ಜಮಾಅತೆ ಇಸ್ಲಾಮೀ ಹಿಂದ್ ಮಾನ್ವಿ ಮತ್ತು ಕುರ್ ಆನ್ ಪ್ರವಚನ ಸ್ವಾಗತ ಸಮಿತಿ ವತಿಯಿಂದ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ 5ನೇ ಬಾರಿಗೆ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ದಿನಾಂಕ 29/02/2020 ರಿಂದ 2/03/2020ರ ವರೆಗೆ TAPCMS ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.
ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ| ಮುಹಮ್ಮದ್ ಕುಂಞಯವರು ‘ಶಾಂತಿಯ ಮಾರ್ಗ’, ‘ಮಾನವ ಘನತೆ’ ಹಾಗೂ’ಬದುಕಿನ ವಾಸ್ತವಿಕತೆ’ ಎಂಬ ವಿಷಯಗಳಲ್ಲಿ ಪ್ರವಚನ ನೀಡಿದರು.
3 ದಿನಗಳ ಪ್ರವಚನ ಕಾರ್ಯಗಳಲ್ಲಿ ಪಂಚಮಸಾಲಿ ಪೀಠ ಕೂಡಲ ಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಶ್ರೀ 1008 ಸುಬುಧೇಂದ್ರ ತೀರ್ಥ ಸ್ವಾಮೀಜಿ, ಮಾನವಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಕಲ್ಬುರ್ಗಿ ಚಿಗರಹಳ್ಳಿ ಮಠದ ಶ್ರೀ ಸಿದ್ಧ ಬಸವ ಕಬೀರ ಸ್ವಾಮಿಗಳು, ಮೆಥೊಡಿಸ್ಟ್ ಚರ್ಚ್ ನ ಶ್ರೀ ಲೂಕ್ ಸುರೇಂದರ್, ಶ್ರೀ ಟಿ. ಜ್ಞಾನ ಪ್ರಕಾಶಂ, ಅರುಣ್ ಲೂಯಿಸ್ ಅಲ್ಲದೇ ಸ್ಥಳೀಯ ಶಾಸಕರು, ಸಂಸದರು, ಜನ ಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
IslamKannada News Portal
