Home / ವಾರ್ತೆಗಳು / ಹಿಂದೂ ಮಗಳ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಮುಸ್ಲಿಮ್ ದಂಪತಿ

ಹಿಂದೂ ಮಗಳ ವಿವಾಹವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ ಮುಸ್ಲಿಮ್ ದಂಪತಿ

ಕಾಸರಗೋಡು : 10ನೇ ವಯಸ್ಸಿನಲ್ಲೇ ಹೆತ್ತವರನ್ನು ಕಳೆದುಕೊಂಡ ಬಡ ಹೆಣ್ಣು ಮಗಳನ್ನು ಅಬ್ದುಲ್ಲಾ ಹಾಗೂ ಖದೀಜ ದಂಪತಿಗಳು ಸ್ವಂತ ಮಗಳಂತೆ ಸಾಕಿ ಬೆಳೆಸಿ ಇಂದು 22 ವರ್ಷ ಪೂರ್ತಿಯಾದ ಆ ಯುವತಿಯನ್ನು ಹಿಂದೂ ಧರ್ಮದ ಸಾಂಪ್ರದಾಯಿಕ ರೀತಿಯಲ್ಲಿಯೇ ಹಿಂದೂ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದಾರೆ.

ಕರ್ನಾಟಕ ಕೇರಳ ರಾಜ್ಯದ ಗಡಿ ಕಾಸರಗೋಡು ಜಿಲ್ಲೆಯಲ್ಲಿ ಈ ಸೌಹಾರ್ದ ಮಾನವೀಯ ಘಟನೆ ನಡೆದಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ರಾಜಶ್ರೀಯ 10 ನೇ ವಯಸ್ಸಿನಲ್ಲಿ ಅವಳ ಹೆತ್ತವರು ನಿಧನರಾದರು. ಹತ್ತು ವರ್ಷಗಳ ಹಿಂದೆ ಅಬ್ದುಲ್ಲಾ ಮನೆಗೆ ಬಂದ ರಾಜಶ್ರೀಯನ್ನು ಅಬ್ದುಲ್ಲಾ ಸ್ವಂತ ಮಗಳಂತೆ ಪೋಷಿಸಿ ಬೆಳೆಸಿದರು. ಒಂದೆಡೆ ಲವ್ ಜಿಹಾದ್ ಎಂದು ಆರೋಪಿಸುವ ಈ ಕಾಲದಲ್ಲಿ ಅಬ್ದುಲ್ಲಾ ದಂಪತಿ ರಾಜಶ್ರೀಯನ್ನು ತನ್ನ ಮನೆಯಲ್ಲಿ ಹಿಂದೂ ನಂಬಿಕೆಯಂತೆ ಬಾಳಲು ಅವಕಾಶ ಮಾಡಿಕೊಟ್ಟರು.

ಧರ್ಮ, ವಿಶ್ವಾಸ ನಂಬಿಕೆಗಳಿಂತಲೂ ಮಿಗಿಲಾಗಿ ನಮ್ಮ ಮಾನವೀಯ ಸಂಬಂಧ ಹೇಗಿರಬೇಕು ಎಂಬುದನ್ನು ಅಬ್ದುಲ್ಲಾ ಖದೀಜಾ ದಂಪತಿ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ ತನ್ನ ಹಿಂದೂ ಮಗಳ ವಿವಾಹವನ್ನು ಕನ್ಹಂಗಾಡ್ ಮೂಲದ ವಿಷ್ಣು ಪ್ರಸಾದ್ ಅವರಿಗೆ ಮಾಡಿಕೊಟ್ಟರು. ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆದಿದ್ದು ವಧು ವರರ ಕುಟುಂಬಿಕರು ಭಾಗವಹಿಸಿ ಇಬ್ಬರಿಗೂ ಹರಸಿದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …