ಹೊಸದಿಲ್ಲಿ,ಮಾ.1: ಈಶಾನ್ಯ ದಿಲ್ಲಿಯ ನಿವಾಸಿ ಮುಶ್ತಾರಿ ಖಾತೂನ್, ತನ್ನ ಪತಿಯ ಆದಾಯಕ್ಕೆ ಪೂರಕವಾಗಿ ಹೊಲಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಡ ಮಹಿಳೆ. ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರ ಭುಗಿಲೆದ್ದಾಗ ಈ ದಿಟ್ಚ ಮಹಿಳೆ ತನ್ನ ಪ್ರಾಣದ ಹಂಗು ತೊರೆದು 40ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದಾರೆ. 42 ವರ್ಷ ವಯಸ್ಸಿನ ಖಾತೂನ್ ಮನೆ ಬಿಟ್ಟು ಹೋಗುವುದೇ ತುಂಬಾ ಕಡಿಮೆ. ಫೆಬ್ರವರಿ 25ರಂದು, ತನ್ನ ಬಂಧುಗಳಿರುವ ಖಾಜೂರಿ ಖಾಸ್ ಪ್ರದೇಶವನ್ನು ಗಲಭೆಕೋರರು ಸುತ್ತುವರಿದಾಗ …
Read More »ಸಿಖ್ಖರೊಂದಿಗಿನ ಸಹರಾಣ್ ಪುರ ಭೂ ವಿವಾದ ಕೊನೆಗೊಳಿಸಿದ ಮುಸ್ಲಿಮರು-ದೆಹಲಿ ಹಿಂಸಾಕಾಂಡದಲ್ಲಿ ಮಾಡಿದ ಉಪಕಾರಕ್ಕೆ ಪ್ರತಿಸ್ಪಂದನೆ
ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಸಹರಾಣ್ ಪುರದಲ್ಲಿ ಸಿಖ್ಖರು ಮತ್ತು ಮುಸ್ಲಿಮರ ನಡುವೆ ಹತ್ತು ವರ್ಷಗಳಿಂದ ಇದ್ದ ಭೂ ವಿವಾದ ಕೊನೆಗೊಂಡಿದೆ. ಸಹರಾಣ್ ಪುರ ರೈಲು ನಿಲ್ದಾಣದಿಂದ ಅನತಿ ದೂರದಲ್ಲಿರುವ ಗುರುದ್ವಾರಕ್ಕೆ ಹೊಂದಿಕೊಂಡಿರುವ ಜಮೀನಿಗೆ ಸಂಬಂಧಿಸಿದಂತೆ ಈ ವಿವಾದ ಹತ್ತು ವರ್ಷಗಳಿಂದ ನಡೆದುಬಂದಿತ್ತು. ಗುರುದ್ವಾರ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ ಗುರುದ್ವಾರ ಸಮಿತಿ ಜಮೀನು ಖರೀದಿಸಿತ್ತು. ಆ ಸ್ಥಳದಲ್ಲಿದ್ದ ಹಳೆಯ ಕಟ್ಟಡವನ್ನು ಧ್ವಂಸಗೊಳಿಸಲಾಯಿತು. ಇದರಲ್ಲಿ ಹಳೆಯ ಮಸೀದಿಯೊಂದಿತ್ತು ಎನ್ನಲಾಗಿದೆ. ಕೊನೆಗೆ ಈ …
Read More »ದಿಲ್ಲಿ ಹಿಂಸಾಚಾರ: ದ್ವಿಚಕ್ರ ವಾಹನದಲ್ಲಿ 80 ಮುಸ್ಲಿಮರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ ಮೊಹೀಂದರ್ ಸಿಂಗ್
ಹೊಸದಿಲ್ಲಿ: ಫೆಬ್ರವರಿ 24ರಂದು ಈಶಾನ್ಯ ದಿಲ್ಲಿಯ ಗೋಕಲ್ ಪುರಿಯಲ್ಲಿ ಭೀಕರ ಹಿಂಸಾಚಾರಕ್ಕೆ ಜನರು ತತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ತಮ್ಮ ಬುಲೆಟ್ ಮೋಟಾರ್ ಸೈಕಲ್ ಹಾಗೂ ಸ್ಕೂಟಿಯಲ್ಲಿ ಸುಮಾರು 60ರಿಂದ 80 ಮಂದಿ ನೆರೆಹೊರೆಯ ಮುಸ್ಲಿಮರನ್ನು ಸುರಕ್ಷಿತ ತಾಣಕ್ಕೆ ಕಳುಹಿಸಿ ಮಾನವೀಯತೆ ಮೆರೆದವರು ಮೊಹೀಂದರ್ ಸಿಂಗ್ ಹಾಗೂ ಅವರ ಪುತ್ರ ಇಂದರ್ ಜಿತ್ ಸಿಂಗ್. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಲಿದೆ ಎಂದು ಅರಿತ ಅಪ್ಪ-ಮಗ ತಮ್ಮ ನೆರೆಯ ಮುಸ್ಲಿಮರನ್ನು ಹತ್ತಿರದ ಕರ್ದಂಪುರಿ …
Read More »ದಿಲ್ಲಿ ಹಿಂಸಾಚಾರ ‘ಮುಸ್ಲಿಂ ಸೋದರರು ನನ್ನ ರಕ್ಷಣೆಗೆ ನಿಂತಿದ್ದಾರೆ’: ಹಿಂಸಾಚಾರದ ನಡುವೆ ನಡೆದ ತನ್ನ ವಿವಾಹದ ಬಗ್ಗೆ ಸಾವಿತ್ರಿ
ಹೊಸದಿಲ್ಲಿ: ಈಶಾನ್ಯ ದಿಲ್ಲಿಯ ಹಲವೆಡೆ ಮಂಗಳವಾರ ನಡೆದ ಭೀಕರ ಹಿಂಸಾಚಾರದಿಂದ ಆ ದಿನ ನಡೆಯಬೇಕಿದ್ದ 23 ವರ್ಷದ ಸಾವಿತ್ರಿ ಪ್ರಸಾದ್ ವಿವಾಹವನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಯಿತು. ತನ್ನ ಮನೆಯ ಹೊರಗೆ ನಡೆಯುತ್ತಿದ್ದ ಹಿಂಸಾಚಾರ ಘಟನೆಗಳಿಂದ ಕಂಗಾಲಾಗಿದ್ದ ಸಾವಿತ್ರಿ ಕಣ್ಣೀರು ಹರಿಸಿದ್ದರು. ಆಕೆಯ ನೆರೆಹೊರೆಯ ಮುಸ್ಲಿಮರು ತಾವಿದ್ದೇವೆ ಎಂದು ಧೈರ್ಯ ತುಂಬಿದ ಕಾರಣ ಆಕೆಯ ತಂದೆ ವಿವಾಹವನ್ನು ಮರುದಿನಕ್ಕೆ ನಿಗದಿಪಡಿಸಿದ್ದರು. “ನನ್ನ ಮುಸ್ಲಿಂ ಸೋದರರು ಇಂದು ನನ್ನ ರಕ್ಷಣೆಗೆ ನಿಂತಿದ್ದಾರೆ” ಎಂದು …
Read More »ಮಂದಿರ ರಕ್ಷಿಸಿದ ಮುಸಲ್ಮಾನರು, ಮಸೀದಿಗೆ ಕಾವಲು ನಿಂತ ಹಿಂದೂಗಳು ; ದ್ವೇಷದ ಮೇಲೆ ಪ್ರೀತಿಗೆ ಜಯ
ನವದೆಹಲಿ: ಪೌರತ್ವ ಮಸೂದೆ ಪರ-ವಿರೋಧ ಗುಂಪುಗಳ ನಡುವೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ್ದ ಗಲಭೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕಳೆದ 4 ದಿನಗಳ ಕಾಲ ಘಟಿಸಿದ್ದ ಹಿಂಸಾಚಾರ ನಾಗರಿಕರ ದೃತಿಗೆಡಿಸಿದ್ದು, ಹಲವು ಕುಟುಂಬಗಳು ತಮ್ಮ ಲಗ್ಗೇಜು ಸಹಿತ ಪ್ರದೇಶ ತೊರೆಯುತ್ತಿರುವ ಸನ್ನಿವೇಶ ಕಂಡು ಬಂದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಶೇಷವೆಂದರೆ ಬುಧವಾರ ರಾತ್ರಿಯಿಂದ ಯಾವುದೇ ಹೊಸ ಗಲಭೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ದೆಹಲಿಯ …
Read More »ಮನುಷ್ಯರೆಲ್ಲರೂ ಒಂದೇ ತಂದೆ- ತಾಯಿಯ ಮಕ್ಕಳು: ಸಾರ್ವಜನಿಕ ಕುರ್ ಆನ್ ಪ್ರವಚನದಲ್ಲಿ ಮುಹಮ್ಮದ್ ಕುಂಞಿ
ಉಳ್ಳಾಲ: ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಡಾ| ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ‘ಮಾನವ ಏಕತೆ ಮತ್ತು ಘನತೆ’ ಎಂಬ ವಿಷಯದಲ್ಲಿ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ ಕಾರ್ಯಕ್ರಮ ಜರಗಿತು. ಮುಖ್ಯ ಪ್ರವಚನಕಾರರಾಗಿ ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬರಾದ ಮುಹಮ್ಮದ್ ಕುಂಞಿ ಯವರು- ಮನುಷ್ಯನು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನು ತನ್ನನ್ನು ಪೋಷಿಸಿ ಬೆಳೆಸಿದ ಮಾತಾಪಿತರನ್ನು ಆರೈಕೆ ಮಾಡುತ್ತಿಲ್ಲ. ಅವರನ್ನು ವೃದ್ಧಾಶ್ರಮಕ್ಕೆ …
Read More »ರಜಬ್: ನಮಾಝ್ ಸ್ಪಷ್ಟಪಡಿಸಲಾದ ತಿಂಗಳು
@ ಅಬೂ ಸಲ್ವಾನ್ ಇಂದು ಮುಸ್ಲಿಮ್ ಸಮಾಜದಲ್ಲಿ ರಜಬ್ ತಿಂಗಳಿಗೆ ಹೆಚ್ಚು ಮಹತ್ವ ನೀಡುವುದು ಕಂಡು ಬರುತ್ತದೆ. ಸಾಮಾನ್ಯವಾಗಿ ಕೆಲ ಮುಸ್ಲಿಮರು ಹೊಸ ಮನೆಯ ಗೃಹ ಪ್ರವೇಶ, ವಿವಾಹ ಮುಂತಾದ ಶುಭ ಸಮಾರಂಭಗಳನ್ನು ನಡೆಸಲು ಈ ತಿಂಗಳನ್ನೇ ಕಾಯುವವರಿದ್ದಾರೆ. ಆದರೆ ಇವೆಲ್ಲ ಯಾರೋ ಮಾಡಿದ್ದ ಸಂಪ್ರದಾಯವನ್ನು ನಮ್ಮ ಮೇಲೆ ನಾವೇ ಹೇರಿದ್ದಾಗಿದೆಯೇ ಹೊರತು ಇಸ್ಲಾಮಿನಲ್ಲಿ ಈ ಬಗ್ಗೆ ಯಾವುದೇ ಆಧಾರ ಪುರಾವೆ ಕಂಡು ಬರದು. ಇತಿಹಾಸದಲ್ಲಿ ಈ ಮಾಸಕ್ಕೆ ಗೌರವವಿದೆ. ಇತಿಹಾಸದ ಅಧ್ಯಯನದ ಮೂಲಕ …
Read More »ಕುರ್ಆನಿನ ಸಾಮಾಜಿಕ ಚಿಂತನೆಗಳು – ಮಾದಕ ವ್ಯಸನ: ಒಂದು ಸಾಮಾಜಿಕ ಪಿಡುಗು
@ ಅಶೀರುದ್ದೀನ್ ಆಲಿಯಾ ಮಂಜನಾಡಿ “ಮದ್ಯಪಾನ ಮತ್ತು ಜೂಜಾಟದ ಬಗ್ಗೆ ಏನು ಆದೇಶವಿದೆಯೆಂದು ಕೇಳುತ್ತಾರೆ. ಹೇಳಿರಿ! ಅವೆರಡರಲ್ಲೂ ಮಹತ್ತರವಾದ ಕೇಡಿದೆ. ಅವುಗಳಲ್ಲಿ ಜನರಿಗೆ ಕೆಲವು ಪ್ರಯೋಜನಗಳು ಇದ್ದರೂ ಅವುಗಳಿಂದಾಗುವ ಹಾನಿಯು ಪ್ರಯೋಜನಗಳಿಗಿಂತ ಬಹಳಷ್ಟು ಹೆಚ್ಚು. ನಾವು ದೇವ ಮಾರ್ಗದಲ್ಲಿ ಏನನ್ನು ಖರ್ಚು ಮಾಡಬೇಕೆಂದು ಕೇಳುತ್ತಾರೆ. ನಿಮ್ಮ ಆವಶ್ಯಕತೆಗಿಂತ ಮಿಕ್ಕಿರುವುದನ್ನು ಎಂದು ಹೇಳಿರಿ.” (ಅಲ್ ಬಕರ: 219) ಮದ್ಯಪಾನ ಅಥವಾ ಮಾದಕ ವ್ಯಸನಗಳಿಗೆ ತುತ್ತಾಗುವುದರಿಂದ ಮಾನವನು ಸಮಾಜದಲ್ಲಿ ಎಲ್ಲ ರೀತಿಯ ಅಗೌರವ …
Read More »ದಿಲ್ಲಿ ಹಿಂಸಾಚಾರ: ಹೊತ್ತಿ ಉರಿಯುತ್ತಿದ್ದ ನೆರೆಮನೆಯಿಂದ ಪ್ರಾಣ ಒತ್ತೆ ಇಟ್ಟು 6 ಜನರನ್ನು ರಕ್ಷಿಸಿದ ಪ್ರೇಮಕಾಂತ್; ಈಗ ಸಾವು ಬದುಕಿನ ಹೋರಾಟದಲ್ಲಿ
ಹೊಸದಿಲ್ಲಿ: ಹಿಂಸಾಚಾರದಿಂದ ನಲುಗಿರುವ ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತೆ ಶಾಂತಸ್ಥಿತಿಗೆ ಮರಳುತ್ತಿದೆ. ರವಿವಾರದಿಂದ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸೌಹಾರ್ದದಿಂದಿದ್ದ ರಾಜಧಾನಿ ಇದ್ದಕ್ಕಿದ್ದಂತೆ ಕೋಮು ಹಿಂಸಾಚಾರವನ್ನು ಎದುರಿಸಿದ್ದು, ನೂರಾರು ಮನೆಗಳು, ವಾಹನಗಳು, ಮಸೀದಿ, ದರ್ಗಾಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಈ ಎಲ್ಲಾ ಕೋಮು ಹಿಂಸೆಯ ಘಟನೆಗಳ ನಡುವೆ ದಿಲ್ಲಿಯು ಹಲವು ಸೌಹಾರ್ದದ ಸನ್ನಿವೇಶಗಳಿಗೂ ಸಾಕ್ಷಿಯಾಗಿದೆ. ಹಿಂಸಾಚಾರಕ್ಕೆ ಬೆದರಿ ಮನೆಗಳಿಂದ ಪರಾರಿಯಾದ …
Read More »ಈಶಾನ್ಯ ದಿಲ್ಲಿ: ಎಲ್ಲವನ್ನೂ ಕಳೆದುಕೊಂಡ 40 ಮುಸ್ಲಿಂ ಕುಟುಂಬಗಳಿಗೆ ಆಶ್ರಯ ನೀಡಿದ ಹಿಂದೂಗಳು
ಹೊಸದಿಲ್ಲಿ: ಮೂರು ದಿನಗಳಿಂದ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾದ ಈಶಾನ್ಯ ದಿಲ್ಲಿಯ ಅಶೋಕ್ ನಗರ್ ಪ್ರದೇಶದಲ್ಲಿ ತಮ್ಮ ಮನೆಮಠ ಕಳೆದುಕೊಂಡ ಸುಮಾರು 40 ಮುಸ್ಲಿಂ ಕುಟುಂಬಗಳು ತಮ್ಮ ಹಿಂದು ನೆರೆಹೊರೆಯವರ ಮನೆಗಳಲ್ಲಿ ಆಶ್ರಯ ಪಡೆದಿವೆ. ಉದ್ರಿಕ್ತ ಗುಂಪೊಂದು ಈ ಪ್ರದೇಶದಲ್ಲಿನ ಹಲವು ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿಯಿಕ್ಕಿದಾಗ ಸಂತ್ರಸ್ತರಿಗೆ ಅವರ ನೆರೆಹೊರೆಯವರೇ ಆಶ್ರಯದಾತರಾಗಿ ಮಾನವೀಯತೆ ಮೆರೆದರು. ಸುಮಾರು 1000 ಮಂದಿಯಿದ್ದ ಗುಂಪು ಬಡೀ ಮಸ್ಜಿದ್ ಸಮೀಪದ ಈ ಕಾಲನಿಗೆ ಮಂಗಳವಾರ ಅಪರಾಹ್ನ …
Read More »
IslamKannada News Portal