ದೇಶಕ್ಕಾಗಿ ಸೇವೆ ಮಾಡಿ ಹುತಾತ್ಮರಾದ ಸೈನಿಕರ ಕುಟುಂಬ ಯಾವಾಗಲೂ ನಮಗೆ ಮೊದಲ ಆದ್ಯತೆಯಾಗಿದೆ. ದೇಶಕ್ಕಾಗಿ ಹುತಾತ್ಮರಾದ ಸೈನಿಕರ ತಾಯಿಯೋರ್ವರು ಮೂತ್ರ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಅವರ ಬಳಿ ಹಣ ಇರಲಿಲ್ಲ. ಮಹಾರಾಷ್ಟ್ರದ ಔರಂಗಾಬಾದ್ ಮೂತ್ರತಜ್ಞರಾದ ವೈದ್ಯ ಅಲ್ತಾಫ್ ಶೇಕ್ ಆ ತಾಯಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಉಚಿತ ಚಿಕಿತ್ಸೆ ನೀಡಿದ ಬಳಿಕ ಆ ತಾಯಿಯನ್ನು ಡಿಸ್ಚಾರ್ಜ್ ಮಾಡಿದಾಗ, ಅವರು ವೈದ್ಯರನ್ನು ತಬ್ಬಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದರು. ಈ ವಿಡಿಯೋವನ್ನು ಐಪಿಎಸ್ ದೀಪನ್ಶು ಕಬ್ರಾ ಹಂಚಿಕೊಂಡಿದ್ದು, ಆ ತಾಯಿಯನ್ನು ಗೌರವ ಮತ್ತು ಪ್ರೀತಿಯಿಂದ ಡಾಕ್ಟರ್ ಅಲ್ತಾಫ್ ತಬ್ಬಿಕೊಂಡು ಸಂತೈಸುವುದನ್ನು ಸಾಂತ್ವನ ನೀಡುವುದನ್ನು ನೋಡಬಹುದು.
#शहीद की मां ने एक बेटा खोया है, लेकिन उसके 135 करोड़ बेटे बेटी औऱ भी हैं.
हम सभी को, देश के लिए कुर्बानी देने वाले शहीदों के परिवार का ध्यान रखने की प्रेरणा डॉक्टर साहब से लेनी चाहिए. https://t.co/kRy6aDVjQs— Dipanshu Kabra (@ipskabra) November 2, 2020
IslamKannada News Portal
