️ ಅಬೂ ಝೀಶಾನ್ ನೀವು ಪ್ರವಾದಿ(ಸ)ರೊಂದಿಗೆ ಪ್ರಥಮ ಬಾರಿ ಇದ್ದಾಗ ಹಾಗೂ ಅವರು ಏನಾದರೂ ಹಾಸ್ಯ ಮಾಡಿದಾಗ ಇಷ್ಟು ಮಹಾನ್ ಪ್ರವಾದಿ(ಸ) ರವರು ಹಾಸ್ಯ ಮಾಡುವುದೇ? ಎಂಬ ಪ್ರಶ್ನೆ ಕೆಲವು ಕೆಲವು ಸಹಾಬಿಗಳನ್ನು ಕಾಡಿತು. ಪ್ರವಾದಿ(ಸ) ಹಾಸ್ಯ ಮಾಡಿದಾಗ ಅವರು ಆಶ್ಚರ್ಯಚಕಿತರಾಗಿ ಕೇಳಿದರು, “ಯಾ ರಸೂಲುಲ್ಲಾಹ್, ನೀವು ನಮ್ಮೊಂದಿಗೆ ಹಾಸ್ಯ ಮಾಡುತ್ತಿರುವುದೇ?” ಆಗ ಪ್ರವಾದಿ(ಸ) ಉತ್ತರಿಸಿದರು, “ಹೌದು, ನಾನೂ ಹಾಸ್ಯ ಮಾಡುತ್ತೇನೆ. ಆದರೆ ನಾನು ನನ್ನ ಹಾಸ್ಯದಲ್ಲಿ ಕೇವಲ ಸತ್ಯವನ್ನೇ …

Read More »

ಬದುಕು ಕಸಿಯುತ್ತಿರುವ ಬಡ್ಡಿ

✍️ ಮುಷ್ತಾಕ್ ಹೆನ್ನಾಬೈಲ್ ಕಳೆದ ತಿಂಗಳು ನಡೆದ ಎರಡು ಮುಸ್ಲಿಂ ಕುಟುಂಬಗಳ ಸಾಮೂಹಿಕ ಸಾವುಗಳು ಇಡೀ ರಾಜ್ಯವನ್ನೇ ತಲ್ಲಣ ಗೊಳಿಸಿದೆ. ಉಡುಪಿ ಜಿಲ್ಲೆಯ ನೇಜಾರಿನ ಒಂದು ಕುಟುಂಬದ ನಾಲ್ಕು ಸಾವುಗಳು, ತಾವು ಯಾಕೆ ಸಾಯುತ್ತಿದ್ದೇವೆ ಎನ್ನುವುದನ್ನು ಬಲಿಪಶುಗಳು (ಮುಖ ಪುಟದಿಂದ) ಅರಿಯುವ ಮುಂಚೆಯೇ ಕ್ರೂರ ಹಂತಕನ ಪ್ರಹಾರಕ್ಕೆ ಸಿಕ್ಕು ಸತ್ತ ಸಾವಾಗಿತ್ತು.. ತುಮಕೂರಿನಲ್ಲಿ ನಡೆದ ಇನ್ನೊಂದು ಕುಟುಂಬದ ಸಾಮೂಹಿಕ ಸಾವು ಬಡ್ಡಿ ವ್ಯವಹಾರ ಎಂಬ ಕರಾಳ ಬಾಹುಗಳು ಮೆಲ್ಲಮೆಲ್ಲನೆ ಸದ್ದಿಲ್ಲದೆ …

Read More »

ನಾಯಕ ಹೇಗಿರಬೇಕು ಎಂದು ತೋರಿಸಿಕೊಟ್ಟ ಪ್ರವಾದಿ(ಸ)

✍️ ಅಬೂ ಝೀಶಾನ್ ನಾಯಕರು ಜನರ ಸೇವಕರಾಗಿರಬೇಕಾಗಿದೆ. ಆದರೆ ಇಂದಿನ ನಾಯಕರಲ್ಲಿ ಆ ಭಾವನೆ ಇಲ್ಲವಾಗಿದೆ. ನಾಯಕರು ಹೇಗಿರಬೇಕೆಂದು ಪ್ರವಾದಿ(ಸ) ತನ್ನ ಜೀವನದಲ್ಲಿ ಮಾಡಿ ತೋರಿಸಿದ್ದಾರೆ. ಎಷ್ಟೆಂದರೆ ಸಹಾಬಿಗಳು ಪ್ರವಾದಿ(ಸ)ರೊಂದಿಗೆ ತಾವು ನಮ್ಮ ನಾಯಕರಾಗಿ ಇಷ್ಟು ಕೆಲಸಗಳನ್ನು ಮಾಡಬೇಡಿ ಎಂದು ಭಿನ್ನವಿಸುತ್ತಿದ್ದರು. ಪ್ರವಾದಿ(ಸ) ಮದೀನಾಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸಲು ಮದೀನಾದ ಹೊರವಲಯವಾದ ಕುಬಾ ಎಂಬಲ್ಲಿ ಎಲ್ಲರೂ ಬಂದು ಸೇರಿದರು. ಪ್ರವಾದಿ(ಸ) ಬರುವಾಗ ಅವರನ್ನು ಭವ್ಯವಾಗಿ ಸ್ವಾಗತಿಸಲು ಅವರೆಲ್ಲ ಯೋಜನೆ ಹಾಕಿದ್ದರು. …

Read More »

ಸ್ವರ್ಗದಲ್ಲಿ ಪುರುಷರಿಗೆ `ಹೂರ್’ ಗಳಿರುವಂತೆ ಮಹಿಳೆಯರಿಗೇಕಿಲ್ಲ?

✍️ ಏ.ಕೆ. ಕುಕ್ಕಿಲ 1.ಮಾಧವಿ ಕುಟ್ಟಿ 2.ಇವಾನ್ ರಿಡ್ಲಿ 3.ಲಾರೆನ್ ಬೂತ್ ಒಂದುವೇಳೆ, ಪವಿತ್ರ ಕುರ್‌ಆನ್ ಮಹಿಳಾ ವಿರೋಧಿ ಮತ್ತು ಪುರುಷ ಪಕ್ಷಪಾತಿ ಎಂಬುದು ನಿಜವೇ ಆಗಿದ್ದಿದ್ದರೆ, ಈ ಮೇಲಿನ ಮೂವರೂ ಇಸ್ಲಾಮನ್ನು ಪ್ರೀತಿಸಲು ಕಾರಣವೇನು? ಮಲಯಾಳಂ ಭಾಷೆಯ ಪ್ರಸಿದ್ಧ ಸಾಹಿತಿ ಈ ಮಾಧವಿ ಕುಟ್ಟಿ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ನಿರರ್ಗಳವಾಗಿ ಬರೆಯುತ್ತಿದ್ದ ಈ ಮಾಧವಿ ಕುಟ್ಟಿಯ ಕವಿತೆಗಳಂತೂ ಬಹುಪ್ರಸಿದ್ಧ. ಕತೆಗಳೂ ಅಷ್ಟೇ, ಅತ್ಯಂತ ತೀಕ್ಷ್ಣ ಮತ್ತು ಹರಿತ. …

Read More »

ಮಕ್ಕಳೊಂದಿಗೆ ಮಗುವಾಗುತ್ತಿದ್ದ ಪ್ರವಾದಿ(ಸ)

✍️ ಅಬೂ ಝೀಶಾನ್ ಪ್ರವಾದಿ(ಸ) ಹೇಳಿದರು, “ಮಕ್ಕಳೊಂದಿಗೆ ಕರುಣೆ ತೋರದವನು ಹಾಗೂ ಹಿರಿಯರಿಗೆ ಗೌರವ ನೀಡದವನು ನಮ್ಮವನಲ್ಲ.” ಹ. ಅನಸ್ ಬಿನ್ ಮಾಲಿಕ್(ರ) ಹೇಳುತ್ತಾರೆ, “ಮಕ್ಕಳೊಂದಿಗೆ ಪ್ರವಾದಿ(ಸ) ಕರುಣೆ ತೋರುವ ಹಾಗೆ ಬೇರೆ ಯಾರನ್ನೂ ಕಂಡಿಲ್ಲ.” ಮಕ್ಕಳನ್ನು ಪ್ರವಾದಿ(ಸ) ಹತ್ತಿರ ತಂದಾಗ ಪ್ರವಾದಿ(ಸ) ಆ ಮಗುವಿಗೆ ತನ್ನ ಸಂಪೂರ್ಣ ಗಮನ ನೀಡುತ್ತಿದ್ದರು. ಆ ಮಗುವಿನೊಂದಿಗೆ ಮಾತನಾಡುತ್ತಿದ್ದರು, ಆಟವಾಡುತ್ತಿದ್ದರು. ಇದರಿಂದಾಗಿ ಪ್ರತಿಯೊಂದು ಮಗು ಪ್ರವಾದಿ(ಸ)ರೊಂದಿಗೆ ವಿಶೇಷವಾದ ಸಂಬಂಧವನ್ನು ಬೆಳೆಸುತ್ತಿತ್ತು. ವಿಶೇಷವಾಗಿ ಮಸೀದಿಯಲ್ಲಿ. …

Read More »

ಎರಡು ಚಿತ್ತಗಳಲ್ಲಿ ನಿಮ್ಮ ಆಯ್ಕೆ ಯಾವುದು?

✍️ ರೈಹಾನ್ ವಿ.ಕೆ., ಸಚ್ಚೇರಿಪೇಟೆ ಕುರ್‌ಆನ್ ಆತ್ಮವನ್ನು ರೂಹ್ ಅಥವಾ ನಫ್ಸ್ ಎಂಬ ಪದದಿಂದ ನಮಗೆ ಪರಿಚಯಿಸುತ್ತದೆ. ಕುರ್‌ಆನ್ ನಲ್ಲಿ ಪರಾಮರ್ಶೆ ಮಾಡಲಾದ ಮೂರು ರೀತಿಯ ನಫ್ಸ್ ಹೀಗಿದೆ: 1- ನಫ್ಸುಲ್ಲವ್ವಾಮ 2- ನಫ್ಸ್ ಅಲ್ ಅಮ್ಮಾರ. 3- ನಫ್ಸ್ ಅಲ್ ಮುತ್ಮ ಇನ್ನ. ಅಲ್ಲಾಹನು ಕೆಟ್ಟ ಕಾರ್ಯಗಳಿಂದ ತಡೆಯುವಂತಹ ಓರ್ವ ಮಿತ್ರನನ್ನು ನಮ್ಮೊಳಗೇ ಇರಿಸಿದ್ದಾನೆ. ಆದ್ದರಿಂದಲೇ ನಾವೇನಾದರೂ ಕೆಟ್ಟ ಕೆಲಸ ಮಾಡ ಬಯಸಿದಾಗ ನಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. …

Read More »

ಏಸುಕ್ರಿಸ್ತರ (ಪ್ರವಾದಿ ಈಸಾ) ಸಂದೇಶ

ಕ್ರಿಸ್ ಮಸ್ ಸಂದರ್ಭ ನೆನಪಾಗುವ ಮಹಾನ್ ವ್ಯಕ್ತಿತ್ವ ಏಸು ಕ್ರಿಸ್ತರು.(ಪ್ರವಾದಿ ಈಸಾ) ಏಸು ಕ್ರಿಸ್ತರು ಸತ್ಯವನ್ನು ಹೇಳುತ್ತಿದ್ದ, ಒಳ್ಳೆಯದನ್ನು ಭೋದಿಸುತ್ತಿದ್ದ ಕಾರಣ ಆ ಕಾಲದ ದುರ್ಜನರು ಗಲ್ಲಿಯ ಪುಂಡ ಪೋಕರಿಗಳನ್ನು ಅವರ ಹಿಂದೆ ಬಿಡುತ್ತಿದ್ದರು. ಆ ಮಕ್ಕಳು ಏಸುರವರಿಗೆ ಕೀಟಲೆ ಕೊಡುತ್ತಿದ್ದರು. ಏಸುರವರು ಅವರಿಗೆ ದ್ರಾಕ್ಷಿ ಹಂಚುತ್ತಿದ್ದರು. ದ್ರಾಕ್ಷಿ ಮುಗಿಯುವ ತನಕ ಮಕ್ಕಳು ಕೀಟಲೆ ಕೊಡುತ್ತಿರಲಿಲ್ಲ. ದ್ರಾಕ್ಷಿ ಮುಗಿದಾಗ ಪುನಃ ತೊಂದರೆ ಕೊಡುತ್ತಿದ್ದರು. ಶಿಷ್ಯರು ಹೇಳಿದರು: ನೀವು ಯಾಕೆ ತೊಂದರೆ …

Read More »

ಇಂದು(ಡಿ.18) ವಿಶ್ವ ಅರಬಿ ಭಾಷಾ ದಿನ: ಯಾಕಿಷ್ಟು ಮಹತ್ವ?

✍️ ರೈಹಾನ. ವಿ. ಕೆ ಸಚ್ಚೇರಿಪೇಟೆ اليوم العالمي للغة العربية ಪವಿತ್ರ ಕುರ್ ಆನ್ ನಲ್ಲಿ ಸರ್ವಶಕ್ತನು ಅರಬೀ ಭಾಷೆ ಬಗ್ಗೆ 11 ಕಡೆಗಳಲ್ಲಿ ಪರಾಮರ್ಶೆ ಮಾಡಿರುವನು. 6 ಕಡೆಗಳಲ್ಲಿ قرآنا عربيا (ಕುರ್ ಆನ್ ಅರಬೀ ಭಾಷೆಯಲ್ಲಿದೆ) ಎಂದೂ 3 ಕಡೆಗಳಲ್ಲಿ لسانا عربيا (ಅರಬೀ ಭಾಷೆ) ಎಂದೂ 1 ಕಡೆ حكما عربيا ಅರಬೀ ಭಾಷಾ ವಿಧಿಯೆಂದೂ ಪರಾಮರ್ಶೆ ಬಂದಿರುತ್ತದೆ. “ಅರಬಿ” ಎಂಬ ಶಬ್ದದ ಅರ್ಥ …

Read More »

ಪ್ರವಾದಿ(ಸ) ಸಭೆಗಳು ಹೇಗಿರುತ್ತಿದ್ದವು?

ಅಬೂ ಝೀಶಾನ್ ಪ್ರಭಾತ ಸಮಯದಲ್ಲಿ ಪ್ರವಾದಿ(ಸ)ರೊಂದಿಗೆ ಕಳೆಯಲು ಎಲ್ಲರೂ ಇಷ್ಟಪಡುತ್ತಿದ್ದರು. ವಿಶೇಷವಾಗಿ ಯುವಕರು. ಪ್ರವಾದಿ(ಸ) ಸಹಾಬಿಗಳೊಂದಿಗೆ ಫಜ್ರ್ ನಮಾಝ್ ಮುಗಿಸಿದ ನಂತರ ಸೂರ್ಯೋದಯದವರೆಗೆ ಮಸೀದಿಯಲ್ಲಿ ಕುಳಿತು ಅಲ್ಲಾಹನ ಆರಾಧನೆಯಲ್ಲಿ ಕಳೆಯುತ್ತಿದ್ದರು. ಸೂರ್ಯೋದಯವಾದಾಗ ಪ್ರವಾದಿ(ಸ) ಎರಡು, ನಾಲ್ಕು, ಆರು ಹಾಗೂ ಕೆಲವೊಮ್ಮೆ ಆರಕ್ಕಿಂತ ಹೆಚ್ಚಾಗಿ  ಸುನ್ನತ್ ನಮಾಝ್‌ಗಳನ್ನು ನಿರ್ವಹಿಸುತ್ತಿದ್ದರು. ಸಹಾಬಿಗಳು ಕೂಡಾ ಪ್ರವಾದಿ(ಸ) ಹಾಗೆಯೇ ಮಸೀದಿಯಲ್ಲಿ ಕುಳಿತು ಅಲ್ಲಾಹನ  ಆರಾಧನೆಯಲ್ಲಿ ಕಳೆಯುತ್ತಿದ್ದರು ಹಾಗೂ ಪ್ರವಾದಿ(ಸ) ಇಶ್ರಾಕ್ ನಮಾಝ್ ಮಾಡುವವರೆಗೆ ಕಾಯುತ್ತಿದ್ದರು. ಪ್ರವಾದಿ(ಸ) …

Read More »

ಖುತ್ಬಾ ನಿರ್ವಹಿಸುತ್ತಿದ್ದ ಪ್ರವಾದಿ(ಸ) ಇಳಿದು ಬಂದು ಅವರಿಬ್ಬರನ್ನು ಎತ್ತಿಕೊಂಡರು…

ಅಬೂ ಝೀಶಾನ್ ಪ್ರವಾದಿ(ಸ) ಶುಕ್ರವಾರವನ್ನು ವಿಶೇಷ ದಿನವಾಗಿ ಪರಿಗಣಿಸಲು ಕಲಿಸಿದ್ದಾರೆ. ಪ್ರವಾದಿ(ಸ) ಹೇಳಿದರು, “ಅಲ್ಲಾಹನು ಶುಕ್ರವಾರ  ಮುಸ್ಲಿಮರಿಗೆ ನೀಡಿದ ಈದ್‌ನ ದಿನವಾಗಿದೆ. ಹಾಗಾಗಿ ಆ ದಿನವನ್ನು ವಿಶೇಷವಾಗಿ ಪರಿಗಣಿಸಿರಿ.” ಪ್ರವಾದಿ(ಸ) ಶುಕ್ರವಾರದ ದಿನ  ಜುಮಾ ನಮಾಝಿಗಾಗಿ ಮಸೀದಿಗೆ ಬರುವಾಗ ಸ್ನಾನ ಮಾಡಿ, ವುಝೂ ಮಾಡಿ ತಮ್ಮಲ್ಲಿದ್ದ ಅತೀ ಉತ್ತಮವಾದ ಸುಗಂಧ ದ್ರವ್ಯವನ್ನು ಹಾಕಿ ಬರುತ್ತಿದ್ದರು. ಹೊಸತಾದ ಸಿವಾಕ್‌ನಿಂದ ಶುಕ್ರವಾರದ ದಿನ ಹಲ್ಲುಜ್ಜುತ್ತಿದ್ದರು. ಪ್ರವಾದಿ(ಸ) ಎರಡು ಸಂದರ್ಭಗಳಲ್ಲಿ ವಿಶೇಷವಾದ  ಬಟ್ಟೆಗಳನ್ನು ಧರಿಸುತ್ತಿದ್ದರು. …

Read More »