Home / ಲೇಖನಗಳು / ದೇವರ ಅವತಾರ ಸತ್ಯವೊ ಮಿಥ್ಯವೋ?

ದೇವರ ಅವತಾರ ಸತ್ಯವೊ ಮಿಥ್ಯವೋ?

ದೇವರ ಅವತಾರ ಎಂಬುದನ್ನು ನೀವು ಒಪವುದಿಲ್ಲವೇ? ದೇವರು ವಿವಿಧ ರೂಪಗಳಲ್ಲಿ ಅವತಾರ ತಾಳುತ್ತಾನೆಂಬ ವಿಶ್ವಾಸ ಇಸ್ಲಾಮಿನಲ್ಲಿಲ್ಲವೇ..?

ಇಸ್ಲಾಮೀ ದೃಷ್ಟಿಕೋನದಂತೆ ದೇವರು ಒಬ್ಬನೇ. ಅವನಿಗೆ ಆದಿಯೂ, ಅಂತ್ಯವೂ ಇಲ್ಲ ಅವನು ಅದೃಶ್ಯನಾಗಿದ್ದಾನೆ. ನಿರಾಕಾರನೂ, ಸರ್ವಶಕ್ತನೂ, ಸರಿಸಾಟಿಯಿಲ್ಲದವನೂ ಜನನ ಹಾಗೂ ಮರಣಗಳು ಇಲ್ಲದವನೂ ಆಗಿದ್ದಾನೆ. ಆದರೆ ನೀವು ‘ಅವತಾರ’ ಎಂದು ವಾದಿಸುವ ಎಲ್ಲವುಗಳಿಗೂ ಜನನ, ಮರಣಗಳಿವೆ. ರೂಪವೂ ಇದೆ. ಸ್ಥಳ ಹಾಗೂ ಕಾಲದೊಂದಿಗೆ ಸಂಬಂಧವಿದೆ. ಮಿತಿ ಮೇರೆಗಳೂ ಇವೆ. ಆದರೆ ದೇವನು ಇವೆಲ್ಲವುಗಳಿಗೂ ಮೀರಿದವನು. ಆದ್ದರಿಂದ ‘ಅವತಾರ’ ಎಂಬ ನಂಬಿಕೆಯನ್ನು ಇಸ್ಲಾಮ್ ತೀವ್ರವಾಗಿ ವಿರೋಧಿಸುತ್ತದೆ.

ಆದರೆ ಇಸ್ಲಾಮ್ ಮಾತ್ರ ಈ ವಾದವನ್ನು ವಿರೋಧಿಸುವುದಲ್ಲ. ಹಿಂದೂ ಧರ್ಮದ ಸಿದ್ದಾಂತವೂ ‘ಅವತಾರ’ ಎಂಬ ಕಲ್ಪನೆಗೆ ವಿರುದ್ದವಾಗಿದೆ. ಅದು ಹಿಂದೂ ಧರ್ಮದ ವಿಶ್ವಾಸದ ಭಾಗವೇ ಅಲ್ಲ. ಕಾಲಕ್ರಮೇಣ ಸೇರಿಕೊಂಡ ವಿಚಾರಗಳಾಗಿವೆ. ದೇವರು ಮಾನವ ಶರೀರಕ್ಕೆ ರೂಪಗೊಳ್ಳುತ್ತದೆಂಬ ವಿಶ್ವಾಸವನ್ನು ಭಗವದ್ಗೀತೆ ಬಲವಾಗಿ ಖಂಡಿಸುತ್ತದೆ.
ಅವಜಾನಂತಿ ಮಾಂ ಮೂಢಾ ಮಾನುಷಿಂ ತನುಮಾಶ್ರಿತಮ್ |
ಪರಂ ಭಾವಮಜಾನಂತೋ ಮಮ ಭೂತ ಮಹೇಶ್ವರಮ್ ||
ಮೋಘಶಾ ಮೋಘಕರ್ಮಣೋ ಮೋಘಜ್ಞಾನಾ ವಿಚೇತಸಃ|
ರಾಕ್ಷಸೀ ಮಾಸುರೀಂ ಚೈವ ಪ್ರಕೃತಿಂ ಮೋಹಿನೀಂ ಶ್ರೀತಾ:
(ಅಧ್ಯಾಯ-9. ರಾಜ ವಿದ್ಯಾರಾಜ ಗುಹ್ಯಯೋಗ : ಶ್ಲೋಕ: 11-12)

ಇಡೀ ಮಾನವ ಕೋಟಿಗೆ ಮಹೇಶ್ವರನಾದ ನನ್ನ ಪರಮಭಾವವನ್ನು ತಿಳಿಯದ ಮೂಢರು ಮನುಷ್ಯ ರೂಪವನ್ನು ಅರ್ಥಾತ್ ಮಾನವ ಶರೀರವನ್ನು ಧರಿಸಿರುವ ಪರಮಾತ್ಮನಾದ ನನ್ನನ್ನು ಕೀಳಾಗಿ ಕಾಣುತ್ತಾರೆ. (ಇನ್ನೊಂದೆಡೆಯೂ ಇದೇ ಶ್ಲೋಕ ಪುನರಾವರ್ತನೆಯಾಗಿದೆ )

ನಮ್ಮ ದೇಶದಲ್ಲಿ ದೇವರ ಅವತಾರವೆಂದು ಭಾವಿಸಿ ಆರಾಧಿಸಲಾಗುತ್ತಿರುವ ಬ್ರಹ್ಮ, ವಿಷ್ಣು, ಶಿವ, ಶ್ರೀ ರಾಮ, ಶ್ರೀ ಕೃಷ್ಣರ ಕುರಿತು ಪ್ರಮುಖ ವೇದ ಪಂಡಿತರಾದ ವಾಗ್ಬಟಾನಂದ ಗುರು ಹೇಳುತ್ತಾರೆ,
‘ಸೃಷ್ಟಿಸಿತ್ಯಂತಕರಣೀಂ ಬ್ರಹ್ಮ ವಿಷ್ಣು ಶಿವಾತ್ಮಿಕಾಂ
ಸ ಸಂಜಾಯಾತಿ ಭಗವಾನೇಕ ಏವ ಮಹೇಶ್ವರ.’ (ವಿಷ್ಣು ಪುರಾಣ: 1-2-66).
ಅರ್ಥ: ಸೃಷ್ಟಿ, ಸ್ಥಿತಿ, ಸಂಹಾರಗಳು ನಡೆಸುವುದರಿಂದ ಏಕನಾದ ದೇವನನ್ನು ಬ್ರಹ್ಮನೆಂದೂ, ವಿಷ್ಣುವೆಂದೂ, ಶಿವನೆಂದೂ ಕರೆಯಲಾಗುತ್ತದೆ.

ಇದರಿಂದ ಪೌರಾಣಿಕರ ನಡುವೆಯೂ ಏಕದೇವ ವಿಶ್ವಾಸವಿರುವುದೆಂದು ಅನಾಯಾಸವಾಗಿ ಗ್ರಹಿಸಬೇಕು. ಸತ್ಯ ಸಂಗತಿ ಹೀಗಿದ್ದರೂ ಪ್ರಾಚೀನ ಕಾಲದಿಂದಲೂ ಬಹುಸಂಖ್ಯಾತ ಜನರು ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಬೇರೆ ಬೇರೆ ದೇವರೆಂದು ನಂಬುತ್ತಿದ್ದಾರಲ್ಲವೇ? ಇದಕ್ಕೆ ಕಾರಣವೇನಾದರೂ ಇದೆಯಾ? ಎಂದು ಕೇಳಲಾಗುತ್ತದೆ, ನಾನು ಅದಕ್ಕೆ ಸ್ವಲ್ಪ ಸ್ಪಷ್ಟಿಕರಣ ನೀಡ ಬಯಸುತ್ತೇನೆ. ಹಿಂದೆ ಬ್ರಹ್ಮ, ವಿಷ್ಣು, ಶಿವ ಹಾಗೂ ಇನ್ನಿತರ ಕೆಲವು ವ್ಯಕ್ತಿಗಳಿದ್ದರು. ಅವರೆಲ್ಲರೂ ಧಾರ್ಮಿಕ ವಿಶ್ವಾಸವುಳ್ಳವರಾಗಿದ್ದು ಬೌದ್ಧ ಧರ್ಮದ ಪ್ರಚಾರದಿಂದ ನೆಲಕಚ್ಚಿದ ಪುರೋಹಿತಶಾಹಿ ವ್ಯವಸ್ಥೆಯನ್ನು ಪುನಃ ಪ್ರತಿಷ್ಠಾಪಿಸುವ ಉದ್ದೇಶದಿಂದ ಎದ್ದು ನಿಂತ ವೀರರಾಗಿದ್ದರು. ಇದರಲ್ಲಿ ಬ್ರಹ್ಮ ಉತ್ತಮ ಮನೋಭಾವವಿರುವ ವ್ಯಕ್ತಿಯಾಗಿದ್ದ. ಆತ ತನ್ನ ಧರ್ಮ ಪ್ರಚಾರಕ್ಕೆ ಆಯುಧವನ್ನು ಉಪಯೋಗಿಸಲಿಲ್ಲ ಎಂಬುದು ಅವನ ವೈಶಿಷ್ಟವಾಗಿತ್ತು. ಇನ್ನು ವಿಷ್ಣು, ಶಿವ ಮೊದಲಾದವರು ತಮ್ಮ ಧರ್ಮ ಪ್ರಚಾರಕ್ಕೆ ತ್ರಿಶೂಲ, ಗದೆ, ಖಡ್ಗಗಳನ್ನು ವ್ಯಾಪಕವಾಗಿ ಬಳಸಿದರು. ಅದರಿಂದ ಅವರ ಧರ್ಮ ಭಾರತದಲ್ಲಿ ಪ್ರಬಲವಾಯಿತು. ವಿಷ್ಣುವು ವೀಕುಂಠ ಎಂಬ ಸ್ತ್ರೀಯ ಮಗನಾದ್ದರಿಂದ ವೈಕುಂಠ ಎಂದು ಪ್ರಸಿದ್ಧನಾಗುತ್ತಾನೆ. ಆತ ಆರ್ಯ ವರ್ಗಕ್ಕೆ ಸೇರಿದ್ದನೆಂದು ಹೇಳಿದರೂ ತಪ್ಪಾಗಲಿಕ್ಕಿಲ್ಲ. ಭಿಕ್ಷೆ ಬೇಡುವವನಾಗಿ ಸಂಚರಿಸುತ್ತಿದ್ದುದರಿಂದ ಸರ್ಪ ವಶೀಕರಣದಲ್ಲಿ ಆಸಕ್ತನಾದರಿಂದ ನಂಗಿ ಎಂಬ ಕುರುಬ ಸ್ತ್ರೀಯ ತಂದೆಯಾಗಿದ್ದು, ಮದ್ಯಪಾನಿಯೂ ಆಗಿದ್ದರಿಂದ ಅವನು ಓರ್ವ ಕುರುಬನೆಂದು ಊಹಿಸಲು ಸಾಧ್ಯವಿದೆ. ಏನಿದ್ದರೂ ಶಿವನ ನೈವೇದ್ಯವನ್ನು ಬ್ರಾಹ್ಮಣರು ಇಂದಿಗೂ ಸೇವಿಸದಿರುವುದು ಆತ ಕೆಳ ಜಾತಿಗೆ ಸೇರಿದವನೆಂಬ ಕಾರಣಕ್ಕಾಗಿ ಎಂದು ದಿಟ್ಟವಾಗುತ್ತದೆ.

