Home / ವಾರ್ತೆಗಳು / ಹಲಾಲ್ ಪದ್ಧತಿ ನಿಷೇಧಿಸಿ ಎಂದವರನ್ನು ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್: ಅರ್ಜಿ ವಜಾ

ಹಲಾಲ್ ಪದ್ಧತಿ ನಿಷೇಧಿಸಿ ಎಂದವರನ್ನು ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್: ಅರ್ಜಿ ವಜಾ

ನವದೆಹಲಿ:ಹಲಾಲ್ ಪದ್ಧತಿಯ ಮೂಲಕ ಪ್ರಾಣಿಗಳ ವಧೆ ನಡೆಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನಿಮ್ಮ ಅರ್ಜಿ ದುರುದ್ದೇಶದಿಂದ ಕೂಡಿದೆ. ಯಾರು ಮಾಂಸಾಹಾರಿಯಾಗಬೇಕು, ಯಾರು ಸಸ್ಯಾಹಾರಿ ಆಗಬೇಕು ಎಂಬುದನ್ನು ನಾವು ನಿರ್ಧರಿಸಲು ಸಾಧ್ಯವಿಲ್ಲ. ಹಲಾಲ್ ಒಂದು ಪದ್ಧತಿ. ಬೇರೆ ಪದ್ಧತಿಗಳೂ ಪ್ರಾಣಿ ವಧೆಗೆ ಸಂಬಂಧಿಸಿ ಇದೆ. ಇದು ಯಾಕೆ ಸಮಸ್ಯೆಯಾಗುತ್ತದೆ ಎಂದು ಸುಪ್ರೀಂ ಕೋರ್ಟು ಅರ್ಜಿದಾರರನ್ನು ಖಾರವಾಗಿ ಪ್ರಶ್ನಿಸಿದೆ.

ಅರ್ಜಿದಾರರು ಹಲಾಲ್ ಪದ್ಧತಿ ಬಹಳ ನೋವು ತರುತ್ತದೆ ಮತ್ತು ರಕ್ತದ ಕೊನೆಯ ಹನಿ ಹೊರಬರುವ ತನಕ ಪ್ರಾಣಿ ಜೀವಂತವಾಗಿರಬೇಕಿದೆ. ಇದು ಮಾನವೀಯತೆಗೆ ವಿರುದ್ದ ಎಂದು ವಾದಿಸಿದ್ದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …