Home / ವಾರ್ತೆಗಳು / ಉದ್ರಿಕ್ತ ಜನ ಸಮೂಹದಿಂದ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಬಿಜೆಪಿ ಕೌನ್ಸಿಲರ್

ಉದ್ರಿಕ್ತ ಜನ ಸಮೂಹದಿಂದ ಮುಸ್ಲಿಂ ಕುಟುಂಬವನ್ನು ರಕ್ಷಿಸಿದ ಬಿಜೆಪಿ ಕೌನ್ಸಿಲರ್

ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ದೆಹಲಿಯ ಅನೇಕ ಪ್ರದೇಶಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮುಂದುವರೆದಿದ್ದು, ಬಿಜೆಪಿ ಪಕ್ಷದ ಕೌನ್ಸಿಲರ್ ರೊಬ್ಬರು ಉದ್ರಿಕ್ತ ಜನ ಸಮೂಹದಿಂದ ಮುಸ್ಲಿಂ ಕುಟುಂಬವನ್ನು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ವರದಿಯಾಗಿದೆ. ದೆಹಲಿಯ ಯಮುನಾ ವಿಹಾರ್‌ನ ಬಿಜೆಪಿ ವಾರ್ಡ್ ಕೌನ್ಸಿಲರ್ ಪ್ರಮೋದ್ ಗುಪ್ತಾ ಅವರು ಶಾಹಿದ್ ಸಿದ್ದಿಕಿಯವರ ಕುಟುಂಬದ ನೆರವಿಗೆ ಬಂದು ಸುಮಾರು 150 ಹಿಂಸಾತ್ಮಕ ಜನರಿಂದ ಅವರನ್ನು ರಕ್ಷಿಸಿದ್ದು ಮಾತ್ರವಲ್ಲ ಅವರ ಮನೆಯನ್ನು ಬೆಂಕಿಯಿಂದಲೂ ರಕ್ಷಿಸಿದರು. ಈಶಾನ್ಯ ದೆಹಲಿಯ ಹಿಂಸಾಚಾರದಲ್ಲಿ ಹಲವು ಸಾವು ನೋವುಗಳು ಸಂಭವಿಸಿದೆ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಟಿವಿ ಚಾನೆಲ್‌ನೊಂದಿಗೆ ಮಾತನಾಡುತ್ತಾ, ಶಾಹಿದ್ ಸಿದ್ದಿಕಿ ನಿನ್ನೆ ರಾತ್ರಿ ನಡೆದ ಘಟನೆಯ ಬಗ್ಗೆ ವಿವರಿಸಿದರು, ಜನ ಸಮೂಹ ಇದ್ದಕ್ಕಿದ್ದಂತೆ ನೆರೆಹೊರೆಯ ಕಡೆಗೆ ಘೋಷಣೆಗಳನ್ನು ಕೂಗುತ್ತಾ ಬಂದರು. ಪೊಲೀಸ್ ಬ್ಯಾರಿಕೇಡ್ ಇಲ್ಲದಿರುವ ಮುಸ್ಲಿಂ ಬಹುಸಂಖ್ಯಾತ ಪ್ರದೇಶಕ್ಕೆ ಹೋಗುವ ರಸ್ತೆಯಿಂದ ಅವರು ಪ್ರವೇಶಿಸಿದರು. ಈ ಘಟನೆ ಸುಮಾರು 11.30 ಹೊತ್ತಿಗೆ ನಡೆದಿದೆ ಎಂದು ಸಿದ್ದಿಕಿ ತಿಳಿಸಿದ್ದಾರೆ. ಉದ್ರಿಕ್ತ ಜನರು ಮೊದಲು ಮನೆಯ ಕೆಳಗೆ ಒಂದು ಅಂಗಡಿಯನ್ನುಸುಟ್ಟರು, ಅದು ಸಿದ್ಧಿಕಿಯವರ ಬಾಡಿಗೆದಾರನಿಗೆ ಸೇರಿದ್ದಾಗಿತ್ತು. ಕಾರು ಮತ್ತು ಮೋಟಾರು ಬೈಕನ್ನು ಗಲಭೆ ನಿರತರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಸುಮಾರು 20 ಲಕ್ಷ ರೂಪಾಯಿ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಕೂಡಲೇ ಸಿದ್ಧಿಕಿಯವರ ದೀರ್ಘ ಕಾಲದ ಸ್ನೇಹಿತ ಬಿಜೆಪಿ ಕೌನ್ಸಿಲರ್ ಪ್ರಮೋದ್ ಸಿ ಗುಪ್ತಾ ಅವರು ಕುಟುಂಬವನ್ನು ರಕ್ಷಿಸಲು ಮುಂದೆ ಬಂದರು ಮತ್ತು ಇನ್ನಷ್ಟು ಹಾನಿಯಾಗದಂತೆ ಜನರನ್ನು ತಡೆದರು. ಇದರಿಂದಾಗಿ ಎರಡು ತಿಂಗಳ ಮಗು ಸಹಿತ ಹಿಂಸಾತ್ಮಕ ಗಲಭೆಯಿಂದ ಸಿದ್ದಿಕಿ ಯವರ ಕುಟುಂಬ ಬದುಕುಳಿದಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …