ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿ ಜಮಾಅತೆ ಇಸ್ಲಾಮಿ ಹಿಂದ್ ಕೈಗೊಂಡ ಪರಿಹಾರ ಕಾರ್ಯಗಳ ಕುರಿತಂತೆ ಜಮಾಅತ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಅವರು ಮಾಧ್ಯಮಗಳಿಗೆ ವಿವರನ್ನು ನೀಡಿದ್ದಾರೆ. ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಅಹ್ಮದ್ ಅವರ ನೇತೃತ್ವದಲ್ಲಿ ಜಮಾಅತ್ ತನ್ನ ಪರಿಹಾರ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಇದಕ್ಕಾಗಿ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದೆ.
ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳನ್ನು ಸಮನ್ವಯದೊಂದಿಗೆ ಮತ್ತು ಹಂತ ಹಂತವಾಗಿ ನಡೆಸಲಾಗುತ್ತಿದೆ. ಸಮೀಕ್ಷೆ ನಡೆಸುವುದು ಮತ್ತು ಹಾನಿಯ ಪ್ರಮಾಣವನ್ನು ನಿರ್ಣಯಿಸುವುದು, ಸರ್ಕಾರ ಘೋಷಿಸಿದ ಪ್ರಯೋಜನಗಳನ್ನು ಪಡೆಯಲು ಮತ್ತು ಬಲಿಪಶುಗಳ ಆಪ್ತ ಸಮಾಲೋಚನೆಗೆ ವ್ಯವಸ್ಥೆ ಮಾಡಿದೆ. ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರಿಗೆ ಜಮಾಅತ್ ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದೆ.
ಎಫ್ಐಆರ್ ಳನ್ನು ನೋಂದಾಯಿಸುವ ಮತ್ತು ಕಾನೂನು ಕ್ರಮ ಜರುಗಿಸುವ ಕೆಲಸದಲ್ಲೂ ಜಮಾಅತ್ ಸಹಾಯ ಮಾಡುತ್ತಿದೆ. ಜಮಾಅತ್ ಮತ್ತು ಅದರ ಅಂಗ ಸಂಸ್ಥೆಗಳ ಕಾರ್ಯಕರ್ತರು, ಮಹಿಳೆಯರು ಮತ್ತು ಯುವತಿಯರು ಸೇರಿದಂತೆ ಸಮರ್ಪಿತ ಸ್ವಯಂ ಸೇವಕರ ತಂಡವನ್ನು ಹೊಂದಿದ್ದು, ಅವರು ನಮ್ಮ ಎಲ್ಲ ಪ್ರಯತ್ನಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.
ಆಹಾರ-ಕಿಟ್ಗಳು ಮತ್ತು ಪಡಿತರ ಕಿಟ್ಗಳ ಪೂರೈಕೆಯನ್ನು ಜಮಾಅತ್ ನಿರಂತರ ಮಾಡುತ್ತಿದ್ದು, ಇದು ಸಾಮಾನ್ಯವಾಗಿ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ಬಿಸ್ಕತ್ತು, ಬೋನ್ರ್ವಿಟಾ, ಚಾಕೊಲೇಟ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಮಾರ್ಚ್ರ ವರೆಗೆ ವಿತರಿಸಲಾದ ಮಾಹಿತಿಯನ್ನು ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಈಶಾನ್ಯ ದೆಹಲಿ ಪ್ರದೇಶಗಳಲ್ಲಿ 8 ಶಿಬಿರಗಳಲ್ಲಿ 2000 ಆಹಾರ ಕಿಟ್ಗಳನ್ನು ವಿತರಿಸಲಾಗಿದೆ. 1,504 ಜನರಿಗೆ ವೈದ್ಯಕೀಯ ತುರ್ತು ಪರಿಹಾರವನ್ನು ಒದಗಿಸಲಾಗಿದೆ. 1500 ಜನರಿಗೆ 1 ಲಕ್ಪದ 20 ಸಾವಿರ ರೂಪಾಯಿ ಮೌಲ್ಯದ ವೈದ್ಯಕೀಯ ಸವಲತ್ತುಗಳು, ಕಂಬಳಿಗಳು, ಕರ ವಸ್ತ್ರಗಳು, ಒಳ ಉಡುಪುಗಳನ್ನು ವಿತರಿಸಲಾಗಿದೆ. 550 ಮಕ್ಕಳಿಗೆ ಮಕ್ಕಳ ಆಹಾರವನ್ನು ಒದಗಿಸಲಾಗಿದೆ.
ಗಲಭೆಯ ಅವಧಿಯಲ್ಲಿ ಮತ್ತು ಅದರ ನಂತರದ ದಿನಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ 17 ಮಂದಿಯನ್ನು ಅಲ್-ಶಿಫಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್-ಶಿಫಾ ಆಸ್ಪತ್ರೆಯಲ್ಲಿ ಗಲಭೆ ಪೀಡಿತ 13 ಮಂದಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
ವೃತ್ತಿಪರ ಸಲಹೆಗಾರರ ತಂಡ (ಗಂಡು ಮತ್ತು ಹೆಣ್ಣು) ಜಿಟಿಬಿ ಮತ್ತು ಎಲ್ ಎನ್ಜೆಪಿ ಆಸ್ಪತ್ರೆಗಳಲ್ಲಿ ಗಲಭೆ ಪೀಡಿತರ ಜೊತೆ ಸಮಾಲೋಚನೆ, ನೆರವನ್ನು ಒದಗಿಸಿದೆ. ಮುಸ್ತಫಾಬಾದ್, ಈದ್ಗಾದಲ್ಲಿ ಪರಿಹಾರ ಶಿಬಿರವನ್ನು ಸ್ಥಾಪಿಸಲಾಗಿದೆ. ಮುಸ್ತಾಬಾದ್ ಪರಿಹಾರ ಶಿಬಿರದಲ್ಲಿ ಮಹಿಳಾ ಸಂತ್ರಸ್ತರ ಜೊತೆ ಸಮಾಲೋಚನೆ ನಡೆಸಲಾಗಿದೆ.
ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಈಗಾಗಲೇ, 100 ಕ್ಕೂ ಹೆಚ್ಚು ಸಂತ್ರಸ್ತರ ಪರಿಹಾರ ಸಂಬಂಧಿಸಿದ ಅರ್ಜಿಗಳನ್ನು ತುಂಬಲಾಗಿದೆ. ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕಾಗಿ ವಕೀಲರ ತಂಡವನ್ನು ರೂಪಿಸಲಾಗಿದ್ದು, 10 ಪೊಲೀಸ್ ಠಾಣೆಗಳಲ್ಲಿ ದಾಖಲಾದ 500 ಎಫ್ಐಆರ್ ಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ದೆಹಲಿ ವಿಶ್ವವಿದ್ಯಾಲಯದ ತಜ್ಞರೊಬ್ಬರು ಸರ್ವೆ ಸ್ವಯಂ ಸೇವಕರ ತರಬೇತಿಗಾಗಿ ಕಾರ್ಯಾಗಾರವನ್ನು ನಡೆಸಿದ್ದು, ಇದರಲ್ಲಿ 60 ಪುರುಷರು ಮತ್ತು ಮಹಿಳೆಯರು ಭಾಗವಹಿಸಿದ್ದರು. ಹಾಗೆಯೇ, ವಿವರವಾದ ಸಮೀಕ್ಷೆ ಫಾರ್ಮ್ ಅನ್ನು ಅಂತಿಮಗೊಳಿಸಲಾಗಿದೆ. ಗಲಭೆಯ ಸಮಯದಲ್ಲಿ ಸುಮಾರು 50ರಷ್ಟು ಮಸೀದಿಗಳು ಹಾನಿ ಅಥವಾ ಧ್ವಂಸಗೊಂಡಿದ್ದು, ಈ ಎಲ್ಲಾ ಮಸೀದಿಗಳ ಇಮಾಮ್ಗಳನ್ನು ಜಮಾಅತ್ ಪ್ರತಿನಿಧಿಗಳು ಭೇಟಿಯಾಗಲಿದ್ದಾರೆ. ಜ.ಇ. ಹಿಂದ್ ಮಹಿಳಾ ವಿಭಾಗದ ಸದಸ್ಯರು ಖಜುರಿಖಾಸ್ ಮತ್ತು ಶಿವ-ವಿಹಾರ್ ನಲ್ಲಿ ಪೀಡಿತರ ಮನೆಗಳಿಗೆ ಭೇಟಿ ನೀಡಿದ್ದಾರೆ ಎಂದವರು ಮಾಹಿತಿ ನೀಡಿದ್ದಾರೆ.
IslamKannada News Portal
