ಹೊಸದಿಲ್ಲಿ, ಫೆ.26: ಪೌರತ್ವ ತಿದ್ದುಪಡಿ ಕಾಯ್ದೆ ವಿಷಯದಲ್ಲಿ ಮಂಗಳವಾರ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದ ಕೋಮು ಹಿಂಸೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಸ್ಥಳೀಯರು, ಕಳೆದ 34 ವರ್ಷಗಳಿಂದ ಈ ರೀತಿಯ ಕೋಮು ಉನ್ಮಾದದ ಪರಿಸ್ಥಿತಿಯನ್ನು ತಾವು ಕಂಡಿಲ್ಲ ಎಂದಿದ್ದಾರೆ. ಹಲವು ವರ್ಷಗಳಿಂದ ಇಲ್ಲಿ ಹಿಂದು-ಮುಸ್ಲಿಮರು ಒಗ್ಗಟ್ಟಿನಿಂದ ಶಾಂತ ರೀತಿಯಲ್ಲಿ ಬದುಕುತ್ತಿದ್ದಾರೆ. ಈ ರೀತಿಯ ಹಿಂಸಾಚಾರ ಇಲ್ಲಿಗೆ ಹೊಸತಾಗಿದೆ. ಆದ್ದರಿಂದ ಹಿಂದು ಮುಸ್ಲಿಮರು ಜತೆಗೂಡಿ ಕೋಮುಶಕ್ತಿಗಳನ್ನು ಸೋಲಿಸಲು ಸಂಕಲ್ಪ ಮಾಡಿದ್ದೇವೆ ಎಂದು …
Read More »ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಯಾರು ಉಪಕಾರಿ?
@ ಡಾ| ಜಾಸಿಮುಲ್ ಮುತವ್ವ ಮಾತಾಪಿತರಿಗೆ ಅತ್ಯಂತ ಹೆಚ್ಚು ಒಳಿತು ಮಾಡುವವರು ಯಾರು? ಗಂಡು ಮಕ್ಕಳೋ ಅಥವಾ ಹೆಣ್ಣು ಮಕ್ಕಳೋ? ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಮೂರು ರೀತಿಯ ಉತ್ತರ ಕೇಳಿ ಬರುತ್ತದೆ. ಒಂದನೆಯ ಉತ್ತರ: ಹೆಣ್ಣು ಮಕ್ಕಳು. ಏಕೆಂದರೆ ಹುಡುಗರಿಗಿಂತ ಹೆಣ್ಮಕ್ಕಳಿಗೆ ಹೆಚ್ಚಿನ ವಾತ್ಸಲ್ಯ, ಪ್ರೀತಿ, ಅನುಕಂಪವಿರುತ್ತದೆ. ಗಂಡು ಮಕ್ಕಳಿಗೆ ಅವರದೇ ಆದ ಕೆಲಸದ ಒತ್ತಡದಲ್ಲಿರುತ್ತಾರೆ. ಎರಡನೇಯ ಉತ್ತರ: ಗಂಡು ಮಕ್ಕಳು, ಅವರಿಗೆ ಹೆತ್ತವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸಲು …
Read More »ಉದ್ರಿಕ್ತ ಜನ ಸಮೂಹದಿಂದ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಬಿಜೆಪಿ ಕೌನ್ಸಿಲರ್
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ದೆಹಲಿಯ ಅನೇಕ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮುಂದುವರೆದಿದ್ದು, ಬಿಜೆಪಿ ಪಕ್ಷದ ಕೌನ್ಸಿಲರ್ ರೊಬ್ಬರು ಉದ್ರಿಕ್ತ ಜನ ಸಮೂಹದಿಂದ ಮುಸ್ಲಿಂ ಕುಟುಂಬವನ್ನು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ. ದೆಹಲಿಯ ಯಮುನಾ ವಿಹಾರ್ನ ಬಿಜೆಪಿ ವಾರ್ಡ್ ಕೌನ್ಸಿಲರ್ ಪ್ರಮೋದ್ ಗುಪ್ತಾ ಅವರು ಶಾಹಿದ್ ಸಿದ್ದಿಕಿಯವರ ಕುಟುಂಬದ ನೆರವಿಗೆ ಬಂದು ಸುಮಾರು 150 ಹಿಂಸಾತ್ಮಕ ಜನರಿಂದ ಅವರನ್ನು ರಕ್ಷಿಸಿದ್ದು ಮಾತ್ರವಲ್ಲ ಅವರ ಮನೆಯನ್ನು ಬೆಂಕಿಯಿಂದಲೂ ರಕ್ಷಿಸಿದರು. ಈಶಾನ್ಯ …
Read More »ಏಡ್ಸ್ ರೋಗಕ್ಕೆ ಇಸ್ಲಾಮೀ ಪರಿಹಾರ
ಪ್ರಶ್ನೆ: ಏಡ್ಸ್ ನಂತಹ ಮಾರಕ ರೋಗಗಳ ತಡೆಗೆ ಇಸ್ಲಾಮ್ ಸೂಚಿಸಿರುವ ಮಾಗೋಪಾಯಗಳೇನು? ಈಗ ಅದಕ್ಕೆ ಕೊರೊನಾ ಕೂಡಾ ಸೇರ್ಪಡೆಯಾಗಿದೆ? ಉತ್ತರ: ಏಡ್ಸ್, ನಿಫಾ, ಕೊರೊನಾ ಇವೆಲ್ಲಾ ಮಾರಕ ರೋಗಗಳಾಗಿವೆ. ವಿವಿಧ ಕಾರಣಗಳಿಂದಾಗಿ ಈ ರೋಗಗಳು ಮನುಷ್ಯ ಸಮಾಜದಲ್ಲಿ ವ್ಯಾಪಿಸುತ್ತದೆ. ಎಲ್ಲ ರೋಗಗಳಿಗೂ ಚಿಕಿತ್ಸೆಯಿದೆ. ಆದರೆ ರೋಗ ಬಾಧಿಸಿದಾಗ ಅದಕ್ಕೆ ಚಿಕಿತ್ಸೆ ಮಾಡುವುದಕ್ಕಿಂತ ರೋಗಬಾರದಂತೆ ಮುಂಜಾಗ್ರತೆ ವಹಿಸುವುದೇ ಅದಕ್ಕಿರುವ ಮಾರ್ಗವಾಗಿದೆ. ಇಸ್ಲಾಮ್ ಈ ವಿಧಾನವನ್ನೇ ಸೂಚಿಸಿದೆ. ಉದಾಹರಣೆಗೆ, ಒಂದು ಹದೀಸ್ನ ಪ್ರಕಾರ …
Read More »ಹಿಂಸಾಚಾರದ ಮಧ್ಯೆ ‘ಹಿಂದೂ ಮುಸ್ಲಿಂ ಒಂದು’ ಎನ್ನುತ್ತಾ ಬೀದಿಗಿಳಿದ ದೆಹಲಿ ಜನತೆ ; ವಿಡಿಯೋ ವೈರಲ್
ದೆಹಲಿಯಲ್ಲಿ ಸಿಎಎ ವಿರುದ್ಧದ ಹಿಂಸಾಚಾರದ ಮಧ್ಯೆ, ಒಂದು ಆಹ್ಲಾದಕರ ವಿಡಿಯೋ ವೈರಲ್ ಆಗುತ್ತಿದೆ, ಇದರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬೀದಿಗಿಳಿದು ನಾವೆಲ್ಲಾ ಒಂದು ನಾವು ನಮ್ಮ ಕಾಲೋನಿಯ ವಾತಾವರಣ ಬಿಡಲ್ಲ, ನಾವೆಲ್ಲಾ ಒಂದು ಎಂದು ಘೋಷಣೆಗಳನ್ನು ಹಾಕುತ್ತಾರೆ. ಈ ಮೂಲಕ ಅಲ್ಲಿನ ಸ್ಥಳೀಯರು ಹಿಂದೂ-ಮುಸ್ಲಿಂ ಐಕ್ಯತೆಗೆ ಒಂದು ಉದಾಹರಣೆಯನ್ನು ಪ್ರಸ್ತುತ ಪಡಿಸಿದರು. ದೆಹಲಿಯಲ್ಲಿ ಮೂರು ದಿನಗಳಿಂದ ನಿರಂತರ ಹಿಂಸಾಚಾರ ನಡೆಯುತ್ತಿದ್ದು, ಇದರಲ್ಲಿ ಪೊಲೀಸ್ ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. …
Read More »ಮಂದಿರ ಮಸೀದಿಗಳ ಧ್ವನಿವರ್ಧಕ ಬಳಸಿ ಶಾಂತಿ ಸಮಿತಿ ರಚಿಸಿ ಗಲಭೆ ನಿಲ್ಲಿಸಿ ; ಸಿಎಂ ಕೇಜ್ರಿವಾಲ್
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪೌರತ್ವ ಶಾಸನದ ಪರ ವಿರೋಧಿ ಘರ್ಷಣೆ ಎರಡನೇ ದಿನವೂ ಮುಂದುವರಿದಿದ್ದು ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಯ ವೇಳೆಯಲ್ಲೇ ಕೆಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಪರಸ್ಪರ ಕಲ್ಲು ತೂರಾಟ ನಡೆದಿದ್ದು, ವಾಹನಗಳು, ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಭೆಗೆ ಓರ್ವ ಮುಖ್ಯ ಪೇದೆ, ಪತ್ರಕರ್ತ ಬಲಿಯಾಗಿದ್ದು ಡಿಸಿಪಿಯೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾತ್ರವಲ್ಲ ಹಲವೆಡೆ ಬೀದಿ ಕಾಳಗದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ …
Read More »ಸುಸ್ಧಿರ ಅಭಿವೃದ್ಧಿಗೆ ಇಸ್ಲಾಮಿಕ್ ಮೈಕ್ರೋಫೈನಾನ್ಸ್
@ ಡಾ| ಮುಹಮ್ಮದ್ ಪಾಲತ್ ಅಭಿವೃದ್ಧಿಯೆಂಬುದು ಎಲ್ಲರ ಗುರಿಯಾಗಿದೆ. ಅದು ಅಪೇಕ್ಷಣೀಯವೂ ಹೌದು. ಸಾಮಾನ್ಯವಾಗಿ ಸಾಮಾಜಿಕ, ಆರ್ಥಿಕ ರಂಗಗಳಲ್ಲಿನ ವಿಕಸನವನ್ನು ಅಭಿವೃದ್ಧಿ ಎಂದು ಹೇಳಲಾಗುತ್ತದೆ. ಬಡತನ ಕಡಿಮೆಯಾಗುವುದು, ಸಾಮಾಜಿಕ ಒಂಟಿತನ ದೂರಗೊಳಿಸುವುದು, ಸಾರ್ವಜನಿಕ ಸೌಕರ್ಯಗಳಲ್ಲಿ ಹೆಚ್ಚಳವುಂಟಾಗುವುದು, ಹೀಗೆ ಜನರ ಜೀವನದಲ್ಲಿ ಉತ್ತಮ ಮಾರ್ಪಾಟುಂಟಾಗುವುದು. ಇವು ಅಭಿವೃದ್ಧಿಯಿಂದ ಉಂಟಾಗುವ ಬದಲಾವಣೆಗಳು. ಈ ಅಭಿವೃದ್ಧಿಯನ್ನು ಹೇಗೆ ಅಳೆಯಬಹುದು ಎಂಬ ಪ್ರಶ್ನೆಗೆ ಅರ್ಥಶಾಸ್ತ್ರದ ಉತ್ತರ ಹೀಗಿದೆ, ಪ್ರತಿಯೊಬ್ಬ ವ್ಯಕ್ತಿಯ ವರಮಾನದಲ್ಲಿ ಹೆಚ್ಚಳವಾಗುವುದು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ವ್ಯಕ್ತಿಯ ವರಮಾನವನ್ನು ಅಭಿವೃದ್ಧಿಯ ಸೂಚಕವಾಗಿ …
Read More »ಹಿಂದೂ-ಮುಸ್ಲಿಂ ನವದಂಪತಿಗಳ ಸಾಮೂಹಿಕ ವಿವಾಹದ ಮೂಲಕ ಧರ್ಮಗಳ ನಡುವಿನ ಭಾವೈಕ್ಯತೆ ಸಾಕ್ಷಿಯಾದ ಬೆಳಗಾವಿಯ ಮದರಸಾ
