ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಪೌರತ್ವ ಶಾಸನದ ಪರ ವಿರೋಧಿ ಘರ್ಷಣೆ ಎರಡನೇ ದಿನವೂ ಮುಂದುವರಿದಿದ್ದು ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಯ ವೇಳೆಯಲ್ಲೇ ಕೆಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಪರಸ್ಪರ ಕಲ್ಲು ತೂರಾಟ ನಡೆದಿದ್ದು, ವಾಹನಗಳು, ಅಂಗಡಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಭೆಗೆ ಓರ್ವ ಮುಖ್ಯ ಪೇದೆ, ಪತ್ರಕರ್ತ ಬಲಿಯಾಗಿದ್ದು ಡಿಸಿಪಿಯೊಬ್ಬರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾತ್ರವಲ್ಲ ಹಲವೆಡೆ ಬೀದಿ ಕಾಳಗದ ವಾತಾವರಣ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ರಾಜ್ ಘಾಟ್ ನ ಮಹಾತ್ಮಾ ಗಾಂಧಿ ಸಮಾಧಿಯ ಮುಂದೆ ಶಾಂತಿ ಪ್ರಾರ್ಥನೆ ಮಾಡಿದ್ದಾರೆ. ಮಾತ್ರವಲ್ಲ ಹಿಂಸೆಯನ್ನು ನಿಲ್ಲಿಸಿ, ಈ ಹಿಂಸಾಚಾರದಲ್ಲಿ ಹಿಂದೂ ಮುಸ್ಲಿಂ ಮತ್ತು ಪೊಲೀಸರು ಸಾಯುತ್ತಿದ್ದಾರೆ. ಮನೆ ಅಂಗಡಿಗಳು ಬೆಂಕಿಗೆ ಆಹುತಿಯಾಗುತ್ತಿದೆ. ಇದರಿಂದ ಯಾರಿಗೂ ಪ್ರಯೋಜನವಿಲ್ಲ, ಈ ಹುಚ್ಚುತನ ಕೊನೆಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಹಲವಾರು ಆಪ್ ನಾಯಕರು ಹಾಜರಿದ್ದರು.
Delhi CM Arvind Kejriwal: Everyone wants that the violence be stopped. The Home Minister had called a meeting today, it was a positive one. It was decided that all the political parties will ensure that peace returns to our city. #NortheastDelhi pic.twitter.com/OXQtZES6by
— ANI (@ANI) February 25, 2020
ದೆಹಲಿ ಹಿಂಸಾಚಾರದ ಬಗ್ಗೆ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾಹ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಕೇಜ್ರಿವಾಲ್ ಸಭೆಯ ಬಳಿಕ ಹೇಳಿದರು. ಫೆಬ್ರವರಿಯಲ್ಲಿ ದೆಹಲಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದ ಮುಖ್ಯಮಂತ್ರಿ, ದೆಹಲಿ ಪೊಲೀಸರು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂಬ ಹಳೆಯ ಸಬೂಬು ಹೇಳಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟೀಕೆಗೆ ಒಳಗಾಗಿದ್ದಾರೆ.
Am v worried abt prevailing situation in certain parts of Del. All of us together shud make all efforts to restore peace in our city. I again urge everyone to shun violence
Am meeting all MLAs (of all parties) of affected areas along wid senior officials in a while
— Arvind Kejriwal (@ArvindKejriwal) February 25, 2020
ಸ್ಥಳೀಯ ದೇವಾಲಯಗಳು, ಗುರುದ್ವಾರ ಮತ್ತು ಮಸೀದಿಗಳಿಗೆ ಶಾಂತಿ ಸಭೆ ನಡೆಸುವಂತೆ ಮನವಿ ಮಾಡಿದ ಕೇಜ್ರಿವಾಲ್, ದೇವಾಲಯಗಳ ಮತ್ತು ಮಸೀದಿ ಗುರುದ್ವಾರಗಳ ಧ್ವನಿವರ್ಧಕಗಳಿಂದ ಶಾಂತಿಯ ಮನವಿಯನ್ನು ನೀಡುವಂತೆ ಕರೆ ಕೊಟ್ಟಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಶಾಂತಿ ಸಮಿತಿಗಳನ್ನು ರಚಿಸಲಾಗುವುದು, ಇದರಲ್ಲಿ ಎಲ್ಲಾ ಧರ್ಮದ ಜನರು ಮತ್ತು ಸ್ಥಳೀಯ ಶಾಸಕರು ಸದಸ್ಯರಾಗಲಿದ್ದಾರೆ ಎಂದು ಹೇಳಿದರು.
IslamKannada News Portal
