Home / Uncategorized

Uncategorized

ಪ್ರಾಣಿಬಲಿ ಇಬ್ರಾಹೀಮ್(ಅ) ಸಂಪ್ರದಾಯ

ಸತ್ಯಹರಿಶ್ಚಂದ್ರನ ಸತ್ಯವನ್ನು ಪರೀಕ್ಷಿಸುವ ವಿವಿಧ ಘಟ್ಟಗಳಲ್ಲಿ ಹೆಂಡತಿಯನ್ನು ಬಲಿಕೊಡುವ ಸಂದರ್ಭವಿದೆ. ಎಲ್ಲದರಲ್ಲೂ ಸತ್ಯಹರಿಶ್ಚಂದ್ರ ವಿಜಯಿಯಾಗುತ್ತಾರೆ. ಪ್ರವಾದಿ ಇಬ್ರಾಹೀಮರು ಸೂರ್ಯ, ಚಂದ್ರ,ನಕ್ಷತ್ರಗಳು ಅಸ್ತಮಿಸುವುದನ್ನು ಕಂಡು ಅಸ್ತಮಿಸುವುದು ದೇವರಾಗಿರಲು ಸಾಧ್ಯವಿಲ್ಲ ಎನ್ನುತ್ತಾ ಇವೆಲ್ಲದರ ಸೃಷ್ಟಿಕರ್ತನೇ ನನ್ನ ಸೃಷ್ಟಿಕರ್ತ. ನಾನು ಕೇವಲ ಭೂಮ್ಯಾಕಾಶಗಳ ಸೃಷ್ಟಿಕರ್ತನೆಡೆಗೆ ನನ್ನ ಮುಖವನ್ನು ತಿರುಗಿಸಿದೆ ಎಂದು ಘೋಷಿಸಿದಾಗ ಜೀವನದುದ್ದಕ್ಕೂ ಪರೀಕ್ಷೆ ಎದುರಾಗುತ್ತದೆ. ಸರ್ವಾಧಿಕಾರಿ ರಾಜ ನಮ್ರೂದನು ಬೆಂಕಿಗೆ ಹಾಕುತ್ತಾನೆ. ಕೊನೆಯ ಪರೀಕ್ಷೆ ಮಗನನ್ನು ಬಲಿ ನೀಡುವುದು. ಇಬ್ರಾಹೀಮರು ಯಶಸ್ವಿಯಾಗುತ್ತಾರೆ. ವಾಸ್ತವದಲ್ಲಿ …

Read More »

ಜೈಪುರ ಬಾಂಬ್ ಸ್ಫೋಟ ಆರೋಪಿ ಶಹಬಾಜ್ 12 ವರ್ಷ ಜೈಲಿನಲ್ಲಿದ್ದರು; ಈಗ ನಿರಪರಾಧಿ ಎಂದ ನ್ಯಾಯಾಲಯ

    ಜೈಪುರ: ನಿರಪರಾಧಿಯಾಗಿದ್ದರೂ 12 ವರ್ಷ ಮತ್ತು ಆರು ತಿಂಗಳು ಜೈಲಿನಲ್ಲಿ ಕಳೆದ ಶಹಬಾಜ್ ರವರು ಜೈಪುರ ಕೇಂದ್ರ ಕಾರಾಗೃಹದಿಂದ 2021 ಮಾರ್ಚ್ 1 ರಂದು ರಾತ್ರಿ 10 ಗಂಟೆಗೆ ಬಿಡುಗಡೆಗೊಂಡರು. ಆಗಸ್ಟ್ 25, 2008 ರಂದು ಜೈಪುರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉತ್ತರ ಪ್ರದೇಶದ ಭಾದೋಹಿ ನಿವಾಸಿ ಶಹಬಾಜ್ ಅವರನ್ನು ಬಂಧಿಸಲಾಗಿತ್ತು. 13 ಮೇ 2008 ರಂದು ರಾಜಸ್ಥಾನದ ರಾಜಧಾನಿಯಾದ ಜೈಪುರದಲ್ಲಿ 8 ವಿವಿಧ ಸ್ಥಳಗಳಲ್ಲಿ ಬಾಂಬ್ …

Read More »

ವ್ಯಾಪಾರದಲ್ಲಿ ಪ್ರಾಮಾಣಿಕತೆಯಿರಲಿ – ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಅಶೀರುದ್ದೀನ್ ಆಲಿಯಾ, ಮಂಜನಾಡಿ “ಅವರ ವ್ಯಾಪಾರ ಮತ್ತು ಕ್ರಯ-ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝ್‍ನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅವರನ್ನು ಅಲಕ್ಷ್ಯರಾಗಿ ಮಾಡುವುದಿಲ್ಲ. ಹೃದಯಗಳು ಪಲ್ಲಟಗೊಳ್ಳುವ ಮತ್ತು ದೃಷ್ಟಿಗಳು ಸ್ತಬ್ಧಗೊಳ್ಳುವಂತಹ ಆ ದಿನವನ್ನು ಅವರು ಭಯ ಪಡುತ್ತಿರುವರು. ಅಲ್ಲಾಹನು ಅವರಿಗೆ ಅವರ ಅತ್ಯುತ್ತಮ ಕರ್ಮದ ಫಲಗಳನ್ನು ಮತ್ತು ತನ್ನ ಅನುಗ್ರಹದಿಂದ ಇನಷ್ಟನ್ನು ದಯಪಾಲಿಸುವಂತಾಗಲಿಕ್ಕಾಗಿ (ಅವರು ಇದನ್ನೆಲ್ಲಾ ಮಾಡುತ್ತಾರೆ). ಅಲ್ಲಾಹನು  ತಾನಿಚ್ಛಿಸಿದವರಿಗೆ ಅಪರಿಮಿತವಾಗಿ ನೀಡುತ್ತಾನೆ.” (ಅನ್ನೂರ್: 37-38) ಮೇಲಿನ ಕುರ್‍ಆನ್ ಸೂಕ್ತದಲ್ಲಿ …

Read More »

ಮಅದನಿ ಮಾನವ ಹಕ್ಕು ಉಲ್ಲಂಘನೆಗೆ ಉತ್ತಮ ಉದಾಹರಣೆ: ಸಚ್ಚಿದಾನಂದನ್

ತಿರುವನಂತಪುರಂ, ನ.1: ಮಾನವ ಹಕ್ಕು ಉಲ್ಲಂಘನೆಗೆ ಉತ್ತಮ ಉದಾಹರಣೆಯಾಗಿ ಅಬ್ದುನ್ನಾಸರ್ ಮಅದನಿಯ ಸೆರೆವಾಸವನ್ನು ಮಲೆಯಾಳಂ ಕವಿ ಸಚ್ಚಿದಾನಂದನ್ ಹೋಲಿಸಿದ್ದಾರೆ. ಇಷ್ಟು ಸಮಯ ವಿಚಾರಣಾಧೀನ ಕೈದಿಯಾಗಿರಿಸಲಾಗುತ್ತದೆ ಎನ್ನುವುದು ನ್ಯಾಯ ನಿರಾಕರಣೆಯಾಗಿದೆ ಎಂದು ಅವರು ವಿಶ್ಲೇಷಿಸಿದರು. ಕೇರಳ ಸಿಟಿಝನ್ ಫಾರ್ ಮಅದನಿ ಸಂಘಟನೆ ಕೇರಳದ ವಿಧಾನ ಸಭೆಯ ಮುಂದೆ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು. ಕೃತಕವಾಗಿ ಹುಟ್ಟು ಹಾಕಲಾದ ದೇಶದ್ರೋಹ ಪ್ರಕರಣಗಳ ಮೂಲಕ ನಿರಂತರ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿದೆ. …

Read More »

ಮುಂದಿನ ಜೀವನ

ಇಸ್ಲಾಮ್ ಧರ್ಮವು ಏಕದೇವ ವಿಶ್ವಾಸ, ಪ್ರವಾದಿತ್ವ ಮತ್ತು ಪರಲೋಕ ಎಂಬ ಮೂರು ಮೂಲಭೂತ ವಿಶ್ವಾಸಗಳಲ್ಲಿ ನೆಲೆ ನಿಂತಿದೆ. ಪರಲೋಕದ ಕುರಿತು ಎಲ್ಲ ಧರ್ಮಗಳಲ್ಲಿಯೂ ವಿಭಿನ್ನ ಕಲ್ಪನೆಗಳಿವೆ. ಇಸ್ಲಾಮಿನ ಪರಲೋಕ ಕಲ್ಪನೆಯು ವಿಶಿಷ್ಟವೂ ಸುಸ್ಪಷ್ಟವೂ ಆಗಿದೆ. ಮಾನವ ಜೀವನವು ಮುಖ್ಯವಾಗಿ ಮೂರು ಹಂತಗಳನ್ನು ದಾಟಬೇಕು. ಅದರಲ್ಲಿ ಭೂಲೋಕ ಜೀವನವು ಪ್ರಥಮ ಹಂತ. ಎರಡನೆಯ ಹಂತವು ಮರಣ ಮತ್ತು ಪುನರುತ್ಥಾನ ದಿನದ ಮಧ್ಯಂತರವಾಗಿದ್ದು ಆತ್ಮ ಪ್ರಧಾನ ಜೀವನವಾಗಿದೆ. ಮೂರನೆಯ ಹಂತವು ಒಳಿತು ಕೆಡುಕುಗಳಿಗೆ …

Read More »

ಪರಲೋಕ

ನಾನು, ನಾವು, ನೀನು, ನೀವು ಎಂದೆಲ್ಲ ನಾವು ಹೇಳುತ್ತೇವೆ ಅಲ್ಲವೇ? ನಾವು ಹೀಗೆ ಹೇಳುವುದರ ಉದ್ದೇಶವೇನು? ಪ್ರಾಣ ಹೋಗುವುದರೊಂದಿಗೆ ನೀನು, ನಾನು ಇಲ್ಲದಾಗುತ್ತದೆ. ನಮ್ಮ ಶರೀರವೂ ಇಲ್ಲವಾಗುತ್ತದೆ. ಹಾಗಿದ್ದರೆ ಮತ್ತೇನು ನಮ್ಮ ಉದ್ದೇಶ? ಜೀವವು ನಮ್ಮ ಸಂಬೋಧನೆಯ ಉದ್ದೇಶವಾಗಿರಬಹುದೇ? ಹಾಗಿದ್ದರೆ ಜೀವವೆಂದರೇನು? ಜೀವ ಇರುವುದೆಲ್ಲವೂ ಮನುಷ್ಯರಲ್ಲವಲ್ಲ. ಸಂತೋಷ, ದುಃಖ, ಪ್ರೀತಿ, ದ್ವೇಷದಂತಹ ಭಾವನೆಗಳನ್ನು ಜೀವಿಸಿರುವ ನಾವು ಅನುಭವಿಸುತ್ತೇವೆ. ಪ್ರೀತಿಸುವುದು, ದ್ವೇಷಿಸುವುದು, ಸಂತೋಷಪಡುವುದು, ದುಃಖಿಸುವುದು ನಮ್ಮ ಜೀವವೇ. ಸಸ್ಯಗಳಾದಿ ಜೀವವಿರುವ ಎಲ್ಲವೂ …

Read More »

ಪ್ರವಾದಿತ್ವ ವಾಸ್ತವಿಕತೆ

ಪ್ರವಾದಿತ್ವವು ಇಸ್ಲಾವಿೂ ವಿಶ್ವಾಸದಲ್ಲಿ ಅತ್ಯಂತ ಮಹತ್ವ ಪೂರ್ಣವಾಗಿದೆ. ಇಸ್ಲಾಮಿನ ಐದು ಮೂಲಭೂತ ವಿಶ್ವಾಸಗಳ ಪೈಕಿ ಆರಂಭದ ಸಾಕ್ಷ್ಯ ವಚನಗಳ ಇಂಗಿತವು ಏಕದೇವ ವಿಶ್ವಾಸ ಮತ್ತು ಪ್ರವಾದಿತ್ವ(ತೌಹೀದ್ ಮತ್ತು ರಿಸಾಲತ್)ಗಳಾಗಿವೆ. ದೇವನು ಈ ಲೋಕದಲ್ಲಿ ಮಾನವನ ಎಲ್ಲ ಆವಶ್ಯಕತೆಗಳನ್ನೂ ಪೂರೈಸಿದ್ದಾನೆ. ಹುಟ್ಟುವ ಪ್ರತಿಯೊಂದು ಮಗುವಿಗೂ ನೋಡಲು ಎರಡು ಕಣ್ಣುಗಳಿರುತ್ತವೆ. ಆಲಿಸಲು ಎರಡು ಕಿವಿಗಳಿರುತ್ತವೆ. ಮೂಸಲು ಮತ್ತು ಉಸಿರಾಡಲು ಒಂದು ಮೂಗಿರುತ್ತದೆ. ಸ್ಪರ್ಶಿಸಲು ಕೈ ಮತ್ತು ನಡೆದಾಡಲು ಕಾಲುಗಳಿರುತ್ತವೆ. ಆಲೋಚಿಸಲು ಮೆದುಳಿರುತ್ತದೆ. ಹೀಗೆ …

Read More »

ಪ್ರವಾದಿಗಳು

ಇಸ್ಲಾಮಿನ ಮೂಲಭೂತ ವಿಶ್ವಾಸಗಳಲ್ಲಿ ಪ್ರವಾದಿಗಳ ಮೇಲಿನ ವಿಶ್ವಾಸವು ಅತಿ ಪ್ರಧಾನವಾಗಿದೆ. ಪ್ರವಾದಿಗಳು ಎಂದರೆ, ಗ್ರಂಥವನ್ನು ಪಡೆಯಲು ಆ ಗ್ರಂಥದಂತೆ ಮಾನವರಿಗೆ ಮಾರ್ಗದರ್ಶನ ಮಾಡಲು ಮಾನವರಿಂದಲೇ ದೇವನು ಆಯ್ಕೆ ಮಾಡಿದ ಸಂದೇಶವಾಹಕರುಗಳಾಗಿರುತ್ತಾರೆ. ಅವರು ಅತ್ಯಂತ ಪರಿಶುದ್ಧರು, ಸುಸಂಸ್ಕ್ರತರು, ಸದ್ಗುಣಿಗಳು ಮತ್ತು ಪಕ್ವಮತಿಗಳಾದ ಮಾನವರಾಗಿರುತ್ತಾರೆ.  ಸತ್ಯಸಂಧರಲ್ಲದ ಕೆಟ್ಟ ಸ್ವಭಾವದವರನ್ನು ಮತ್ತು ಬುದ್ಧಿಮಾಂದ್ಯರನ್ನು ಪ್ರವಾದಿಗಳಾಗಿ ಆಯ್ಕೆ ಮಾಡಲಾಗುವುದಿಲ್ಲ.  ಇತರರಿಗೆ ಮಾದರಿಯಾಗಲು ಯೋಗ್ಯರಾದವರು ಮಾತ್ರ ಪ್ರವಾದಿಗಳಾಗುತ್ತಾರೆ.  ಗ್ರಂಥ ಮತ್ತು ಇತರ ದಿವ್ಯಜ್ಞಾನಗಳ ಅನುಸಾರ ಜನರಿಗೆ ನೇತೃತ್ವವನ್ನು …

Read More »

ಏಕದೇವನ ಆರಾಧನೆ

ಜಗತ್ತಿನ ಅಸಂಖ್ಯ ಬೆರಗುಗೊಳಿಸುವ ವಿಷಯಗಳಲ್ಲಿ ಧರ್ಮವು ಅತ್ಯಂತ ಪ್ರಮುಖವಾದುದು. ಮನುಷ್ಯನ ಮನಮಸ್ತಿಷ್ಕಗಳ ಮೇಲೆ ಧರ್ಮವು ಬೀರುವಷ್ಟು ಪ್ರಭಾವ ಇತರ ಯಾವುದೇ ವಿಷಯ ಅಥವಾ ವಸ್ತು ಬೀರುವುದಿಲ್ಲ. ‘ಮನುಷ್ಯನು ಹುಟ್ಟಿನಿಂದಲೇ ಧಾರ್ಮಿಕನಾಗಿರುತ್ತಾನೆ’ ಎಂಬುದು ಲೇಖಕರೊಬ್ಬರ ಮಾತು. ನೈಜ ದೇವನ ಬಗ್ಗೆ ಆತನಿಗೆ ಪರಿಜ್ಞಾನವಿಲ್ಲದಿದ್ದರೆ, ಕೃತಕ ದೇವರುಗಳನ್ನು ಆತನು ಸೃಷ್ಟಿಸಿಕೊಳ್ಳಲು ನಿರ್ಬಂಧಿತನಾಗುತ್ತಾನೆ. ಆಪತ್ತುಗಳು, ತೊಡಕುಗಳು ಮನುಷ್ಯನನ್ನು ಸುತ್ತುವರಿಯುತ್ತವೆ. ನಿಸರ್ಗದ ಶಕ್ತಿಗಳು ಸುತ್ತಲೂ ಕಾರ್ಯವೆಸಗುತ್ತಿರುವುದನ್ನು ಆತನು ನೋಡುತ್ತಿರುತ್ತಾನೆ. ಈ ಶಕ್ತಿಗಳು ಆತನ ನಿಯಂತ್ರಣದಲ್ಲಿರುವುದಿಲ್ಲ. ಈ …

Read More »

ದೇವ ವಿಶ್ವಾಸ

‘ಲಾ ಇಲಾಹ ಇಲ್ಲಲ್ಲಾಹ್’ ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ ಎಂಬ ಘೋಷಣೆಯು ಇಸ್ಲಾಮಿನ ಮೂಲ ಸಿದ್ಧಾಂತವಾಗಿದೆ. ಮಾನವಕುಲದ ಆರಂಭದಿಂದಲೇ ಎಲ್ಲ ಪ್ರವಾದಿಗಳೂ ಈ ಉನ್ನತ ವಚನವನ್ನು ಬೋಧಿಸಿದ್ದರು. ಎಲ್ಲ ವೇದ ಗ್ರಂಥಗಳೂ ಈ ಅನಶ್ವರ ಸತ್ಯವನ್ನು ಮಾನವರಿಗೆ ಕಲಿಸುತ್ತವೆ. ದಿವ್ಯ ಗ್ರಂಥಗಳಲ್ಲಿ ಅನೇಕ ತಿದ್ದುಪಡಿಗಳಾಗಿದ್ದರೂ ಅವುಗಳಲ್ಲಿ ಈ ಸತ್ಯವನ್ನು ಇಂದಿಗೂ ಸ್ಪಷ್ಟವಾಗಿ ಗುರುತಿಸಬಹುದು. ‘ಅಲ್ಲಾಹ್’ ಎಂಬ ಅರಬಿ ಪದವು ಅಖಿಲ ವಿಶ್ವದ ಸೃಷ್ಟಿಕರ್ತ, ಪರಿಪಾಲಕ ಮತ್ತು ಒಡೆಯನಾದ ಓರ್ವ ಆರಾಧ್ಯನನ್ನು ಸೂಚಿಸುತ್ತದೆ. …

Read More »