@ ಬಶೀರ್ ಹಸನ್ ಕಬ್ಬಿಣ, ಹೊಯ್ಗೆ, ಸಿಮೆಂಟು ಮುಂತಾದವುಗಳನ್ನು ಅಗತ್ಯಕ್ಕೆ ಬೇಕಾದಷ್ಟು ಬಳಸಿ ಮನೆಯನ್ನು ನಿರ್ಮಿಸುತ್ತಾರೆ. ಇದೇ ರೀತಿ ಇಸ್ಲಾಮೀ ಸಮಾಜದ ನಿರ್ಮಾಣಕ್ಕೆ ಒಂದು ಮಾದರಿಯಿದೆ. ಅದು ಪುರುಷ ಮತ್ತು ಮಹಿಳೆಯ ಅಂಶಗಳನ್ನು ಒಂದು ನಿರ್ದಿಷ್ಟ ಸಂಖ್ಯೆಯಲ್ಲಿ ಬಳಸಿ ಇಸ್ಲಾಮೀ ಸಮಾಜದ ಸೌಧವನ್ನು ನಿರ್ಮಿಸುತ್ತದೆ. ಸಮಾಜದ ಬೆಳವಣಿಗೆಗೆ ಪೂರಕವಾಗಿ ಪುರುಷ, ಮಹಿಳೆ ಮತ್ತು ಇಸ್ಲಾಮ್ ವಿಧೇಯವಾಗುತ್ತದೆ. ವಿಶ್ವಾಸ ಮತ್ತಿತರ ಆರಾಧನಾ ಕರ್ಮಗಳು ಅದರ ಇತರ ಶುದ್ಧೀಕರಣ ಪ್ರಕ್ರಿಯೆಗಳಾಗಿವೆ. ಇದಕ್ಕೆ ಪ್ರಥಮವಾಗಿ …
Read More »ಹಣದ ಮುಂದೆ ಮಂಡಿಯೂರದಿರಿ
@ ಪಿ.ಎಂ.ಎಂ. ಗಫೂರ್ ಸದ್ಭಕ್ತನಾದ ನೈಜ ದೈವ ಭಕ್ತನಾದ ವಿದ್ವಾಂಸರನ್ನು ದೋಚಬೇಕೆಂಬ ಬಯಕೆಯು ರಾಜ ಹಾರೂನ್ ರಶೀದ್ರಲ್ಲಿ ಮೊಳಕೆಯೊಡೆಯಿತು. ತನ್ನ ಪ್ರಧಾನ ಮಂತ್ರಿ ಫಝೀಲ್ ಬಿನ್ ರಬಾಅರನ್ನು ಕರೆದು ಈ ವಿಚಾರವನ್ನು ತಿಳಿಸಿದರು. ಅದರಂತೆ ಪ್ರಧಾನ ಮಂತ್ರಿಯವರನ್ನು ಓರ್ವ ಪ್ರಸಿದ್ಧ ವಿದ್ವಾಂಸರ ಬಳಿಗೆ ಕರೆದುಕೊಂಡು ಹೋದನು. ಆ ವಿದ್ವಾಂಸರು ಏನನ್ನೋ ಓದುವುದರಲ್ಲಿ ನಿರತರಾಗಿದ್ದರು. ರಾಜರನ್ನು ಕಂಡ ಕ್ಷಣವೇ ಎದ್ದು ನಿಂತು “ಅಮೀರ್ ರವರೇ, ತಾವು ನನ್ನನ್ನು ನೋಡಲು ಇಲ್ಲಿಯವರೆಗೆ ಯಾಕೆ ಬಂದಿದ್ದೀರಿ? …
Read More »ಹಣವೇ ಸರ್ವಸ್ವವೆಂಬ ತಪ್ಪುಕಲ್ಪನೆ
@ ನಜೀರ್ ಅಹಮದ್ ಕಾಜಿ, ವಿಜಯಪುರ ಇವತ್ತೀನ ಜಗತ್ತಿನಲ್ಲಿ ಹಣವೇ ಎಲ್ಲ ಕಾರ್ಯಗಳಿಗೆ ಮುಖ್ಯ. ಹಣವೆಂದರೆ ಹೆಣವೂ ಬಾಯಿ ಬಿಡುತ್ತೆ, ದುಡ್ಡೆ ದೊಡ್ಡಪ್ಪ. ಈ ತರಹ ಹಣದ ಹಿರಿಮೆಯನ್ನು ಸಾರುವ ಉಕ್ತಿಗಳಿವೆ. ಈ ಕಾರಣದಿಂದಲೇ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಅದರ ಹಿಂದೆ ಓಡಾಡುತ್ತಿರುತ್ತಾನೆ. ಇವತ್ತು ಈ ಕುರುಡು ಕಾಂಚಾಣದ ಸುತ್ತ ಜಗತ್ತೇ ಕುಣಿಯುತ್ತಿದೆ. ಜಗತ್ತಿನಲ್ಲಿ ಹಣದಿಂದ ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಆದರೆ ಆ ದೇವರು ಕೊಟ್ಟ ನೈಜ ಸೌಂದರ್ಯವನ್ನಲ್ಲ. ನಾವು …
Read More »ನಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಬಯಸಿದ್ದೆ…
@ ಆಯೆಷಾ ಏಜಾಝ್, ಶಿವಮೊಗ್ಗ ಕೊರೋನಾ ವೈರಸ್ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಲಾಕ್ಡೌನ್ನಿಂದಾಗಿ ಮಾಡಲು ಕೆಲಸವಿಲ್ಲದೆ, ಇದ್ದ ಕೆಲಸವನ್ನೂ ಕಳೆದುಕೊಂಡ ಲಕ್ಷಾಂತರ ಜನರು ಮಾನಸಿಕವಾಗಿ ಕುಗ್ಗಿ ಹೋಗಿ, ಬೇಸರಗೊಂಡು, ಒಲ್ಲದ ಬದುಕಿನಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಜೀವಿಸುವುದಕ್ಕಿಂತ ಸಾವೇ ಸುಲಭವಾದ ದಾರಿಯೆನಿಸಿದೆ. ಯಶಸ್ಸಿನ ಶಿಖರಕ್ಕೇರಿದ ನಂತರವೂ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾದ ಸುಶಾಂತ್ ಸಿಂಗ್ ರಾಜಪೂತ್ ಇವರಲ್ಲಿ ಒಬ್ಬರು. ಹಲವಾರು ಕನಸುಗಳನ್ನು ಹೊತ್ತು, ಆ ಕನಸುಗಳನ್ನು ನನಸು …
Read More »ಮನಸ್ಸು ಮಾಡಿದರೆ ಹೆಜ್ಜೆಗೊಂದು ಹಯಾತ್ ಖಾನ್ ಮನೆ ಸೃಷ್ಟಿಯಾದೀತು
@ ಏ.ಕೆ. ಕುಕ್ಕಿಲ ಇತ್ತೀಚೆಗೆ ಗೆಳೆಯ ಬಶೀರ್ ಅಹ್ಮದ್ರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದೇ ಕುಟುಂಬದ ಮೂರು ಮಂದಿ IPS ಅಧಿಕಾರಿಗಳಾಗಿರುವ ಕತೆ. ಆ ಮೂವರ ಫೋಟೋವನ್ನು ಅವರು ಹಂಚಿಕೊಂಡಿದ್ದರು. ಓರ್ವ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಿಜವಾಗಿ, ಮುಸ್ಲಿಮ್ ಸಮುದಾಯದ ಒಳಗಡೆ ಗಂಭೀರ ಚರ್ಚೆಗೆ ಒಳಗಾಗಬೇಕಾದ ಸಂಗತಿ ಇದು. ಒಂದೇ ಕುಟುಂಬದ 3 ಮಂದಿ ಹೇಗೆ IPS ಅಧಿಕಾರಿಗಳಾದರು? ಅದರ ಹಿಂದೆ ಆ ಮಕ್ಕಳ ಹೆತ್ತವರ …
Read More »ಎಸ್.ಐ.ಓ ದಿಂದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ಸನ್ಮಾನ
ಬಂಟ್ವಾಳ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರಕಟಿಸುವ ದ.ಕ ಜಿಲ್ಲಾಮಟ್ಟದ ಶಿಕ್ಷಕರ ಪ್ರಶಸ್ತಿಯನ್ನು ಪಡೆದ ಬೆಳ್ತಂಗಡಿ ವಲಯದ ಶಿಕ್ಷಕರನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಒ) ಪಾಣೆಮಂಗಳೂರು ಘಟಕದ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆ (ಕಿರಿಯ ವಿಭಾಗ) ದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ರಕ್ತೇಶ್ವರಿ ಪದವು ಶಾಲೆಯ ಚೈತ್ರ ಪ್ರಭಾ ಶ್ರೀಶಂ, ಪ್ರಾಥಮಿಕ ಶಾಲೆ (ಹಿರಿಯ ವಿಭಾಗ) ದಲ್ಲಿ ಕುಂಜತ್ತೋಡಿ ಶಾಲೆಯ ಸಬೀನಾ …
Read More »ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕ ಯಾಕೂಬ್ ರಿಗೆ ಎಸ್.ಐ.ಓ ದಿಂದ ಸನ್ಮಾನ
ಬೆಳ್ತಂಗಡಿ :ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ) ಪಾಣೆಮಂಗಳೂರು ಘಟಕದ ವತಿಯಿಂದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಯಾಕೂಬ್ ಕೊಯ್ಯೂರ್ ಅವರನ್ನು ಅಭಿನಂದಿಸಲಾಯಿತು. ಬೆಳ್ತಂಗಡಿ ತಾಲೂಕಿನ ನಡ ಪ್ರೌಢಶಾಲೆಯ ಗಣಿತ ಶಿಕ್ಷಕ ಯಾಕೂಬ್ ಕೊಯ್ಯೂರ್ ರವರು ಇಲ್ಲಿನ ವಿದ್ಯಾರ್ಥಿಗಳ ಬಾಳಿಗೆ ಆಶಾಕಿರಣವಾಗಿ 1996 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ರಾಜ್ಯದ ಪ್ರಪ್ರಥಮ ಗಣಿತ ಪ್ರಯೋಗ ಶಾಲೆಯನ್ನು ನಿರ್ಮಿಸಿ ಮಾದರಿಯಾಗಿದ್ದರು. ಈ ಎಲ್ಲಾ …
Read More »ಜಮಾಅತೆ ಇಸ್ಲಾಮೀ ಹಿಂದ್ನಿಂದ ಉಸ್ತಾದ್ ಕುಟುಂಬಕ್ಕೆ ಮನೆ ಹಸ್ತಾಂತರ
ಮಂಗಳೂರು: ಬೆಳ್ತಂಗಡಿ ತಾಲೂಕಿನ ಮೌಲಾನಾರೋರ್ವರ ಮನೆಯ ಸಿಮೆಂಟ್ ಶೀಟಿನ ಮೇಲ್ಛಾವಣಿ, ಹಾನಿಗೊಳಗಾಗಿದ್ದು, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ವತಿಯಿಂದ, ಅದಕ್ಕೆ ಸ್ಲ್ಯಾಪ್ ಹಾಕಿ, ಕೊಠಡಿಯನ್ನು ಸೇರಿಸಿ, ದಾನಿಗಳ ನೆರವಿನಿಂದ ಸುಮಾರು ನಾಲ್ಕು ಲಕ್ಷ ರೂಪಾಯಿ ವ್ಯಯಿಸಿ, ಸಂಪೂರ್ಣ ದುರಸ್ತಿ ಮಾಡಿಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಮನೆಯನ್ನು ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ, ಮೌಲಾನಾ ಯಹ್ಯಾ ತಂಙಲ್ ಮದನಿಯವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಉಪ್ಪಿನಂಗಡಿ ಜಮಾಅತೆ …
Read More »ಶಿಕ್ಷಕರು ಬೆಳಕಾಗಿದ್ದಾರೆ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಜಾಬಿರ್(ರ) ಅನ್ಹು ಅನ್ನನ್ನಬಿಯ್ಯ(ಸ) ಕಾಲ ಇನ್ನಲ್ಲಾಹ ತಆಲಾ ಲಮ್ ಯಬ್ಅದ್ನೀ ಮುಅನ್ನಾತನ್ ವಲಾ ಮುತನ್ನಾತನ್ ವಲಾಕಿನ್ ಬಅಸನೀ ಮುಅಲ್ಲಮನ್ ಮುಯಸ್ಸಿರನ್. ಜಾಬಿರ್(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು, ಕಠಿಣ ಹೃದಯ ಮತ್ತು ದಬ್ಬಾಳಿಕೆ ನಡೆಸುವವನಾಗಿ ಅಲ್ಲಾಹನು ನನ್ನನ್ನು ಸೃಷ್ಟಿಸಲಿಲ್ಲ. ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಅಧ್ಯಾಪಕನಾಗಿ ನನ್ನನ್ನು ನಿಯೋಗಿಸಿದ್ದಾನೆ. (ಮುಸ್ಲಿಮ್) ಇಸ್ಲಾಮ್ನಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವಾನ್ವಿತ ಸ್ಥಾನಮಾನಗಳಿವೆ. ತಾನೋರ್ವ ಒಳ್ಳೆಯ ಶಿಕ್ಷಕನೆಂದು ಪ್ರವಾದಿ(ಸ) ತನ್ನ ಬಗ್ಗೆ ವರ್ಣಿಸಿದ್ದಾರೆ. …
Read More »ಹೆತ್ತವರೊಂದಿಗೆ ಸದ್ವರ್ತನೆ – ಕುರ್ಆನಿನ ಸಾಮಾಜಿಕ ಚಿಂತನೆಗಳು
@ ಅಶೀರುದ್ದೀನ್ ಆಲಿಯಾ ಮಂಜನಾಡಿ “ನಿಮ್ಮ ಪ್ರಭು (ಹೀಗೆ) ವಿಧಿಸಿ ಬಿಟ್ಟಿದ್ದಾನೆ; ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನೂ ಮಾಡಬಾರದು. ಮಾತಾಪಿತರೊಡನೆ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಬಗ್ಗೆ ಚಕಾರವೆತ್ತಬೇಡಿರಿ ಮತ್ತು ಅವರನ್ನು ಜರೆಯಬೇಡಿರಿ. ಅವರೊಂದಿಗೆ ಗೌರವಪೂರ್ವಕವಾಗಿ ಮಾತನಾಡಿರಿ. ನಯ ವಿನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಬಾಗಿಕೊಂಡಿರಿ. “ಓ ನನ್ನ ಪ್ರಭೂ! ಇವರು ನನ್ನ ಚಿಕ್ಕಂದಿನಲ್ಲಿ ದಯೆ ವಾತ್ಸಲ್ಯಗಳಿಂದ ನನ್ನನ್ನು ಸಾಕಿದಂತೆಯೇ ನೀನು …
Read More »
IslamKannada News Portal