@ ಡಾ| ಜಾಸಿಮುಲ್ ಮುತವ್ವ
ಮಾತಾಪಿತರಿಗೆ ಅತ್ಯಂತ ಹೆಚ್ಚು ಒಳಿತು ಮಾಡುವವರು ಯಾರು? ಗಂಡು ಮಕ್ಕಳೋ ಅಥವಾ ಹೆಣ್ಣು ಮಕ್ಕಳೋ? ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಮೂರು ರೀತಿಯ ಉತ್ತರ ಕೇಳಿ ಬರುತ್ತದೆ.
ಒಂದನೆಯ ಉತ್ತರ: ಹೆಣ್ಣು ಮಕ್ಕಳು. ಏಕೆಂದರೆ ಹುಡುಗರಿಗಿಂತ ಹೆಣ್ಮಕ್ಕಳಿಗೆ ಹೆಚ್ಚಿನ ವಾತ್ಸಲ್ಯ, ಪ್ರೀತಿ, ಅನುಕಂಪವಿರುತ್ತದೆ. ಗಂಡು ಮಕ್ಕಳಿಗೆ ಅವರದೇ ಆದ ಕೆಲಸದ ಒತ್ತಡದಲ್ಲಿರುತ್ತಾರೆ.
ಎರಡನೇಯ ಉತ್ತರ: ಗಂಡು ಮಕ್ಕಳು, ಅವರಿಗೆ ಹೆತ್ತವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸಲು ಸಾಧ್ಯವಾಗುತ್ತದೆ. ಅವರದ್ದೇ ತೀರ್ಮಾನ ನಡೆಯುವುದಲ್ಲವೇ? ಹೆಣ್ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋಗುವವರು. ತನ್ನ ಮಕ್ಕಳು ಮರಿಗಳೊಂದಿಗೆ ಬಿಝಿಯಾಗಿರುತ್ತಾರೆ.
ಇನ್ನು ಮೂರನೆಯದು ಹೆತ್ತವರಿಗೆ ಒಳಿತನ್ನು ಮಾಡುವುದು ಎಂಬುದು ಒಂದು ಸ್ವಭಾವ ಮತ್ತು ಸಂಸ್ಕಾರವಾಗಿದೆ. ಅದರಲ್ಲಿ ಗಂಡೋ-ಹೆಣ್ಣೋ ಎಂಬ ವ್ಯತ್ಯಾಸವಿಲ್ಲ. ಯಾರಲ್ಲಿ ಅಂತಹ ಉತ್ತಮ ಗುಣನಡತೆ, ಸ್ವಭಾವವಿರುತ್ತದೋ ಅದೇ ಮುಖ್ಯವಾಗುತ್ತದೆ. ಗಂಡು ಮಕ್ಕಳಿಗೆ ಅಮ್ಮನೊಂದಿಗೆ ಮತ್ತು ಹೆಣ್ಣು ಮಕ್ಕಳಿಗೆ ತಂದೆಯೊಂದಿಗೆ ಹೆಚ್ಚು ಪ್ರೀತಿ ಎಂಬ ನುಡಿಯಿದೆ. ಆದ್ದರಿಂದ ಹೀಗೆ ನೋಡುವಾಗ ನನಗೆ ಮೂರನೇ ಉತ್ತರವೇ ಸರಿಯೆನಿಸುತ್ತದೆ.
ಹೆತ್ತವರೊಂದಿಗೆ ಗಂಡು ಮಕ್ಕಳೂ ಹೆಣ್ಮಕ್ಕಳೂ ಉತ್ತಮ ರೀತಿಯಲ್ಲಿ ವರ್ತಿಸುವ ಓರ್ವರು ಅವರ ಕೈಯಲ್ಲಿ ಒಂದು ಬೀಸಣಿಕೆ ಹಿಡಿದು ಕೊಂಡೇ ನಡೆಯುತ್ತಿದ್ದರು. ಉನ್ನತ ಉದ್ಯೋಗದಲ್ಲಿರುವ ವ್ಯಕ್ತಿ.
“ನೀವು ಯಾವಾಗಲೂ ಈ ಚಿಕ್ಕ ಬೀಸಣಿಕೆಯಲ್ಲಿ ಕೈಯಲ್ಲಿ ಹಿಡಿದಿರುವುದೇಕೆ?
ನಿಮಗೇನು ಅನಿಸುತ್ತದೆ?”
“ಬಿಸಿಯು ತೀವ್ರವಾದಾಗ ಗಾಳಿ ಹಾಕಲಿಕ್ಕೆ ಆಗುತ್ತದೆ.”
ಆತ: “ಅದಲ್ಲ, ವಿಷಯ, ನನ್ನ ತಂದೆಯ ವಿಷಯ ತಿಳಿದರೆ ಇದು ನಿಮಗೆ ಮನವರಿಕೆಯಾಗುತ್ತದೆ.”
“ತಂದೆ ಮತ್ತು ಬೀಸಣಿಕೆಗೆ ಏನು ಸಂಬಂಧ?”
“ಈ ಬೀಸಣಿಕೆಯು ನನ್ನ ತಂದೆಗಾಗಿ. ನನ್ನ ತಂದೆಯು ಮುಂಗೋಪಿ ಸ್ವಭಾವದವರು. ಬಹಳ ಕೋಪ ಅವರಿಗೆ. ಬಿಸಿ ಚಹ ಕೊಟ್ಟರೆ ಅದರ ಬಿಸಿ ಆರುವವರೆಗೂ ಅವರಿಗೆ ಕ್ಷಮಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಅದನ್ನು ಬೇಗನೇ ಕುಡಿಯಬೇಕು. ಚಹ ತಣ್ಣಗಾಗಲು ಪಾತ್ರೆಗೆ ಊದುವುದು ನನಗೆ ಇಷ್ಟವಿಲ್ಲ. ಏಕೆಂದರೆ ಅದು ಅಲ್ಲಾಹನ ಆದೇಶಕ್ಕೆ ವಿರುದ್ಧವಲ್ಲವೇ? ನೀನು ಅವರೀರ್ವರಲ್ಲಿ `ಛೆ’ ಎಂಬ ಮಾತು ಕೂಡಾ ಹೇಳಬಾರದು. ದ್ವೇಷದ ಮಾತನ್ನಾಡಬಾರದು. ಆಗ ನಾನು ಚಹ ತಣಿಸಲು ಈ ಬೀಸಣಿಕೆಯನ್ನು ಉಪಯೋಗಿಸುತ್ತೇನೆ.” ತಂದೆ-ತಾಯಿಯನ್ನು ಅಷ್ಟು ಕೂಡ ನೋಯಿಸಬಾರದೆಂಬ ಇವರ ಚಿಂತನೆಯೇ ಈ ವಿಚಿತ್ರ ಸೂತ್ರಕ್ಕೆ ಪ್ರೇರೇಪಿಸಿತ್ತು.
ತಂದೆ-ತಾಯಂದಿರಿಗೆ ಅರೋಚಕವಾದ ಯಾವುದನ್ನು ಕೂಡಾ ಮಾಡಬಾರದು ಎಂದು ಅವರಿಗೆ ತೊಂದರೆ, ಉಪದ್ರವ ನೀಡಬಾರದು. ಅದು ಎಷ್ಟೇ ಸಣ್ಣದಾದರೂ ದೊಡ್ಡದಾದರೂ ಅವರ ಮನ ದುಃಖಿಸುವಂತಾಗಬಾರದು. ಅವರ ಆದೇಶ, ನಿಷೇಧಗಳನ್ನು ಉಲ್ಲಂಘಿಸುವುದು ಕೂಡಾ ಅದೇ ಗಣಕ್ಕೆ ಸೇರುತ್ತದೆ. ಅವರ ಆದೇಶವು ಅಲ್ಲಾಹನ ಆದೇಶಕ್ಕೆ ವಿರುದ್ಧವಾಗುವುದಾದರೆ ಹೊರತು ಅವರ ಮಾತನ್ನು ಪಾಲಿಸಬೇಕು. ಆದರೆ ಸೃಷ್ಟಿಕರ್ತನೊಂದಿಗೆ ಅವಿಧೇಯತೆ ತೋರಿಸಿ ಸೃಷ್ಟಿಗಳನ್ನು ಅನುಸರಿಸುವ ಪ್ರಶ್ನೆಯೇ ಇಲ್ಲ.
