Home / editor (page 66)

editor

ಜಮಾಅತೆ ಇಸ್ಲಾಮಿ ಹಿಂದ್ ಸಿದ್ದಾಪುರ ಶಾಖೆಯ ವತಿಯಿಂದ ಸೀರತ್ ಸ್ವಚ್ಛತಾ ಅಭಿಯಾನ

ಸಿದ್ದಾಪುರ,ನ.12:- ಜಮಾಅತೆ ಇಸ್ಲಾಮಿ ಹಿಂದ್ ಸಿದ್ದಾಪುರ ಶಾಖೆಯ ವತಿಯಿಂದ ಪ್ರವಾದಿ ಜೀವನ ಮತ್ತು ಸಂದೇಶ ಪ್ರಚಾರಾರ್ಥ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯಕ್ರಮವನ್ನು ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಚಾಲನೆ ನೀಡಿದರು. ನಂತರ ಮಾತನಾಡಿ ಸ್ವಚ್ಚತೆಗೆ ಆದ್ಯತೆ ನೀಡಿ ಶುಚಿತ್ವ ಕಾಪಾಡಿಕೊಂಡಲ್ಲಿ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದ್ದು ಸ್ವಚ್ಛ ಗ್ರಾಮವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ. ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಚ್ಛತಾ ಆಂದೋಲನದ ಅಂಗವಾಗಿ ಅಂಗನವಾಡಿ ಕೇಂದ್ರಗಳ …

Read More »

ಹುತಾತ್ಮ ಯೋಧನ ತಾಯಿಯಲ್ಲಿ ಚಿಕಿತ್ಸೆಗೆ ಹಣ ಇರಲಿಲ್ಲ; ಉಚಿತ ಚಿಕಿತ್ಸೆ ನೀಡಿದ ವೈದ್ಯ ಅಲ್ತಾಫ್ ಶೇಕ್

ದೇಶಕ್ಕಾಗಿ ಸೇವೆ ಮಾಡಿ ಹುತಾತ್ಮರಾದ ಸೈನಿಕರ ಕುಟುಂಬ ಯಾವಾಗಲೂ ನಮಗೆ ಮೊದಲ ಆದ್ಯತೆಯಾಗಿದೆ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತಾಯಿಯೋರ್ವರು ಮೂತ್ರ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಅವರ ಬಳಿ ಹಣ ಇರಲಿಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಮೂತ್ರತಜ್ಞರಾದ ವೈದ್ಯ ಅಲ್ತಾಫ್ ಶೇಕ್ ಆ ತಾಯಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಉಚಿತ ಚಿಕಿತ್ಸೆ ನೀಡಿದ ಬಳಿಕ ಆ ತಾಯಿಯನ್ನು ಡಿಸ್ಚಾರ್ಜ್ ಮಾಡಿದಾಗ, ಅವರು ವೈದ್ಯರನ್ನು ತಬ್ಬಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದರು. ಈ …

Read More »

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಪ್ರೊ. ಇಮ್ರಾನ್ ಅಲಿ ಅನಾಲಿಟಿಕಲ್ ಕೆಮಿಸ್ಟ್ರಿಯಲ್ಲಿ ದೇಶದ ನಂ.1 ವಿಜ್ಞಾನಿ

ಸ್ಟ್ಯಾನ್‍ಫೋರ್ಡ್ ವಿವಿಯಿಂದ ಗೌರವ ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ರಸಾಯನ ಶಾಸ್ತ್ರ ವಿಭಾಗದ ಪ್ರೊಫೆಸರ್ ಇಮ್ರಾನ್ ಅಲಿ ಅವರನ್ನು ಅನಾಲಿಟಿಕಲ್ ಕೆಮಿಸ್ಟ್ರಿ ಕ್ಷೇತ್ರದ ಭಾರತದ ನಂ. 1 ವಿಜ್ಞಾನಿ ಹಾಗೂ ಜಗತ್ತಿನ 24ನೇ ಅತ್ಯುತ್ತಮ ವಿಜ್ಞಾನಿ ಎಂದು ಅಮೆರಿಕಾದ ಸ್ಟ್ಯಾನ್‍ಫೋರ್ಡ್ ವಿವಿಯ  ವಿಜ್ಞಾನಿಗಳ ತಂಡವೊಂದು ಗುರುತಿಸಿದೆ. ಈ ಟಾಪ್ ವಿಜ್ಞಾನಿಗಳ ಪಟ್ಟಿಯನ್ನು ಖ್ಯಾತ ಪಿಎಲ್‍ಒಎಸ್ ಬಯಾಲಜಿ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.  ಈ ಪಟ್ಟಿಯಲ್ಲಿ  ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳ  ಅತ್ಯುತ್ತಮ 68,80,389 …

Read More »

ಪ್ರವಾದಿ ‘ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ವಿಚಾರಗೋಷ್ಠಿ

ಪ್ರವಾದಿ ‘ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸೀರತ್ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಮಾನವಿ ವತಿಯಿಂದ ಸ್ಥಳೀಯ ಕುಬಾ ಮಸ್ಜೀದ್ ಸಭಾಂಗಣದಲ್ಲಿ ವಿಚಾರ ಗೋಷ್ಟಿಯನ್ನು ಹಮ್ಮಿಕೊಳ್ಳಲಾಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ರಾಜಾ ವೆಂಕಟಪ್ಪ ನಾಯಕ್ ದೊರೆ ಶಾಸಕರು ಮಾನವಿ ಸಭಿಕರನ್ನುದ್ದೇಶಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಾಗಿ ಶ್ರೀ ತಿಪ್ಪಣ್ಣ ಬಾಗಲವಾಡ, ಸಂಸ್ಥಾಪಕ ಅಧ್ಯಕ್ಷರು ಸಿದ್ಧಾರ್ಥ ಕಾಲೇಜು, ಶ್ರೀ ಮುತ್ತುರಾಜ್ ಶೆಟ್ಟಿ. ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷರು, ಆರ್ಯವೈಶ್ಯ ಸಂಘ. …

Read More »

ಪ್ರವಾದಿ ಮುಹಮ್ಮದ್(ಸ) ಮಹಾನ್ ಮಾನವತಾವಾದಿ- ಪ್ರೊ. ಮಹೇಶ್ ಚಂದ್ರಗುರು

ಮೈಸೂರು: ಪ್ರವಾದಿ ಮುಹಮ್ಮದ್‌ರವರು(ಸ) ಮಧ್ಯಪ್ರಾಚ್ಯದ ಮಕ್ಕಾದಲ್ಲಿ ಜನಿಸಿ ಅತ್ಯಂತ ಅರಾಜಕತೆ ಮತ್ತು ಶೋಷಣಾ ಪ್ರವೃತ್ತಿಗಳಿಗೆ ಗುರಿಯಾಗಿದ್ದಂತಹ ಸಮಾಜವನ್ನು ಮಾನವೀಯತೆ ಮತ್ತು ಸಮಾನತೆಯ ಕಡೆಗೆ ಮುನ್ನಡೆಸಿದರು ಎಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಪ್ರಗತಿಪರ ಚಿಂತಕಾದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಹೇಳಿದರು ಅವರು, ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವತಿಯಿಂದ ನಗರದ ಎನ್.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಅರ್ಫಾತ್ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸಂವಾದ ಕಾರ್ಯಕ್ರಮದಲ್ಲಿ …

Read More »

ಇಸ್ಲಾಮ್ ಪ್ರೇರಿತ ಪರಿಸರ ಕಾಳಜಿ

ನಾಗೇಶ್ ಹೆಗಡೆ ಖ್ಯಾತ ಪರಿಸರ ಮತ್ತು ವಿಜ್ಞಾನ ಲೇಖಕರು ಕುಂದಾಪುರ ತಾಲ್ಲೂಕಿನ ಕೋಡಿ ಗ್ರಾಮದಲ್ಲಿರುವ ಬದ್ರಿಯಾ ಮಸೀದಿಯ ಬಗ್ಗೆ ಕೇಳಿದ್ದೀರಾ? ಇದು ಜಗತ್ತಿನ ಮೊತ್ತಮೊದಲ ‘ಹಸಿರು ಮಸೀದಿ’ ಎಂದೇ ಪ್ರಖ್ಯಾತವಾಗಿದೆ. ಹಸಿರು ಎಂದರೆ ಬಣ್ಣದ ಹಸಿರಲ್ಲ. ಈ ಮಸೀದಿ ಅಚ್ಚ ಬಿಳಿ ಬಣ್ಣದಲ್ಲಿದೆ. ಆದರೆ ಮಸೀದಿಯೊಳಗೆ ಮರಗಳಿವೆ. ಪರಿಸರ ರಕ್ಷಣೆಯ ಅನೇಕ ತತ್ವಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಮಸೀದಿ ತನಗೆ ಬೇಕಾದ ವಿದ್ಯುತ್ ಶಕ್ತಿಯನ್ನು ಗಾಳಿಯಂತ್ರ ಮತ್ತು ಸೋಲಾರ್ ಫಲಕಗಳ …

Read More »

ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ

ಜಗತ್ತಿನ ಎಲ್ಲ ಮಸೀದಿಯ ಮಿನಾರಗಳಲ್ಲಿ, ಪ್ರತೀ ಆಝಾನ್ ನಲ್ಲಿ, ಪ್ರತೀ ನಮಾಝಿನಲ್ಲಿ ದಿನದ ಇಪ್ಪತ್ತನ್ನಾಲ್ಕು ಗಂಟೆಗಳಲ್ಲಿ ಮುಸಲ್ಮಾನರು ಅತ್ಯಧಿಕ ಸ್ಮರಿಸುವ ಏಕೈಕ ವ್ಯಕ್ತಿತ್ವ ಮುಹಮ್ಮದ್ (ಸ)ರಾಗಿದ್ದಾರೆ. ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರು ಎಂಬ ತಪ್ಪುಕಲ್ಪನೆಯಿದೆ. ಮುಹಮ್ಮದ್(ಸ)ರು ಇಸ್ಲಾಮ್ ಧರ್ಮದ ಸ್ಥಾಪಕರಲ್ಲ. ಭೋದಕರಾಗಿದ್ದರು. ಒಮ್ಮೆಯೂ ಸುಳ್ಳು ಹೇಳದ ಕಾರಣ ಮಕ್ಕಾವಾಸಿಗಳು ಸತ್ಯಸಂಧ ಎಂಬ ಬಿರುದಿನಿಂದ ಕರೆಯುತ್ತಿದ್ದರು. ಯುವಕರಾಗಿದ್ದಾಗ ಶಾಂತಿ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. ಯುದ್ಧ ಪ್ರಿಯ ಅರಬರಿಂದ ಬೇಸತ್ತು ಹಿರಾ ಗುಹೆಯಲ್ಲಿ ಧ್ಯಾನಮಗ್ನರಾಗಿರುತ್ತಿದ್ದರು. …

Read More »

ಪ್ರವಾದಿ ಮುಹಮ್ಮದ್, ಇಸ್ಲಾಮ್ ಮತ್ತು ಬಹುತ್ವ ಸಮಾಜಗಳು

– ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ ನಿವೃತ್ತ ಮುಖ್ಯ ನ್ಯಾಯಾಧೀಶರು, ಸರ್ವೋಚ್ಛ ನ್ಯಾಯಾಲಯ ಪ್ರವಾದಿ ಮುಹಮ್ಮದರ ಕಾಲ: ಹೆರಾಲ್ಡ್ ಲ್ಯಾಸ್ಕಿ ಹೇಳುತ್ತಾರೆ: “ಯಾವುದೇ ರಾಜ್ಯ ಸಿದ್ಧಾಂತವು ತನ್ನ ಕಾಲದ ಸಂದರ್ಭಕ್ಕೆ ಹೊರತಾಗಿ ಎಂದಿಗೂ ಅರ್ಥವಾಗುವುದಿಲ್ಲ.” ಅದೇ ರೀತಿ, ಪ್ರವಾದಿ ಮುಹಮ್ಮದರ ಕೊಡುಗೆಯನ್ನು, ಅವರ ಜನಗಳ ಲೋಕದೃಶ್ಯ ಮತ್ತು ಅವರ ಕಾಲದ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ, ಮೌಲ್ಯಾಂಕನ ಮಾಡಬೇಕಾಗುತ್ತದೆ. ಇದಕ್ಕೆ ಹಿನ್ನೆಲೆ ಎಂದರೆ 7ನೇ ಶತಮಾನದ ಅರೇಬಿಯಾ. ಇದರ ಕುರಿತು ಒಬ್ಬ ವಿದ್ವಾಸರು …

Read More »

ಪ್ರವಾದಿ ಮುಹಮ್ಮದ್(ಸ): ಬದುಕು-ಬೋಧನೆ 

– ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು) ಜಗತ್ತಿನ ಮತಾಚಾರ್ಯರಲ್ಲಿ ಮುಹಮ್ಮದ್ ಪೈಗಂಬರರ ವ್ಯಕ್ತಿತ್ವವು, ಅವರು ಪ್ರಚುರ ಪಡಿಸಿದ ಇಸ್ಲಾಮ್ ಧರ್ಮವು ವಿಶಿಷ್ಟ ಮಾತ್ರವಲ್ಲ, ಮಹತ್ವಪೂರ್ಣವಾದುದೆಂದು ಮಹಾ ಪುರುಷರು ಮೆಚ್ಚಿಕೊಂಡಿದ್ದಾರೆ. ಈ ಮೆಚ್ಚುಗೆಗೆ ಮುಖ್ಯ ಕಾರಣ, ಆಚಾರ್ಯರ ಸರಳ ಜೀವನ, ಸರ್ವ ಸಮಾನತಾ ಮನೋಧರ್ಮ ಮತ್ತು ಆ ಮತದ ಸಲ್ಲಕ್ಷಣಗಳಾದ ಏಕದೇವತೋಪಾಸನೆ, ನಿರ್ಜಾತೀಯ ನಿರ್ವರ್ಗೀಯ ಭ್ರಾತೃತ್ವ ಮತ್ತು ಸಕಲ ಜೀವನ ವ್ಯವಹಾರ ನೀತಿ ಸಂಹಿತೆ. ಬಹುಭಾಗ ಮರುಭೂಮಿಯಾದ ಅರೇಬಿಯಾದ ಸಾಮಾನ್ಯ …

Read More »

ಜಿಹಾದ್ ಮತ್ತು ಯುದ್ದ

ಆಕ್ಷೇಪಕರು ಇನ್ನೊಂದು ತಪ್ಪು ಮಾಡುತ್ತಾರೆ. ಅದೇನೆಂದರೆ ಅವರು ಜಿಹಾದ್ ಮತ್ತು ಯುದ್ದವನ್ನು (ಕಿತಾಲ್) ಒಂದೇ ಶ್ರೇಣಿಯಲ್ಲಿರಿಸುತ್ತಾರೆ. ಈ ಜನರು, ಅಧ್ಯಯನ ನಡೆಸುವ ಮತ್ತು ಯಾವುದೇ ಒಂದು ವಿಷಯದ ಹಿಂದಿನ ವಾಸ್ತವಿಕತೆಯನ್ನು ಅರಿಯುವ ಪ್ರಯತ್ನ ಮಾಡುವುದಿಲ್ಲ. ವಸ್ತುತಃ ಜಿಹಾದ್‌ನ ಅರ್ಥ ಯುದ್ದವಲ್ಲ. ಬದಲಾಗಿ ಹೋರಾಡುವುದು ಸತತ ಪ್ರಯತ್ನ ಮಾಡುವುದು, ಒತ್ತಡ ಹೇರುವುದು, ಕಷ್ಟ ಕೋಟಲೆಗಳನ್ನು ಸಹಿಸುವುದು ಇತ್ಯಾದಿಗಳಾಗಿವೆ. ಪವಿತ್ರ ಕುರ್‌ಆನ್ ಒಂದೆಡೆ ಹೀಗೆನ್ನುತ್ತದೆ, “ಪೈಗಂಬರರೇ, ಸತ್ಯನಿಷೇಧಿಗಳ ಮಾತನ್ನು ಅನುಸರಿಸಲೇಬೇಡಿರಿ ಮತ್ತು ಈ …

Read More »