- ಪ್ರಮೋದ್ ಪಿ.
(ಲೇಖಕರು, ಸುಪ್ರೀಂ ಕೋರ್ಟಿನ ವಕೀಲರು)
ಬಾಬರಿ ಮಸೀದಿ ಕೆಡವಿದ್ದರಲ್ಲಿ ಕ್ರಿಮಿನಲ್ ಸಂಚು ಇಲ್ಲ, ಅದಕ್ಕೆ ಸಾಕ್ಷಿಗಳು ಕೂಡ ಇಲ್ಲ ಎಂದು ಕೋರ್ಟು ಆ ಪ್ರಕರಣದ ಎಲ್ಲ ಆರೋಪಿಗಳನ್ನು ಆರೋಪ ಮುಕ್ತಗೊಳಿಸಿದೆ. ಅದೊಂದು ಅಪರಾಧಿ ಕೃತ್ಯವಾಗಿ ಕಾನೂನು ವ್ಯವಸ್ಥೆ ಮತ್ತು ಸರಕಾರ ಪರಿಗಣಿಸಿಲ್ಲ. ಇಷ್ಟು ಸಹಜವಾದುದು ಆಗಿ ಭಾರತದ ಪೌರ-ರಾಜಕೀಯ ಸಮೂಹದಲ್ಲಿ ರಾಜಕೀಯ ಮತ್ತು ಸಿದ್ಧಾಂತ ಬದಲಾಗಿ ಬಿಟ್ಟಿದೆ.
1992 ಡಿಸೆಂಬರ್ 6ಕ್ಕೆ ಬಾಬರಿ ಮಸೀದಿ ಕೆಡವಲ್ಪಟ್ಟಾಗ ಅದರೆಡೆಗೆ ಕ್ರಮಿಸಿದ ಸಂಘಪರಿವಾರದ ರಥಯಾತ್ರೆಯ ನಂತರ ಭಾರತ ಜಾತ್ಯತೀತ ದೇಶ ಎಂಬ ಆಶಯವನ್ನು ತುಳಿದು ಮಣ್ಣು ಪಾಲುಗೊಳಿಸಲಾಯಿತು. ಅಡ್ವಾಣಿಯವರ ರಥಯಾತ್ರೆ ಹಾದು ಹೋದಲ್ಲೆಲ್ಲ ಯೋಜಿತವಾದ ಕೋಮು ಗಲಭೆಯನ್ನು ಮಾಡ ಲಾಯಿತು. ಬಾಬರಿ ಮಸೀದಿ ಕೆಡವಲು ಅದೇ ಸ್ಥಳದಲ್ಲಿ ರಾಮ ಮಂದಿರ ಕಟ್ಟಲು ದಶಕಗಳಿಂದ ಸಂಘಪರಿವಾರ ನಡೆಸಿದ ಸಂಘಟಿತವಾದ ಬಹಿರಂಗ ಯತ್ನಗಳನ್ನು ಸಿಬಿಐ ವಿಶೇಷ ಕೋರ್ಟು ಸಾಕ್ಷ್ಯಗಳಿಲ್ಲ ಎಂದು ತಳ್ಳಿ ಹಾಕಿತು. ಬಾಬರಿ ಮಸೀದಿ ಕೆಡವಿದ ರಾಜಕೀಯ ಶಕ್ತಿಗಳಿಗೆ ಅದೇ ಸ್ಥಳದಲ್ಲಿ ರಾಮ ಮಂದಿರ ಕಟ್ಟಲು ಅನುಮತಿಯನ್ನು ಕೊಟ್ಟ ಸುಪ್ರೀಂ ಕೋರ್ಟು ತೀರ್ಪು ಮಾರ್ಗದರ್ಶಿಯಾಗಿ ಮುಂದಿರುವಾಗ ಯಾವುದೇ ವಿಚಾರಣಾ ಕೋರ್ಟಿನ ತೀರ್ಪು ಬೇರೆ ರೀತಿಯಾಗಿರುತ್ತದೆ ಎಂದು ಹೊಸ ಭಾರತದಲ್ಲಿ ಭಾವಿಸುವುದು ಸೂಕ್ತವಲ್ಲ.
ಕೋಮು ರಾಜಕೀಯವನ್ನು ಒಂದು ದೇಶದ ಇನ್ನೊಂದು ಹೆಸರಾಗಿ ಮಾರ್ಪಡಿಸುವ ಸಂಘ ಪರಿವಾರದ ಶತಮಾನಗಳ ಸಂಘಟಿತ ಯತ್ನದ ಪರಿಣಾಮವನ್ನು ನಾವು ಕಾಣುತ್ತಿದ್ದೇವೆ. ಈ ಸುದೀರ್ಘ ಕಾಲದಲ್ಲಿ ಅವರ ರಾಜಕೀಯ ಚಟುವಟಿಕೆಗಳು ಕೇವಲ ಚುನಾವಣಾ ಅಧಿಕಾರಕ್ಕೆ ಗುರಿಯಿರಿಸಿದ್ದು ಮಾತ್ರ ಆಗಿರಲಿಲ್ಲ. ಅದು ಭಾರತದ ಸಾಮಾಜಿಕ ಶರೀರವನ್ನು ಹಿಂದೂಕರಿಸುವ ಸೂಕ್ಷ್ಮ ರಾಜಕೀಯ ಚಟುವಟಿಕೆಯಾಗಿತ್ತು. 1949 ಡಿಸೆಂಬರ್ 22ಕ್ಕೆ ಮಧ್ಯರಾತ್ರೆಯಲ್ಲಿ ಬಾಬರಿ ಮಸೀದಿಯ ಬೀಗ ಒಡೆದು ರಾಮ ಲಲ್ಲಾನ ವಿಗ್ರಹ ತಂದಿರಿಸಿದ ಬಳಿಕದ ನಾಲ್ಕು ದಶಕ ಕಳೆದು ಬಾಬರಿ ಮಸೀದಿ ಕೆಡವಲ್ಪಟ್ಟಾಗ ಅದನ್ನು ತಡೆಯಲು ಸಾಧ್ಯವಿಲ್ಲದಷ್ಟು ದುರ್ಬಲವಾದ ಜಾತ್ಯತೀತ ಶಕ್ತಿ ಭಾರತದ್ದು ಎಂದು ತನ್ನ ನಾಲ್ಕು ದಶಕಗಳ ರಾಜಕೀಯ ಚಟುವಟಿಕೆಗಳಿಂದ ಸಂಘಪರಿವಾರ ದೃಢಪಡಿಸಿ ಬಿಟ್ಟಿತ್ತು.
1980ರಲ್ಲಿ ಭಾರತದಲ್ಲಿ ಪೌರ ಸಮಾಜದಲ್ಲಿ ಸಾಂಸ್ಕøತಿಕ ಜೀವನದಲ್ಲಿ ಸವಾಲೇ ಇಲ್ಲದೆ ಕೋಮು ಅಜೆಂಡಾ ಜಾರಿಗೊಳಿಸಲಾಗಿತ್ತು. ರಾಮ ಒಬ್ಬ ಮರ್ಯಾದ ಪುರುಷೋತ್ತಮ ಎಂಬ ಸ್ಥಿತಿಯಿಂದ ಕೋಮುವಾದಿಗಳ ಹಿಂಸಾತ್ಮಕ ಪೌರುಷ ಪ್ರಯೋಗಕ್ಕಾಗಿ ಬಿಲ್ಲುಗಳನ್ನೆತ್ತಿ ನಿಂತ ಅಯೋಧ್ಯೆಯ ಬಾಬರಿ ಮಸೀದಿ ಕೆಡವುವರ ನಾಯಕನಾಗಿ ದೇಶದ ಗಲ್ಲಿಗಳಲ್ಲಿಯೂ ನೆಲೆಯಾದನು. ಸ್ನಾನ ಮಾಡಿ ಆರತಿಯೆತ್ತಿ ಜನರು ರಾಮಾಯಣ ಮಹಾಭಾರತ (ಸೀರಿಯಲ್ಗಳನ್ನು) ನೋಡಿದರು. ಆದರೆ, ಮುಂದೆ ಬರಬಹುದಾದ ಅತೀ ರಾಷ್ಟ್ರೀಯತೆಗೆ ಹೀಗೆ ಸಜ್ಜುಗೊಳಿಸಿದ ಭಾರತ ಕೋಮುವಾದಿಗಳಿಗೆ ಧಾರಾಳ ಸಾಕಿತ್ತು.
ಈ ಭಾರತದಲ್ಲಿ ಬಾಬರಿ ಮಸೀದಿ ಕೆಡಲ್ಪಟ್ಟಿದ್ದು. ಅಲ್ಲಿಂದ ನರೇಂದ್ರ ಮೋದಿಯಲ್ಲಿಗೆ ತಲುಪಲು ಗುಜರಾತ್ ಗಲಭೆ ಒಂದು ಸಾಕಿತ್ತು. ಮೋದಿಯಲ್ಲಿಗೆ ತಲುಪಿದ ಭಾರತದಲ್ಲಿ ರಾಮ ಜನ್ಮಭೂಮಿ ಒಂದು ವಿವಾದ ವಿಷಯವಾಗಿರಲಿಲ್ಲ. ಅದೊಂದು ಆಡಳಿತದ ಅಜೆಂಡಾವಾಗಿ ಮಾರ್ಪಟ್ಟಿತು. ಪೌರತ್ವ ತಿದ್ದುಪಡಿ ಕಾನೂನಂತೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಿಸುವ ಯೋಜನೆಯ ಬಹಿರಂಗ ಪ್ರಕಟನೆಯಾಗಿತ್ತು. ಆದರೆ ಬಾಬರಿ ಮಸೀದಿ ಪ್ರಕರಣದ ಎರಡು ತೀರ್ಪುಗಳು ಅದರ ಹೂಂಕಾರವಾಗಿದೆ. ಭಾರತ ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳು ಒಂದೊಂದಾಗಿ ಸಂಘಪರಿವಾರದ ಪೂರಕ ಸಂಸ್ಥೆಗಳಾದವು.
ಮುಸ್ಲಿಂ ಎಂಬ ಶತ್ರುವಿನಿಂದ ಪ್ರಜಾಪ್ರಭುತ್ವ, ಜಾತ್ಯತೀತತೆ ಮುಂತಾದ ವಿಫುಲವಾದ ಆಶಯಗಳನ್ನು ನಿರ್ಮೂಲಿಸುವ ಯಜ್ಞಕ್ಕೆ ಸಂಘಪರಿವಾರ ಸಾಮಾಜಿಕವಾಗಿ ಪ್ರವೇಶಿಸಿ ಬಿಟ್ಟಿದ್ದಾರೆ. ಭೀಮ- ಕೊರೆಗಾಂವ್ ಕೇಸಿನಲ್ಲಿ ಒಬ್ಬರ ನಂತರ ಒಬ್ಬರಂತೆ ದೇಶದ ಪೌರಹಕ್ಕು ರಾಜಕೀಯಗಳ ಕಾರ್ಯಕರ್ತರು, ಬುದ್ಧಿ ಜೀವಿಗಳನ್ನು ಜೈಲಿಗೆ ಹಾಕಿದಾಗ ಅದರ ಮರೆಯಲ್ಲಿ ಸಮಾಜದ ಮೌನವೂ ಅದೇ ಲೆಕ್ಕವಾಗಿದೆ. ಈಗ ಪ್ರಜಾಪ್ರಭುತ್ವವೇ ಶತ್ರು. ಅದನ್ನು ಒಂದೇಟಿಗೆ ಇಲ್ಲದಂತೆ ಮಾಡುವುದಕ್ಕಿಂತ ದೊಡ್ಡ ಗಾಯಗಳನ್ನು ಮಾಡಿ ರಕ್ತ ಬಸಿದು ಪ್ರಜಾಪ್ರಭುತ್ವದ ದೇಹವನ್ನು ಸಾಯಿಸುವುದು ಸುಲಭವಿದೆ.
ಅರಾಜಕವಾದಿಗಳಾದ ಜನರ ಗುಂಪು ಬಾಬರಿ ಮಸೀದಿ ಕೆಡವಿದ್ದು ಎಂದು ವಿಚಾರಣಾ ಕೋರ್ಟು ಹೇಳಿದೆ. ಪ್ರತ್ಯಕ್ಷದಲ್ಲಿ ಅಸಂಘಟಿತ ಮತ್ತು ಹಠಾತ್ ಉಂಟಾ ಗಿದ್ದೆಂದು ಅನಿಸುವ ಇಂತಹ ಜನರ ಗುಂಪನ್ನು ಯಾವಾಗ ಬೇಕಾದರೂ ಸಂಘಟಿತ ಗೊಳಿಸಬಹುದಾದ ಮಾರಕವಾದ ಸ್ಥಿತಿ ಈಗಿದೆ. ಹಿಂದೂ ರಾಷ್ಟ್ರೀಯತೆಯ ರೂಪಭಾವಗಳನ್ನು ಒಪ್ಪದಿದ್ದರೆ, ಜಾತ್ಯತೀತ ರಾಷ್ಟ್ರದ ಪ್ರಜಾಪ್ರಭುತ್ವ ಭಾಷೆಯಲ್ಲಿ ಮಾತಾಡುವುದಾದರೆ ಎಲ್ಲಿಯೂ, ಯಾರ ಸುತ್ತಲೂ ಒಟ್ಟುಗೂಡಬಹುದಾದ ಜನರ ಗುಂಪು ಭಾರತದ ಸಮಾಜದ ದೇಹದಲ್ಲೇ ಹಿಂಸಾತ್ಮಕ ಕ್ರೌರ್ಯಗಳೊಂದಿಗೆ ರೂಪುಗೊಂಡಿದೆ.
ಒಂದು ರಾತ್ರಿಯಲ್ಲಿ ಜಮ್ಮು ಕಾಶ್ಮೀರದ ಎಲ್ಲ ವಿಶೇಷಾಧಿಕಾರಗಳನ್ನು ತೆಗೆದು ಹಾಕಿ, ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದಾಗಲೂ ಅದು ಯಾವುದೋ ದೂರ ಪ್ರದೇಶದಲ್ಲಿ ಭಾರತ ಸರಕಾರ ನಡೆಸಿದ ರಾಷ್ಟ್ರೀಯತೆ ಆಚರಣೆಯಂತೆ ಹೊಗಳಿಕೆ ಪಡೆಯಿತು. ವಿಧೇಯರು ಮಾತ್ರ ವಾಸಿಸಬಹುದಾದ ಬಯಲು ಬಂದೀಖಾನೆಯಾಗಿ ಭಾರತ ಬದಲಾಗಿದೆ ಎನ್ನುವುದನ್ನು ಇವೆಲ್ಲ ಘಟನೆಗಳು ಬಯಲುಗೊಳಿಸುತ್ತಿವೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಪೌರ ಹಕ್ಕುಗಳು ನಿಷೇಧಿಸ ಲ್ಪಟ್ಟಿವೆ ಎಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ನಂತರ ಕೋರ್ಟೇ ತಿದ್ದಿಕೊಂಡಿತು.
ಈಗ ತಿದ್ದಲು ತೀರ್ಪಿಲ್ಲ, ವಿವಾದಗಳಿಲ್ಲ. ಪೌರಹಕ್ಕುಗಳ ಕುರಿತು ಪ್ರಶ್ನೆಗಳೂ ಇಲ್ಲ.
IslamKannada News Portal