ಹೆತ್ತವರನ್ನು ದ್ರೋಹಿಸುವುದೆಂದರೆ ಅದು ದೈಹಿಕ ಹಿಂಸೆಯಾಗಿರಬಹುದು. ಹೊಡೆತ, ಬಡಿತ, ತಳ್ಳುವುದು- ಹೀಗೆ ನಾಲಗೆಯಿಂದಲೂ ಆಗಬಹುದು. ಬೈಗುಳ, ಬೆದರಿಕೆ, ಎಚ್ಚರಿಕೆ, ಅವಮಾನ, ಪರಿಹಾಸ್ಯ… ಹೀಗೆ ಹಲವು ರೀತಿಯಿಂದ ದ್ರೋಹವೆಸಗುತ್ತಾರೆ.
ಹೆತ್ತವರನ್ನು ಸಂರಕ್ಷಿಸುವ ತಮ್ಮ ಜವಾಬ್ದಾರಿಯಿಂದ ಮಕ್ಕಳು ದೂರವುಳಿಯುವುದೂ ಕೂಡ ಇದೇ ಗಣಕ್ಕೆ ಸೇರುತ್ತದೆ. ಅವರನ್ನು ಉಪೇಕ್ಷಿಸುವುದು, ಹಣವನ್ನು ಕೇಳಿ ನಿರಂತರ ಕಿರುಕುಳ ನೀಡುವುದು, ಶ್ರೀಮಂತ ಮಕ್ಕಳು ಬಡ ಹೆತ್ತವರಿಗೆ ಏನೂ ನೀಡದಿರುವುದು ಅಥವಾ ಪೋಷಿಸುವ ಭಾರವನ್ನು ಅವರ ಮೇಲೆಯೇ ಹೊರಿಸುವುದು ಹೀಗೆ ಹಲವಾರು ರೀತಿಯ ಉಪಟಳಗಳಿವೆ.
ಬಹುದೇವಾರಾಧಕರಾದ ತಂದೆಯನ್ನು ಪುತ್ರ ಇಬ್ರಾಹೀಮ್(ಅ)ರು ಸಂಭೋದಿಸಿದ್ದು ಎಷ್ಟೊಂದು ಪ್ರೀತಿಯಿಂದ ಆಗಿತ್ತು. `ನನ್ನ ಪ್ರೀತಿಯ ಅಪ್ಪಾ’ (ಯಾ ಅಬ್ತಿ). ಅದರಲ್ಲಿ ಆದರವಿದೆ. ಪ್ರೀತಿಯಿದೆ, ಆತ್ಮೀಯತೆಯಿದೆ, ಮಾಧುರ್ಯವಿದೆ. ಇವೆಲ್ಲಾ `ಬಿರ್ರ್’ ಎಂಬ ಪದದ ಅರ್ಥವ್ಯಾಪ್ತಿಗೆ ಸೇರುತ್ತದೆ.
ಮಾತಾಪಿತರ ಸ್ಥಾನವು ಅತ್ಯಂತ ಹಿರಿದಾದುದು. ನಮಾಝ್ನ ನಿಷ್ಠೆಯ ಬಳಿಕ ಸ್ಥಾನವು ಅದಕ್ಕೆ ಇದೆ. ಅಲ್ಲಾಹನ ಮಾರ್ಗದ ಜಿಹಾದ ಕೂಡಾ ಅದರ ಬಳಿಕವಿದೆ.
ಅಬ್ದುಲ್ಲಾ ಇಬ್ನು ಮಸ್ಊದ್ ಪ್ರವಾ ದಿ(ಸ)ರೊಂದಿಗೆ ಕೇಳಿದರು: “ಅಲ್ಲಾಹನಿಗೆ ಅತ್ಯಂತ ಪ್ರಿಯವಾದ ಕರ್ಮ ಯಾವುದು?”
ಪ್ರವಾದಿ(ಸ): “ನಮಾಝ್ ಅದರ ಕ್ರಮ ಪ್ರಕಾರ ನಿರ್ವಹಿಸುವುದು.”
“ಬಳಿಕ?”
ಪ್ರವಾದಿ(ಸ): “ಮಾತಾಪಿತರಿಗೆ ಒಳಿತನ್ನು ಮಾಡುವುದು.”
“ಬಳಿಕ ಯಾವುದು ಪ್ರವಾದಿಯರ್ವರೇ(ಸ)?”
“ಅಲ್ಲಾಹನ ಮಾರ್ಗದಲ್ಲಿ ಜಿಹಾದ್.”
ಮಕ್ಕಳು ಹೆತ್ತವರ ಆವಶ್ಯಕತೆಗಳನ್ನು ಸ್ವಯಂ ತಿಳಿದುಕೊಂಡು ನಿರ್ವಹಿಸಬೇಕು. ಹೆತ್ತವರ ಸಮವಯಸ್ಕರ ಅಗತ್ಯತೆಗಳು ಏನೆಲ್ಲಾ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಮಾತಾಪಿತರೊಂದಿಗೆ ಮಾತನಾಡುವಾಗ, ಇತರ ಕಾರ್ಯ ಗಳನ್ನು ನಿರ್ವಹಿಸುವುದು, ಅದು ಮೊಬೈಲನ್ನು ಅದುಮುವುದು ಆಗಿದ್ದರೂ ಒಳ್ಳೆಯದಲ್ಲ. ಅದನ್ನು ಅವರು ತನ್ನ ಮೇಲಿನ ಅಗೌರವ ಮತ್ತು ನಿರ್ಲಕ್ಷ್ಯವೆಂದೇ ಪರಿಗಣಿಸುತ್ತಾರೆ. ಮಾತನಾಡುವಾಗ ತುಟಿಯ ಚಲನೆಯೂ ಕೂಡ ಹೆತ್ತವರೊಂದಿಗಿನ ಒಳಿತು ತುಂಬಿದ ಸದ್ವರ್ತನೆಯ ಸಾಲಿನಲ್ಲಿ ಸೇರುತ್ತದೆ ಎಂಬುದು ನೆನಪಿರಲಿ.
ಇನ್ನೊಂದು ಕಥೆ ನೆನಪಿಗೆ ಬರುತ್ತಿದೆ. ಹೆತ್ತವರ ಮರಣದ ಬಳಿಕ ಹೆಣ್ಮಗಳು ತಂದೆಯ ಹೆಸರಿನಲ್ಲಿ ಪತ್ರ ಬರೆದಳು. ಆ ಪತ್ರವನ್ನು ಸಹೋದರ ಮತ್ತು ಸಹೋದರಿಯರಿಗೆಲ್ಲಾ ಅವಳು ಕಳಿಸಿಕೊಟ್ಟಳು. ಅದರಲ್ಲಿನ ವಾಕ್ಯಗಳು ತಂದೆ ಬರೆದ ರೀತಿಯಲ್ಲೇ ಬರೆಯಲಾಗಿತ್ತು. ತನಗಾಗಿ ಪ್ರಾರ್ಥಿಸಬೇಕು, ದಾನ-ಧರ್ಮ ಮಾಡಬೇಕು ಎಂದೆಲ್ಲಾ ಅದರಲ್ಲಿ ಬರೆಯಲಾಗಿತ್ತು. ಅದು ಮನಸ್ಸಿಗೆ ನಾಟಿದ ಮಕ್ಕಳು ಆ ತಂದೆಯ ಹೆಸರಿನಲ್ಲಿ ಒಂದು ಚಾರಿಟಿ ಪ್ರೊಜೆಕ್ಟ್ ಮಾಡಿ ಅದನ್ನು ಜಾರಿಗೊಳಿಸಿದರು. ಬುದ್ಧಿವಂತೆಯಾದ ಆ ಹುಡುಗಿ ತನ್ನ ಹೆತ್ತವರಿಗಾಗಿ ಮಾಡುವ ಒಳಿತಿನಲ್ಲಿ ಇತಿಹಾಸ ಸೃಷ್ಟಿಸಿದಳು.
IslamKannada News Portal