ಬೆಳಗಾವಿ, ಫೆ.21: ರಾಜ್ಯದಲ್ಲಿ ಇದೇ ಮೊದಲ ಬಾರಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ಬಳಿ ಇರುವ ಮದರಸಾ ಎ ಅರಬಿಯಾ ಅನ್ವಾರುಲ್ ಉಲೂಮದಲ್ಲಿ 101 ಹಿಂದೂ-ಮುಸ್ಲಿಂ ನವದಂಪತಿಗಳ ಸಾಮೂಹಿಕ ವಿವಾಹ ಜರುಗಿತು. ಮದರಸಾ ಎ ಅರಬಿಯಾ ಅನ್ವಾರುಲ್ ಉಲೂಮದಲ್ಲಿ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡ ನವ ಜೋಡಿಗಳಿಗೆ ಉಡುಗೊರೆಯಾಗಿ ಪಾತ್ರೆ, ತಿಜೋರಿ, ಫ್ರಿಡ್ಜ್, ಹೊಲಿಗೆ ಯಂತ್ರ, ಚೇರ್ಗಳು, ಗಾದಿಯನ್ನು ನೀಡಲಾಯ್ತು. ಈ ಎಲ್ಲ ಸಾಮಗ್ರಿಗಳ ಜತೆಗೆ ಕೊನೆಯಲ್ಲಿ ನವದಂಪತಿಗಳಿಗೆ ಕುರ್ಆನ್ …
Read More »ಏಡ್ಸ್ ಪೀಡಿತ ಮಕ್ಕಳನ್ನು ತಾಯಿಯಂತೆ ಆರೈಕೆ ಮಾಡುತ್ತಿರುವ ತಬಸ್ಸುಮ್ – ಮಂಗಳೂರು ಪ್ರೆಸ್ ಕ್ಲಬ್ನ ವರ್ಷದ ಪ್ರಶಸ್ತಿಗೆ ಆಯ್ಕೆ
ಮಂಗಳೂರು: ಎಚ್ಐವಿ/ಏಡ್ಸ್ ಪೀಡಿತ ಮಕ್ಕಳನ್ನು ತಾಯಿಯಂತೆ ಸಲಹುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ತಬಸ್ಸುಮ್ ಅವರು ಮಂಗಳೂರು ಪ್ರೆಸ್ ಕ್ಲಬ್ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರೊ. ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್ ಪೆರ್ಲ, ಡಾ.ನಾಗವೇಣಿ ಮಂಚಿ ನೇತೃತ್ವದ ಆಯ್ಕೆ ಸಮಿತಿಯು 2019ನೇ ವರ್ಷದ ಮಂಗಳೂರು ಪ್ರೆಸ್ ಕ್ಲಬ್ನ ಪ್ರಶಸ್ತಿಗೆ ಕೊಣಾಜೆ ಸಮೀಪದ ತಬಸ್ಸುಮ್ ಅವರನ್ನು ಆಯ್ಕೆ ಮಾಡಿದೆ. ಫೆ. 29ರಂದು ಪ್ರಶಸ್ತಿ ಪ್ರದಾನ ಫೆ.29ರಂದು ಉರ್ವ ರಾಧಾಕೃಷ್ಣ ಮಂದಿರದ ಸಭಾಂಗಣದಲ್ಲಿ …
Read More »ಹಿಂದೂ ಮಗಳ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಮುಸ್ಲಿಮ್ ದಂಪತಿ
ಕಾಸರಗೋಡು : 10ನೇ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ಬಡ ಹೆಣ್ಣು ಮಗಳನ್ನು ಅಬ್ದುಲ್ಲಾ ಹಾಗೂ ಖದೀಜ ದಂಪತಿಗಳು ಸ್ವಂತ ಮಗಳಂತೆ ಸಾಕಿ ಬೆಳೆಸಿ ಇಂದು 22 ವರ್ಷ ಪೂರ್ತಿಯಾದ ಆ ಯುವತಿಯನ್ನು ಹಿಂದೂ ಧರ್ಮದ ಸಾಂಪ್ರದಾಯಿಕ ರೀತಿಯಲ್ಲಿಯೇ ಹಿಂದೂ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಕರ್ನಾಟಕ ಕೇರಳ ರಾಜ್ಯದ ಗಡಿ ಕಾಸರಗೋಡು ಜಿಲ್ಲೆಯಲ್ಲಿ ಈ ಸೌಹಾರ್ದ ಮಾನವೀಯ ಘಟನೆ ನಡೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ರಾಜಶ್ರೀಯ 10 ನೇ ವಯಸ್ಸಿನಲ್ಲಿ ಅವಳ …
Read More »
IslamKannada News Portal