- @ ಡಾ| ಬದೀವುಝ್ಝಮಾನ್
ವ್ಯಕ್ತಿ ಮತ್ತು ಸಮೂಹ ಎಂಬ ನೆಲೆಯಲ್ಲಿ ವಿಶ್ವಾಸದಾಢ್ರ್ಯ ಮತ್ತು ಕಾರ್ಯತತ್ಪರತೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿದ್ದರೂ ಜೀವನವನ್ನು ನಿಯಂತ್ರಿಸುವ ಮೌಲ್ಯಗಳ ಸ್ವಾಧೀನವನ್ನು ಮುಸ್ಲಿಮರ ಜೀವನದಲ್ಲಿ ಕಾಣಬಹುದು. ಸೃಷ್ಟಿಕರ್ತ ಮತ್ತು ಸೃಷ್ಟಿಯ ನಡುವಿನ ಏಕತೆ, ವಿಧಿ ವಿಶ್ವಾಸಿಗಳನ್ನು ಆಧಾರವಾಗಿಸಿ ಒಂದು ನಗರ ಕೇಂದ್ರೀಕೃತ ಸಾಮೂಹಿಕ ಜೀವನವನ್ನು ಮುಸ್ಲಿಮರು ಸಾಗಿಸುತ್ತಾರೆ. ಮಸೀದಿಗಳು, ಅದರಲ್ಲಿ ನಡೆಯುವ ಐದು ಬಾರಿಯ ನಮಾಝ್ಗಳು ನೀಡುವ ಸಾಮೂಹಿಕ ಪ್ರಜ್ಞೆ ಮುಸ್ಲಿಮ್ ಜೀವನದ ಒಂದು ತಳಹದಿಯಾಗಿದೆ. ಹೆರಿಗೆ, ವಿವಾಹ, ರೋಗ, ಮರಣ ಮೊದಲಾದ ಎಲ್ಲಾ ಜೀವನದ ರಂಗಗಳಲ್ಲೂ ಇಂತಹ ಸಂಘಟಿತ ಪ್ರಜ್ಞೆ ಮುಸ್ಲಿಮರ ಜೀವನದಲ್ಲಿ ಕಾಣಬಹುದು.
ತೌಹೀದ್ನಿಂದ ಉದಯಿಸುವ ಸ್ವಾತಂತ್ರ್ಯ ಪ್ರಜ್ಞೆಯೇ ಮುಸ್ಲಿಮರ ದೃಷ್ಟಿಕೋನದ ವಿಶೇಷತೆಯಾಗಿದೆ. ಎಲ್ಲ ರೀತಿಯ ಗುಲಾಮಗಿರಿಯನ್ನು ನಿರಾಕರಿಸಲು ತೌಹೀದ್ ದರ್ಶನವು ಮುಸ್ಲಿಮರಿಗೆ ಪ್ರೇರಣೆಯನ್ನು ನೀಡುತ್ತದೆ. ಆದ್ದರಿಂದಲೇ ವಿಶ್ವದ ಯಾವ ಕಡೆಯಲ್ಲೇ ಆದರೂ ವಸಾಹತುಶಾಹಿತ್ವದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಭಾರತದಲ್ಲಿ ಪೋರ್ಚುಗೀಸರಿಂದ ಆರಂಭವಾದ ಎಲ್ಲ ವಸಾಹತುಶಾಹಿಗಳ ವಿರುದ್ಧವೂ ಮುಸ್ಲಿಮರು ಹೋರಾಡಿದ್ದಾರೆ. ಕುಂಞಲಿ ಮರಕ್ಕಾರ್ರ ಹುತಾತ್ಮತೆ ಮಾತ್ರವಲ್ಲ, ಟಿಪ್ಪು ಸುಲ್ತಾನ್ರಿಂದ ಮಲಬಾರನ್ನು ಬ್ರಿಟಿಷರು ವಶ ಪಡಿಸಿಕೊಂಡ 1792 ರಿಂದ ಪ್ರತಿಯೊಂದು ವರ್ಷವೂ ಸಣ್ಣ ಮತ್ತು ದೊಡ್ಡದಾದ ಮಾಪಿಳ್ಳ ಹೋರಾಟಗಳು ನಡೆದಿದೆ. ಬ್ರಿಟಿಷರ ವಿರುದ್ಧ ನೇರವಾಗಿಯೂ ಮತ್ತು ಅವರ ಹಿಂಬಾಲಕರಾಗಿ ನಿಂತು ತೆರಿಗೆ ಸಂಗ್ರಹಿಸುವುದು ಅಥವಾ ಇತರ ರೀತಿಯಲ್ಲಿ ಜನಸಾಮಾನ್ಯರನ್ನು ಪೀಡಿಸುತ್ತಿದ್ದ ಜನರ ವಿರುದ್ಧ ಇವರ ಈ ಹೋರಾಟ ನಡೆಯುತ್ತಿತ್ತು. ಚೆಂಬನ್ ಪೋಕರ್, ಅತ್ತನ್ಕ್ಕುರಿಗಳು, ಹೈದ್ರೋಸ್ ಕುಟ್ಟಿ ಮೊದಲಾದವರ ನೇತೃತ್ವದಲ್ಲಿ ಹಲವು ಬಾರಿ ನಡೆಸಿದ ಹೋರಾಟಗಳ ಮುಂದುವರಿದ ಭಾಗ ಎಂಬ ನೆಲೆಯಲ್ಲಿ ಮಲಬಾರ್ ಸಂಗ್ರಾಮ ಉಂಟಾಯಿತು. ಬ್ರಿಟಿಷರ ಲೆಕ್ಕಾಚಾರದಂತೆ 2339 ಜನರು ಕೊಲ್ಲಲ್ಪಟ್ಟು 45,000ಕ್ಕಿಂತಲೂ ಅಧಿಕ ಮಂದಿ ಬಂಧಿತರಾದಂತಹ ಹೋರಾಟವಾಗಿತ್ತು ಅದು.
ರಾಷ್ಟ್ರೀಯ ಮಟ್ಟದಲ್ಲಿ 1857ರಲ್ಲಿ ಒಂದನೆಯ ಸ್ವಾತಂತ್ರ್ಯ ಸಮರವನ್ನು ಹಿಂದು-ಮುಸ್ಲಿಮರು ಒಂದಾಗಿ ನಡೆಸಿದ್ದರು. ಹೆಚ್ಚಿನ ಅಧಿಕಾರಗಳನ್ನೆಲ್ಲಾ ಕಳೆದುಕೊಂಡು ದುರ್ಬಲನೂ ವೃದ್ಧರೂ ಆದ ಬಹಾದ್ದೂರ್ ಷಾ ಸಫರ್ರನ್ನು ಸ್ವಾತಂತ್ರ್ಯ ಹೋರಾಟಗಾರರು ಆ ಕ್ರಾಂತಿಯಲ್ಲಿ ತಮ್ಮ ನಾಯಕನಾಗಿ ಆರಿಸಿಕೊಂಡಿದ್ದರು ಎಂಬುದು ಮೊಗಲರನ್ನು ಭಾರತೀಯರು ಆಕ್ರಮಣಕಾರಿಗಳೆಂದು ತಿಳಿದುಕೊಂಡಿರಲಿಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ. ಆದರೆ ಹೋರಾಟದ ವಿರುದ್ಧ ಬ್ರಿಟಿಷರ ದಮನಕಾರಿ ನೀತಿಯಿಂದ ಮುಸ್ಲಿಮರು ಅತಿ ಭೀಕರವಾದ ಆಕ್ರಮಣವನ್ನು ಎದುರಿಸಬೇಕಾಯಿತು. ಸಾವಿರಾರು ಮುಸ್ಲಿಮರು ಕೊಲ್ಲಲ್ಪಟ್ಟು, ಮೊಗಲ್ ಆಡಳಿತದೊಂದಿಗೆ ಶಾಮೀಲಾಗಿದ್ದ ಉನ್ನತ ವಂಶಜರಾದ ಮುಸ್ಲಿಮರನ್ನು ಆರಿಸಿಕೊಂಡು ಶಿಕ್ಷಿಸಿದರು. ದೆಹಲಿ ಜುಮಾ ಮಸ್ಜಿದ್ 1857ರಿಂದ ಐದು ವರ್ಷಕಾಲ ಬ್ರಿಟಿಷ್ ಬೆಂಬಲಿತ ಸಿಕ್ಖ್ ಸೈನಿಕ ಕೇಂದ್ರವಾಗಿ ಬದಲಾಯಿಸಿ ಅಕ್ಬರಾಬಾದೀ ಮಸೀದಿಯೂ ಸೇರಿದಂತೆ ಹಲವು ಮಸೀದಿಗಳು ಮತ್ತು ಕೆಂಪುಕೋಟೆಯ ಐದರಲ್ಲೊಂದು ಉಳಿಸಿ ಮತ್ತೆಲ್ಲಾ ಭಾಗಗಳನ್ನು ಕೆಡವಲಾಯಿತು. ಪರ್ಷಿಯನ್, ತುರ್ಕಿ, ಮೊಗಲ್ ಅಂತಾರಾಷ್ಟ್ರೀಯ ಇಸ್ಲಾಮೀ ಗೂಢಾಲೋಚನೆಯ ಭಾಗವಾಗಿ 1857ರ ಹೋರಾಟವು ನಡೆದಿದೆಯೆಂದು ಆರೋಪಿಸಿ ಬಹಾದ್ದೂರ್ ಷಾರನ್ನು ರಂಗೂನ್ಗೆ ಗಡೀಪಾರುಗೊಳಿಸಿ, ಮಕ್ಕಳಲ್ಲಿ ಕೆಲವರನ್ನು ಖೂನಿ ದರ್ವಾಝಾಕ್ಕೆ ಕರೆದೊಯ್ದು ಗುಂಡು ಹಾರಿಸಿ ಕೊಲ್ಲಲಾಯಿತು. 1860ರಲ್ಲಿ ಪಾಟ್ನದಲ್ಲಿ ವಹಾಬಿ ಗೂಢತಂತ್ರವೆಂದು ಆರೋಪಿಸಿ ಹಲವಾರು ಮುಸ್ಲಿಮ್ ಪಂಡಿತರನ್ನು ಗಲ್ಲಿಗೇರಿಸಲಾಯಿತು.
1757ರ ಪ್ಲಾಸಿ ಕದನದಲ್ಲಿ ಸಿರಾಜುದ್ದೌಲಾರ ಪರಾಜಯಕ್ಕೆ ಮುಸ್ಲಿಮರು ನೀಡಬೇಕಾದ ಬೆಲೆಯೇನೆಂದರೆ, ವಕ್ಫ್ ಗಳ ಮೇಲೆ ಹೇರಲಾದ ತೆರಿಗೆಯಾಗಿತ್ತು. ಇದರಿಂದ ಮುಸ್ಲಿಮರ ಶೈಕ್ಪಣಿಕ ಸಂಪ್ರದಾಯದ ಬೆನ್ನುಮೂಳೆಯೇ ಮುರಿದು ಹೋಯಿತು.
ಗಾಂಧೀಜಿ, ಖಿಲಾಫತ್, ಸ್ವಾತಂತ್ರ್ಯ ಹೋರಾಟ
ಗಾಂಧೀಜಿಯವರು ಖಿಲಾಫತ್ ಚಳವಳಿಗೆ ಬೆಂಬಲ ನೀಡಿದ್ದು ದೇಶವನ್ನು ವಿಭಜಿಸುವ ರೀತಿಯಲ್ಲಿ ಭಾರತೀಯ ಮುಸ್ಲಿಮರು ರಾಜಕೀಯವಾಗಿ ಬೆಳೆಯಲು ಪರ್ಯಾಪ್ತವಾಯಿತು ಎಂಬುದು ಹಿಂದುತ್ವವಾದಿಗಳಿಂದ ತೊಡಗಿ ಲಿಬರಲ್ಗಳು ಕೂಡ ಮಾಡುವ ಒಂದು ಆರೋಪವಾಗಿದೆ. ಆದರೆ ವಾಸ್ತವಿಕತೆಯು ಇದಕ್ಕೆ ವಿರುದ್ಧವಾಗಿದೆ. ಬ್ರಿಟಿಷ್ ಸರಕಾರದೊಂದಿಗೆ ಆಡಳಿತ ಸಭೆಗಳಲ್ಲಿ ಪ್ರತಿನಿಧಿಸುವಂತಹ ಸೀಮಿತ ಆವಶ್ಯಕತೆಗಳಿಗಾಗಿ ವಾರ್ಷಿಕ ಸಾರ್ವಜನಿಕ ಸಭೆಗಳಿಂದಲೂ ಭಾರತೀಯ ನ್ಯಾಶನಲ್ ಕಾಂಗ್ರೆಸ್ ದೂರ ಸರಿದಿದ್ದ ಕಾಲದಲ್ಲಿ ಪಾನ್ ಇಂಡಿಯನ್ ಅಫೀಲ್ ಇರುವ ಒಂದು ಸ್ವತಂತ್ರ ಪಕ್ಪವಾಗಿ ಬದಲಾಯಿಸುವುದರಲ್ಲಿ ಖಿಲಾಫತ್ ಚಳವಳಿಯೊಂದಿಗಿನ ಅದರ ಸಂಬಂಧವೇ ಕಾರಣವಾಗಿತ್ತು. ಖಿಲಾಫತ್ ಸಂರಕ್ಪಣಾ ಸಮಿತಿಯ ಬ್ರಿಟಿಷ್ ವಿರೋಧಿ ಮುಖವನ್ನು ಭಾರತದ ಸ್ವಾತಂತ್ರ್ಯದ ಗುರಿಗಾಗಿ ಉಪಯೋಗಿಸಿದ ಗಾಂಧೀಜಿಯಿಂದ ರಾಜಕೀಯ ನಡೆಯೇ ಸ್ವಾತಂತ್ರ್ಯ ಹೋರಾಟವನ್ನು ಒಂದು ಬಹುಜನ ಹೋರಾಟವಾಗಿ ಬದಲಾಯಿಸಿತು. ಹೀಗೆ 1920ರ ಫೆಬ್ರವರಿಯಲ್ಲಿ ಖಿಲಾಫತ್ ಕಮಿಟಿಯು ಪೋಷಿಸಿದ ಅಸಹಕಾರ ಚಳವಳಿ ಯನ್ನು ಆ ವರ್ಷದ ಆಗಸ್ಟ್ ನಲ್ಲಿ ಗಾಂಧೀಜಿಯವರು ಕಾಂಗ್ರೆಸ್ನ ಬ್ಯಾನರ್ ನಲ್ಲಿ ವಹಿಸಿಕೊಂಡರು.
ಇದಕ್ಕಿಂತ ಮೊದಲೇ ಮೌಲಾನಾ ಆಝಾದ್ ತನ್ನ ಅಲ್ ಹಿಲಾಲ್, ಅಲ್ ಬಲಾಗ ಪತ್ರಿಕೆಗಳ ಮೂಲಕ ಇಸ್ಲಾಮಿನ ಮೌಲ್ಯಗಳನ್ನು ಎತ್ತಿ ತೋರಿಸಿ ಅತಿಶಕ್ತವಾದಂತಹ ಪ್ರಚಾರವನ್ನು ಸ್ವಾತಂತ್ರ್ಯಕ್ಕಾಗಿ ಕೊಟ್ಟಿದ್ದರು. ಬ್ರಿಟಿಷ್ ಆಧಿಪತ್ಯದ ಭಾರತವು ಶತ್ರುಗಳ ಗೇಹವೆಂದು ಪ್ರಸ್ತಾಪಿಸಿ ಅಫ್ಘಾನ್ಗೆ ಹಿಜಿರ (ವಲಸೆ) ಹೋಗಲು ಹಿಜಿರಾ ಮುವ್ಮೆಂಟ್ ನಡೆಸಿದ ದೇಶವಾಗಿದೆ ಭಾರತ. ಆದರೆ ಆ ಪ್ರಯತ್ನ ವಿಫಲವಾಯಿತಾದರೂ ಮುಸ್ಲಿಮ್ ಜನತೆಯ ಸ್ವಾತಂತ್ರ್ಯ ದಾಹವನ್ನು ಮಾತ್ರ ಇದು ಸಾಬೀತು ಪಡಿಸಿದೆ.
1937ರ ಚುನಾವಣೆಯ ಬಳಿಕದ ರಾಜಕೀಯ ಸನ್ನಿವೇಶಗಳು ಆಲ್ ಇಂಡಿಯಾ ಮುಸ್ಲಿಮ್ ಲೀಗನ್ನು ಫೆಡರಲ್ ಘಟಕವನ್ನೊಳಗೊಂಡ ಸ್ವಯಂ ಆಡಳಿತ ಪ್ರದೇಶಗಳು ಎಂಬ ಅಗತ್ಯ ದೆಡೆಗೂ ಬಳಿಕ ಕೊನೆಯ ಹಿಡಿತದಲ್ಲಿ ಒಂದು ಸ್ವತಂತ್ರ ದೇಶ ಎಂಬ ನಿಲುವಿನೆಡೆಗೆ ತಲುಪಿಸಿತು ಎಂಬುದನ್ನು ಎಲ್ಲರೂ ನಂಬುತ್ತಾರೆ. ಹಿಂದೂಗಳು, ಮುಸ್ಲಿಮ್ ಮತ್ತು ಹಿಂದೂಗಳು ವಿಭಿನ್ನ ದೇಶೀಯತೆಯೆಂದು ಒಮ್ಮೆಯೂ ಒಂದಾಗಿ ಬಾಳಲು ಸಾಧ್ಯವಿಲ್ಲವೆಂಬ ಸಿದ್ಧಾಂತವನ್ನು ಮುಂದಿರಿಸಿದ್ದು ವಿ.ಡಿ. ಸಾವರ್ಕರ್ ಆಗಿದ್ದರು ಎಂಬುದೂ ಎಲ್ಲರೂ ಒಪ್ಪುವ ಸತ್ಯ.
ಭಾರತದ ವಿಭಜನೆ ಸಂಭವಿಸಿದ್ದು ಕಾಂಗ್ರೆಸ್ ಮತ್ತು ಮುಸ್ಲಿಮ್ ಲೀಗ್ ಅದನ್ನು ಒಪ್ಪಿದ್ದರಿಂದ ಬ್ರಿಟಿಷ್ ಮಧ್ಯಸ್ಥಿಕೆಯಿಂದ ಅದು ಸಾಧ್ಯವಾಯಿತು. ಆದರೆ ದೌರ್ಭಾಗ್ಯವೆಂದು ಹೇಳಬೇಕು. ವಿಭಜನೆಯ ಬಳಿಕ ಭಾರತದಲ್ಲಿ ರಚಿಸಲಾದ ಸ್ವಾತಂತ್ರ್ಯ ಸಮರದ ಚರಿತ್ರೆಯಲ್ಲಿ ಮುಸ್ಲಿಮ್ ಪಕ್ಪವು ಆಲ್ ಇಂಡಿಯಾ ಮುಸ್ಲಿಮ್ ಲೀಗ್ ಎಂಬ ರೀತಿಯಲ್ಲಿ ಚಿತ್ರೀಕರಿಸಲ್ಪಟ್ಟಿತು. ವಿಭಜನೆಯ ಸಂಪೂರ್ಣ ಹೊಣೆಯನ್ನು ಮುಹಮ್ಮದಲಿ ಜಿನ್ನಾ ಮತ್ತು ಮುಸ್ಲಿಮ್ ಲೀಗ್ನ ಮೇಲೆ ಹೊರಿಸಿ ಕಾಂಗ್ರೆಸ್ ನಾಯಕರನ್ನು ಆರೋಪ ಮುಕ್ತಗೊಳಿಸಿ ತೋರಿಸುವ ಧಾವಂತದಲ್ಲಿ ಸ್ವಾತಂತ್ರ್ಯಕ್ಕಾಗಿ ಮುಸ್ಲಿಮ್ ಸಮೂಹವು ನಡೆಸಿದ ಹೋರಾಟ ಪರಿಶ್ರಮಗಳನ್ನು ಸರಿಯಾದ ರೀತಿಯಲ್ಲಿ ಪರಿಚಯಿಸುವ ಚರಿತ್ರೆ ಹೊರಬರಲಿಲ್ಲ.
ವಸಾಹತುಶಾಹಿಯ ಆರಂಭದಿಂದ ಸ್ವಾತಂತ್ರ್ಯ ಹೋರಾಟದಲ್ಲಿ ನಿರತರಾದ ಅಸಂಖ್ಯಾತ ಮುಸ್ಲಿಮ್ ನಾಯಕರು ಮೂಲೆಗುಂಪಾದರು. ಹೇಗೋ ಸಂಭವಿಸಿದ ಅ ಪವಾದಗಳು ಶೋಬೋಯ್ ವ್ಯಾಲ್ಯೂ ಮಾತ್ರವಾಗಿದ್ದ ಕಟ್ಟುಕತೆಗಳೋ ಆಗಿ ಮೌಲಾನಾ ಆಝಾದ್, ಮುಹಮ್ಮದ್ ಅಬ್ದುರ್ರಹ್ಮಾನ್ ಸಾಹಿಬ್ ಮೊದಲಾದವರನ್ನು ಪರಿಗಣಿಸಲಾಯಿತು. ಸರ್ ಸಯ್ಯದ್ ಅಹ್ಮದ್ ಖಾನ್, ಅಲ್ಲಾಮಾ ಮುಹಮ್ಮದ್ ಇಕ್ಬಾಲ್ ಹಾಗೂ ಅಲೀ ಸಹೋದರರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಸ್ವಂತಗೊಳಿಸಲು ಸ್ವಾತಂತ್ರ್ಯಾನಂತರದ ಪಾಕಿಸ್ತಾನವು ನಡೆಸಿದ ಶ್ರಮವು ಭಾರತದ ಇತಿಹಾಸವನ್ನು ಬರೆದ ಬಲಪಂಥೀಯರಿಗೆ ಮುಸ್ಲಿಮ್ ವಿಭಜನೆಯನ್ನು ಸುಲಭಗೊಳಿಸಿತು. ಪ್ರಾರಂಭದಲ್ಲೇ ವಸಾಹತುಶಾಹಿ ಚರಿತ್ರೆ ನಿರ್ಮಾಣದಲ್ಲಿ ಕೀಳರಿಮೆಗೆ ಒಳಪಟ್ಟ ಮುಸ್ಲಿಮ್ ಸಮೂಹವು ವಿಭಜನೆ ಮಾಡಿದ ಆರೋಪದ ಭಾರವನ್ನು ಸ್ವಯಂ ಹೊತ್ತುಕೊಂಡು ಅಪರಾಧಿ ಮನೋಭಾವದಿಂದ ಉಳಿಯಿತು.
ಮುಂದಿನ ದಾರಿ
ದೇಶವು ಇನ್ನೊಮ್ಮೆ ಒಂದು ಸಂಕೀರ್ಣ ಪರಿಸ್ಥಿತಿಯಲ್ಲಿ ನಿಲ್ಲುವಾಗ ನ್ಯಾಯಕ್ಕಾಗಿನ ಹೋರಾಟದಲ್ಲಿ ಭಾರತೀಯ ಸಮೂಹವನ್ನು ಒಗ್ಗಟ್ಟಾಗಿ ನಿಲ್ಲಿಸುವುದರಲ್ಲಿ ಮುಸ್ಲಿಮ್ ಸಮೂಹವು ಪ್ರಮುಖ ಪಾತ್ರವನ್ನು ವಹಿಸಬೇಕೆಂಬುದನ್ನು ಅವರು ಅರಿಯಬೇಕು.
ಜಾತಿ ವ್ಯವಸ್ಥೆಯ ಹಿಡಿತದಿಂದ ಪರಸ್ಪರ ಕಾಣಲು ಅಥವಾ ಮಾತನಾಡಲು, ವ್ಯವಹರಿಸಲು ಸಾಧ್ಯವಾಗದಿದ್ದಂತಹ ಒಂದು ಜನ ಸಮೂಹವನ್ನು ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ನ್ಯಾಯದ ತಳಹದಿಯ ಒಂದು ಸಂವಿಧಾನ ಎಂಬ ಒಂದು ಕರಾರನ್ನು ಮುಂದಿರಿಸಿ ಒಂದಾಗಿ ಸಾಗುವ ಪರಿಸ್ಥಿತಿಗೆ ಬೆಳೆಸಿದ್ದು ಸಾವಿರಾರು ವರ್ಷಗಳಿಂದ ಇಸ್ಲಾಮೀ ಮೌಲ್ಯಗಳು ಈ ದೇಶವನ್ನು ಸ್ವಾಧೀನಗೊಳಿಸಿದ ಫಲವಾಗಿದೆ. ಈ ಅರ್ಥದಲ್ಲಿ ನೋಡುವಾಗ ಭಾರತದ ಮುಸ್ಲಿಮ್ ಸಮೂಹ ಮತ್ತು ಅವರು ಪ್ರಚುರಪಡಿಸಿದ ನೈತಿಕ ಮೌಲ್ಯಗಳು ದೇಶದ ಸಾಮಾಜಿಕ ಜೀವನದ ಬೆನ್ನೆಲುಬಾಗಿದೆ. ಆದ್ದರಿಂದ ಅದರ ಯಾವುದಾದರೂ ಅಂಶಕ್ಕೆ ಬೀಳುವ ಪೆಟ್ಟು ಭಾರತೀಯ ಸಾಮಾಜಿಕ ಜೀವನವನ್ನು ಆಂಶಿಕವಾಗಿಯೋ ಪೂರ್ಣವಾಗಿಯೋ ಬಾಧಿಸುತ್ತದೆ. ಅದು ಸಂಭವಿಸಬಾರದೆಂಬುದು ಈ ದೇಶದ ಆವಶ್ಯಕತೆಯಾಗಿದೆ. ಭೂಮಿಯಲ್ಲಿ ಭದ್ರವಾಗಿ ಬೇರೂರಿ ಹರಡಿ ನಿಂತಿರುವ, ಯಾವಾಗಲೂ ಉತ್ತಮ ಫಲಗಳನ್ನು ನೀಡುವ ಪವಿತ್ರ ವಚನಗಳನ್ನು ಎದೆಗಪ್ಪಿಕೊಂಡವರಿಗೆ ಈ ಸಿ.ಎ.ಎ., ಎನ್ಪಿಆರ್, ಎನ್ಆರ್ಸಿಯ ಈ ಬೆದರಿಕೆಯ ಕಾಲದಲ್ಲೂ ಬಹಳ ದೊಡ್ಡ ಹೊಣೆಗಾರಿಕೆಯನ್ನು ನಿರ್ವಹಿಸಲಿಕ್ಕಿದೆ. ಈ ದೇಶವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿದ ಸಮುದಾಯ ತಾವೆಂಬ ಅಭಿಮಾನ ಪ್ರಜ್ಞೆ, ಅನವಶ್ಯಕವಾಗಿ ಹೊರಿಸಲ್ಪಟ್ಟ ದೇಶ ವಿಭಜನೆಯ ಆರೋಪವನ್ನು ನಮ್ಮಿಂದ ಹೋಗಲಾಡಿಸುವ ಧೈರ್ಯವನ್ನು ತೋರಿಸುವುದು ಇದರಲ್ಲಿ ಮೊದಲ ಹೆಜ್ಜೆ. ಅಕ್ರಮಿಗಳಾದ ಆಡಳಿತಗಾರರ ಮುಂದೆ
ಬಹುಸಂಸ್ಕ್ರತಿಯಿಂದ ಸಂಪನ್ನವಾದ ಭಾರತೀಯ ಜನತೆಯನ್ನು ಒಂದಾಗಿ ಸಾಗಿಸಬೇಕಾದ ಕಾರ್ಯತಂತ್ರ, ಪರಿಣತಿ, ಧೈರ್ಯ, ಆತ್ಮಾಭಿಮಾನವುಳ್ಳ ಒಂದು ಸಮೂಹಕ್ಕೆ ಮಾತ್ರ ಸಾಧ್ಯ.
ಇಂದು ನೀವು ಸಣ್ಣ ಕಂಪನವನ್ನು ಭಯಪಡುತ್ತೀರಿ. ಒಂದೊಮ್ಮೆ ಭೂಕಂಪಗಳನ್ನು ಸೃಷ್ಟಿಸಿದವರಾಗಿದ್ದಿರಲ್ಲ ನೀವು
ಇಂದು ಕತ್ತಲೆಯನ್ನು ಭಯಪಡುತ್ತಿದ್ದೀರಿ ನೀವು. ನಿನ್ನೆಯ ಇರುಳು ತುಂಬಿದ ಹಾದಿಗಳಲ್ಲಿ ಬೆಳಕಾಗಿದ್ದಿರಲ್ಲವೇ ನೀವು.
ಮಳೆ ಬಂದರೆ ಒದ್ದೆಯಾಗುತ್ತದೆಂದು ಭಾವಿಸಿ ಪೈಜಾಮ ಎತ್ತಿ ಕಟ್ಟಿ ಬದಿಯಲ್ಲಿ ಏರಿ ನಿಲ್ಲುತ್ತಿರುವಿರಾ ನೀವು?
ಅಲೆಗಳನ್ನು ಕಡೆಗಣಿಸಿ ಸಮುದ್ರಕ್ಕೆ ಧುಮುಕಿದವರಾಗಿದ್ದರಲ್ಲ ನಿಮ್ಮ ಪಿತಾಮಹರು.
ಪರ್ವತಗಳನ್ನು ಮೆಟ್ಟಿ ಹದಗೊಳಿಸಿದವರು ಅವರು
ಗುಡುಗು ಮಿಂಚನ್ನು ಮುಗುಳ್ನಗೆಯೊಂದಿಗೆ ಎದುರಿಸಿದವರು.
ಬಿರುಗಾಳಿಯನ್ನು ಹಾದುಹೋದವರು
ಸುರುಳಿ ಗಾಳಿಯನ್ನು ಎದುರಿಸಿಯೂ ಹಲವೊಮ್ಮೆ ದಿಕ್ಕು ಬದಲಿಸಿ ದಾರಿ ಕಂಡುಕೊಂಡವರು
ಅವರ ಹಿಂಗಾಮಿಗಳಾದ ನಿಮ್ಮನ್ನು ಓಡಿಸಲು ಒಬ್ಬರಿಗೂ ಸಾಧ್ಯವಾಗದು. ನೀವು ಸ್ವತಃ ಓಡಿಹೋಗುವವರೆಗೆ.
(ಮೌಲಾನಾ ಅಬುಲ್ ಕಲಾಮ್ ಆಝಾದ್ 1947 ಅಕ್ಟೋಬರ್ 13ರಂದು ದೆಹಲಿ ಜಮಾ ಮಸೀದಿಯಲ್ಲಿ ಮಾಡಿದ ಭಾಷಣದಿಂದ)
IslamKannada News Portal





