ಮಂಗಳೂರು: ಮಂಗಳೂರಿನಲ್ಲಿ ಹಿದಾಯತ್ ಸೆಂಟರನ್ನು ಕೇಂದ್ರವಾಗಿರಿಸಿಕೊಂಡು ಪವಿತ್ರ ಕುರ್ಆನ್ ಅಧ್ಯಯನಕ್ಕಾಗಿ ಇತ್ತೀಚೆಗೆ ಆರಂಭಿಸಿರುವ ಆನ್ಲೈನ್ ಕೋರ್ಸ್ ಒಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆಯವರು ತಿಳಿಸಿದರು. ಕುರ್ಆನ್ ಆನ್ಲೈನ್ ಅಧ್ಯಯನ ಸರಣಿಯ ಎರಡನೇ ಕೈಪಿಡಿಯ ಬಿಡುಗಡೆ ಸಮಾರಂಭಕ್ಕೆ ಕಳುಹಿಸಿದ ಶುಭ ಸಂದೇಶದಲ್ಲಿ ಅವರು ಈ ಮಾತನ್ನು ಹೇಳಿದರು. ಯಾವುದಾದರೂ ನಿರ್ದಿಷ್ಟ ಸ್ಥಳಕ್ಕೆ ಹೋಗಿ ಕಲಿಯಲು ಅನುಕೂಲ ವಿಲ್ಲದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಸಹಾಯವಾಗಲಿದೆ. ಅತ್ಯಾಧುನಿಕ …
Read More »ಉಸ್ತಾದರುಗಳ ಮನೆ ಬಾಗಿಲಿಗೆ ರೇಷನ್
ಕೊರೋನಾ ಲಾಕ್ಡೌನ್ ನಿಮಿತ್ತ, ಕಳೆದ ಐದಾರು ತಿಂಗಳುಗಳಿಂದ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದಿರುವ ಮಸೀದಿ-ಮದ್ರಸಗಳ ಉಸ್ತಾದರುಗಳ ಮನೆ ಬಾಗಿಲಿಗೆ, ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮದನಿಯವರ ನೇತೃತ್ವದಲ್ಲಿ ಸುಮಾರು ಮೂವತ್ತೆಂಟು ಕುಟುಂಬಗಳಿಗೆ ಎರಡು ಸಾವಿರ ರೂಪಾಯಿಯ ರೇಷನ್ ಕಿಟ್ಟನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವತಿಯಿಂದ, ವಿತರಿಸಲಾಯಿತು. ಬರೀ ಉಸ್ತಾದರುಗಳನ್ನು ಮಾತ್ರ ಗುರಿಯಾಗಿಸಿ ಹಮ್ಮಿಕೊಂಡ ಯೋಜನೆಯಾಗಿತ್ತಿದು. ಕೆಲವು ಮಸೀದಿ ಕಮಿಟಿಗಳು ಉಸ್ತಾದರುಗಳಿಗೆ …
Read More »ಪ್ರಭುವಿನ ಭೇಟಿ
@ ಖುರ್ರಮ್ ಮುರಾದ್ ಜೀವನದ ಅತೀ ದೊಡ್ಡ ಸತ್ಯ ಮರಣವಾಗಿದೆ. ಮರಣದ ಬಳಿಕ ಮುಂದೇನು ಎಂಬುದರ ಬಗ್ಗೆ ಭಿನ್ನಾಭಿಪ್ರಾಯವಿರಬಹುದು. ಆದರೆ ಪ್ರತಿಯೊಬ್ಬರಿಗೂ ಮರಣ ಹೊಂದಲೇಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಮರಣವೆಂದರೆ ತನ್ನ ಶಕ್ತಿ, ಸಾಮರ್ಥ್ಯ, ಶರೀರ, ಸೊತ್ತು, ಸಂಪನ್ಮೂಲ ಮತ್ತು ಸಂಬಂಧ ಕೊನೆಗೊಳ್ಳುವುದು. ಮುಸ್ಲಿಮನಾಗಿರಲಿ, ಮುಸ್ಲಿಮೇತರನಾಗಿರಲಿ ತನ್ನ ಚೆಕ್ ಪುಸ್ತಕದಲ್ಲಿ ಹಸ್ತಾಕ್ಷರ ಮಾಡಲಾರ, ಮನೆಯಲ್ಲಿರಲಾರ, ಸಂಬಂಧಿಕರೊಂದಿಗೆ ಭೇಟಿಯಾಗಲಾರ. ಆತನ ಅವಧಿ ಅಂತ್ಯವಾಗುವುದು. ಮರಣದ ಬಳಿಕ ತನ್ನ ಪ್ರಭುವಿನೊಂದಿಗೆ ಭೇಟಿಯಾಗಲಿಕ್ಕಿದೆ, ಅವನ ಮುಂದೆ …
Read More »ಆತ್ಮಚಿಂತನೆ
ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಸೃಷ್ಟಿಕರ್ತನು ಮನುಷ್ಯನಿಗೆ ಪಂಚೇಂದ್ರಿಯಗಳನ್ನು ದಯಪಾಲಿಸಿರುವನು. ಅವು ಪದಾರ್ಥಗಳನ್ನು ಅನುಭವಿಸುವ ಮಾಧ್ಯಮಗಳಾಗಿವೆ. ಇಂದ್ರಿಯ ಅನುಭವಗಳನ್ನು ವಿಶ್ಲೇಷಿಸಿ ಪದಾರ್ಥಗಳ ಹಿಂದಿರುವ ವಾಸ್ತವಿಕತೆಗಳನ್ನು ಕಂಡುಕೊಳ್ಳಲು ಬೇಕಾದ ಬುದ್ಧಿ ಶಕ್ತಿಯನ್ನೂ ದೇವನು ನಮಗೆ ನೀಡಿರುವನು. ಪಂಚೇಂದ್ರಿಯಗಳು ಮತ್ತು ಬುದ್ಧಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಮನುಷ್ಯನು ಭೌತಿಕವಾಗಿಯಾಗಲಿ, ಅಧ್ಯಾತ್ಮಿಕವಾಗಿಯಾಗಲಿ ದಾರಿ ತಪ್ಪಲಿಕ್ಕಿಲ್ಲ. ಅವನ ನಂಬಿಕೆ, ನಡವಳಿಕೆ, ಅನುಕರಣೆ ಮತ್ತು ಆವಿಷ್ಕಾರಗಳೆಲ್ಲವೂ ಸ್ಪಷ್ಟ ಜ್ಞಾನ ಮತ್ತು ಚಿಂತನೆಯ ಆಧಾರದಲ್ಲಿರುವುವು. ಅದು …
Read More »ದಾನವೇ ಧರ್ಮ – ಕುರ್ಆನಿನ ಸಾಮಾಜಿಕ ಚಿಂತನೆಗಳು
@ ಅಶೀರುದ್ದೀನ್ ಆಲಿಯಾ ಮಂಜನಾಡಿ “ನಾವೇನನ್ನು ಖರ್ಚು ಮಾಡಬೇಕೆಂದು ಜನರು ಕೇಳುತ್ತಾರೆ. ನೀವು ಏನು ಖರ್ಚು ಮಾಡುತ್ತೀರೋ ಅದನ್ನು ನಿಮ್ಮ ಮಾತಾಪಿತರ, ಸಂಬಂಧಿಕರ, ಅನಾಥರ, ಬಡವರ ಮತ್ತು ಪ್ರಯಾಣಿಕರ ಮೇಲೆ ಖರ್ಚು ಮಾಡಿರೆಂದೂ ನೀವು ಮಾಡುವ ಎಲ್ಲ ಒಳಿತುಗಳನ್ನು ಅಲ್ಲಾಹ್ ಚೆನ್ನಾಗಿ ಅರಿಯುವವನಾಗಿರುತ್ತಾನೆಂದೂ ಉತ್ತರ ಹೇಳಿರಿ.” (ಅಲ್ಬಕರ: 215) ಪರಿಶುದ್ಧತೆಯ ಪ್ರತೀಕವಾಗಿದೆ `ದಾನ’. ಕೊಡುವುದು, ಸಹಾಯ ಮಾಡುವುದು, ಉಪಕಾರ ಮಾಡುವುದು, ಸೇವೆ ಮಾಡುವುದು, ನೀಡುವುದು ಇತ್ಯಾದಿ ಸಮಾನಾರ್ಥ ಪದಗಳ ರೂಪವಾಗಿಯೂ …
Read More »ಪವಿತ್ರ ಕುರ್ಆನನ್ನು ಹೇಗೆ ತಿಳಿದುಕೊಳ್ಳಬೇಕು?
@ ಎಂ.ಎಸ್. ಶೈಜು ಈ ವಿಶ್ವದ ನಿಗೂಢತೆಗಳ ಹಿಂದೆ ಒಂದು ಮಹಾನ್ ಶಕ್ತಿಯಿದೆ ಎಂದು ಮನುಷ್ಯರಲ್ಲಿ ಬಹುಸಂಖ್ಯೆಯ ಜನರ ನಂಬಿಕೆಯಾಗಿದೆ. ಆ ಶಕ್ತಿಯೊಂದಿಗೆ ಮಾನವ ಕುಲದೊಂದಿಗೆ ಪ್ರತ್ಯಕ್ಷ ವಾದ ಸಂಬಂಧವನ್ನು ದೇವ ಗ್ರಂಥಗಳು ಪ್ರತಿನಿಧಿಸುತ್ತವೆ. ದೇವನ ಮಾರ್ಗದರ್ಶನವಾಗಿ ಮನುಷ್ಯರಿಗೆ ಲಭಿಸಿದ ಮಾರ್ಗದರ್ಶನವದು. ಅದರಲ್ಲಿ ಅಂತಿಮ ದೇವಗ್ರಂಥವೇ ಪವಿತ್ರ ಕುರ್ಆನ್. ಕುರ್ಆನ್ ತನ್ನನ್ನು ಆ ರೀತಿ ಪರಿಚಯಿಸುತ್ತದೆ. ಮಾನವನ ಜೀವನಕ್ಕೆ ಅಗತ್ಯವಾದ ಸೂಚನೆಗಳನ್ನು ಕುರ್ಆನ್ ಮುಂದಿರಿಸುತ್ತದೆ. `ನ್ಯಾಯ’ ಎಂಬ ಒಂದು ಅಳತೆಗೋಲಿನಿಂದ ಮಾನವ ಜೀವನವನ್ನೂ, …
Read More »ಸರಿಸಾಟಿಯಿಲ್ಲದ ವ್ಯಕ್ತಿತ್ವ…!!!
ತಮಿಳು ದೈನಿಕ ‘ನೀರೋಟ್ಟಮ್’ನ ಪತ್ರಿಕೆಯ ಸಂಪಾದಕ ‘ಅಡಿಯಾರ್’ ತಮ್ಮ ಪತ್ರಿಕೆಯಲ್ಲಿ ಬರೆದಿದ್ದ “ನಾನ್ ಕಾದಲಿಕ್ಕುಮ್ ಇಸ್ಲಾಮ್” ಎಂಬ ಲೇಖನ ಮಾಲೆಯ ಒಂದು ಪುಟ್ಟ ಲೇಖನ. ‘ಮುಸ್ಲಿಮರು’ ಆಜ್ಞಾನಿಗಳು,ಹಠವಾದಿಗಳು,ಕೋಪಿಷ್ಠರು, ಆಕ್ರಮಿಗಳು,ಅಹಂಭಾವಿಗಳು ಎಂದೆಲ್ಲಾ ಮುಸ್ಲಿಮೇತರ ಬಂಧುಗಳ ಮಧ್ಯೆ ಪ್ರಚಾರವಿದೆ. ಶೋಧ ನಡೆಸಿದರೆ ಮತ್ತು ಹತ್ತಿರ ಹೋಗಿ ನೋಡಿದರೆ ಬೇರೆಯೇ ಒಂದು ವಾಸ್ತವಿಕತೆ ಸೂರ್ಯನಿಗಿಂತ ಪ್ರಕಾಶಮಾನವಾಗಿ ಮುಂದೆ ಬರುತ್ತದೆ. ಇಸ್ಲಾಮ್ ಎಂದರೆ ಶಾಂತಿ ಮತ್ತು ರಕ್ಷಣೆಯೆಂದರ್ಥ. ನನ್ನ ತಿಳುವಳಿಕೆಯ ಮಟ್ಟಿಗೆ ಮೃದು ಸ್ವಭಾವ, ವಿಕಾರಗಳ …
Read More »ಹಸಿರು ಕರಾವಳಿ ಅಭಿಯಾನ : ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ತರಕಾರಿ ಬೀಜಗಳ ಬಿತ್ತನೆ
ಕೊಣಾಜೆ : ಹಸಿರು ಕರಾವಳಿ ಅಭಿಯಾನ -2020 ಇದರಂಗವಾಗಿ ಪಜೀರು ರಹ್ಮಾನಿಯಾ ಜುಮಾ ಮಸೀದಿ ಆವರಣದಲ್ಲಿ ತರಕಾರಿ ಬೀಜಗಳ ಬಿತ್ತನೆ ಮತ್ತು ಗಿಡ ವಿತರಣೆ ಕಾರ್ಯಕ್ರಮ ನಡೆಯಿತು. ಹಸಿರು ಕರಾವಳಿ ಅಭಿಯಾನದ ಬಂಟ್ವಾಳ ತಾಲೂಕು ಸಂಚಾಲಕ ರಿಝ್ವಾನ್ ಅಝ್ಹರಿ ಸದ್ರಿ ಅಭಿಯಾನದ ಮಹತ್ವ ಮತ್ತು ಅನಿವಾರ್ಯತೆಯ ಬಗ್ಗೆ ಮಾತನಾಡಿದರು. ಪಜೀರು ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಸಾಂಕೇತಿಕವಾಗಿ ಬೀಜ ಬಿತ್ತನೆ ಮಾಡಿದರು. ಹ್ಯೂಮನ್ ಫೌಂಡೇಶನ್ನ ನಾಸಿರ್ ಅಹ್ಮದ್ ಸಾಮಣಿಗೆ ಮುಖ್ಯ …
Read More »ಮಗನ ಹುಟ್ಟುಹಬ್ಬದ ದಿನ ಶಾಲೆಗೆ ಸ್ವಂತ ಖರ್ಚಿನಲ್ಲಿ ಪೈಂಟಿಂಗ್ ಮಾಡಿಸಿ ಶಿಕ್ಷಣ ಸಚಿವರ ಮೆಚ್ಚುಗೆಗೆ ಪಾತ್ರರಾದ ಹುಸೈನ್
ಬಾಗಲಕೋಟೆ, ಆ.21: ತನ್ನ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಸರ್ಕಾರಿ ಶಾಲಾ ನೌಕರರೊಬ್ಬರ ಪ್ರಶಂಸಾರ್ಹ ಕೆಲಸಕ್ಕೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಕಲ್ ತಾಲೂಕಿನ ಹಿರೇಸಿಂಗನಗುಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ಡಿ’ ಗ್ರೂಪ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವ ಮುಹಮ್ಮದ್ ಹುಸೈನ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿದ್ದು, ತಮ್ಮ ಸ್ವಂತ ಖರ್ಚಿನಲ್ಲಿ ಶಾಲೆಗೆ ಪೈಂಟಿಂಗ್ ಮಾಡಿದ್ದಾರೆ. ಸುಮಾರು 30,000 ರೂ. ಖರ್ಚು ಮಾಡುವ ಮೂಲಕ ಅವರು ಶಾಲೆಗೆ ಪೈಂಟಿಂಗ್ ಮಾಡಿ …
Read More »ಹಸಿರು ಕರಾವಳಿ ಅಭಿಯಾನ: ಸ್ಕೂಲ್ ಆಫ್ ಕುರ್ಆನಿಕ್ ಸ್ಟಡೀಸ್ನಲ್ಲಿ ಗಿಡ ನೆಡುವ ಕಾರ್ಯಕ್ರಮ
ಉಳ್ಳಾಲ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಯೋಜಿಸಿದ ‘ಹಸಿರು ಕರಾವಳಿ’ ಪರಿಸರ ಜಾಗೃತಿ ಅಭಿಯಾನದ ಭಾಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಇತ್ತೀಚಿಗೆ ಕೆ.ಸಿ.ರೋಡಿನಲ್ಲಿರುವ ಸ್ಕೂಲ್ ಆಫ್ ಕುರ್ಆನಿಕ್ ಸ್ಟಡೀಸ್ ವಿದ್ಯಾ ಸಂಸ್ಥೆಯಲ್ಲಿ ನಡೆಸಲಾಯಿತು. ಮುಖ್ಯ ಅಥಿತಿಗಳಾಗಿ ಎಸ್ಐಓ ರಾಷ್ಟ್ರಾಧ್ಯಕ್ಷರಾದ ಲಬೀದ್ ಶಾಫಿ ಗಿಡ ನೆಡುವ ಮೂಲಕ ಅಧಿಕೃತ ಚಾಲನೆ ನೀಡಿ ಹಸಿರಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಎಸ್ಕ್ಯುಎಸ್ ಇದರ ಮಾನೇಜಿಂಗ್ ಡೈರೆಕ್ಟರ್ …
Read More »
IslamKannada News Portal