Home / ಲೇಖನಗಳು / ಪ್ರವಾದಿ ಇಬ್ರಾಹೀಮ್ – ಸಾಟಿಯಿಲ್ಲದ ಪರೀಕ್ಷೆಗಳು

ಪ್ರವಾದಿ ಇಬ್ರಾಹೀಮ್ – ಸಾಟಿಯಿಲ್ಲದ ಪರೀಕ್ಷೆಗಳು

  • @ ಎಸ್ಸೆಮ್ಕೆ      ಅನುವಾದ: ಎ.ಎಂ.

ಪ್ರವಾದಿ ಇಬ್ರಾಹೀಮರ ಜೀವನ ಪರೀಕ್ಷೆಗಳಿಂದ ತುಂಬಿದ್ದಾಗಿತ್ತು. ಬಾಬಿಲೋನಿಯದ ಸಂದೇಶ ಪ್ರಚಾರ ಘಟ್ಟದಲ್ಲಿ ಕಠಿಣ ಪೀಡನೆಗಳ್ನು ಅನುಭವಿಸಬೇಕಾಯಿತು. ನಂತರ ಊರು ಮನೆ ಬಿಡಬೇಕಾಗಿ ಬಂತು. ಬಂಧುಗಳು, ತಂದೆ, ಗೆಳೆಯರೆಲ್ಲ ಶತ್ರುಗಳಾದರು. ನಿರಂತರ ಪರಿಶ್ರಮಿಸಿದರೂ ಒಬ್ಬನೇ ಒಬ್ಬ ಅನುಯಾಯಿಯನ್ನು ಬಿಟ್ಟು ಬೇರೆ ಯಾರೂ ಅವರ ಬೆಂಬಲಕ್ಕೆ ಸಿಗಲಿಲ್ಲ. ನಂತರ ಕಾನಾನ್ ದೇಶದಲ್ಲಿ, ಈಜಿಪ್ಟ್ ನಲ್ಲಿ ಏಕಾಂತ ಪಥಿಕನಾಗಿ ಸಂದೇಶ ಪ್ರಚಾರ ಮಾಡಬೇಕಾಗಿ ಬಂತು. ಈ ನಡುವೆ ಜೀವನ ಸಂಜೆ ( ಮುದಿತನದಲ್ಲಿ) ಯಲ್ಲಿ ಸಿಕ್ಕಿದ ಮಗನನ್ನೂ ಪ್ರಿಯ ಪತ್ನಿಯನ್ನೂ ಜಲ ಶೂನ್ಯವಾದ  ಫಲವೂ ಇಲ್ಲದ ಜನರೂ ಇಲ್ಲದ ಮಕ್ಕ ಕಣಿವೆಯಲ್ಲಿ ಕರೆದು ಕೊಂಡು ಬಂದು ಅವರನ್ನು ಒಬ್ಬಂಟಿಗರಾಗಿರಲು ಬಿಟ್ಟು ಹೋಗಬೇಕಾಯಿತು.

ಹೆಚ್ಚೆಚ್ಚು ಪರೀಕ್ಷೆಗಳನ್ನು ಅವರನ್ನು ಕಾದು ಕುಳಿತಿದ್ದವು. ನಿರಂತರ ಪ್ರಾರ್ಥಿಸಿ ಜೀವನ ಸಂಜೆಯಲ್ಲಿ ಅಲ್ಲಾಹನು ಕರುಣಿಸಿದ ಪ್ರೀತಿಯ ಪುತ್ರನನ್ನು ಸ್ವಂತ ಕೈಯಿಂದ ಬಲಿ ಅರ್ಪಿಸ ಬೇಕೆಂಬುದು ದೇವನ ಆದೇಶವಾಗಿತ್ತು ಅದು. ಈ ವಿಷಯವನ್ನು ತನ್ನ ಸ್ವಂತ ಮಗನಲ್ಲಿ ಮಾತಾಡಲು ಮತ್ತು ಅನುಮತಿ ಪಡೆಯಲು ಅವರು ಹೊಣೆಗಾರರಾದರು. ಅದರೆ, ಈ ತೀಕ್ಷ್ಣ ಪರೀಕ್ಷೆಯಲ್ಲಿ ಪ್ರವಾದಿ ಇಬ್ರಾಹೀಮರು  ಅದ್ಭುತ ವಿಜಯಗಳಿಸಿದರು. ಈ ಪರೀಕ್ಷೆಯಿಂದ ದೂರ ನಿಲ್ಲಲು ಮತ್ತು ಈ ಪರೀಕ್ಷೆಯಿಂದ ತನ್ನನ್ನು ಮುಕ್ತವಾಗಿಸಬೇಕೆಂದು ಅವರು ಅಲ್ಲಾಹನಲ್ಲಿ ಪ್ರಾರ್ಥಿಸಲು ಮುಂದಾಗಲಿಲ್ಲ. ಬದಲಾಗಿ ಅಲ್ಲಾಹನ ಆದೇಶವನ್ನು ಜಾರಿಗೊಳಿಸಲು ಸಂಪೂರ್ಣ ಸಿದ್ಧರಾದರು.

ಈ ವಿಷಯವನ್ನು ಪವಿತ್ರ ಕುರ್‍ಆನ್ ಹೀಗೆ ವಿವರಿಸಿದೆ.
“ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲಪಿದಾಗ (ಒಂದು ದಿನ) ಇಬ್ರಾಹೀಮರು ಅವನೊಡನೆ” ಮಗೂ, ನಾನು (ಬಲಿಯರ್ಪಿಸಲಿಕ್ಕಾಗಿ) ನಿನ್ನ ಕೊರಳು ಕೊಯ್ಯು ತ್ತಿರುವುದನ್ನು ಕನಸಿನಲ್ಲಿ ಕಂಡೆನು. ಈಗ ನಿನ್ನ ಅಭಿಪ್ರಾಯವೇನೆಂದು ಹೇಳು” ಎಂದರು. ಆಗ ಅವನು, “ಅಪ್ಪಾ, ತಮಗೆ ಆಜ್ಞಾಪಿಸಲಾಗಿರುವುದನ್ನು ಮಾಡಿಬಿಡಿರಿ. ಅಲ್ಲಾಹನಿಚ್ಛಿಸಿದರೆ ತಾವು ನನ್ನನ್ನು ಸಹನೆಯುಳ್ಳವನಾಗಿ  ಕಾಣುವಿರಿ” ಎಂದನು.

ಕೊನೆಗೆ ಇಬ್ಬರೂ ವಿಧೇಯತೆಯೊಂದಿಗೆ ಶಿರಬಾಗಿದರು ಮತ್ತು ಇಬ್‍ರಾಹೀಮರು ಮಗನನ್ನು ಅಧೋಮುಖಿಯಾಗಿ ಮಲಗಿಸಿದರು. ಆಗ ನಾವು ಹೀಗೆ ಕೂಗಿ ಹೇಳಿದೆವು, “ಇಬ್‍ರಾಹೀಮ್, ನೀವು ಸ್ವ ಪ್ನಗಳನ್ನು ಸತ್ಯಗೊಳಿಸಿ ತೋರಿಸಿದಿರಿ, ನಾವು ಪುಣ್ಯ ಕಾರ್ಯವೆಸಗುವವರಿಗೆ  ಹೀಗೆಯೇ ಸತ್ಫಲ ನೀಡುತ್ತೇವೆ. ನಿಶ್ಚಯವಾಗಿಯೂ ಇದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು. ನಾವು ಒಂದು ದೊಡ್ಡ ಬಲಿದಾನವನ್ನು ಪರಿಹಾರವಾಗಿ ಕೊಟ್ಟು ಆ ಬಾಲಕನನ್ನು ಬಿಡಿಸಿದೆವು. ಮತ್ತು ಅವನ ಪ್ರಶಂಸೆಯನ್ನು ಶಾಶ್ವತವಾಗಿ ಮುಂದಿನ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು. ಇಬ್‍ರಾಹೀಮರ ಮೇಲೆ ಸಲಾಮ್ (ಶುಭಾಶಯ) ಇದೆ. ನಾವು ಪುಣ್ಯ ಕಾರ್ಯವೆಸಗುವವರಿಗೆ ಇಂತಹದೇ  ಸತ್ಫಲ ನೀಡುತ್ತೇವೆ. ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಾಗಿದ್ದರು. (37: 102-111)

ಪ್ರವಾದಿ ಇಬ್ರಾಹೀಮರ ಈ ಬಲಿದಾನವನ್ನು ಅಂದಿನಿಂದ ಇಂದಿನ ವರೆಗಿನ ಕೋಟ್ಯಂತರ ಜನರು ಪ್ರತೀಕವಾಗಿ ಅನುಸರಿಸುತ್ತಾ ಬಂದಿದ್ದಾರೆ. ಹಜ್ ಮತ್ತು ಬಕ್ರೀದ್‍ನಲ್ಲಿ ಬಲಿದಾನವು ಜಗತ್ತಿನ ಅಂತ್ಯದವರೆಗೂ ಮುಂದುವರಿಯುವುದು.

ಮಾನವ ಕೋಟಿಯ ನಾಯಕನಾಗಿ ಪ್ರವಾದಿ ಇಬ್ರಾಹೀಮರು ಬದಲಾಗಲು ಕಾರಣವೂ ಕಠಿಣವಾದ ಈ ಪರೀಕ್ಷೆಯ ವಿಜಯವಾಗಿದೆ.
“ಇಬ್ರಾಹೀಮರನ್ನು ಅವರ ಪ್ರಭು ಕೆಲವು ವಿಷಯಗಳಲ್ಲಿ ಪರೀಕ್ಷಿಸಿದ ಸಂದರ್ಭವನ್ನು ಸ್ಮರಿಸಿರಿ. ಅವರು ಅವುಗಳಲ್ಲೆಲ್ಲಾ ಸಫಲರಾದರು.” ಆಗ ಅಲ್ಲಾಹನು, “ನಾನು ನಿಮ್ಮನ್ನು ಸರ್ವ ಜನರ ನಾಯಕನನ್ನಾಗಿ ಮಾಡುವವನಿದ್ದೇನೆ” ಎಂದನು. (2: 14)

ಅತ್ಯಂತ ಪ್ರೀತಿ ಪಾತ್ರವಾಗಿದ್ದನ್ನು ತೊರೆಯುವ ಈ ತ್ಯಾಗ ಇದು ತುಂಬ ಕಷ್ಟಕರ ಕಾರ್ಯವಾಗಿದೆ. ಪ್ರವಾದಿ ಇಬ್ರಾಹೀಮರಿಗೆ ಹಲವು ಬಾರಿ ಹೀಗೆ ಮಾಡಬೇಕಾಗಿ ಬಂತು. ಆದ್ದರಿಂದಲೇ ಅವರು ಅತ್ಯಂತ  ಮಹನೀಯ ತ್ಯಾಗಿಯಾಗಿ ಬದಲಾವಣೆಯಾದರು. ಇತಿಹಾಸದಲ್ಲಿ ತುಲನೆಗೆ ಅತೀತವಾದ ಸ್ಥಾನವನ್ನು ಪಡೆದುಕೊಂಡರು. ಜಗತ್ತಿನ ಜನರಲ್ಲೇ ಮೂರರಲ್ಲಿ ಎರಡಂಶದಷ್ಟು ಜನರು ಅವರನ್ನು ಆದರಿಸುತ್ತಾರೆ. ಮತ್ತು ಅವರ ಹಿಂಗಾಮಿಗಳು ಆಗಿದ್ದಾರೆ

ಇಸ್ಹಾಕ್ ಹುಟ್ಟಿದರು:
ಇಸ್ಮಾಯೀಲ್ ಹುಟ್ಟಿದ ಕೆಲವು ವರ್ಷ ಆದ ಮೇಲೆ ಅಂದಿನವರೆಗೂ ಬಂಜೆಯಾಗಿದ್ದ ವೃದ್ಧೆ ಸಾರಾ(ರ) ದೇವನ ಅನುಗ್ರಹದಿಂದ ಗರ್ಭಿಣಿಯಾದರು. ಪ್ರವಾದಿ ಇಬ್ರಾಹೀಮರಿಗೆ ನೂರು ವರ್ಷ ಮತ್ತು  ಹಝ್ರತ್ ಸಾರಾರಿಗೆ ತೊಂಬತ್ತು ವರ್ಷ ವಯಸ್ಸು ಆಗ. ಈ ವಯಸ್ಸಿನಲ್ಲಿ ಅವರು ಗರ್ಭ ಧರಿಸಿದರು. ಮತ್ತು ಗಂಡು ಮಗುವಿಗೆ ಜನ್ಮವಿತ್ತರು ಇಸ್‍ಹಾಕ್ ಎಂದು ಆ ಮಗುವನ್ನು ದಂಪತಿಗಳು ಕರೆದರು.

