Home / ಲೇಖನಗಳು / ಪ್ರವಾದಿ ಮುಹಮ್ಮದ್ (ಸ) ಕಲಿಸಿದ ಶುಚಿತ್ವ ಮತ್ತು ಆಧುನಿಕ ವೈರಸ್

ಪ್ರವಾದಿ ಮುಹಮ್ಮದ್ (ಸ) ಕಲಿಸಿದ ಶುಚಿತ್ವ ಮತ್ತು ಆಧುನಿಕ ವೈರಸ್

ಆರನೇ ಶತಮಾನದಲ್ಲಿ ಪ್ರವಾದಿ ಮುಹಮ್ಮದ್ (ಸ) ರವರು ಹೇಳಿದ ವಿಷಯಗಳಿವು. ಈ ವಿಷಯಗಳು ಮನುಷ್ಯನ ಪ್ರಕೃತಿಯಲ್ಲಿ ಇರಬೇಕು ಎಂದು ಅವರು ತಾಕೀತು ಮಾಡಿದ್ದರು. ಎಲ್ಲಾ ಪೂರ್ವ ಪ್ರವಾದಿಗಳೂ ಇದನ್ನು ಜನರಿಗೆ ಬೋಧಿಸಿದ್ದರು.

ಆದ್ದರಿಂದ ಎಲ್ಲಾ ಧರ್ಮದಲ್ಲಿ ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ಈ ಬೋಧನೆಗಳು ಕೋರೋನಾ ಮಾತ್ರವಲ್ಲ, ಎಲ್ಲಾ ಬಗೆಯ ವೈರಸ್ ನಿಂದ ನಮ್ಮನ್ನು ರಕ್ಷಿಸುತ್ತದೆ. ಈ ಜೀವನದ ಶಿಷ್ಟಾಚಾರವನ್ನು ಪಾಲಿಸುವುದೇ ಧರ್ಮ ಆಗಿದೆ.

1. ಕಸ್ಸುಶ್ಶಾರಿಕ್ ಅಂದರೆ ನೇತಾಡುತ್ತಿರುವ ಮೀಸೆಗಳನ್ನು ಕತ್ತರಿಸಿ. (ಅದು ತುಟಿಯ ಕೆಳಗೆ ನೇತಾಡುವುದು ಪ್ರಕೃತಿಗೆ ವಿರೋಧವಾಗಿದೆ. ಅದರಿಂದ ವೈರಸ್ ದೇಹದೊಳಗೆ ಪ್ರವೇಶ ಮಾಡಬಹುದು)

2. ಮುಂಜಿ ಮಾಡುವುದು.

3. ಮಿಸ್ವಾಕ್ ಬಳಸುವುದು. (ಟಿಪ್ಪಣಿ: ಹಲ್ಲುಜ್ಜುವುದು. ಮಿಸ್ವಾಕ್ ಎಲ್ಲರೂ ಬಳಸುತ್ತಿದ್ದಂತಹ ವಸ್ತುವಾಗಿತ್ತು. ಮುಶ್ರಿಕರೂ ಅದನ್ನು ಬಳಸುತ್ತಿದ್ದು ಮತ್ತು ಬಾಯಿ ಶುಚಿಯಾಗಿಡಬೇಕು ಎಂಬುದು ಉದ್ದೇಶವಾಗಿದೆ.)

4. ಗಂಟಲು ಶುಚಿಗೊಳಿಸುವುದು ಅಥವಾ ನೀರನ್ನು ಗಂಟಲಿಗೆ ಹಾಕಿ ತೊಳೆಯುವುದು. -ಇಸ್ತಿಂಶಾಕುಲ್‍ಬಾ- (ವೈರಸ್ ತೊಂಡೆಯ ಮೂಲಕ ಶರೀರವನ್ನು ಪ್ರವೇಶ ಮಾಡುತ್ತದೆ)

5. ಉಗುರನ್ನು ಕತ್ತರಿಸುವುದು.

6. ಉಗುರಿನಲ್ಲಿರುವ ಜೋಡನೆಯ ಒಳಗಿರುವ ಕೊಳೆಯನ್ನು ಶುಚಿಗೊಳಿಸುವುದು.

7. ಕಂಕುಳ ಕೂದಲನ್ನು ತೆಗೆಯುವುದು.

8. ಮೂಗಿನ ಕೂದಲನ್ನು ಕತ್ತರಿಸುವುದು.

9. ಮೂತ್ರ ಶಂಕೆಯಲ್ಲಿ ನೀರನ್ನು ಶುದ್ಧಿಗಾಗಿ ಬಳಸುವುದು.

10. ಬಾಯಿ ಮುಕ್ಕಳಿಸುವುದು.

11. ರಾತ್ರಿ ನಿದ್ರೆಯಿಂದ ಎದ್ದ ಕೂಡಲೇ ಕೈಗಳನ್ನು ತೊಳೆಯದೆ ನೀರಿಗೆ ಕೈ ಹಾಕದಿರಿ. ಯಾಕೆಂದರೆ ನಿದ್ರೆಯಲ್ಲಿ ಕೈ ಎಲ್ಲೆಲ್ಲಾ ಹೋಗಿರಬಹುದು.

11. ಯಾವಾಗಲೂ ಅಂಗಸ್ನಾನ ಅಥವಾ ವುಝೂವಿನಲ್ಲಿರಬೇಕು. (ಟಿಪ್ಪಣಿ: ವಿಶೇಷವಾಗಿ ಹೊರಗಿನಿಂದ ಬಂದು ಮನೆಗೆ ಹೋದ ಬಳಿಕ ಇದು ಬಹಳ ಮುಖ್ಯ.)

12. ದೈಹಿಕ ಸಂಬಂಧ ಬೆಳೆಸಿದ ಬಳಿಕ ಕಡ್ಡಾಯ ಸ್ನಾನ ಮಾಡಬೇಕು.

13. ಸ್ವಪ್ನ ಸ್ಕಲನವಾದರೂ ಕಡ್ಡಾಯ ಸ್ನಾನ ಮಾಡಬೇಕು.

14. ನಿರ್ದಿಷ್ಟ ಪ್ರಾಣಿಗಳನ್ನು ಮುಟ್ಟಿದ (ವಿಶೇಷವಾಗಿ ನಾಯಿ ಜೊಳ್ಳು ತಾಗಿದರೆ) ಬಳಿಕ ಏಳು ಬಾರಿ ತೊಳೆಯಬೇಕು. ಕೊನೆಯ ಬಾರಿ ಮಣ್ಣಿನಿಂದ ಶುಚಿಗೊಳಿಸಬೇಕು.

15. ಸಾಧ್ಯವಾದರೆ ದಿನದ ಐದು ಬಾರಿ ನಮಾಝ್ ಮುಂಚೆ ಹಲ್ಲುಜ್ಜುವುದು.

16. ಸ್ನಾನ ಗೃಹದಲ್ಲಿ ಮೂತ್ರ ಮಾಡದಿರಿ.

17. ಶೌಚದ ಅಗತ್ಯ ಇರುವಾಗ ಊಟ ಮಾಡದೆ ಮೊದಲು ಅಗತ್ಯ ಪೂರೈಸಿ.

18. ಊಟ ತಿಂಡಿಗೆ ಬಲಗೈ ಬಳಸಿ. ಶೌಚ ಮತ್ತು ಮೂಗು ಶುಚಿಗೆ ಎಡಗೈ ಬಳಸಿ.

19. ಕುಳಿತು ಮೂತ್ರ ವಿಸರ್ಜನೆ ಮಾಡಿ. ಮೂತ್ರದ ಹನಿ ಹಾರದಂತೆ ಮೆತ್ತಗೆಯ ಸ್ಥಳದಲ್ಲಿ ಮೂತ್ರ ಮಾಡಿ.

20. ನದಿ, ಕಾಲುವೆ, ನೆರಳು ಇರುವ ಪರಿಸರ, ಸಾರ್ವಜನಿಕ ರಸ್ತೆಯಲ್ಲಿ ಮಲಮೂತ್ರ ಮಾಡದಿರಿ.

21. ಶೌಚಕ್ಕೆ ಹೋಗುವಾಗ ಪಾದರಕ್ಷೆ ಬಳಸಿ. ತಲೆಯನ್ನು ಮರೆಸಿ.

22. ಪಾದರಕ್ಷೆ ಧರಿಸುವಾಗ ಮತ್ತು ಹಾಸಿಗೆಗೆ ಹೋಗುವ ಮುಂಚೆ ವಿಷ ಜಂತುಗಳಿವೆಯೇ ಎಂದು ಪರಿಶೀಲನೆ ನಡೆಸಿ.

23. ಕೂದಲು ಕತ್ತರಿಸಿ. ತಲೆಗೆ ಎಣ್ಣೆ ಹಚ್ಚಿ. ಬಾಚಣಿಗೆಯಿಂದ ಕೂದಲನ್ನು ಸರಿಪಡಿಸಿ. ಕಣ್ಣಿಗೆ ಸುರ್ಮಾ ಹಚ್ಚಿ.

24. ಅಂಗಸ್ನಾನ ವುಝೂ ಸಣ್ಣ ಶುದ್ಧಿ. ಸ್ನಾನ ದೊಡ್ಡ ಶುದ್ಧಿ.

25. ಸೀನುವಾಗ ಜಾಗ್ರತೆ ವಹಿಸಿ. ಸೀನಿದ ಬಳಿಕ ದೇವರಿಗೆ ಕೃತಜ್ಞತೆ ಸಲ್ಲಿಸಿ. ಶುದ್ಧಿಯ ಬಳಿಕವೂ ದೇವರಿಗೆ ಕೃತಜ್ಞತೆ ಸಲ್ಲಿಸಿ.

26. ಶುಚಿತ್ವ ನಿಮ್ಮ ಈಮಾನ್ ಅಥವಾ ವಿಶ್ವಾಸದ ಅರ್ಧಾಂಶವಾಗಿದೆ.

27. ಆಹಾರ ಸೇವಿಸುವಾಗ ಶುದ್ಧ, ಹಲಾಲ್ ಅಥವಾ ಧರ್ಮ ಸಮ್ಮತ ಆಹಾರ ಮಾತ್ರ ಸೇವಿಸಿ

ಹೀಗೆ ನಾವು ಅಧ್ಯಯನ ಮಾಡಿದರೆ ನಮಗೆ ಇನ್ನೂ ಬಹಳಷ್ಟು ಸಿಗಬಹುದು. ದೊಡ್ಡ ಗ್ರಂಥವನ್ನೇ ಬರೆಯಬಹುದು.

ಧರ್ಮ ಎಂದರೆ ಈ ಜೀವನದ ಶಿಷ್ಟಾಚಾರವಾಗಿದೆ‌. ಧರ್ಮ ಎಂದರೆ ಜೀವನದ ಸಕಲ ರಂಗದಲ್ಲಿ ಪಾವನ ಪರಿಶುದ್ಧತೆಯನ್ನು ಕಾಪಾಡುವುದು.

ಕುರಾನ್ ಹೇಳುತ್ತದೆ,
ಕದ್ ಅಫ್ಲಹ ಮನ್ ಝಕ್ಕಾಹಾ ಯಾರು ತನ್ನ ಆತ್ಮವನ್ನು ಪರಿಶುದ್ಧವಾಗಿವಾಗಿಡುತ್ತಾನೋ ಅವನು ವಿಜಯಿಯಾದನು

*✒️ಅಬೂಕುತುಬ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …