@ ಡಾ| ಬದೀವುಝ್ಝಮಾನ್ ವ್ಯಕ್ತಿ ಮತ್ತು ಸಮೂಹ ಎಂಬ ನೆಲೆಯಲ್ಲಿ ವಿಶ್ವಾಸದಾಢ್ರ್ಯ ಮತ್ತು ಕಾರ್ಯತತ್ಪರತೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಜೀವನವನ್ನು ನಿಯಂತ್ರಿಸುವ ಮೌಲ್ಯಗಳ ಸ್ವಾಧೀನವನ್ನು ಮುಸ್ಲಿಮರ ಜೀವನದಲ್ಲಿ ಕಾಣಬಹುದು. ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಏಕತೆ, ವಿಧಿ ವಿಶ್ವಾಸಿಗಳನ್ನು ಆಧಾರವಾಗಿಸಿ ಒಂದು ನಗರ ಕೇಂದ್ರೀಕೃತ ಸಾಮೂಹಿಕ ಜೀವನವನ್ನು ಮುಸ್ಲಿಮರು ಸಾಗಿಸುತ್ತಾರೆ. ಮಸೀದಿಗಳು, ಅದರಲ್ಲಿ ನಡೆಯುವ ಐದು ಬಾರಿಯ ನಮಾಝ್ಗಳು ನೀಡುವ ಸಾಮೂಹಿಕ ಪ್ರಜ್ಞೆ ಮುಸ್ಲಿಮ್ ಜೀವನದ ಒಂದು ತಳಹದಿಯಾಗಿದೆ. ಹೆರಿಗೆ, ವಿವಾಹ, …
Read More »ಟರ್ಕಿ: 650 ವರ್ಷ ಹಳೆಯ ಮರದಲ್ಲಿ ನಿರ್ಮಿಸಿದ ಮಸೀದಿ
ಟರ್ಕಿ: ಶತಮಾನಗಳ ಪರಂಪರೆಯನ್ನು ಎತ್ತಿ ಹಿಡಿದು ಜಗತ್ತಿಗೆ ಸಾರುವ ಟರ್ಕಿಯ ಸಾಂಸಾನ್ನಲ್ಲಿ 650 ವರ್ಷ ಹಳೆಯ ಮರದಲ್ಲಿ ನಿರ್ಮಾಣವಾದ ಒಂದು ಮಸೀದಿಯಿದೆ. ಟರ್ಕಿಯಲ್ಲಿ ಸಲ್ಜೂಕರು ಆಳುತ್ತಿದ್ದಾಗ ಈ ಮಸೀದಿ ನಿರ್ಮಾಣವಾಗಿತ್ತು. ಈಗ ಆರಾಧನೆಗೂ ಪ್ರವಾಸಿ ತಾಣವಾಗಿಯೂ ಈ ಮಸೀದಿಯನ್ನು ಪುನರ್ ನಿರ್ಮಿಸಲಾಗಿದೆ. ಕಾರಸಾಂಬ ಎಂಬ ಗ್ರಾಮದಲ್ಲಿ ಒಂದು ಕಾಂಕ್ರಿಟ್ ಮಸೀದಿ ನಿರ್ಮಿಸಿದಾಗ ಜನರು ಅದನ್ನು ಬಿಟ್ಟು ಹೋದರು. ಮೂವತ್ತು ವರ್ಷಗಳ ಹಿಂದೆ ಈ ಘಟನೆ ನಡೆದಿತ್ತು. ಈ ಮಸೀದಿಯ ವಿಶೇಷತೆಯೆಂದರೆ …
Read More »ಬ್ಯಾರಿಕೇಡ್ ಸರಿಸಿ ಹಿಂದೂ ವ್ಯಕ್ತಿಯ ಶವ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟ ಶಾಹೀನ್ ಬಾಗ್ ಪ್ರತಿಭಟನಾಕಾರರು; ವೀಡಿಯೊ ವೈರಲ್