ಈ ವಿಷಯವನ್ನು ಪವಿತ್ರ ಕುರ್‍ಆನ್ ಹೀಗೆ ವಿವರಿಸಿದೆ.-
“ನಮ್ಮ ದೂತರು(ದೇಚರರು) ಇಬ್ರಾಹೀಮರ ಬಳಿ ಸುವಾರ್ತೆಯೊಂದಿಗೆ ಬಂದರು. ನಿಮಗೆ ಸಲಾಮ್ ಎಂದರು. ಇಬ್ರಾಹೀಮರು ನಿಮಗೂ ಸಲಾಮ್ ಎಂದರು. ತರುವಾಯ ಅವರು ತುಸು ಹೊತ್ತಿನಲ್ಲೇ ಒಂದು ಹುರಿದ ಕರುವನ್ನು ತಂದು ಅವರ ಭೋಜನಕ್ಕಾಗಿ ಮುಂದಿಟ್ಟರು.”
ಆದರೆ ಅವರ ಕೈಗಳು ಆಹಾರದ ಕಡೆಗೆ ಚಲಿಸದಿರುವುದನ್ನು ಕಂಡಾಗ ಅತಿಥಿಗಳ ಬಗ್ಗೆ ಅವರು ಸಂದೇಹಕ್ಕೊಳಗಾದರು ಮತ್ತು ಮನಸ್ಸಿನೊಳಗೇ ಅವರ ಬಗ್ಗೆ ಹೆದರಿದರು. ಅವರು ಹೀಗೆಂದರು;  “ಹೆದರಬೇಡಿರಿ, ನಾವು ಲೂತರ ಜನಾಂಗದ ಕಡೆಗೆ ಕಳುಹಿಸಲ್ಪಟ್ಟವರು.”
ಇಬ್ರಾಹೀಮರ ಪತ್ನಿಯೂ (ಅಲ್ಲೆ) ನಿಂತಿದ್ದರು. ಅವರು ಇದನ್ನು ಕೇಳಿ ನಕ್ಕು ಬಿಟ್ಟರು. ಅನಂತರ ನಾವು ಆಕೆಗೆ ಇಸ್‍ಹಾಕ್ ಮತ್ತು ಇಸ್ಹಾಕರ ತರುವಾಯ ಯಅಕೂಬರ ಬಗೆಗೂ ಸುವಾರ್ತೆ ನೀಡಿದೆವು.
ಅವರು (ಅರ್ಥಾತ್ ಇಬ್ರಾಹೀಮರ ಪತ್ನಿ) ಹೇಳಿದರು: “ಅಕಟ! ನನ್ನ ದೌರ್ಭಾಗ್ಯವೇ, ನಾನು ಹಣ್ಣು ಮುದುಕಿಯೂ ನನ್ನ ಪತಿ ಅತಿ ವೃದ್ಧರೂ ಅಗಿರುವಾಗ ನನ್ನಲ್ಲಿ ಮಕ್ಕಳಾಗುವವರೇ? ಇದಂತು  ಅತ್ಯಂತ ಸೋಜಿಗದ ವಿಷಯ!”
ದೇವಚರರು, “ಅಲ್ಲಾಹನ ಆಜ್ಞೆಯ ಬಗ್ಗೆ ಆಶ್ಚರ್ಯ ಪಡುತ್ತೀರಾ? ಓ ಇಬ್‍ರಾಹೀಮರ ಮನೆಯವರೇ, ನಿಮ್ಮ ಮೇಲೆ ಅಲ್ಲಾಹನ ದಯೆ ಮತ್ತು ಸಮೃದ್ಧಿಗಳಿವೆ. ನಿಜವಾಗಿಯೂ  ಅಲ್ಲಾಹನು ಅತ್ಯಧಿಕ  ಸ್ತುತ್ಯರ್ಹನೂ ಮಹಿಮಾವಂತನೂ ಆಗಿರುತ್ತಾನೆ” ಎಂದು ಹೇಳಿದರು.” (69-73)

“ಅವರಿಗೆ ಇಬ್ರಾಹೀಮರ ಅತಿಥಿಗಳ ವೃತ್ತಾಂತವನ್ನೂ ತಿಳಿಸಿರಿ. ಅವರು ಇವರಲ್ಲಿಗೆ ಬಂದು,” ನಿಮಗೆ ಶಾಂತಿ ಇರಲಿ” ಎಂದರು. ಆಗ ಇವರು “ನಮಗೆ ನಿಮ್ಮ ಬಗೆಗೆ ಹದೆರಿಕೆಯಾಗುತ್ತಿದೆ” ಎಂದರು.  ಆಗ ಅವರು, “ಹದೆರಬೇಡಿರಿ ನಾವು ನಿಮಗೆ ಓವ ಮೇಧಾವಿಯಾದ ಪುತ್ರನ ಸುವಾರ್ತೆ ನೀಡುತ್ತೇವೆ” ಎಂದರು. ಇಬ್ರಾಹೀಮರು,” ಈ ವೃದ್ಧಾಪ್ಯದಲ್ಲಿ ನೀವು ನನಗೆ (ಮಗನ) ಸುವಾರ್ತೆ ನೀಡುತ್ತೀರಾ?  ನೀವೆಂತಹ ಸುವಾರ್ತೆ ನೀಡುತ್ತಿರುವಿರಿ ಎಂದು ಕೊಂಚ ಯೋಚಿಸಿರಿ” ಎಂದರು. ಆಗ ಅವರು “ನಾವು ನಿಮಗೆ ಪರಮ ಸತ್ಯವಾಗಿರುವ ಸುವಾರ್ತೆ ನೀಡುತ್ತಿದ್ದೇವೆ. ನೀವು ನಿರಾಶರಾಗ ಬೇಡಿರಿ” ಎಂದು  ಉತ್ತರ ಕೊಟ್ಟರು.
ಇಬ್ರಾಹೀಮರು,” ತಮ್ಮ ಪ್ರಭುವಿನ ಅನುಗ್ರಹದ ಬಗ್ಗೆ ಪಥಭ್ರಷ್ಟರುಮಾತ್ರ ನಿರಾಶರಾಗುತ್ತಾರೆ” ಎಂದು ಹೇಳಿದರು. (1551-56)
“ನಾವು ಅವರಿಗೆ ಇಸ್‍ಹಾಕರ ಸುವಾರ್ತೆ ನೀಡಿದೆವು, ಸಜ್ಜನರ ಪೈಕಿ ಒಬ್ಬ ಪ್ರವಾದಿ.” (37: 112)
ದೇವಚರರು ಬಂದು ಮಗನ ಕುರಿತು ಶುಭವಾರ್ತೆ ತಿಳಿಸಿದಾಗ ಪ್ರವಾದಿ ಇಬ್ರಾಹೀಮರ ಪತ್ನಿ ಸಾರಾ ಬೊಬ್ಬೆ ಹೊಡೆದು ಓಡಿ ಬಂದರು ಮತ್ತು ಮುಖಕ್ಕೆ ಹೊಡೆದರು” ಬಂಜೆಯಾದ ಈ ಮುದುಕಿಗೆ”  ಎಂದು ಕೇಳಿದರೆಂದು ಪವಿತ್ರ ಕುರ್‍ಆನ್ ತಿಳಿಸಿದೆ.
ಈ ಸಂತಾನ ಪ್ರಾಪ್ತಿಯ ಕುರಿತು ಪ್ರಸ್ತಾವ ಪವಿತ್ರ ಕುರ್‍ಆನಿನ ಬೇರೆ ಕಡೆಗಳಲ್ಲಿಯೂ ಇವೆ. (14:39, 19:49)

ಬೈಬಲಿನಲ್ಲಿ ಪ್ರವಾದಿ ಇಬ್ರಾಹೀಮರು ಇಸ್‍ಹಾಕ್‍ರನ್ನು ಬಲಿ ನೀಡಲು ಹೊರಟಿದ್ದರು ಎಂದು ಪ್ರಸ್ತಾವ ಇದೆ. ಇದರೊಂದಿಗೆ ಸಹಮತವಿರುವ ಕೆಲವು ವ್ಯಾಖ್ಯಾನಕಾರರು ಇಂತಹ ಅಭಿಪ್ರಾಯವನ್ನೂ  ಹೇಳುತ್ತಾರೆ. ಆದರೆ, ಬೈಬಲಿನ ಹೇಳಿಕೆಗಳನ್ನು ಸೂಕ್ಷ್ಮವಾಗಿ ಅಭ್ಯಸಿಸಿದವರಿಗೆ ಮತ್ತು ಪವಿತ್ರ ಕುರ್‍ಆನ್, ಹದೀಸ್‍ಗಳನ್ನು ಆಧಾರವಾಗಿಟ್ಟವರಿಗೆ ಇದು ಅಸಂಬದ್ಧ ವಾದವೆಂದು ಸ್ಪಷ್ಟವಾಗುತ್ತದೆ.  ಇಸ್‍ಹಾಕ್‍ರಿಗೆ ಮಾನವ ಚರಿತ್ರೆಯಲ್ಲಿ ಮಹತ್ತರ ಸ್ಥಾನಮಾನವಿದೆ. ಅವ ಪುತ್ರ, ಮೊಮ್ಮಗರೆಲ್ಲ ಪ್ರವಾದಿಗಳಾದರು. ಅವರ ಸಂತಾನಗಳು ಇಸ್‍ರಾಯೀಲ್ಯರೆಂಬ ಹೆಸರಿನಲ್ಲಿ ಅಂದಿನಿಂದ ಇಂದಿನವರೆಗೂ  ಜಗತ್ತಿನಲ್ಲಿದ್ದಾರೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …