ಭೌತಿಕ ಮತ್ತು ಆಧ್ಯಾತ್ಮಿಕವಾಗಿ ಯಾರ ಜೀವನದ ಅನುಸರಣೆಯಿಂದ ಮಾನವನಿಗೆ ಶಾಂತಿ ಸಮಾಧಾನಗಳು ಪ್ರಾಪ್ತವಾಗುವುದೋ, ಅಂತಹ ವ್ಯಕ್ತಿಯ ಹೆಜ್ಜೆ ಗುರುತುಗಳನ್ನು ಅರಸಿ ಅದರಂತೆ ಜೀವನ ರೂಪಿಸುವುದು ಮಾನವರಾದ ನಮ್ಮೆಲ್ಲರ ಮುಲಭೂತ ಕರ್ತವ್ಯವಾಗಿದೆ .
ಮಾನವೇತಿಹಾಸದ ಶ್ರೇಷ್ಠ ವ್ಯಕ್ತಿಗಳ ಜೀವನಗಾಥೆಯ ವಿಶ್ಲೇಷಣೆಯಲ್ಲಿ ,ಅತೀ ಹೆಚ್ಚು ಮೌಲ್ಯಗಳು ಗುರುತಿಸಲ್ಪಟ್ಟಿರುವುದು ಪ್ರವಾದಿ ಮುಹಮ್ಮದ್(ಸ)ರ ಬದುಕಿನ ವೃತ್ತಾಂತದಿಂದಾಗಿದೆ ಎಂಬುದು ಜಗತ್ತಿನ ಖ್ಯಾತ ಇತಿಹಾಸಕಾರರು, ತತ್ವಜ್ಞಾನಿಗಳು ಮತ್ತು ಚಿಂತಕರು ಒಪ್ಪಿಕೊಂಡ ಸತ್ಯವಾಗಿದೆ. ಅವರ ಜೀವನ ಚರ್ಯೆಯು ಮನುಷ್ಯನ ವೈಯಕ್ತಿಕ, ಆರ್ಥಿಕ ಮತ್ತು ಸಾಮಾಜಿಕ ಬದುಕಿಗೆ ಸಂಪೂರ್ಣವಾದ ಮಾರ್ಗದರ್ಶನವಾಗಿದೆ.
ಶಾಂತಿ ಪ್ರಕಾಶನದ *’ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್(ಸ)’* ಎಂಬ ಕೃತಿಯು ಪ್ರವಾದಿವರ್ಯರ(ಸ) ಜೀವನದ ಅಮೂಲ್ಯ ‘ನೂರ ಹನ್ನೊಂದು’ ಘಟನೆಗಳ ಸಮಾಹಾರವಾಗಿದೆ. ಮನಸ್ಸನ್ನು ಸಂಸ್ಕರಿಸಲು, ನಿಯಿಂತ್ರಿಸಲು, ಜೀವನವನ್ನು ಬೆಳಗಿಸಲು, ಸಾರ್ವಜನಿಕ ರಂಗದಲ್ಲಿ ಮೌಲ್ಯಯುತವಾಗಿ ಬದುಕಲು ಪ್ರೇರೇಪಿಸುವ ಮತ್ತು ಜಾತಿ-ಮತ-ಧರ್ಮ ಭೇದವಿಲ್ಲದೇ ಸರ್ವರೂ ಓದಿ ಅನುಸರಿಸಬಹುದಾದ ಅತ್ಯುಪಯುಕ್ತ ಕೃತಿಯಾಗಿದೆ.
● ಲೇಖಕರು : ಶೈಖ್ ಮುಹಮ್ಮದ್ ಕಾರಕುನ್ನು
ಅನುವಾದಕರು : ಸಲೀಮ್ ಬೋಳಂಗಡಿ
. ಪುಟ : 160 | ಮುಖಬೆಲೆ : 120
▬▬▬● ಶಾಂತಿ ಪ್ರಕಾಶನ ●▬▬▬
9448696490 | 9449333496
IslamKannada News Portal