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ರಸ್ತೆ ತಡೆ ಮತ್ತು ಹತ್ತಿರದ ನಿವಾಸಿಗಳಿಗೆ ಅನಾನುಕೂಲತೆಯನ್ನುಂಟು ಮಾಡುತ್ತಿದೆ ಎಂಬ ಹಲವಾರು ರಾಜಕಾರಣಿಗಳ ಆರೋಪದ ಮಧ್ಯೆ, ಭಾನುವಾರ ವಿಡಿಯೋವೊಂದು ವೈರಲ್ ಆಗಿದ್ದು, ಪ್ರತಿಭಟನಾಕಾರರು ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯ ಮೆರವಣಿಗೆ ಹಾದು ಹೋಗಲಿಕ್ಕಾಗಿ ಬ್ಯಾರಿಕೇಡ್ಗಳನ್ನು ಸರಿಸಿ ಅನುವು ಮಾಡಿ ಕೊಟ್ಟಿದ್ದಾರೆ. “ನಾವು ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಮತ್ತು ಮೆರವಣಿಗೆಯನ್ನು ಹಾದು ಹೋಗಲು ಅನುಮತಿಸುವ ಮೂಲಕ, ನಾವು ಅಸಾಮಾನ್ಯವಾದದ್ದೇನನ್ನೂ ಮಾಡಿಲ್ಲ. ನಾವು ಬಸ್ಸುಗಳು …
Read More »ರಾಮ ರಹೀಮ್,ಕಿರಣ್ ಹಾರೂನ್, ಅನಂತ ಅನಸ್, ರಾಜ್ ಸರ್ಫರಾಜ್ ಎಲ್ಲಿ ? ಎಲ್ಲಿ ಅವರೆಲ್ಲಿ ?
ಜಲೀಲ್ ಮುಕ್ರಿ ಅಮ್ಮ ಕೊಟ್ಟ ನಾಣ್ಯಗಳೊಂದಿಗೆ ಜಾತ್ರೆಗೆ ಹೋದ ಖುಷಿ ಇಂದೆಲ್ಲಿ ? ಪಕ್ಕದ್ಮನೆ ಸುರೇಶ ರಾಬರ್ಟ್ ಅನೀಸ್ ಜೊತೆಗೂಡಿ ಜಾತ್ರೆಯಲ್ಲಿ ಆಡಿದ ಆಟ ಇಂದೆಲ್ಲಿ ? ಕೃಷ್ಣಪ್ಪರ ಚುರುಮುರಿ, ಉಮರಾಕನ ಕಲ್ಲಂಗಡಿ ಡೊಂಬಯ್ಯರ ಸೋಡಾ ಶರಬತ್ತು ಇಂದೆಲ್ಲಿ ? ಜಾತಿ ಧರ್ಮದ ರಥದ ಚಕ್ರದಡಿ ಸಿಲುಕಿ ಅಪ್ಪಚ್ಚಿಯಾದ ದಿನಗಳ ನಡುವೆ ಅಂದಿನ ಮಖೆ, ಜಾತ್ರೆ ,ಉತ್ಸವವೆಲ್ಲಿ ? ಯಾಂತ್ರಿಕ ತಿರುಗುವ ಜಾತ್ರೆ ತೊಟ್ಟಿಲುಗಳ ಆರ್ಭಟದ ನಡುವೆ ಕೈಯಿಂದ ದೂಡುತ್ತಿದ್ದ …
Read More »ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಸ್ವೀಕರಿಸಿದ ಮುಸ್ಲಿಮ್ ವಿರೋಧಿ ದಲಿತ ಹೋರಾಟಗಾರ
ಚೆನ್ನೈ – ಸ್ವಾಭಿಮಾನ ಮತ್ತು ಸಮಾನತೆಯನ್ನು ನೆಚ್ಚಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿರುವುದಾಗಿ ಯೂಟ್ಯೂಬರ್ ದಲಿತ ಆಕ್ಟಿವಿಸ್ಟ್ ರವಿಚಂದ್ರನ್ ಹೇಳಿದ್ದಾರೆ. ಇದೀಗ ಅವರ ಹೊಸ ಹೆಸರು ಮುಹಮ್ಮದ್ ರಾಯೀಸ್ ಎಂದು ಬದಲಾಯಿಸಿದ್ದು, ಈ ಜನವರಿಯಲ್ಲಿ ಅವರು ಮತಾಂತರ ಗೊಂಡಿದ್ದಾರೆ. ಸ್ವಾಭಿಮಾನ ಮತ್ತು ಸಮಾನತೆಯ ಹುಡುಕಾಟದಲ್ಲಿದ್ದ ನನಗೆ ಇಸ್ಲಾಮ್ ನಲ್ಲಿ ಅದು ಕಂಡಿದೆ ಎಂದು ಅವರು ಹೇಳಿದ್ದಾರೆ. ಅವರ ಈ ಹೆಜ್ಜೆಯ ಬಗ್ಗೆ ದಲಿತ ಸಮುದಾಯದ ಪ್ರತಿಕ್ರಿಯೆಯ ಹೇಗಿದೆ ಎಂದು ಕಾರವಾನ್ ಡೈಲಿಯೊಂದಿಗೆ …
Read More »ಮಸೀದಿಯೊಳಗೆ ಸಮಾಧಿ ಇರುತ್ತೆ ಅಂದ್ಕೊಡಿದ್ದೆ ; ಮಸೀದಿಗೆ ಬಂದವರ ಮನದ ಮಾತು
ತುಮಕೂರು: ಕಲ್ಯಾಣಿ, ಲಕ್ಷ್ಮೀರಂಗಯ್ಯ, ರತ್ನ, ಅಶ್ವಿನಿ, ಡೈಸನ್ ಥಾಮಸ್ ಅವರು ಬಾರ್ಲೇನ್ ರಸ್ತೆಯ ಮಕ್ಕಾ ಮಸೀದಿಯತ್ತ ಭಾನುವಾರ ಬಂದಾಗ, ಅವರನ್ನು ಸ್ವಾಗತಿಸಿದ್ದು ‘ಮಸೀದಿ ಸಂದರ್ಶನ ಕಾರ್ಯಕ್ರಮ: ಪರಸ್ಪರರನ್ನು ಅರಿಯೋಣ, ಸೌಹಾರ್ದ ಸಮಾಜ ಕಟ್ಟೋಣ’ ಎಂಬ ಬರಹದ ಬ್ಯಾನರ್. ಇವರು ಕುತೂಹಲದಿಂದ ಮಸೀದಿಯ ಆವರಣದಲ್ಲಿ ಕಾಲಿಟ್ಟಾಗ, ಅಲ್ಲಿದ್ದವರು ಪ್ರೀತಿಯಿಂದ ಬರಮಾಡಿಕೊಂಡರು. ಮಸೀದಿಯ ರಚನೆ, ನಮಾಜಿನ ಕ್ರಮ, ಇಸ್ಲಾಂನ ತತ್ವಗಳ ಕುರಿತು ಆದಷ್ಟು ಮಾಹಿತಿ ನೀಡಿದರು. ಕೆಲವು ಆಸಕ್ತರು,’ದಿನಕ್ಕೆ ಎಷ್ಟು ಬಾರಿ, ಯಾಕೆ …
Read More »ನ್ಯಾಯವನ್ನು ಪ್ರತಿಪಾದಿಸುವ ಅತ್ಯಂತ ಶ್ರೇಷ್ಠ ಗ್ರಂಥ ಕುರಾನ್ : ಹಾರ್ವರ್ಡ್ ಯೂನಿವರ್ಸಿಟಿ
ಯುಎಸ್: ಕಾನೂನಿನ ವಿಷಯದಲ್ಲಿ ಶಾಸನ ಮತ್ತು ಅನುಷ್ಠಾನ ಒಂದಕ್ಕೊಂದು ಅನುಭಾವ ಸಂಬಂಧ ಇದೆ. ಎರಡೂ ನ್ಯಾಯವನ್ನು ಆಧರಿಸಿಕೊಂಡಿದೆ. ಆದ್ದರಿಂದ ಕಾನೂನಿನಲ್ಲಿ ನ್ಯಾಯಕ್ಕೆ ವಿಶೇಷ ಸ್ಥಾನಮಾನವಿದೆ. ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಹಾರ್ವರ್ಡ್ ಲಾ ಸ್ಕೂಲ್ ( ವಿಶ್ವದ ನಂ. 7), ಅದರ ಬೋಧನಾ ವಿಭಾಗದ ಗ್ರಂಥಾಲಯದ ಪ್ರವೇಶದ್ವಾರದಲ್ಲಿ ನ್ಯಾಯದ ಬಗ್ಗೆ ಉಲ್ಲೇಖ ಇದೆ. ಪ್ರವೇಶದ್ವಾರದಲ್ಲಿ ಕುರಾನಿನ ಅಧ್ಯಾಯ ಸೂರಾ ನಿಸಾ(ಮಹಿಳೆ) ದ ಸೂಕ್ತವನ್ನು ಉಲ್ಲೇಖಿಸಲಾಗಿದೆ. ಇದು ನ್ಯಾಯದ ಬಗ್ಗೆ …
Read More »ಧನಿಕ ಉಸ್ಮಾನ್ರ ಬಾವಿ
ಹಝ್ರತ್ ಉಸ್ಮಾನ್(ರ) ಮಕ್ಕದ ಧನಿಕ ಕುರೈಶಿ ವ್ಯಕ್ತಿ. ಅವರು ಮದೀನಕ್ಕೆ ಬಂದಾಗ ಮದೀನಾದವರಿಗೆ ಕುಡಿಯುವ ನೀರಿನ ತಾಪತ್ರಯ ಇತ್ತು. ಇದ್ದ ಒಂದು ಬಾವಿ ಯಹೂದಿ ವ್ಯಕ್ತಿಯ ಕೈಯಲ್ಲಿತ್ತು. ಆತ ನೀರಿನ ವ್ಯಾಪಾರ ಮಾಡಿ ಹಣ ಸಂಪಾದಿಸುತ್ತಿದ್ದ. ದುಪ್ಪಟ್ಟು ಹಣಕೊಟ್ಟು ಅವನಿಂದ ಇತರರು ನೀರು ಸಂಗ್ರಹಿಸಬೇಕಿತ್ತು. ಇದು ಕಂಡು ಜನರು ಪ್ರವಾದಿವರ್ಯರ(ಸ) ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಪ್ರವಾದಿ(ಸ) ಈ ಸಮಸ್ಯೆ ಪರಿಹಾರಕ್ಕೆ ಮುಂದಾದರು. ನೀರು ಎಲ್ಲರಿಗೂ ನಿರಾಂತಕವಾಗಿ ಸಿಗಬೇಕು. ಆದರೆ …
Read More »ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗವಿಮಠದ ಸ್ವಾಮೀಜಿಗಳು
ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಮ್ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು. ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ …
Read More »ಚೆಂದದ ಹುಡುಗಿಯನ್ನು ಮದುವೆಯಾಗುವುದು..
ಕೆಲವರ ಮನಸ್ಸಿನಲ್ಲಿ ತಾನು ಮದುವೆಯಾಗುವ ಹುಡುಗಿ ಚೆಂದಗಿರಬೇಕಿದೆಂದಿರುತ್ತದೆ. ತಪ್ಪಲ್ಲ. ಚಂದ ಮಾತ್ರ ಸಾಲದು ಚಂದದೊಂದಿಗೆ ಅವಳ ಧಾರ್ಮಿಕ ಶಿಕ್ಷಣ ಹೇಗಿದೆ ಎಂಬುದು ಮುಖ್ಯವಾಗುತ್ತದೆ. ಬಯಸಿದ್ದೆಲ್ಲವೂ ಸಿಗಬೇಕೆಂದಿಲ್ಲ. ಸಿಕ್ಕದ್ದನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ಚಂದವಿಲ್ಲದ ಹುಡುಗಿಯರಿರಲಿ, ಹುಡುಗರಿರಲಿ ಅವರೂ ಅಲ್ಲಾಹನ ಸೃಷ್ಟಿಗಳಾಗಿದ್ದಾರೆ. ಒಟ್ಟಿನಲ್ಲಿ ಚಂದ ಅಂದರೆ ಧರ್ಮ, ಗುಣ ನಡತೆಯೂ ಚಂದ ಆಗಿರಬೇಕು. ವಿವಾಹ ಒಂದು ಒಡಂಬಡಿಕೆ ಆದರೂ ತಾತ್ಕಾಲಿಕವಾದುದಲ್ಲ. ಈ ಒಪ್ಪಂದವನ್ನು ಮುರಿಯುವುದು ಅಲ್ಲಾಹನಿಗೆ ಅರೋಚಕವಾಗಿದೆ ಎಂಬುದನ್ನು ನಾವು ಅರಿತಿರಬೇಕು. ಜೀವನವಿಡೀ …
Read More »
IslamKannada News Portal