ಬ್ರಹ್ಮನ ಕತ್ತು ಕೊಯ್ದ ಕಾರಣ ಬ್ರಾಹ್ಮಣರು ಶಿವ ನೈವೇದ್ಯವನ್ನು ತಿನ್ನುವುದಿಲ್ಲವೆಂದು ಹೇಳುತ್ತಾರಾದರೂ ಅದು ಸ್ವೀಕಾರಾರ್ಹವಲ್ಲ, ಏಕೆಂದರೆ ಸಾವಿರಾರು ಜನರ ಕಂಠನಾಳವನ್ನು ಕೊಯ್ತು ‘ಜನಾರ್ದನ’ ಎಂಬ ಹೆಸರು ಸಂಪಾದಿಸಿದಲ್ಲದೇ, ಮಾತೃಹತ್ಯೆಯಂತಹ ಮಹಾ ಪಾಪ ಕೃತ್ಯವೆಸಗಿದ ವಿಷ್ಣುವಿನ ನೈವೇದ್ಯವನ್ನು ಮೇಲ್ವರ್ಗದವರು ಸೇವಿಸುವುದಾದರೂ ಹೇಗೆ? ಈ ವಿಷ್ಣು ಮತ್ತು ಶಿವನು ಪರಮ ದ್ರೋಹಿಗಳು ಮಾತ್ರವಲ್ಲ ಪರಸ್ಪರ ಸ್ಪರ್ಧಿಗಳೂ ಆಗಿದ್ದರು. ಶಿವನು ಬ್ರಹ್ಮ ಮತದಲ್ಲಿ ಸುಲಭದಲ್ಲೇ ಬಿರುಕನ್ನು ಉಂಟು ಮಾಡಿದ್ದ. ಬ್ರಹ್ಮನ ಶಿರವು ಛೇದವಾಯಿತು ಎಂಬ ಐತಿಹ್ಯದ ಮೂಲವೇ ಇದು. ಬ್ರಹ್ಮ ಧರ್ಮವು ಛಿದ್ರವಾದುದರಿಂದ ಬ್ರಹ್ಮನನ್ನು ಆರಾಧಿಸಲು ಹಾಗೂ ಪೂಜಿಸಲು ಹೆಚ್ಚಿನ ಜನರಿರಲಿಲ್ಲ. ಆದ್ದರಿಂದ ಆತನ ಆರಾಧನೆ ಬೇಕಿಲ್ಲವೆಂದು ಗುರುತಿಸಲಾಯಿತು. ವೈಷ್ಣವರು ಮತು ಶೈವರು ಹೆಚ್ಚಿರುವುದರಿಂದ ಶಿವ ಮತ್ತು ವಿಷ್ಣುವಿನ ಮರಣಾನಂತರವೂ ಪೂಜಿಸಲಾಯಿತು. ಭಾರತದಲ್ಲಿ ಶಿವನ ಕ್ಷೇತ್ರಗಳು ಮತ್ತು ವಿಷ್ಣುವಿನ ಕ್ಷೇತ್ರಗಳು ಹೆಚ್ಚಾಗಲು ಇದುವೇ ಕಾರಣ. ಆಯುಧಗಳ ಮೂಲಕ ಅಕ್ರಮಗಳು ನಡೆಸಿದ್ದರಿಂದ ಹಾಗೂ ಇತರ ಹಲವು ಕಾರಣಗಳಿಂದ ಶಿವ ಮತ್ತು ವಿಷ್ಣುವಿನ ಮನೋಭಾವವು ಉತೃಷ್ಟವಾಗಿರಲಿಲ್ಲವೆಂದು ಸುಲಭದಲ್ಲಿ ಊಹಿಸಬಹುದು. ಶಿವನ ಮನೋಭಾವದ ಮೇಲೆ ಬೆಳಕು ಚೆಲ್ಲಲು ಆತ ಏರ್ಪಡಿಸಿದ ಶಾಕ್ತೇಯದಲ್ಲಿರುವ ವಾಮ ತಂತ್ರವನ್ನು ಓದಿ ನೋಡಿದರೆ ಸಾಕು. ಮನುಷ್ಯರನ್ನು ನಿರ್ದಾಕ್ಷಿಣ್ಯವಾಗಿ ನರಕಕ್ಕೆ ತಳ್ಳುವ ಭಯಾನಕವೂ, ಬೀಭತ್ಸವೂ ಆದ ವಿಚಾರಗಳನ್ನು ಅದರಲ್ಲಿ ಪ್ರತಿಪಾದಿಸಲಾಗಿದೆ. ವೈಷ್ಣವ ಮತವನ್ನು ಪ್ರಚಾರ ಪಡಿಸಿದವರನ್ನು ವಿಷ್ಣುವಿನ ಅವತಾರ ಪುರುಷರಾಗಿಯೂ, ಶೈವ ಧರ್ಮವನ್ನು ಪ್ರಬಲಗೊಳಿಸಿದವರನ್ನು ಶಿವನ ಪುತ್ರರೆಂದೂ ವರ್ಣಿಸುವುದನ್ನು ಕಾಣಬಹುದು. ಶ್ರೀ ರಾಮ, ಶ್ರೀಕೃಷ್ಣ ಹಾಗೂ ಇತರ ಕೆಲವರು ಅವತಾರ ಪುರುಷರಾದದ್ದೂ ಗಣಪತಿ, ಸುಬ್ರಹ್ಮಣ್ಯ ಶಿವಸುತರಾದದ್ದೂ ಕೂಡಾ ಇದೇ ರೀತಿ ಆಗಿದೆ. (ವಾಗ್ಬಟಾನಂದರ ಸಂಪೂರ್ಣ ಕೃತಿಗಳು, ಮಾತೃಭೂಮಿ ಪ್ರಿಂಟಿಂಗ್ ಆ್ಯಂಡ್ ಪಬ್ಲಿಶಿಂಗ್ ಕಂಪೆನಿ ಲಿಮಿಟೆಡ್ ಕೋಯಿಕೋಡ್, 1998 ಪುಟ 751-752)

ವಾಗ್ಬಟಾನಂ ಗುರು ಈ ವಿಷಯವನ್ನು ಸಂಭಾಷಣೆಯ ರೂಪದಲ್ಲಿ ಹೀಗೆ ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮ: ಗೆಳೆಯಾ, ನೀನು ದೇವವಿಶ್ವಾಸವಿಲ್ಲದೆ ಬದುಕುವುದು ನನಗೆ ದುಖ ಉಂಟು ಮಾಡುತ್ತದೆ.
ಶ್ರೀ ಕೃಷ್ಣ: ನನಗೆ ದೇವ ವಿಶ್ವಾಸವಿಲ್ಲವೆಂದು ನಿನಗೆ ಹೇಳಿದವರು ಯಾರು.?
ಶ್ರೀ ರಾಮ: ಅದನ್ನು ಯಾರಾದರೂ ತಿಳಿಸಿ ಕೊಡಬೇಕೇ? ಶಿವ, ವಿಷ್ಣು ಬ್ರಹ ಮೊದಲಾದ ಸಕಾರ ಮೂರ್ತಿಗಳನ್ನು ನಿರಾಕರಿಸಿ ಉಪನ್ಯಾಸಗಳನ್ನು ನೀಡಿರುವ ತಾವು ನಾಸ್ತಿಕವಾದಿಯಲ್ಲವೇ.?
ಶ್ರೀ ಕೃಷ: ಗೆಳೆಯಾ, ರೂಪಾಲಂಕಾರವಿರುವ ಶಿವನೂ, ವಿಷ್ಣುವೂ ಹಾಗೂ ಇತರರು ದೇವರ ಸ್ಥಾನದಲ್ಲಿ ವಿರಾಜಮಾನರಾಗುವುದಕ್ಕೆ ಅನರ್ಹರೆಂದೂ, ಶಿವ ಹಾಗೂ ಇತರರನು ಸೃಷ್ಟಿಸಿದ ಸರ್ವಶಕ್ತನೇ ದೇವನೆಂದೂ ವಿಶ್ವಾಸವಿರಿಸುವ ನಾನು ನೈಜ ವಿಶ್ವಾಸಿಯಲ್ಲವೇ? ನಶ್ವರ ಹಾಗೂ ಸೃಷ್ಟಿಗಳೂ ಆದ ಸಕಾರ ವಸ್ತುಗಳನ್ನು ದೇವರೆಂದು ನಂಬಿ ಅವರನ್ನು ಆರಾಧಿಸುತ್ತಿರುವ ನೀವೇ ನಾಸ್ತಿಕವಾದಿಗಳು.
ಶ್ರೀ ರಾಮ: ಅಯ್ಯೋ, ಆಶ್ಚರ್ಯ! ಸಕಾರ ಮೂರ್ತಿಗಳಾದ ಶಿವ, ವಿಷ್ಣುಗಳು ನಶ್ವರರೇ? ಇದೆಂತಹ ಅಧಿಕಪ್ರಸಂಗ, ನಾನಿದನ್ನು ಕೇಳಲಾರೆ.
ಶ್ರೀ ಕೃಷ್ಣ: ಗೆಳೆಯಾ, ಆಕಾರವಿರುವ ಎಲ್ಲಾ ಪದಾರ್ಥಗಳೂ ನಶ್ವರವಾಗಿವೆ. ಇದಕ್ಕೆ ಉದಾಹರಣೆಯಾಗಿ ನಾವು ಪರಿಶೀಲಿಸಿದರೆ ಸಾಕು. ಅದಕ್ಕೆ ಆಕಾರವಿದೆ. ಅದು ನಾಶವೂ
ಆಗುತ್ತದೆ, ಇದನ್ನು ವಿಜ್ಞಾನಿಗಳು ಒಪ್ಪದಿರಲಿಕ್ಕಿಲ್ಲ ಏಕೆಂದರೆ ಈ ನಿಯಮ ಎಲ್ಲೆಡೆಗೂ ಅನ್ವಯಿಸುತ್ತದೆ. ಆದರೆ ಆಕಾರವಿರುವುದಕ್ಕೆ ಒಂದು ನಿರ್ಮಾತೃ ಬೇಕು. ಇಲ್ಲದಿದ್ದರೆ ಅದು ಉoಟಾಗಲು ಸಾಧ್ಯವಿಲ್ಲ ಅದರಂತೆ ಶಿವ ಹಾಗೂ ಇತರರು ಆಕಾರವಿರುವವರಾದರೆ ಅವರು ನಾಶವಾಗುವುದರಲ್ಲಿ ಸಂಶಯವಿಲ್ಲ ಅವರ ಸೃಷ್ಟಿಗೆ ಒಂದು ಸೃಷ್ಟಿಕರ್ತನಿರುವುದು ಖಂಡಿತ, ಅವನೇ ನಮ್ಮೆಲ್ಲರ ಸೃಷ್ಟಿಕರ್ತ ಎಂದು ಇತರ ವೇದಗ್ರಂಥಗಳೂ ಹೇಳುತ್ತದೆ. ಅದೃಶ್ಯವಾಗಿರುವ ದೇವನ ಮೇಲೆ ವಿಶ್ವಾಸವಿರಿಸಿ, ಹುಟ್ಟಿ ಸಾವನ್ನಪ್ಪಿದ ಶಿವಾದಿಗಳನ್ನು ದೇವರೆಂದು ಒಪ್ಪಿಕೊಳ್ಳಲಾಗದು. ಅದುವೇ ಸತ್ಯ, ಮೂಢನಂಬಿಕೆಗಳನ್ನು ಆಕ್ಷೇಪಿಸುವವರನ್ನು ಅಧಿಕಪ್ರಸಂಗಿಗಳೆಂದು ಹೇಳುವುದು ಸಜ್ಜನರಿಗೆ ಭೂಷಣವಲ್ಲ
ಶ್ರೀ ರಾಮ: ವಿಚಿತ್ರ! ಶಿವಾದಿಗಳು ಈ ಭೂಮಿಯಲ್ಲಿ ಜನಿಸಿ, ಮರಣ ಹೊಂದಿರುವರೋ? ಎಂತಹ ಧಿಕ್ಕಾರದ ಮಾತಿದು.
ಶ್ರೀ ಕೃಷ್ಣ: ಗೆಳೆಯಾ, ಶಿವಾದಿಗಳು ಹುಟ್ಟಿದವರೆಂದಾದರೆ ಸಾಯುವುದಿಲ್ಲವೇ? ಅವರು ಮರಣ ಹೊಂದಿರದಿದ್ದರೆ ಈಗ ನಾವು ಕಾಣಬೇಕಾಗಿತ್ತು. ಆಕಾರವಿರುವ ಅವರು ಎಲ್ಲಿದ್ದಾರೆ. ನಮಗೆ ಏಕೆ ಕಾಣುತ್ತಿಲ್ಲ?
ಶ್ರೀ ರಾಮ: ಶಿವ, ಶಿವಾ! ಅವರನ್ನು ನಾವು ಕಾಣುವುದೆಂತು? ಪಾಪಿಗಳಾದ ನಮಗೆ ಅಂತಹ ಸೌಭಾಗ್ಯವಿದೆಯೇ? ಪುಣ್ಯವಂತರಿಗೆ ಮಾತ್ರ ಅವರ ದರ್ಶನ ಭಾಗ್ಯ ಲಭಿಸಲಿದೆ.
ಶ್ರೀ ಕೃಷ್ಣ ರಾವಣನಂತಹ ರಾಕ್ಷಸರುಗಳಿಗಿಂತಲೂ ನಾವು ಪಾಪಿಗಳಾಗಿದ್ದೇವೆಯೇ?
ಶ್ರೀ ರಾಮ: ಹಾಗಲ್ಲ ರಾವಣರಂತಹ ರಾಕ್ಷಸರು ನರಹತ್ಯೆ, ಬ್ರಹ್ಮ ಹತ್ಯೆ ಹಾಗೂ ದೇವರನ್ನು ಹೊಡೆದೋಡಿಸುವ ಘೋರ ಕೃತ್ಯಗಳನ್ನೆಸಗಿದ ಪಾತಕಿಗಳಾಗಿದ್ದಾರೆ. ಅಂತಹ ಪಾಪಗಳನ್ನು ನಾವು ಮಾಡಿಲ್ಲ ಮಾಡುವುದೂ ಇಲ್ಲ, ರಾವಣರಂತ ಅಸುರರಿಗಿಂತ ನಾವು ಸಜ್ಜನರೆಂದು ಬೇರೆ ಹೇಳಬೇಕೇ?
ಶ್ರೀ ಕೃಷ್ಣ: ರಾವಣ ಹಾಗೂ ಇತರರು ಶಿವ ಹಾಗೂ ಇತರರನ್ನು ಹಲವೊಮ್ಮೆ ಕಾಣುತ್ತಿದ್ದಾರಲ್ಲ ಮಾತ್ರವಲ್ಲ ಶಿವನು ಬಾನಾಸುರನ ಕೋಟೆಯಲ್ಲಿ ಕೆಲ ಸಮಯ ಕಾವಲುಗಾರನಾಗಿರಲಿಲ್ಲವೇ? ಮೊದಲ ಪತ್ನಿ ತೀರಿಕೊಂಡಾಗ ಪಾರ್ವತಿ ಎಂಬ ಕೆಳಜಾತಿಯ ಹೆಣ್ಣನ್ನು ಆತ ವಿವಾಹವಾಗಲಿಲ್ಲವೇ? ಮಹಾ ಪಾಪಿಗಳಾದ ರಾಕ್ಷಸರಿಗೂ ಶಿವನನ್ನು ಕಾಣಲು ಮಾತ್ರವಲ್ಲ ಗೆಳೆಯನಾಗಿ ಸ್ವೀಕರಿಸಲು ಸಾಧ್ಯವಾಗಿದ್ದರೆ ಮತ್ತು ಮಲಯ ಹೆಣ್ಣಿಗೆ ಪತಿಯಾಗಿ ಪಡೆಯಲು ಸಾಧ್ಯವಾಗಿರುವಾಗ ನಮ್ಮ ಪಾಪ ಭಾರದಿಂದ ಅವನನ್ನು ನೋಡಲು ಸಾಧ್ಯವಿಲ್ಲವೆಂದು ಹೇಳುವುದು ಕಟ್ಟುಕಥೆಯಲ್ಲವೇ.?
ಶ್ರೀ ರಾಮ: ಏನು? ಶಿವನು ಎರಡನೇ ಬಾರಿ ಆದಿವಾಸಿ (ಮಲಯ) ಹೆಣ್ಣನ್ನು ವಿವಾಹವಾದದ್ದೇ? ಏನು ಹೇಳುತ್ತಿರುವಿ, ಅಸಂಬದ್ದ ಮಾತುಗಳಿಗೆ ನನ್ನ ಮೈ ಉರಿಯುತ್ತಿದೆ. ಬೇಡ, ಇನ್ನು ಮಾತಾಡಬೇಡ.
ಶ್ರೀ ಕೃಷ್ಣ ನಾನು ಅಸಂಬದ್ದ ಮಾತು ಹೇಳುತ್ತಿಲ್ಲ ಅತ್ಯಗತ್ಯ ಮಾತನ್ನಷ್ಟೇ ನುಡಿಯುತಿದ್ದೇನೆ. ಪಾರ್ವತಿಯನ್ನು ಶಿವನು ವಿವಾಹವಾಗಿದ್ದನೆಂಬ ವಿಷಯ ನಿನಗೆ ತಿಳಿದಿದೆಯೇ.?
ಶ್ರೀ ರಾಮ: ಹೌದು, ಕೇಳಿದ್ದೇನೆ.
ಶ್ರೀ ಕೃಷ್ಣ: ಪಾರ್ವತಿಯೆಂದರೆ ನೀವು ಯಾರೆಂದು ಭಾವಿಸಿದ್ದೀರಿ.? ಪರ್ವತಗುಡ್ಡೆಯಾಗಿದ್ದರೆ ಪಾರ್ವತಿ ಆದಿವಾಸಿಯಲ್ಲವೇ? ಸಂಸ್ಕೃತದಲ್ಲಿ ಊಹಿಸದೇ ಅದರ ಅರ್ಥವನ್ನು ಗ್ರಹಿಸಿ ನೋಡು. ಮಾತಂಗನ್ ಎಂಬ ಮಲೆಕುಡಿಯನ ಮಗಳಾದ ಪಾರ್ವತಿಯ ಕುರಿತು ಬೇರೆಯೇ ಭಾವನೆ ಇದ್ದರೆ ಅದು ಖಂಡಿತ ಸರಿಯಲ್ಲ. ಮದುವೆಯಾಗಿ ಮಕ್ಕಳೊಡನೆ ಬದುಕಿ, ಸತ್ತು ಮಣ್ಣಿನಲ್ಲಿ ಲೀನವಾದವರ ಮೇಲಿನ ವಿಶ್ವಾಸದಿಂದ ದೂರವಾಗಬೇಕು.
ಶಾಶ್ವತನೂ, ನಿರಾಕಾರನೂ ಆದ ದೇವನ ಮೇಲೆ ವಿಶ್ವಾಸವಿರಿಸಿ ಒಳ್ಳೆಯ ಮನುಷ್ಯನಾಗಿ ಬದುಕಲು ನೋಡು. ನಮಗೆ ಉಪದೇಶ ಮಾಡುವ ಕೆಲಸ ನಂತರ ನಡೆಯಲಿ.
(ವಾಗ್ಬಟಾನಂದರ ಸಂಪೂರ್ಣ ಕೃತಿಗಳು ಪುಟ 357-359)

ಶ್ರೀ ಸ್ವಾಮಿ ದಯಾನಂದ ಸರಸ್ವತಿಯವರು ಈ ವಿಷಯವನ್ನು ಪ್ರಶೋತ್ತರ ರೂಪದಲ್ಲಿ ಚಿತ್ರೀಕರಿಸಿದ್ದಾರೆ.
ಪ್ರಶ್ನೆ: ಈಶ್ವರನು ಅವತಾರ ತಾಳುತ್ತಾನೋ, ಇಲ್ಲವೋ?
ಉತ್ತರ: ಇಲ್ಲ ಏಕೆಂದರೆ ಅಜ ಏಕ ಪಾದ್ (35-53)
‘ಸ ಪಠ್ಯಗಾತ ಶುಕ್ರ ಮಕಾಯಂ’ (40-8) ಎಂದು ಆರಂಭವಾಗುವ ಯಜುರ್ವೇದ ವಚನಗಳಿಂದ ಪರಮೇಶ್ವರನು ಜನ್ಮ ತಾಳಿಲ್ಲವೆಂದು ಅರ್ಥವಾಗುತ್ತದೆ.

ಪ್ರಶ್ನೆ: ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತೀ ಭಾರತ।
ಅಭ್ಯೋಥಾನಮ ಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ (ಭಗವದ್ಗೀತ: ಅ.4, ಶ್ಲೋಕ 7)
ಧರ್ಮಕ್ಕೆ ದೋಷ ಉಂಟಾಗುವಾಗ ನಾನು ಶರೀರ ರೂಪ ಧರಿಸುತ್ತೇನೆಂದು ಶ್ರೀ ಕೃಷ್ಣನು ಹೇಳುತ್ತಾನಲ್ಲವೇ?
ಉತ್ತರ: ವೇದಗಳಿಗೆ ವಿರುದ್ಧವಾದುದರಿಂದ ಇದು ಪ್ರಮಾಣವಾಗುವುದಿಲ್ಲ ಧರ್ಮಾತನು, ಧರ್ಮವನ್ನು ರಕ್ಷಿಸ ಬಯಸುವ ಶ್ರೀ ಕೃಷ್ಣನು ನಾನು ಯುಗ ಯುಗಾಂತರಗಳವರೆಗೆ ಜೀವದಿಂದ ಸಜ್ಜನರನ್ನು ಪರಿಪಾಲಿಸಿ, ದುಷ್ಟ ಜನರ ಸಂಹಾರ ನಡೆಸುತ್ತೇನೆ ಎಂದೆಲ್ಲಾ ಬಯಸಿರಬಹುದು. ಹಾಗೆ ಹೇಳುವುದರಲ್ಲಿ ತಪ್ಪಿಲ್ಲ, ಏಕೆಂದರೆ ‘ಪರೋತಕಾರಾಯಿ ಸತಾಂ ವಿಭೂತಯಃ’ ಸಜ್ಜನರ ಶರೀರ, ಮನಸ್ಸು, ಸಂಪತ್ತೆಲ್ಲವೂ ಪರೋಪಕಾರಕ್ಕಾಗಿ ಮೀಸಲಿರುತ್ತದೆ. ಆದರೂ ಶ್ರೀ ಕೃಷ್ಣನನ್ನು ದೇವರೆಂದು ಹೇಳಲು ಸಾಧ್ಯವಿಲ್ಲ

ಪ್ರಶ್ನೆ: ಹೀಗಾದರೆ ಲೋಕದಲ್ಲಿ ದೇವರ 24 ಅವತಾರಗಳಿವೆಯೆಂದು ಹೇಳುವುದನ್ನು ಒಪ್ಪಿಕೊಳ್ಳುವುದು ಹೇಗೆ?
ಉತ್ತರ: ವೇದ ಗ್ರಂಥಗಳ ಅರ್ಥ ತಿಳಿಯಲು ಅಸಾಧ್ಯವಾದುದರಿಂದ, ಅಜ್ಞಾನ ಹಾಗೆ ಸಂಪ್ರದಾಯವಾದಿಗಳ ವಂಚನೆಗೆ ಆಕರ್ಷಿತರಾದ್ದರಿಂದ ಇಂತಹ ಆಧಾರ ರಹಿತ ಮಾತು. ಹೇಳುತ್ತಾರಲ್ಲದೆ ಅದಕ್ಕೆ ಗೌರವವನ್ನು ಕೊಡುತ್ತಾರೆ.

ಪ್ರಶ್ನೆ: ದೇವನು ಅವತಾರ ತಾಳುವುದಿಲ್ಲವೆಂದಾದರೆ ಕಂಸ, ರಾವಣರಂತಹ ದುಷ್ಟ ಶಕ್ತಿಗಳನ್ನು ಸಂಹರಿಸಲು ಹೇಗೆ ಸಾಧ್ಯ?
ಉತರ: ಮೊದಲನೆಯದಾಗಿ ಜನಿಸಿದವರೆಲ್ಲ ಮರಣ ಹೊಂದಿಯೇ ತೀರುತ್ತಾರೆ. ಮಾತ್ರವಲ್ಲ ಶರೀರ, ಕೈಗಳಿಂದ ಅವತಾರ ತಾಳದೆ ಜಗದ ಸೃಷ್ಟಿ, ಪರಿಸ್ಥಿತಿ, ಸಂಹಾರಗಳನ್ನು ನಡೆಸುವ ದೇವನ ಮುಂದೆ ಕಂಸ, ರಾವಣನಂತಹವರನ್ನು ಒಂದು ಕ್ರಿಮಿಗೆ ಹೋಲಿಸಿದರೆ ತಪ್ಪಾಗಲಾರದು. ಆತ ಸರ್ವವ್ಯಾಪಿಯಾಗಿರುವುದರಿಂದ ಕಂಸ, ರಾವಣರ ಶರೀರದಲ್ಲೂ ತುಂಬಿದ್ದಾನೆ. ತಾನು ಬಯಸಿದ ಕ್ಷಣವೇ ಅವರ ಎದೆಯನ್ನು ಬಗೆದು, ಕೊಂದು ಮುಗಿಸಲು ಆತನಿಗೆ ಸಾಧ್ಯವಿದೆ. ಅಸಂಖ್ಯಾತ ಗುಣ ವೈಶಿಷ್ಟ್ಯಗಳಿಂದ ತುಂಬಿರುವ ದೇವನು ಒಂದು ಕ್ಷುದ್ರ ಜೀವಿಯನ್ನು ಕೊಲ್ಲಲು ಜನನ, ಮರಣವುಳ್ಳವನಾಗಿದ್ದಾನೆಂದು ಹೇಳುವವರನ್ನು ಮೂರ್ಖರ ಹೊರತು ಯಾರೊಂದಿಗೆ ಹೋಲಿಸಬಹುದು.? ಅಲ್ಲದೆ ದೇವನು ಜನ್ಮ ತಾಳುತ್ತಾನೆಂಬುದು ಯುಕ್ತಿಗೂ ನಿಲುಕದ ವಿಚಾರವಾಗಿದೆ. ಗಡಿರೇಖೆಗಳಿಲ್ಲದ ಈ ಆಕಾಶವು ಗರ್ಭದಲ್ಲಿ ಅಡಗಿದೆಯೆಂದೂ, ಅಂಗೈಯಲ್ಲಿ ಹುದುಗಿದೆಯೆಂದೂ ಯಾರಾದರೂ ಹೇಳಿದರೆ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಆಕಾಶವು ವಿಶಾಲವಾಗಿದ್ದು, ಎಲ್ಲಾ ಕಡೆಯೂ ಹಬ್ಬಿದೆ. ಆದ್ದರಿಂದ ಅದು ಒಳಗೆ ಪ್ರವೇಶಿಸುವ ಅಥವಾ ಹೊರ ಹೋಗುವ ಪ್ರಶ್ನೆಯೇ ಇಲ್ಲ. ಅದೇ ರೀತಿ ಪರಮಾತ್ಮನು ಅನಂತನೂ ಸರ್ವವ್ಯಾಪ್ತಿಯೂ ಆಗಿರುವುದರಿಂದ ಆತನಿಗೆ ಆಗಮನ, ನಿರ್ಗಮನಗಳು ಸರಿ ಹೊಂದುವುದಿಲ್ಲ. ಒಂದು ವಸ್ತು ಎಲ್ಲಿ ಇಲ್ಲವೋ ಅಲ್ಲಿ ಮಾತ್ರ ಪ್ರಕ್ರಿಯೆಗಳು ಉಂಟಾಗಲು ಸಾಧ್ಯ. ಪರಮಾತ್ಮನು ಎಲ್ಲಿಂದಲೋ ಬಂದವನೆಂದು ಹೇಳಲು ಅವನು ಗರ್ಭದಲ್ಲಿ ಇರಲಿಲ್ಲವೆಂದೇ? ಅಥವಾ ಹೊರಗೆ ಎಲ್ಲೂ ಉಂಟಾಗಲಿಲ್ಲವೆಂದೇ? ಹಾಗಿದ್ದರೆ ಅವನು ಹೇಗೆ ನಿರ್ಗಮಿಸಿದ್ದನೆಂದು ಹೇಳುವಿರಿ.? ತಿಳುವಳಿಕೆ ಇಲ್ಲದವರ ಹೊರತು ಯಾರಾದರೂ ದಿವ್ಯ ಶಕ್ತಿಯ ಬಗ್ಗೆ ಹೀಗೆ ಹೇಳಬಹುದೇ? ಆದ್ದರಿಂದ ದೇವನಿಗೆ ಆಗು ಹೋಗುಗಳು, ಜನನ, ಮರಣಗಳು ಇದೆಯೆಂದು ಸಾಧಿಸುವುದು ಅಸಾಧ್ಯ. ಏಸು ಮೊದಲಾದವರೂ ಪರಮಾತ್ಮನ ಅವತಾರವಲ್ಲವೆಂದು ತಿಳಿದುಕೊಳ್ಳಬೇಕು. ಏಕೆಂದರೆ ಕೋಪ ತಾಪಗಳು, ಭಯಾಶಂಕೆಗಳೂ, ಸುಖ, ದುಖ, ಜನನ, ಮರಣ ಮೊದಲಾದ ಗುಣಗಳು ಅವರಲ್ಲಿದ್ದುದರಿಂದ ಅವರು ಮನುಷ್ಯರೇ ಆಗಿದ್ದರು. (ಸತ್ಯಾರ್ಥ ಪ್ರಕಾಶ, ಪುಟ 304-306)

ಆದ್ದರಿಂದ ದೇವನಿಗೆ ಅವತಾರವಿಲ್ಲವೆಂದೂ, ಅವತಾರ ತಾಳುವುದಿಲ್ಲವೆಂದೂ, ಇಸ್ಲಾಮಿನಂತೆ ಹಿಂದೂ ಧರ್ಮವೂ ಅಂಗೀಕರಿಸುತ್ತದೆ. ಪ್ರಪಂಚದಲ್ಲಿರುವುದೆಲ್ಲಾ ದೇವನ ಸೃಷ್ಟಿ ಗಳು. ಏಸು, ಜೋಸೆಫ್, ಮುಹಮ್ಮದ್, ಬ್ರಹ್ಮ, ವಿಷ್ಣು ಶಿವ, ರಾಮ, ಶ್ರೀ ಕೃಷ್ಣರೂ ಇದರಿಂದ ಹೊರತಲ್ಲ, ಅವರು ದೇವರುಗಳೋ, ದೇವರ ಅವತಾರಗಳೋ ಅಲ್ಲ, ಬದಲಾಗಿ ಪರಮಾತ್ಮನ ಸೃಷ್ಟಿಗಳು. ಆದ್ದರಿಂದ ಅವರನ್ನು ಪ್ರಾರ್ಥಿಸಬಾರದು, ಅವರಿಗೆ ಹರಕೆ, ನೈವೇದ್ಯಗಳನ್ನು ಅರ್ಪಿಸಬಾರದು. ಅವರೆಲ್ಲರ ಸೃಷ್ಟಿಕರ್ತನಾದ ದೇವನನ್ನು ಮಾತ್ರ ಆರಾಧಿಸಬೇಕು. ಇದರ ಹೊರತಾಗಿ ಎಲ್ಲವೂ ಅಂಧ ವಿಶ್ವಾಸ ಹಾಗೂ ಅಜ್ಞಾನವಾಗಿದೆ. ಇದು ಮಹಾ ಪಾಪವೂ ಹೌದು.

ದೇವ -ಧರ್ಮ-ದೇವ ಗ್ರಂಥಗಳು: ಸ್ನೇಹ ಸಂವಾದ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …