ಎಲ್ಲ ಕಾಲಗಳಲ್ಲೂ ಪ್ರವಾದಿ ಮುಹಮ್ಮದ್(ಸ) ಅವರ ಜೀವನ ಒಂದು ಚರ್ಚಾ ವಿಷಯವಾಗಿರುತ್ತದೆ. ಜಗತ್ತಿನಲ್ಲಿ ಅವರ ಕುರಿತು ಬರೆದಷ್ಟು ಇನ್ನಾರ ಕುರಿತೂ ಬರೆಯಲಾಗಿಲ್ಲ. ಅವರ ಚರಿತ್ರೆಯನ್ನು ಬರೆಯುವವರ ಸರಮಾಲೆ ಎಂದೂ ಕೊನೆಗೊಳ್ಳಲಿಲ್ಲ ; ಕೊನೆಗೊಳ್ಳುವುದೂ ಇಲ್ಲ. ಅದು ಕೇವಲ ಚರಿತ್ರೆ ಅಲ್ಲ, ಬದಲಾಗಿ ಅದೊಂದು ನಾಗರಿಕತೆ, ಸಂಸ್ಕೃತಿ ಮತ್ತು ಒಂದು ಜನಾಂಗದ ಉತ್ಥಾನ ವೃತ್ತಾಂತವಾಗಿದೆ.
-ಶಾಂತಿ ಪ್ರಕಾಶನ- ದ ‘ಅನಾಥ ಮುತ್ತು’ ಎಂಬ ಗ್ರಂಥವು, ಪ್ರವಾದಿ ಮುಹಮ್ಮದ್(ಸ) ಅವರ ಬದುಕಿನ ಕುರಿತು ಬರೆಯಲ್ಪಟ್ಟ ಕಾದಂಬರಿಯ ಶೈಲಿಯಲ್ಲಿರುವ ವಿಶಿಷ್ಟ ಕೃತಿಯಾಗಿದೆ. ಏಕದೇವತ್ವ, ವಿಶ್ವಬ್ರಾತೃತ್ವ ಮತ್ತು ಮಾನವ ಸಮಾನತೆಯ ಒಳಿತಿಗಾಗಿ ಪ್ರವಾದಿವರ್ಯರು(ಸ) ಪಟ್ಟ ಪರಿಶ್ರಮ, ಲೋಕ ಹಿತಾರ್ಥಕ್ಕಾಗಿ ಚಿಂತಿಸಿದ ಬಗೆ, ಸಂದೇಶ ಪ್ರಚಾರದ ಹಾದಿಯಲ್ಲಿ ಎದುರಿಸಿದ ಸಾಲು ಸಾಲು ಸಂಕಟಮಯ ಘಟನೆಗಳಿಗೆ ಪ್ರೀತಿ-ವಾತ್ಸಲ್ಯಗಳೇ ತುಂಬಿದ ಪ್ರತಿಕ್ರಿಯೆಯನ್ನು ಬಹಳ ಸೊಗಸಾಗಿ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
● ಲೇಖಕರು : ಮಾಹಿರುಲ್ ಖಾದ್ರಿ
● ಅನುವಾದಕರು : ಎಂ. ಅಶ್ರಫ್ ಬಾವ
● ಪುಟಗಳು : 320 | ಮುಖಬೆಲೆ : 120
IslamKannada News Portal
