ಪ್ರವಾದಿ ‘ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸೀರತ್ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಮಾನವಿ ವತಿಯಿಂದ ಸ್ಥಳೀಯ ಕುಬಾ ಮಸ್ಜೀದ್ ಸಭಾಂಗಣದಲ್ಲಿ ವಿಚಾರ ಗೋಷ್ಟಿಯನ್ನು ಹಮ್ಮಿಕೊಳ್ಳಲಾಯಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ಶ್ರೀ ರಾಜಾ ವೆಂಕಟಪ್ಪ ನಾಯಕ್ ದೊರೆ ಶಾಸಕರು ಮಾನವಿ ಸಭಿಕರನ್ನುದ್ದೇಶಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಶ್ರೀ ತಿಪ್ಪಣ್ಣ ಬಾಗಲವಾಡ, ಸಂಸ್ಥಾಪಕ ಅಧ್ಯಕ್ಷರು ಸಿದ್ಧಾರ್ಥ ಕಾಲೇಜು, ಶ್ರೀ ಮುತ್ತುರಾಜ್ ಶೆಟ್ಟಿ. ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷರು, ಆರ್ಯವೈಶ್ಯ ಸಂಘ. ಸಮಾರಂಭದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.
ಜ.ಇ.ಹಿಂದ್ ರಾಜ್ಯ ಜಂಟಿ ಕಾರ್ಯದರ್ಶಿ ರಿಯಾಝ್ ಅಹ್ಮದ್ ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನವಹಿಸಿ ಸಮಾರೋಪ ಭಾಷಣಗೈದರು. ಈ ಸಂದರ್ಭದಲ್ಲಿ ಜ.ಇ.ಹಿಂದ್ ರಾಯಚೂರ ಜಿಲ್ಲಾ ಸಂಚಾಲಕ ಮೌಲಾನಾ ಅನ್ವರ್ ಪಾಷಾ ಉಮರಿ, ಸ್ಥಾನೀಯ ಅಧ್ಯಕ್ಷ ಜ. ಅಬ್ದುಲ್ ಕರೀಮ್ ಖಾನ್, ಉಪಸ್ಥಿತರಿದ್ದರು.
IslamKannada News Portal

