Home / editor (page 67)

editor

ಇವರನ್ನು ಅರಿಯಿರಿ….

“ಇವರು ಜಗತ್ತು ಕಂಡಿರುವ ಧರ್ಮಗುರು. ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕ ಅತ್ಯಂತ ವಿಜಯಿಯೆಂದು ಅಂದಾಜಿಸಿದ ವ್ಯಕ್ತಿ!” ಅವರು ಇಂದು ಬದುಕಿರುತ್ತಿದ್ದರೆ ಆಧುನಿಕ ಕಾಲಘಟ್ಟದಲ್ಲಿ ಮಾನವ ನಾಗರಿಕತೆಯ ವಿನಾಶಕ್ಕೀಡು ಮಾಡುವ ಭೀಕರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುತ್ತಿದ್ದರು ಎಂದು ಬರ್ನಾಡ್ ಶಾ ಬರೆದಿದ್ದಾರೆ. ಅವರು ಈ ಭೂಮಿಗೆ ಕಾಲಿಟ್ಟವರಲ್ಲಿ ಅತ್ಯಂತ ಗಮನ ಸೆಳೆದ ವ್ಯಕ್ತಿ. ಅವರು ಒಂದು ಆದರ್ಶವನ್ನು ಬೋಧಿಸಿದರು. ಧಾರ್ಮಿಕ ವ್ಯವಸ್ಥೆಯನ್ನೊಳಗೊಂಡ ಒಂದು ರಾಷ್ಟ್ರವನ್ನು ಕಟ್ಟಿದರು. ಅನೇಕ ಸಾಮಾಜಿಕ, ರಾಜಕೀಯ ಸುಧಾರಣೆಗಳಿಗೆ …

Read More »

‘ಅನಾಥ ಮುತ್ತು’ ಪುಸ್ತಕ ಪರಿಚಯ

ಎಲ್ಲ ಕಾಲಗಳಲ್ಲೂ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಒಂದು ಚರ್ಚಾ ವಿಷಯವಾಗಿರುತ್ತದೆ. ಜಗತ್ತಿನಲ್ಲಿ ಅವರ ಕುರಿತು ಬರೆದಷ್ಟು ಇನ್ನಾರ ಕುರಿತೂ ಬರೆಯಲಾಗಿಲ್ಲ. ಅವರ ಚರಿತ್ರೆಯನ್ನು ಬರೆಯುವವರ ಸರಮಾಲೆ ಎಂದೂ ಕೊನೆಗೊಳ್ಳಲಿಲ್ಲ ; ಕೊನೆಗೊಳ್ಳುವುದೂ ಇಲ್ಲ. ಅದು ಕೇವಲ ಚರಿತ್ರೆ ಅಲ್ಲ, ಬದಲಾಗಿ ಅದೊಂದು ನಾಗರಿಕತೆ, ಸಂಸ್ಕೃತಿ ಮತ್ತು ಒಂದು ಜನಾಂಗದ ಉತ್ಥಾನ ವೃತ್ತಾಂತವಾಗಿದೆ. -ಶಾಂತಿ ಪ್ರಕಾಶನ- ದ ‘ಅನಾಥ ಮುತ್ತು’ ಎಂಬ ಗ್ರಂಥವು, ಪ್ರವಾದಿ ಮುಹಮ್ಮದ್(ಸ) ಅವರ ಬದುಕಿನ ಕುರಿತು …

Read More »

ಅಂದು ಬಾಡಿಗೆ ಕೋಣೆಯ ಮದರಸ ; ಈಗ ಶಾಹೀನ್ ಸಂಸ್ಥೆ ವಿದ್ಯಾರ್ಥಿ ಕಾರ್ತಿಕ್ ಕರ್ನಾಟಕ NEET ಟಾಪರ್

ಬೀದರ್ : ಕರ್ನಾಟಕದ ಬೀದರ್‌ನ ಶಾಹೀನ್ ಸಂಸ್ಥೆಯು ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದೆ. ಸಂಸ್ಥೆಯ ಕಾರ್ತಿಕ್ ರೆಡ್ಡಿ 720 ಅಂಕಗಳಿಗೆ 710 ಅಂಕ ಗಳಿಸಿ ಕರ್ನಾಟಕದ ನಂಬರ್ ಒನ್ ಟಾಪರ್‌ ಆಗಿದ್ದಲ್ಲದೇ ಅಖಿಲ ಭಾರತ ಮಟ್ಟದಲ್ಲಿ 9ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ ಅರ್ಬಜ್ ಅಹ್ಮದ್ ಎಂಬ ಲಾರಿ ಚಾಲಕನ ಮಗ 700 ಅಂಕಗಳೊಂದಿಗೆ ಕರ್ನಾಟಕದ 3ನೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ, ಬೀದರ್‌ನ ಶಾಹೀನ್ ಶಾಲೆಯಲ್ಲಿ ಇಂದು …

Read More »

ನೀಟ್ ಪರೀಕ್ಷೆ ; 720 ರಲ್ಲಿ 720 ಅಂಕ ಪಡೆದ ಶೋಯೆಬ್ ಅಫ್ತಾಬ್ ಮತ್ತು ಆಕಾಂಕ್ಷಾ

ನೀಟ್ ಪರೀಕ್ಷೆ 2020 ರ ಫಲಿತಾಂಶವನ್ನು ಬಿಡುಗಡೆಯಾಗಿದ್ದು ಇಬ್ಬರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 720 ಅಂಕಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಡಿಶಾದ ಶೋಯೆಬ್ ಅಫ್ತಾಬ್ ಮತ್ತು ಯುಪಿ ಯ ಆಕಾಂಕ್ಷಾ ಸಿಂಗ್ ಎಂಬಿಬ್ಬರು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. 100 ಪ್ರತಿಶತ ಅಂಕಗಳನ್ನು ಗಳಿಸುವ ಮೂಲಕ ಇಬ್ಬರೂ ನೀಟ್ 2020 ರ ಟಾಪರ್ಸ್ ಆದರು. ಶೋಯೆಬ್ ಅವರು ಕೋಟಾದಲ್ಲಿ ಮತ್ತು ಆಕಾಂಕ್ಷಾ ದೆಹಲಿಯಲ್ಲಿಯೇ ಇದ್ದು ನೀಟ್ …

Read More »

“ಮುಸ್ಲಿಂ ರೆಜಿಮೆಂಟ್ ಎಂಬುದು ಇರಲೇ ಇಲ್ಲ”

ನಕಲಿ ಪೋಸ್ಟ್ ಕುರಿತು ಪ್ರಧಾನಿ, ರಾಷ್ಟ್ರಪತಿಗೆ ಮೂರು ಸೇನಾಪಡೆಗಳ ನಿವೃತ್ತ ಅಧಿಕಾರಿಗಳ ಪತ್ರ ಹೊಸದಿಲ್ಲಿ : ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ಮುಸ್ಲಿಂ ಸೈನಿಕರನ್ನು ಅವಮಾನಿಸುವ ಪೋಸ್ಟ್ ಒಂದು ವ್ಯಾಪಕವಾಗಿ ಹರಿದಾಡುತ್ತಿರುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ 120 ನಿವೃತ್ತ ಅಧಿಕಾರಿಗಳ ತಂಡವೊಂದು ಇಂತಹ ಪೋಸ್ಟ್ ಗಳು ದೇಶದಲ್ಲಿ ಕೋಮು ದ್ವೇಷ ಹರಡಲು ಆಸ್ಪದ ನೀಡುವ ಜತೆಗೆ ನಮ್ಮ ಸೇನಾ ಪಡೆಗಳ ನೈತಿಕ ಸ್ಥೈರ್ಯವನ್ನೂ ಕುಸಿಯುವಂತೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ …

Read More »

ಹಲಾಲ್ ಪದ್ಧತಿ ನಿಷೇಧಿಸಿ ಎಂದವರನ್ನು ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್: ಅರ್ಜಿ ವಜಾ

ನವದೆಹಲಿ:ಹಲಾಲ್ ಪದ್ಧತಿಯ ಮೂಲಕ ಪ್ರಾಣಿಗಳ ವಧೆ ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನಿಮ್ಮ ಅರ್ಜಿ ದುರುದ್ದೇಶದಿಂದ ಕೂಡಿದೆ. ಯಾರು ಮಾಂಸಾಹಾರಿಯಾಗಬೇಕು, ಯಾರು ಸಸ್ಯಾಹಾರಿ ಆಗಬೇಕು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹಲಾಲ್ ಒಂದು ಪದ್ಧತಿ. ಬೇರೆ ಪದ್ಧತಿಗಳೂ ಪ್ರಾಣಿ ವಧೆಗೆ ಸಂಬಂಧಿಸಿ ಇದೆ. ಇದು ಯಾಕೆ ಸಮಸ್ಯೆಯಾಗುತ್ತದೆ ಎಂದು ಸುಪ್ರೀಂ ಕೋರ್ಟು ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿದೆ. ಅರ್ಜಿದಾರರು ಹಲಾಲ್ ಪದ್ಧತಿ ಬಹಳ ನೋವು ತರುತ್ತದೆ …

Read More »

ದೇವರ ಅವತಾರ ಸತ್ಯವೊ ಮಿಥ್ಯವೋ?

ದೇವರ ಅವತಾರ ಎಂಬುದನ್ನು ನೀವು ಒಪವುದಿಲ್ಲವೇ? ದೇವರು ವಿವಿಧ ರೂಪಗಳಲ್ಲಿ ಅವತಾರ ತಾಳುತ್ತಾನೆಂಬ ವಿಶ್ವಾಸ ಇಸ್ಲಾಮಿನಲ್ಲಿಲ್ಲವೇ..? ಇಸ್ಲಾಮೀ ದೃಷ್ಟಿಕೋನದಂತೆ ದೇವರು ಒಬ್ಬನೇ. ಅವನಿಗೆ ಆದಿಯೂ, ಅಂತ್ಯವೂ ಇಲ್ಲ ಅವನು ಅದೃಶ್ಯನಾಗಿದ್ದಾನೆ. ನಿರಾಕಾರನೂ, ಸರ್ವಶಕ್ತನೂ, ಸರಿಸಾಟಿಯಿಲ್ಲದವನೂ ಜನನ ಹಾಗೂ ಮರಣಗಳು ಇಲ್ಲದವನೂ ಆಗಿದ್ದಾನೆ. ಆದರೆ ನೀವು ‘ಅವತಾರ’ ಎಂದು ವಾದಿಸುವ ಎಲ್ಲವುಗಳಿಗೂ ಜನನ, ಮರಣಗಳಿವೆ. ರೂಪವೂ ಇದೆ. ಸ್ಥಳ ಹಾಗೂ ಕಾಲದೊಂದಿಗೆ ಸಂಬಂಧವಿದೆ. ಮಿತಿ ಮೇರೆಗಳೂ ಇವೆ. ಆದರೆ ದೇವನು ಇವೆಲ್ಲವುಗಳಿಗೂ …

Read More »

‘ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್(ಸ)’ ಕೃತಿ ಪರಿಚಯ

ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಯಾರ ಜೀವನದ ಅನುಸರಣೆಯಿಂದ ಮಾನವನಿಗೆ ಶಾಂತಿ ಸಮಾಧಾನಗಳು ಪ್ರಾಪ್ತವಾಗುವುದೋ, ಅಂತಹ ವ್ಯಕ್ತಿಯ ಹೆಜ್ಜೆ ಗುರುತುಗಳನ್ನು ಅರಸಿ ಅದರಂತೆ ಜೀವನ ರೂಪಿಸುವುದು ಮಾನವರಾದ ನಮ್ಮೆಲ್ಲರ ಮುಲಭೂತ ಕರ್ತವ್ಯವಾಗಿದೆ . ಮಾನವೇತಿಹಾಸದ ಶ್ರೇಷ್ಠ ವ್ಯಕ್ತಿಗಳ ಜೀವನಗಾಥೆಯ ವಿಶ್ಲೇಷಣೆಯಲ್ಲಿ ,ಅತೀ ಹೆಚ್ಚು ಮೌಲ್ಯಗಳು ಗುರುತಿಸಲ್ಪಟ್ಟಿರುವುದು ಪ್ರವಾದಿ ಮುಹಮ್ಮದ್(ಸ)ರ ಬದುಕಿನ ವೃತ್ತಾಂತದಿಂದಾಗಿದೆ ಎಂಬುದು ಜಗತ್ತಿನ ಖ್ಯಾತ ಇತಿಹಾಸಕಾರರು, ತತ್ವಜ್ಞಾನಿಗಳು ಮತ್ತು ಚಿಂತಕರು ಒಪ್ಪಿಕೊಂಡ ಸತ್ಯವಾಗಿದೆ. ಅವರ ಜೀವನ ಚರ್ಯೆಯು ಮನುಷ್ಯನ ವೈಯಕ್ತಿಕ, …

Read More »

ಕೊರೋನ ವಾರಿಯರ್ಸ್ ಕತೆ: ಧಾರವಿ ಸ್ಲಮ್‌ನಲ್ಲಿ ಕೋವಿಡ್-19 ವಿರುದ್ಧ ಹೋರಾಡಿದ ಮುಸ್ಲಿಮ್ ಧಾರ್ಮಿಕ ಪಂಡಿತರು

ಏಷ್ಯಾದ ಅತಿದೊಡ್ಡ ಕೊಳೆಗೇರಿಯಾದ ಮುಂಬಯಿನ ಧಾರಾವಿಯಲ್ಲಿ ಕೋವಿಡ್-19 ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವುದರ ಹಿಂದೆ ಮುಸ್ಲಿಮ್ ಧಾರ್ಮಿಕ ಪಂಡಿತರ (ಮೌಲಾನಾಗಳು ಹಾಗೂ ಮೌಲವಿಗಳು) ಪ್ರಯತ್ನವು ಬಹಳಷ್ಟಿದೆ. ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಮತ್ತು ಅದರ ಸಾಮೂಹಿಕ ಹರಡುವಿಕೆಯನ್ನು ತಡೆಯಲು 180 ಮುಸ್ಲಿಮ್ ಧಾರ್ಮಿಕ ಪಂಡಿತರು ಸುಮಾರು ಆರು ತಿಂಗಳಿಗಿಂತಲೂ ಹೆಚ್ಚು ಕಾಲ ಪ್ರತಿದಿನ ಪ್ರಾರ್ಥನೆಗಾಗಿ ಕರೆ ನೀಡಿದ ನಂತರ ಧಾರಾವಿಯ ಜನರಲ್ಲಿ ಮನೆಯೊಳಗೆ ಇರುವಂತೆ ಜ್ಞಾಪನೆಯನ್ನು ನೀಡುತ್ತಲೇ ಇದ್ದರು. ಈ ಸಮುದಾಯದ …

Read More »

ಫ್ರಾನ್ಸ್ ಅಧ್ಯಕ್ಷರ ಇಸ್ಲಾಂ ವಿರೋಧಿ ಹೇಳಿಕೆಯನ್ನು ಖಂಡಿಸಿದ ನೋಬೆಲ್ ವಿಜೇತೆ ತವಕ್ಕುಲ್ ಕರ್ಮಾನ್‌

ಸನ್‍ಆ,ಅ.9: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್‍ರ ಇಸ್ಲಾಮ್ ವಿರೋಧಿ ಹೇಳಿಕೆಯನ್ನು ನೋಬೆಲ್ ವಿಜೇತೆಯಾದ ಪ್ರಮುಖ ಮಾನವಹಕ್ಕು ಕಾರ್ಯಕರ್ತೆ ತವಕ್ಕುಲ್ ಕರ್ಮಾನ್ ಖಂಡಿಸಿದ್ದಾರೆ. ಅವರ ಇಸ್ಲಾಮ್ ವಿರೋಧಿ ಹೇಳಿಕೆ ಅವರ ಅಸಹಿಷ್ಣುತೆ ದ್ವೇಷವನ್ನು ಹೊರಗೆ ತೋರಿಸುತ್ತಿದೆ. ಇದು ಫ್ರಾನ್ಸ್‌ನಂತ ಒಂದು ದೇಶದ ಮುಖ್ಯಸ್ಥನಿಗೆ ನಾಚಿಕೆಗೇಡು. ಧರ್ಮದಲ್ಲಿ ಸುಧಾರಣೆ ತರಬೇಕು ಎನ್ನುವುದರಲ್ಲಿ ಮ್ಯಾಕ್ರೋನ್ ಆತಂಕ ಪಡಬೇಕಿಲ್ಲ. ಅದು ಇಸ್ಲಾಮಿನ ವಿಷಯವಾಗಿದೆ. ಅದು ಅವರು ಮಾಡುತ್ತಾರೆ ಎಂದು ಕರ್ಮಾನ್ ಟ್ವೀಟ್ ಮಾಡಿದ್ದಾರೆ. ಇಸ್ಲಾಮೀ ವಿಶ್ವಾಸಿಗಳಾದ …

Read More »