ಬೆಂಗಳೂರು, ಏಪ್ರಿಲ್ 3- ಕೊರೋನಾದ ಕಾರಣದಿಂದ ರಾಜ್ಯಾದ್ಯಂತ ಘೋಷಿಸಲಾಗಿರುವ ಲಾಕ್ ಡೌನ್ ನಿಂದಾಗಿ ತೊಂದರೆಯಲ್ಲಿರುವ ಜನರ ನೆರವಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ತೊಡಗಿಸಿಕೊಂಡಿದೆ. ಬೀದರ್ ನಿಂದ ಚಾಮರಾಜ ನಗರದವರೆಗೆ ಸುಮಾರು 123 ರಿಲೀಫ್ ಕೇಂದ್ರಗಳನ್ನು ಮಾಡಿಕೊಂಡು ಜಮಾಅತ್ ಪರಿಹಾರ ಕಾರ್ಯಗಳಲ್ಲಿ ನಿರತವಾಗಿದೆ. ಮುಖ್ಯವಾಗಿ ಲಾಕ್ಡೌನ್ ನಿಂದ ಸಂಕಷ್ಟಕ್ಕೆ ಒಳಗಾದ ಬೀದಿಬದಿಯಲ್ಲಿ ಮಲಗುವವರು, ಬಡವರು, ವಲಸೆ ಕಾರ್ಮಿಕರು, ಹಕ್ಕಿಪಿಕ್ಕಿ ಜನಾಂಗಗಳು ಮುಂತಾದವರಿಗೆ ರೇಷನ್ ತಲುಪಿಸುವ ಮತ್ತು ಊಟ ವಿತರಿಸುವ ಕೈಂಕರ್ಯದಲ್ಲಿ ಜಮಾಅತ್ …
Read More »ಮಕ್ಕಳ ವೈದ್ಯೆಯಾಗಿ ಮಂಗಳೂರಿನ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ನೇಮಕವಾದ ಡಾ/ ಆಸಿಯಾ ಲಿಫಾಮ್
ಮಂಗಳೂರು, ಏಪ್ರಿಲ್ 4- ಇಲ್ಲಿನ ಯುವ ವೈದ್ಯೆ ಡಾ/ ಆಸಿಯಾ ಲಿಫಾಮ್ ಅವರು ನಗರದ ಪ್ರಮುಖ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ಮಕ್ಕಳ ವೈದ್ಯೆಯಾಗಿ ನೇಮಕಗೊಂಡಿದ್ದಾರೆ. ಮುಖ್ಯವಾಗಿ ವಿಶೇಷ ನಿಗಾ ಘಟಕದಲ್ಲಿ ಮೆಡಿಕಲ್ ಆಫೀಸರ್ ಆಗಿ ಅವರು ಕರ್ತವ್ಯ ನಿಭಾಯಿಸಲಿದ್ದಾರೆ. ದೇರಳಕಟ್ಟೆಯ ಕೆ ಎಸ್ ಹೆಗಡೆ ನಿಟ್ಟೆ ಆಸ್ಪತ್ರೆಯಲ್ಲಿ 2018ರಲ್ಲಿ ಪದವಿ ಮುಗಿಸಿ, ಒಂದು ವರ್ಷದ ಇಂಟರ್ ಶಿಪ್ ನ ಬಳಿಕ ಅವರು ಲೇಡಿಗೋಷನ್ ಆಸ್ಪತ್ರೆಯನ್ನು ಸೇರಿಕೊಳ್ಳುತ್ತಿದ್ದಾರೆ. ಖ್ಯಾತ ಸಮಾಜ ಸೇವಕ, …
Read More »‘ಕರ್ತವ್ಯ ಮುಂದುವರಿಸುತ್ತೇವೆ, ಭಯಪಡುವುದಿಲ್ಲ’: ದಾಳಿಗೊಳಗಾದ ವೈದ್ಯರ ತಂಡದಲ್ಲಿದ್ದ ಡಾ.ಝಕಿಯಾ ಸೈಯದ್
ಇಂದೋರ್: ನಗರದಲ್ಲಿ ಬುಧವಾರ ಕೊರೋನ ಶಂಕಿತರ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ಗುಂಪು ನಡೆಸಿದ ದಾಳಿ ದೇಶಾದ್ಯಂತ ಸುದ್ದಿಯಾಗಿದೆ. ಈ ಆರೋಗ್ಯ ಕಾರ್ಯಕರ್ತರ ತಂಡದಲ್ಲಿದ್ದವರೊಬ್ಬರು ಡಾ ಝಕಿಯಾ ಸೈಯದ್. ದಾಳಿಯ ವೇಳೆ ಅವರಿಗೂ ಗಾಯಗಳಾಗಿದ್ದವು. “ಕಳೆದ ನಾಲ್ಕು ದಿನಗಳಿಂದ ಕೊರೋನ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಸ್ಕ್ರೀನಿಂಗ್ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಆದರೆ ಬುಧವಾರದಂತಹ ಘಟನೆ ನಾವು ಈವರೆಗೆ ನೋಡಿಲ್ಲ, ನಮಗೆ ಗಾಯಗಳಾಗಿವೆ, ಆದರೆ ನಾವು ನಮ್ಮ ಕರ್ತವ್ಯವನ್ನು ಮಾಡಬೇಕಿದೆ. …
Read More »ಸಾಂಕ್ರಾಮಿಕ ರೋಗ ಮತ್ತು ಇಸ್ಲಾಮಿ ದೃಷ್ಟಿಕೋನ
ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ರೋಗಿಯ ಬಳಿ ಹೋಗುವುದು ಮತ್ತು ರೋಗಿ ಇತರರ ಬಳಿ ಹೋಗುವುದನ್ನು ಪ್ರವಾದಿ ಮುಹಮ್ಮದ್ (ಸ) ತಡೆದಿದ್ದರು. ಅಂದರೆ ಶಾರೀರಿಕವಾಗಿ ಮತ್ತು ಸಾಮಾಜಿಕವಾಗಿ ಅಂತರ ಕಾಯ್ದು ಕೊಳ್ಳಬೇಕು. ಎಲ್ಲಿಯವರೆಗೆಂದರೆ ಹುಲಿಯಿಂದ ದೂರ ಹೋಗುವಂತೆ ಭಯ ಪಟ್ಟು ದೂರ ಹೋಗಲು ಪ್ರವಾದಿ (ಸ) ಆದೇಶಿಸಿದ್ದು ನಮಗೆ ಹದೀಸಿನಲ್ಲಿ ಕಾಣ ಸಿಗುತ್ತದೆ. ಎಲ್ಲಿಯವರೆಗೆಂದರೆ ರೋಗ ಪೀಡಿತ ಪ್ರಾಣಿಯನ್ನು ಆರೋಗ್ಯವಂತ ಪ್ರಾಣಿಯ ಹತ್ತಿರ ಕೊಂಡು ಹೋಗಬಾರದು. ಯಾಕೆಂದರೆ ಅದರಿಂದ ವೈರಸ್ ಹರಡುವುದು …
Read More »ಪ್ರವಾದಿ ಮುಹಮ್ಮದ್ (ಸ) ಕಲಿಸಿದ ಶುಚಿತ್ವ ಮತ್ತು ಆಧುನಿಕ ವೈರಸ್
ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ ವಿಷಯಗಳಿವು. ಈ ವಿಷಯಗಳು ಮನುಷ್ಯನ ಪ್ರಕೃತಿಯಲ್ಲಿ ಇರಬೇಕು ಎಂದು ಅವರು ತಾಕೀತು ಮಾಡಿದ್ದರು. ಎಲ್ಲಾ ಪೂರ್ವ ಪ್ರವಾದಿಗಳೂ ಇದನ್ನು ಜನರಿಗೆ ಬೋಧಿಸಿದ್ದರು. ಆದ್ದರಿಂದ ಎಲ್ಲಾ ಧರ್ಮದಲ್ಲಿ ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಈ ಬೋಧನೆಗಳು ಕೋರೋನಾ ಮಾತ್ರವಲ್ಲ, ಎಲ್ಲಾ ಬಗೆಯ ವೈರಸ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಈ ಜೀವನದ ಶಿಷ್ಟಾಚಾರವನ್ನು ಪಾಲಿಸುವುದೇ ಧರ್ಮ ಆಗಿದೆ. 1. ಕಸ್ಸುಶ್ಶಾರಿಕ್ ಅಂದರೆ ನೇತಾಡುತ್ತಿರುವ ಮೀಸೆಗಳನ್ನು …
Read More »ಧಾರ್ಮಿಕ ಸೌಹಾರ್ದ ಮತ್ತು ಇಸ್ಲಾಂ ಧರ್ಮ ಭಾಗ – 8
ಒಬ್ಬ ವ್ಯಕ್ತಿ ತನ್ನ ಸ್ವಂತಕ್ಕೆ ಬಯಸುವುದನ್ನು ತನ್ನ ಸಹೋದರನಿಗೆ ಬಯಸುವವರೆ ಅವನು ಸತ್ಯವಿಶ್ವಾಸಿ ಆಗಲಾರ ಎಂದು ಪ್ರವಾದಿ ಮುಹಮ್ಮದ್ ಸ ರವರು ಹೇಳಿದ್ದಾರೆ. ಪ್ರಖ್ಯಾತ ಹದೀಸ್ ಪಂಡಿತರಾದ ಇಮಾಮ್ ನವವಿಯವರ ಪ್ರಕಾರ ಇದು ಕೇವಲ ಮುಸ್ಲಿಮರ ಬಗ್ಗೆ ಹೇಳಿದ್ದಲ್ಲ, ಬದಲಾಗಿ ತನ್ನ ಸುತ್ತಮುತ್ತ ಇರುವ ಸರ್ವ ಧರ್ಮೀಯರು ಇದರಲ್ಲಿ ಒಳಗೊಳ್ಳುತ್ತಾರೆ. ಅಂದರೆ ಮಾನವೀಯ ಸಂಬಂಧ ಎಲ್ಲರೊಂದಿಗೆ ಸಮಾನವಾಗಿರಬೇಕು. ಅವರ ಕಷ್ಟ ಸುಖಗಳಲ್ಲಿ ಸಹಾಯ ಸಹಕಾರ ನೀಡಬೇಕು. ಮಕ್ಕಾದ ಮುಷ್ರಿಕರು ಬರಗಾಲ …
Read More »ಕೊರೋನಾ ಸಂತ್ರಸ್ತರಿಗೆ ಹಗಲಿರುಳು ಚಿಕಿತ್ಸೆ ನೀಡುತ್ತಾ ಅದೇ ಸೋಂಕಿಗೆ ಬಲಿಯಾದ ಡಾ. ಶಿರೀನ್ ರೌಹಾನಿ
ಟೆಹ್ರಾನ್: ಇರಾನ್ ದೇಶದ ಶೊಹದ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಹಾಗೂ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿಸುತ್ತಿದ್ದ ಡಾ. ಶಿರೀನ್ ರೌಹಾನಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಅನಾರೋಗ್ಯಕ್ಕೀಡಾದ ಬಳಿಕ ಅವರನ್ನು ಟೆಹ್ರಾನ್ ನ ಮಸೀಹ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ನಿಧನರಾದರು. ಡ್ರಿಪ್ಸ್ ಪಡೆಯುತ್ತಿರುವಾಗಲೂ ಕುಳಿತುಕೊಂಡು ರೋಗಿಗಳ ಆರೈಕೆ ಮಾಡಿದ್ದಾರೆನ್ನಲಾದ ಡಾ. ರೌಹಾನಿಯವರ ಒಂದು ಫೋಟೋ ಕೂಡಾ ವೈರಲ್ ಆಗಿದೆ. ಇರಾನ್ ನಲ್ಲಿ ಕೊರೋನಾ ವೈರಸ್ ಮಿತಿಮೀರಿದಂದೆ …
Read More »ಇಸ್ಲಾಮೋಫೋಬಿಯಾ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಅನಸಿಬ್ನಿ ಮಾಲಿಕಿನ್ ರದಿಯಲ್ಲಾಹು ಅನ್ಹು ಕಾಲ; ಕಾಲ ರಸೂಲುಲ್ಲಾಹಿ(ಸ) ಯಅïತೀ ಅಲನ್ನಾಸಿ ಝಮಾನುನ್ ಅಸ್ಸಾಬಿರು ಫೀಹಿಮ್ ಅಲಾ ದೀನಿಹಿ ಕಲ್ಕಾಬಿದಿ ಅಲಲ್ ಜಮ್ರಿ. (ರವಾಹು ತಿರ್ಮಿದಿ) ಪ್ರವಾದಿಯವರು(ಸ) ಹೇಳಿದರು: ಜನರಿಗೆ ಒಂದು ಕಾಲ ಬರಲಿದೆ. ತನ್ನ ಧರ್ಮದಲ್ಲಿ ಓರ್ವರು ಸ್ಥಿರವಾಗಿ ನಿಲ್ಲುವುದು ಬೆಂಕಿಯ ಕೆಂಡವನ್ನು ಕೈಯಲ್ಲಿ ಹಿಡಿಯುವುದಕ್ಕೆ ಸಮಾನವಾಗಿರುತ್ತದೆ. ಈ ಹದೀಸ್ ಇಸ್ಲಾಮ್ ಧರ್ಮವನ್ನು ಅನುಸರಿಸಿ, ಅದರ ಮೌಲ್ಯಗಳನ್ನು ರೂಢಿಸಿ ಬದುಕಬೇಕೆಂದು ಬಯಸುವವರಿಗೆ ಈ …
Read More »ಭಯ ಆತಂಕ ಹೆಚ್ಚಾದಾಗ…
@ ಮುಹಮ್ಮದ್ ಯೂಸುಫ್ ಇಸ್ಲಾಹಿ ಮಾನವೀಯ ವಿರೋಧಿಗಳು ಕೊಲೆ, ಅತಿಕ್ರಮ ನಡೆಸಿ ಬೆದರಿಸುವಾಗ ಅಥವಾ ಪ್ರಕೃತಿ ದುರಂತಗಳು ನಮ್ಮನ್ನು ಭಯವಿಹ್ವಲಗೊಳಿಸುವಾಗ ನಮ್ಮ ವಿಶ್ವಾಸದ ಆಂತರಿಕ ದೃಷ್ಟಿಕೋನದೊಂದಿಗೆ ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಬೇಕು. ಬಳಿಕ ಕೆಲವು ಔಪಚಾರಿಕ ಯೋಜನೆಗಳಿಗಾಗಿ ಸಮಯ ವ್ಯಯಿಸುವ ಬದಲು ಪವಿತ್ರ ಕುರ್ಆನ್ ಮತ್ತು ಪ್ರವಾದಿ ಚರ್ಯೆಯು ನೀಡುವ ಮಾರ್ಗದರ್ಶನದೆಡೆಗೆ ನಮ್ಮ ಗಮನ ಕೇಂದ್ರೀಕರಿಸಬೇಕು. ಕುರ್ಆನ್ ಹೇಳುತ್ತದೆ: “ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ. ಅನೇಕ …
Read More »ನಿಂದ್ಯನಾದ ಫರೋವ
@ ಎಸ್ಸೆಮ್ಕೆ ಅನುವಾದ: ಸಲ್ಪಿತ ಪುರಾತನ ಕಾಲದಲ್ಲಿ ಈಜಿಪ್ಟ್ ಭಾರೀ ಪ್ರಸಿದ್ಧಿ ಪಡೆದ ದೇಶವಾಗಿತ್ತು. ಆ ದೇಶವನ್ನು ಆಳುತ್ತಿದ್ದ ರಾಜರನ್ನು`ಫರೋವ’ ಎಂದು ಕರೆಯುತ್ತಿದ್ದರು. ಈ ಫರೋವಗಳು ಸೂರ್ಯನ ಅವತಾರವೆಂದೂ, ಪ್ರತಿರೂಪವೆಂದೂ ಜನರು ನಂಬಿದ್ದರು. ಹಾಗೆಯೇ ವಿಶ್ವಾಸ ತಾಳುವಂತೆ ಈ ದೊರೆಗಳು ಮಾಡಿದ್ದರು. ಒತ್ತಾಯಿಸಿದ್ದರು. ಇಂತಹ ಓರ್ವ ಫರೋವನ ಕತೆ ಪವಿತ್ರ ಕುರ್ಆನ್ ವಿವರಿಸಿದೆ. ತೀವ್ರವಾದ ಕೋಮು, ಮತಾಂಧತೆ ಹೊಂದಿದ್ದ ಕೋಪ್ಟ್ ವಂಶಸ್ತರು ಈಜಿಪ್ಟ್ ನಲ್ಲಿ ಮೇಧಾವಿತ್ವ ಹೊಂದಿದ್ದರು. ಈ ದೇಶದ …
Read More »
IslamKannada News Portal