Home / editor (page 91)

editor

ಮಹಿಳಾ ದಿನಾಚಾರಣೆ ಮತ್ತು ಮಹಿಳೆ

@ ನಝೀರ್ ಅಹ್ಮದ್ ಕಾಜಿ, ವಿಜಯಪುರ ಮಾರ್ಚ್ 8 ಬಂದರೆ ಸಾಕು ಮಹಿಳೆಯರಿಗೆ ಸನ್ಮಾನ, ಪುರಸ್ಕಾರದಂತಹ ಸಮಾರಂಭಗಳು ಜೋರಾಗಿಯೇ ನಡೆಯುತ್ತವೆ. ಇವತ್ತು ಜಗತ್ತಿನ ಪ್ರತಿಯೊಂದು ದೇಶದಲ್ಲಿ ಮಹಿಳಾ ದಿನಾಚರಣೆ ಬಹಳ ಹೆಮ್ಮೆಯಿಂದ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಆ ದಿನದ ಬಳಿಕ ಮತ್ತೆ ಯಥಾ ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ವಿಕೃತ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ನಾವು ಇವತ್ತು ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. …

Read More »

ಕುಟುಂಬ ಸಮಸ್ಯೆಗಳ ಪರಿಹಾರಕ್ಕೆ ಹತ್ತು ಸೂತ್ರಗಳು

@ ಜಾಸಿಮುಲ್ ಮುತವ್ವ. ದಾಂಪತ್ಯ ಮತ್ತು ಕುಟುಂಬ ಸಂಬಂಧದ ಸಮಸ್ಯೆಗಳ ಪರಿಹಾರದ ಸಂದರ್ಭದಲ್ಲಿ ಅನೇಕ ಬಾರಿ ಸಮಸ್ಯೆಗಳು  ಜಟಿಲವಾಗುತ್ತಾ ಹೋಗುವ ಸಂಭವ ಉಂಟಾಗುತ್ತದೆ. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರೀತಿ ಅವಲಂಭಿಸದ ಕಾರಣ  ಇದು ಸಂಭವಿಸುತ್ತದೆ. ಹೆಚ್ಚಿನ ಕುಟುಂಬಗಳು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ನಾನು ಹತ್ತು ವಿಚಾರಗಳನ್ನು  ಉಪದೇಶಿಸುತ್ತೇನೆ. 1. ತಕ್ಷಣದ ಪ್ರತಿಕ್ರಿಯೆ, ಹತೋಟಿ ಮೀರಿದ ಮಾತು ಮತ್ತು ಉದ್ರೇಕಕಾರೀ ಮನೋಭಾವ ಸಮಸ್ಯೆಯನ್ನು ಹೆಚ್ಚು  ಜಟಿಲಗೊಳಿಸುತ್ತದೆ. ಆದ್ದರಿಂದ ಸಮಸ್ಯೆಗಳು ಉಂಟಾದಾಗ ಮನಸ್ಸು …

Read More »

ಪ್ರತ್ಯೇಕಿಸುವ ತಲಾಕ್‍ನ ಬಗ್ಗೆ ಗೊತ್ತಿರುವ ಎಷ್ಟು ಮಂದಿಗೆ ಜೋಡಿಸುವ ಝಕಾತ್‍ನ ಬಗ್ಗೆ ಗೊತ್ತಿದೆ?

@ ಏ.ಕೆ. ಕುಕ್ಕಿಲ ಪವಿತ್ರ ಕುರ್‍ಆನಿನ 2ನೇ ಅಧ್ಯಾಯವಾದ ಅಲ್ ಬಕರದ 43, 110 ಮತ್ತು 277ನೇ ಸೂಕ್ತಗಳು; 19ನೇ ಅಧ್ಯಾಯವಾದ ಮರ್ಯಮ್‍ನ 31 ಮತ್ತು 55ನೇ ಸೂಕ್ತಗಳು; 21ನೇ ಅಧ್ಯಾಯವಾದ ಅಲ್ ಅಂಬಿಯಾದ 73ನೇ ಸೂಕ್ತ; 23ನೇ  ಅಧ್ಯಾಯವಾದ ಅಲ್ ಮೂಮಿನೂನ್‍ನ 4ನೇ ಸೂಕ್ತ; 27ನೇ ಅಧ್ಯಾಯವಾದ ಅನ್ನಮ್ಲ್ ನ 3ನೇ ಸೂಕ್ತ; 31ನೇ ಅಧ್ಯಾಯವಾದ ಲುಕ್ಮಾನ್‍ನ 7ನೇ ಸೂಕ್ತಗಳೆಲ್ಲ ನಮಾಝ್ ಮತ್ತು ಝಕಾತನ್ನು ಜೊತೆ ಜೊತೆಯಾಗಿಯೇ ಉಲ್ಲೇಖಿಸಿವೆ. …

Read More »

ಅಲ್ಲಾಹನೇ ವಾಗ್ವಾದಕ್ಕಿಳಿಯುವ 3 ವಿಭಾಗಗಳು

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬೀ ಹುರೈರತ(ರ) ಅನ್ಹು- ಅನಿನ್ನಬೀ(ಸ) ಕಾಲ: ಕಾಲಲ್ಲಾಹು ಅಝ್ಝವಜಲ್ಲ: ಸಲಾಸತುನ್ ಅನ ಖ್ವಸ್‍ಮುಹುಮ್ ಯೌಮಲ್ ಕಿಯಾಮತಿ, ರಜುಲುನ್ ಅಅïತ್ವಯೀಬೀ ಸುಮ್ಮ ಘ್ವದರ, ವರಜುಲುನ್ ಬಾಅ ಹುರ್ರನ್ ಫಕಲ ಸಮನಹು,  ವರಜುಲುನ್‍ಸ್‍ತಅïಜರ ಅಜೀರನ್ ಫಸ್ವವುಫ ಮಿನ್‍ಹು, ವಲಮ್ ಯುಅïತಿ ಅಜ್‍ರಹು (ರವಾಹುಲ್ ಬುಖಾರಿ). ಅಬೂ ಹುರೈರ(ರ)ರಿಂದ: ಪ್ರವಾದಿ(ಸ) ಹೇಳಿದರು: ಅಲ್ಲಾಹನು ಹೀಗೆ ಹೇಳಿದ್ದಾನೆ, “ಅಂತ್ಯ ದಿನದಲ್ಲಿ ನಾನು ಮೂರು ವ್ಯಕ್ತಿಗಳೊಂದಿಗೆ ವಾಗ್ವಾದಕ್ಕಿಳಿಯುತ್ತೇನೆ. ನನ್ನ ಹೆಸರಿನಲ್ಲಿ ಮಾತು …

Read More »

ಅತ್ತ್ಯುತ್ತಮವಾದುದನ್ನೇ ಬಯಸಬೇಕು

@ ಎಮ್ಮೆಸ್ಕೆ ನಾವು ಯಾವಾಗಲೂ ಅತ್ತ್ಯುತ್ತಮವಾದ ವಸ್ತುಗಳನ್ನೇ ಇಷ್ಟಪಡುತ್ತೇವೆ. ಅದು ಸುಂದರವಾಗಿರಬೇಕು. ಅದರಿಂದ ನಮಗೆ ಆನಂದವಾಗಬೇಕು. ಅದು ನಮಗೆ ಸಂತೃಪ್ತಿ ನೀಡಬೇಕು. ಅದನ್ನು ಉಪಯೋಗಿಸುವುದರಿಂದ ನಮಗೇನೂ ಹಾನಿಯುಂಟಾಗಬಾರದೆಂದು ಬಯಸುತ್ತೇವೆ. ಉದಾ: ನಾವು ಒಂದು ಹಣ್ಣನ್ನು ತಿನ್ನಬಯಸುವಾಗ ಅದು ಸಿಹಿಯಾಗಿರಬೇಕು. ಸುವಾಸನೆಯಿಂದ ಕೂಡಿರಬೇಕು. ನೋಡಲೂ ಅದು ಚಂದವಾಗಿರಬೇಕೆಂದು ಬಯಸುತ್ತೇವೆ. ಮಾವಿನ ಹಣ್ಣನ್ನು ತಿನ್ನ ಬಯಸುವುದಾದರೆ, ರಸಭರಿತ, ಸ್ವಾದಿಷ್ಟ ಮತ್ತು ಜೀರ್ಣಕ್ಕೆ ತೊಂದರೆಯಾಗದಂತಹ ಹಣ್ಣನ್ನು ಆಯ್ಕೆ ಮಾಡುತ್ತೇವೆ. ಅದು ನಮ್ಮ ಮನಸ್ಸಿಗೆ ತೃಪ್ತಿ …

Read More »

`ಅಮಾನತ್’ನ ಬಗ್ಗೆ ಜಾಗ್ರತೆಯಿರಲಿ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

ಅಶೀರುದ್ದೀನ್ ಆಲಿಯಾ, ಮಂಜನಾಡಿ “ನೀವು ಪ್ರಯಾಣದಲ್ಲಿದ್ದು ಕರಾರು ಪತ್ರವನ್ನು ಬರೆಯಿಸಲು ಬರವಣಿಗೆಗಾರರೂ ಸಿಗದಿದ್ದರೆ, ಅಡವು ಪಡೆದು ವ್ಯವಹಾರ ನಡೆಸಿಕೊಳ್ಳಿರಿ. ನೀವು ಪರಸ್ಪರ ವಿಶ್ವಾಸವಿರಿಸಿಕೊಂಡು ವ್ಯವಹಾರವನ್ನೇನಾದರೂ ನಡೆಸಿಕೊಂಡರೆ, ವಿಶ್ವಾಸವಿರಿಸಲ್ಪಟ್ಟಾತನು `ಅಮಾನತನ್ನು’ ಹಿಂದಿರುಗಿಸಬೇಕು ಮತ್ತು ತನ್ನ ಪಾಲಕ ಪ್ರಭುವಾದ ಅಲ್ಲಾಹನನ್ನು ಭಯಪಡಬೇಕು. ನೀವು ಸಾಕ್ಷ್ಯವನ್ನು ಅಡಗಿಸಬೇಡಿರಿ. ಸಾಕ್ಷ್ಯವನ್ನಡಗಿಸುವಾತನ ಹೃದಯವು ಪಾಪ ಕಲುಷಿತವಾಗಿದೆ ಮತ್ತು ಅಲ್ಲಾಹ್ ನಿಮ್ಮ ಕರ್ಮಗಳಿಂದ ಅಜ್ಞನಾಗಿಲ್ಲ.” (ಅಲ್‍ಬಕರ: 283) ಮಾನವರ ನಡುವೆಯಿರುವ ವ್ಯವಹಾರದಲ್ಲಿ `ಅಮಾನತ್’ ಅಥವಾ ವಿಶ್ವಾಸ, ನಂಬಿಕೆ, ಭರವಸೆ, …

Read More »

‘ಸಾಲವೂ ಒಂದು ದಾನ’ ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಅಶೀರುದ್ದೀನ್ ಆಲಿಯಾ, ಮಂಜನಾಡಿ “ನಿಮ್ಮ ಸಾಲಗಾರರು ಕಾಸಿಲ್ಲದವರಾದರೆ ಅವರಿಗೆ ಸುಸ್ಥಿತಿಯುಂಟಾಗುವ ತನಕ ಸಮಯಾವಕಾಶ ಕೊಡಿರಿ ಮತ್ತು ನೀವು ದಾನ ರೂಪದಲ್ಲಿ ಸಾಲವನ್ನೇ ಬಿಟ್ಟುಕೊಟ್ಟರೆ ಅದು ನಿಮ್ಮ ಮಟ್ಟಿಗೆ ಇನ್ನಷ್ಟು ಉತ್ತಮವಾಗಿರುವುದು ನೀವು ಅರಿತವರೇ  ಆಗಿದ್ದರೆ.” (ಅಲ್‍ಬಕರ 280) ಅರ್ಥ ವ್ಯವಸ್ಥೆಯಲ್ಲಿ ಸಾಲವೂ ಒಂದು ಘಟಕವಾಗಿದೆ. ಸಾಲ ಎಂದರೆ ಕಡ, ಋಣ, ಕ್ರೆಡಿಟ್. ಅರಬಿಕ್‍ನಲ್ಲಿ `ಕರ್‍ಝ್’ ಎಂದು ಕರೆಯುತ್ತೇವೆ. ಎರವಲು ಒಂದು ಬಗೆಯ ಸಾಲವಾಗಿದೆ. ಹಣದ ರೂಪದಲ್ಲಿ ವಸ್ತ್ರಗಳ ರೂಪದಲ್ಲಿ, …

Read More »

ಮಾನ್ವಿಯಲ್ಲಿ 5ನೇ ಬಾರಿಗೆ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ

ಜಮಾಅತೆ ಇಸ್ಲಾಮೀ ಹಿಂದ್ ಮಾನ್ವಿ ಮತ್ತು ಕುರ್ ಆನ್ ಪ್ರವಚನ ಸ್ವಾಗತ ಸಮಿತಿ ವತಿಯಿಂದ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ 5ನೇ ಬಾರಿಗೆ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ದಿನಾಂಕ 29/02/2020 ರಿಂದ 2/03/2020ರ ವರೆಗೆ TAPCMS ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ| ಮುಹಮ್ಮದ್ ಕುಂಞಯವರು ‘ಶಾಂತಿಯ ಮಾರ್ಗ’, ‘ಮಾನವ ಘನತೆ’ ಹಾಗೂ’ಬದುಕಿನ ವಾಸ್ತವಿಕತೆ’ ಎಂಬ ವಿಷಯಗಳಲ್ಲಿ ಪ್ರವಚನ ನೀಡಿದರು. …

Read More »

ಒಮ್ಮೆ ಅತ್ತು ಬಿಡೋಣ, ನಾವು ಅಳುವುದು ಯಾವಾಗ?

@ ಪಿ.ಎಂ.ಎ. ಗಫೂರ್ ಮನದಲ್ಲಿ ಕೆಲವು ನೆನಪುಗಳು ಮರುಕಳಿಸಿದಾಗ, ನೆನಪಿನ ಬಾಣಗಳು ಹೃದಯವನ್ನು ಚುಚ್ಚಿದಾಗ, ಗತ ಕಾಲದ ದುಃಖದ ನೆನಪಿನ ಪುಟಗಳನ್ನು ಮತ್ತೊಮ್ಮೆ ತೆರೆದು ನೋಡಿದಾಗ, ನಮ್ಮಿಂದ ಅಗಲಿದವರ ನೆನಪು ಮರುಕಳಿಸಿದಾಗ ಬದುಕಿನ ಅತ್ಯಂತ ನೊಂದ ಘಟನೆಗಳನ್ನು ಸ್ಮರಿಸುವಾಗ ಕಣ್ಣುಗಳು ನೀರಿನಿಂದ ತುಂಬುತ್ತವೆ. ಹಠಾತ್ತನೆ ಕಣ್ಣು ನೀರಿಂದ ತುಂಬಿ ತುಳುಕುವ ಕೆಲವರಿದ್ದಾರೆ. ಜೀವನದ  ಗತ ನೆನಪುಗಳು ಮರುಕಳಿಸಿದಾಗ ಅವರ ಕೆನ್ನೆಯ ಮೇಲೆ ನೀರು ಹರಿದಾಡುತ್ತದೆ. ಅಂತಹವರು ಶುದ್ಧ ಮನಸ್ಕರು. ಇನ್ನು …

Read More »

ದ್ವೇಷದ ಗೋಡೆಯನ್ನು ಕೆಡವಿ ಭ್ರಾತೃತ್ವದ ಭಾರತವನ್ನು ಕಟ್ಟೋಣ- ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಕರೆ

ಸಿದ್ದಾಪುರ : ಮಾ 5: ಜಮಾಅತೆ ಇಸ್ಲಾಮೀ ಹಿಂದ್ ಕಳೆದ ಏಳು ದಶಕಗಳಿಂದ ದೇವನ ದಾಸರೆಂಬ ನೆಲೆಯಲ್ಲಿ ಜಾತಿ- ಧರ್ಮಗಳ ಬೇಧವಿಲ್ಲದೆ ಭಾರತೀಯರನ್ನು ಒಂದುಗೂಡಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಮುಹಮ್ಮದ್ ಸಅದ್ ಬೆಳಗಾಮಿ ಹೇಳಿದ್ದಾರೆ. ಅವರು ಇಂದು ಸಿದ್ದಾಪುರದ ಎಂ.ಜಿ.ರಸ್ತೆಯ ಹಿರಾ ಸೆಂಟರ್ ಪ್ರಾಂಗಣದಲ್ಲಿ ಪೀಪಲ್ಸ್ ಫೌಂಡೇಶನ್ ಮತ್ತು ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ ಸಹಯೋಗದಲ್ಲಿ ಕಳೆದ ವರ್ಷದ ಪ್ರಕೃತಿ ವಿಕೋಪದಲ್ಲಿ …

Read More »