ಮುಹಮ್ಮದ್ ಇಸ್ಲಾಮ್ ಇಸ್ಲಾಮ್ ಧರ್ಮದ ವಿರುದ್ಧ ಹಲವಾರು ವರ್ಷಗಳಿಂದ ತಪ್ಪುಕಲ್ಪನೆಗಳ ಪ್ರಚಾರ ನಡೆಯುತ್ತಾ ಬಂದಿದೆ. ಇಂದಿಗೂ ಕೆಲವು ವರ್ತುಲಗಳಲ್ಲಿ ಇಸ್ಲಾಮ್ ಧರ್ಮವು ನಿರಂಕುಶ ಸಿದ್ಧಾಂತದ ವಾಹಕವೆಂದು ಭಾವಿಸಲಾಗುತ್ತಿದೆ. ಕೆಲವು ನಾಮಧಾರಿ ಮುಸ್ಲಿಮರ ದುಷ್ಕ್ರತ್ಯಗಳನ್ನು ಎತ್ತಿ ಹಿಡಿದು ಈ ಸತ್ಯ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬರಹ. ಯಾವ ಧರ್ಮವು ಭೂಲೋಕಕ್ಕೆ ಮೊತ್ತ ಮೊದಲು ಪ್ರಜಾ ಪ್ರಭುತ್ವದ ಸಿದ್ಧಾಂತಗಳನ್ನು ಪರಿಚಯಿಸಿತೋ, ಇಂದು ಅದೇ ಧರ್ಮವನ್ನು ನಿರಂಕುಶ ಪ್ರಭುತ್ವದ ಪ್ರತಿಪಾದಕ …
Read More »‘ಧರ್ಮ ಗ್ರಂಥ’ – ಕುರ್ಆನಿನ ಸಾಮಾಜಿಕ ಚಿಂತನೆಗಳು
@ ಎಂ. ಅಶೀರುದ್ದೀನ್ ಆಲಿಯ, ಮಂಜನಾಡಿ “ಓ ಪೈಗಂಬರರೇ, ಅವನು ನಿಮ್ಮ ಮೇಲೆ ಈ ಗ್ರಂಥವನ್ನು ಅವತೀರ್ಣಗೊಳಿಸಿದನು. ಇದು ಸತ್ಯವನ್ನು ತಂದಿದೆ. ಇದು ಈ ಹಿಂದೆ ಬಂದಿದ್ದ ಗ್ರಂಥಗಳನ್ನು ದೃಢೀಕರಿಸುತ್ತದೆ. ಇದಕ್ಕಿಂತ ಮುಂಚೆ ಅವನು ಮಾನವನ ಸನ್ಮಾರ್ಗದರ್ಶನಕ್ಕಾಗಿ ತೌರಾತ್ ಮತ್ತು ಇಂಜೀಲನ್ನು ಅವತೀರ್ಣಗೊಳಿಸಿದ್ದನು ಮತ್ತು ಅವನು `ಸತ್ಯಾಸತ್ಯತೆಗಳ ತಾರತಮ್ಯ ತೋರಿಸುವ’ ಒರೆಗಲ್ಲನ್ನೂ ಅವತೀರ್ಣಗೊಳಿಸಿರುತ್ತಾನೆ.” (ಆಲಿ ಇಮ್ರಾನ್: 3) ಕಾಲ ಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಪ್ರವಾದಿಗಳ ಆಗಮಿಸಿದ್ದಾರೆ. ಜನರನ್ನು ಅನೈತಿಕ, ಅಕ್ರಮ, …
Read More »ವುಝೂ: ನಮಾಝ್ನ ಒಂದು ಭಾಗ
@ ಖಾಲಿದ್ ಮೂಸಾ ನದ್ವಿ ಮನಸ್ಸಿನ ಶುದ್ಧಿಗೆ ಪ್ರಾಮುಖ್ಯತೆ ನೀಡುವ ಇಸ್ಲಾಂ ಶರೀರದ ಶುಚಿತ್ವದ ಕಡೆಗೂ ಹೆಚ್ಚಿನ ಗಮನ ನೀಡುತ್ತದೆ. ದೇಹ, ವಸ್ತ್ರ, ವಾಸಿಸುವ ಸ್ಥಳ, ಪ್ರಯಾಣಿಸುವ ವಾಹನ, ಚಪ್ಪಲಿ ಎಲ್ಲವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಇಸ್ಲಾಮ್ ಸ್ಪಷ್ಟವಾಗಿ ಆದೇಶಿಸುತ್ತದೆ. ಬಾಹ್ಯ ಶುದ್ಧಿಯ ಪ್ರಾಧಾನ್ಯತೆಯ ಕುರಿತು ಪ್ರವಾದಿಯವರ(ಸ) ಮಾತುಗಳು ಬಹಳ ಪ್ರಸಿದ್ಧವಾಗಿವೆ. ಶುಚಿತ್ವವು ಈಮಾನ್ನ ಅರ್ಧಾಂಶವಾಗಿದೆ ಎಂಬುದೇ ಆ ವಚನದ ಸಾರ. ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಾಲಿನ್ಯವನ್ನು ಸರಿಯಾಗಿ ಸಂಸ್ಕರಿಸುವುದು, …
Read More »ದೆಹಲಿ; ಜಮಾಅತೆ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ಭರದಿಂದ ಸಾಗುತ್ತಿರುವ ಪರಿಹಾರ ಕಾರ್ಯ
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿ ಜಮಾಅತೆ ಇಸ್ಲಾಮಿ ಹಿಂದ್ ಕೈಗೊಂಡ ಪರಿಹಾರ ಕಾರ್ಯಗಳ ಕುರಿತಂತೆ ಜಮಾಅತ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಅವರು ಮಾಧ್ಯಮಗಳಿಗೆ ವಿವರನ್ನು ನೀಡಿದ್ದಾರೆ. ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಅಹ್ಮದ್ ಅವರ ನೇತೃತ್ವದಲ್ಲಿ ಜಮಾಅತ್ ತನ್ನ ಪರಿಹಾರ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಇದಕ್ಕಾಗಿ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದೆ. ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳನ್ನು ಸಮನ್ವಯದೊಂದಿಗೆ ಮತ್ತು ಹಂತ ಹಂತವಾಗಿ ನಡೆಸಲಾಗುತ್ತಿದೆ. ಸಮೀಕ್ಷೆ ನಡೆಸುವುದು ಮತ್ತು ಹಾನಿಯ ಪ್ರಮಾಣವನ್ನು ನಿರ್ಣಯಿಸುವುದು, …
Read More »ದೆಹಲಿ ಬಂಧನ: ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಲು ಜಮಾಅತೆ ಇಸ್ಲಾಮಿ ಹಿಂದ್ ನಿರ್ಧಾರ
ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಬಗ್ಗೆ ಅಸ್ಪಷ್ಟತೆ ಇರುವುದರಿಂದ ಜಮಾಅತ್ ಇಸ್ಲಾವಿೂ ಹಿಂದ್ ದೆಹಲಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಲು ನಿರ್ಧರಿಸಿದೆ ಎಂದು ಸಮುದಾಯ ವ್ಯವಹಾರಗಳ ಕಾರ್ಯದರ್ಶಿ ಮಲಿಕ್ ಮೊಹ್ತಾಸಿಮ್ ಖಾನ್ ಹೀಗೆ ಹೇಳಿದ್ದಾರೆ. ದೆಹಲಿ ಗಲಭೆಯ ಸಂತ್ರಸ್ತರಿಗೆ ದೆಹಲಿ ಪೊಲೀಸರು ಕಿರುಕುಳ ನೀಡುತ್ತಿರುವುದು ಬಹಳ ಆಘಾತಕಾರಿಯಾಗಿದೆ ಮತ್ತು ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ದೂರು ದಾಖಲಿಸಬೇಕಾದ ಸಂತ್ರಸ್ತರಲ್ಲಿ ಪ್ರಭಾವಿಗಳು ಭಯದ ವಾತಾವರಣವನ್ನು …
Read More »ಜಮಾಅತ್ ಇಸ್ಲಾಮೀ ಹಿಂದ್ ನಿಂದ ದಿಲ್ಲಿ ಗಲಭೆ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಬೃಹತ್ ಯೋಜನೆ – ಟಿ. ಆರಿಫಲಿ
ಹೊಸದಿಲ್ಲಿ, ಮಾ. 14: ದಿಲ್ಲಿ ಕೋಮು ದಾಳಿಯಲ್ಲಿ ಸಿಲುಕಿ ಸಂತ್ರಸ್ತರಾದವರ ಪುನರ್ವಸತಿಗೆ ದೇಶದ ವಿವಿಧ ಸ್ವಯಂ ಸೇವಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಯೋಗದಲ್ಲಿ ಹತ್ತು ಕೋಟಿ ರೂಪಾಯಿಯ ಬೃಹತ್ ಯೋಜನೆಗೆ ಜಮಾಅತೆ ಇಸ್ಲಾಮೀ ಹಿಂದ್ ರೂಪು ನೀಡಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ. ಆರಿಫ್ ಆಲಿ ತಿಳಿಸಿದ್ದಾರೆ. ಮನೆಗಳನ್ನು ಮರು ನಿರ್ಮಿಸುವ ಯೋಜನೆಯಲ್ಲಿ ವಕ್ಫ್ ಬೋರ್ಡ್ ಮತ್ತು ದಿಲ್ಲಿ ಸರಕಾರದ ಸಹಾಯವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದವರು …
Read More »ವ್ಯಾಪಾರದಲ್ಲಿ ಪ್ರಾಮಾಣಿಕತೆಯಿರಲಿ – ಕುರ್ಆನಿನ ಸಾಮಾಜಿಕ ಚಿಂತನೆಗಳು
@ ಅಶೀರುದ್ದೀನ್ ಆಲಿಯಾ, ಮಂಜನಾಡಿ “ಅವರ ವ್ಯಾಪಾರ ಮತ್ತು ಕ್ರಯ-ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅವರನ್ನು ಅಲಕ್ಷ್ಯರಾಗಿ ಮಾಡುವುದಿಲ್ಲ. ಹೃದಯಗಳು ಪಲ್ಲಟಗೊಳ್ಳುವ ಮತ್ತು ದೃಷ್ಟಿಗಳು ಸ್ತಬ್ಧಗೊಳ್ಳುವಂತಹ ಆ ದಿನವನ್ನು ಅವರು ಭಯ ಪಡುತ್ತಿರುವರು. ಅಲ್ಲಾಹನು ಅವರಿಗೆ ಅವರ ಅತ್ಯುತ್ತಮ ಕರ್ಮದ ಫಲಗಳನ್ನು ಮತ್ತು ತನ್ನ ಅನುಗ್ರಹದಿಂದ ಇನಷ್ಟನ್ನು ದಯಪಾಲಿಸುವಂತಾಗಲಿಕ್ಕಾಗಿ (ಅವರು ಇದನ್ನೆಲ್ಲಾ ಮಾಡುತ್ತಾರೆ). ಅಲ್ಲಾಹನು ತಾನಿಚ್ಛಿಸಿದವರಿಗೆ ಅಪರಿಮಿತವಾಗಿ ನೀಡುತ್ತಾನೆ.” (ಅನ್ನೂರ್: 37-38) ಮೇಲಿನ ಕುರ್ಆನ್ ಸೂಕ್ತದಲ್ಲಿ …
Read More »ರಾತ್ರಿ ನಮಾಝ್ ರೂಢಿಸಿಕೊಳ್ಳಿ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬೀ ಉಮಾಮತ್ ಅಲ್ಬಾಹಿಲೀ(ರ) ಖಾಲ: ಖಾಲ ರಸೂಲುಲ್ಲಾಹಿ ಸಲ್ಲಲ್ಲಾಹುವಲೈಹಿ ವಸಲ್ಲಮ ಅಲೈಕುಂ ಬಿಕಿಯಾಮಿಲ್ಲೈಲಿ ಫಿಇನ್ನಹು ದಅïಬು ಸ್ಸಾಲಿಹೀನ ಕಬ್ಲಕುಂ ವಇನ್ನ ಕಿಯಾಮುಲ್ಲೈಲಿ ಕುರ್ಬತ್ಗುಂ ಇಲಲ್ಲಾಹಿ ವಮನ್ಹಾತು ಲಿನಿಲ್ ಇಸ್ಮಿ ವತಕ್ಫೀರುಲ್ಲಿ ಸಯ್ಯಿಅತಿ ವಮತ್ರದತುಲ್ಲಿದ್ದಾಇ ಅನಿಲ್ ಜಸದಿ. (ತಿರ್ಮಿದಿ) ಅಬೂ ಉಮಾಮ(ರ) ರಿಂದ ವರದಿಯಾಗಿದೆ. ಅಲ್ಲಾಹನ ಪ್ರವಾದಿ ಹೇಳಿದರು: “ನೀವು ರಾತ್ರಿ ನಮಾಝ್ ನಿರ್ವಹಿಸುತ್ತಲಿರಿ. ಅದು ಪೂರ್ವಿಕರಾದ ಸಜ್ಜನರ ರೀತಿಯಾಗಿದೆ. ಅದು ಅಲ್ಲಾಹನ ಸಾಮಿಪ್ಯವನ್ನು ಗಳಿಸಿಕೊಡುತ್ತದೆ. …
Read More »ಅನಗತ್ಯ ಚಿಂತೆ ಮಾಡಬಾರದು
@ ಎಮ್ಮೆಸ್ಕೆ ಮಾನವರಲ್ಲಿ ಹೆಚ್ಚಿನವರಿಗೆ ಒಂದಲ್ಲೊಂದು ರೀತಿಯ ಚಿಂತೆ ಕಾಡುತ್ತಿರುತ್ತದೆ. ಪರಿಸ್ಥಿತಿ ಹದಗೆಡುತ್ತಿದೆಯೆಂದು ಅವರು ಭಾವಿಸುತ್ತಾರೆ. ಅದೊಂದು ಮಾನಸಿಕ ತೊಳಲಾಟವಾಗಿದೆ. ಇಂದಿನ ಕಾಲದಲ್ಲಿ ಜನಸಾಮಾನ್ಯರು ಈ ಅಸ್ವಸ್ಥತೆಗೆ ಸಿಲುಕಿರುವುದು ಕಂಡು ಬರುತ್ತದೆ. ಈ ಚಿಂತೆಯು ಮನುಷ್ಯನಲ್ಲಿ ಅನೇಕ ರೀತಿಯ ಮಾನಸಿಕ ಮತ್ತು ಶಾರೀರಿಕ ಲಕ್ಷಣಗಳನ್ನು ಪ್ರಕಟಪಡಿಸುತ್ತದೆ. ಇದರಿಂದ ಮನಸ್ಸಿನಲ್ಲಿ ಒಂದು ರೀತಿಯ ಭಯವೂ ಉಂಟಾಗುತ್ತದೆ. ಇದು ತೀವ್ರ ಕಳವಳಕ್ಕೆ ಕಾರಣವಾಗುತ್ತದೆ. ಮನುಷ್ಯನ ಕೆಟ್ಟ ಅಭ್ಯಾಸವೇನೆಂದರೆ ತನ್ನಲ್ಲೇಳುವ ಭಾವನೆಗಳನ್ನು ಸ್ವಯಂ ದಮನಿಸ …
Read More »ಕುರ್ಆನ್ ಓದುವಾಗ ಗಮನಿಸಬೇಕಾದದ್ದು
@ ಕೆ.ಸಿ. ಜಲೀಲ್ ಪಿ. ಪವಿತ್ರ ಕುರ್ಆನನ್ನು ಅರ್ಥ ಸಹಿತ ಓದಬೇಕೆಂಬ ವಿಚಾರ ಈಗ ಹೆಚ್ಚಿನ ಮುಸ್ಲಿಮರಿಗೆ ಮನವರಿಕೆಯಾಗಿದೆ. ಕುರ್ಆನ್ ಅನ್ನು ಅನುವಾದಿಸುವುದು ತಪ್ಪು ಎಂಬ ವಾದ ಈಗ ಕೇಳಿ ಬರುವುದಿಲ್ಲ. ಮಾತ್ರವಲ್ಲ, ಅಂತಹ ವಾದಗಳನ್ನು ಮಾಡುತ್ತಿದ್ದವರು ಕೂಡಾ ಇಂದು ಕುರ್ಆನ್ ಅನುವಾದಿಸುತ್ತಿದ್ದಾರೆ. ಕುರ್ಆನ್ ಕಲಿಕಾ ತರಗತಿಗಳನ್ನು ಕೂಡಾ ಬಹಳ ಮುತುರ್ವರ್ಜಿಯಿಂದ ನಡೆಸಲಾಗುತ್ತಿದೆ. ಆದರೆ ಸಂಘಟನೆಗಳು ಅದು ಅವರ ಸಂಘಟನೆಯ ಕಾರ್ಯಕ್ರಮಗಳು ಎಂಬ ರೀತಿಯಲ್ಲಿ ಕುರ್ಆನ್ ಕಲಿಕೆಯನ್ನು ಮಾಡುವಾಗ ಉಂಟಾಗುವ …
Read More »
IslamKannada News Portal