ನೀಟ್ ಪರೀಕ್ಷೆ 2020 ರ ಫಲಿತಾಂಶವನ್ನು ಬಿಡುಗಡೆಯಾಗಿದ್ದು ಇಬ್ಬರು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 720 ಅಂಕಗಳನ್ನು ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಒಡಿಶಾದ ಶೋಯೆಬ್ ಅಫ್ತಾಬ್ ಮತ್ತು ಯುಪಿ ಯ ಆಕಾಂಕ್ಷಾ ಸಿಂಗ್ ಎಂಬಿಬ್ಬರು ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ. 100 ಪ್ರತಿಶತ ಅಂಕಗಳನ್ನು ಗಳಿಸುವ ಮೂಲಕ ಇಬ್ಬರೂ ನೀಟ್ 2020 ರ ಟಾಪರ್ಸ್ ಆದರು. ಶೋಯೆಬ್ ಅವರು ಕೋಟಾದಲ್ಲಿ ಮತ್ತು ಆಕಾಂಕ್ಷಾ ದೆಹಲಿಯಲ್ಲಿಯೇ ಇದ್ದು ನೀಟ್ ಪರೀಕ್ಷೆಗೆ ತಯಾರಿ ನಡೆಸಿದ್ದರು. ಈ ವರ್ಷ ಟಾಪ್ -5 ಟಾಪರ್ಸ್ ನಲ್ಲಿ ಮೂರು ಹುಡುಗಿಯರು ಸ್ಥಾನ ಪಡೆದಿದ್ದಾರೆ.
ಕರೋನಾ ಸಾಂಕ್ರಾಮಿಕ ರೋಗದ ಹೊರತಾಗಿಯೂ ಸೆಪ್ಟೆಂಬರ್ 13 ರಂದು ಪ್ರವೇಶ ಪರೀಕ್ಷೆಯಲ್ಲಿ 14.37 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್ ಪರೀಕ್ಷೆ ಕಾಣಿಸಿಕೊಂಡಿದ್ದರು. ಈ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ದೇಶದ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್‌ಗಳಲ್ಲಿ ಪ್ರವೇಶ ಸಿಗಲಿದೆ. ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಎಲ್ಲಾ ಯಶಸ್ವಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ. ಮಾತ್ರವಲ್ಲ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿಗೊಳಿಸಿದ ಸಂಸ್ಥೆಯನ್ನೂ ಶ್ಲಾಘಿಸಿದ್ದಾರೆ.
720 ರಲ್ಲಿ 720 ಅಂಕಗಳನ್ನು ಗಳಿಸಿದ ಶೋಯೆಬ್ ಅಫ್ತಾಬ್
ನೀಟ್ ಪರೀಕ್ಷೆಯಲ್ಲಿ ಶೇಕಡಾ 100 ಸಂಖ್ಯೆಯನ್ನು ತರುವ ಮೂಲಕ ಇತಿಹಾಸ ಸೃಷ್ಟಿಸಿದ 18 ವರ್ಷದ ಶೋಯೆಬ್ ಅಫ್ತಾಬ್ ಒಡಿಶಾ ರಾಜ್ಯದ ರೂರ್ಕೆಲಾ ನಿವಾಸಿ. ಅವರು ಒಡಿಶಾದಿಂದ ದೇಶದಲ್ಲಿ ಪ್ರಥಮ ಸ್ಥಾನ ಪಡೆದ ಮೊದಲ ವಿದ್ಯಾರ್ಥಿಯಾಗಿದ್ದಾರೆ. 2 ವರ್ಷಗಳ ತಯಾರಿ ನಂತರ, ಅವರು ತಮ್ಮ ಮೊದಲ ಪ್ರಯತ್ನದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈಗ ಅವರು ಏಮ್ಸ್ ದೆಹಲಿಯಲ್ಲಿ ಪ್ರವೇಶ ಬಯಸುತ್ತಾರೆ. ಶೋಯೆಬ್ ತಂದೆ ಉದ್ಯಮಿ. ಶೋಯೆಬ್ ತನ್ನ ಪ್ರತಿಭೆಯನ್ನು ಅಧ್ಯಯನಗಳಲ್ಲಿ ಮಾತ್ರವಲ್ಲದೆ ರಸಪ್ರಶ್ನೆ ಮತ್ತು ಕಾಪಿರೈಟಿಂಗ್‌ನಲ್ಲಿಯೂ ತೋರಿಸಿದ್ದಾನೆ. ಜೂನಿಯರ್ ಸೈಂಟಿಸ್ಟ್ ಪರೀಕ್ಷೆಯಲ್ಲಿ ಅವರು ಇಡೀ ದೇಶದಲ್ಲಿ 35 ನೇ ರ್ಯಾಂಕ್ ಗಳಿಸಿದ್ದರು.
720 ರಲ್ಲಿ 720 ಅಂಕಗಳನ್ನು ಗಳಿಸಿದ ಆಕಾಂಕ್ಷಾ
ದೆಹಲಿ ಮೂಲದ 17 ವರ್ಷದ ಆಕಾಂಕ್ಷಾ ಭಾರತೀಯ ವಾಯುಪಡೆಯ ನಿವೃತ್ತ ಸಾರ್ಜೆಂಟ್ ರವರ ಮಗಳು. ಆಕಾಂಕ್ಷಾ ಮೂಲತಃ ಯುಪಿ ಯ ಕುಶಿನಗರದ ಅಭಿನಾಯಕಪುರ ಗ್ರಾಮದವರು. ಅವರು 11 ರಿಂದ 12 ನೇ ಅಧ್ಯಯನಕ್ಕಾಗಿ ದೆಹಲಿಗೆ ತೆರಳಿ ಅಲ್ಲಿಯೇ ಇದ್ದು ನೀಟ್ ಪರೀಕ್ಷೆಗಾಗಿ ತನ್ನನ್ನು ತಯಾರು ಗೊಳಿಸಿದ್ದರು. ಅಕಾಂಕ್ಷಾ ತಾಯಿ ರುಚಿ ಸಿಂಗ್ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ. ಆಕಾಂಕ್ಷಾ ತನ್ನ ಯಶಸ್ಸಿಗೆ ದೇವರು, ಪೋಷಕರು ಮತ್ತು ಕೋಚಿಂಗ್ ಸಂಸ್ಥೆಯೇ ಕಾರಣವೆಂದು ಹೇಳುತ್ತಾರೆ. ಅಧ್ಯಯನದ ಹೊರತಾಗಿ, ಆಕಾಂಕ್ಷಾ ಹಾಡುಗಳನ್ನು ಕೇಳುವುದನ್ನು ಇಷ್ಟಪಡುತ್ತಾರೆ. ದೆಹಲಿ ಏಮ್ಸ್ ಅನ್ನು ಅವರು ಸ್ಫೂರ್ತಿ ಎಂದು ಪರಿಗಣಿಸಿದ್ದಾರೆ. ಮುಂದಿನ ಪ್ರಯಾಣಕ್ಕೆ ಇವರಿಬ್ಬರಿಗೂ ಶುಭಕಾಮನೆಗಳು.
IslamKannada News Portal


