Home / editor (page 75)

editor

ಕೊರೋನಾ ನೆನಪಿಸಿದ ಸತ್ಯ

ಮರಣದ ಕುರಿತು ನಮ್ಮ ನಿರ್ಲಕ್ಷ್ಯವು ಲೌಕಿಕ ಜೀವನದ ಸುಖಾಂಡಬರಗಳಲ್ಲೇ ಮುಳುಗಲು ಕಾರಣವಾಗುತ್ತದೆಂಬ ಕುರಿತು ಧಾರಾಳ ಉಪನ್ಯಾಸಗಳನ್ನು, ಭಾಷಣ,  ಲೇಖನ ನಾವು ಆಲಿಸಿದ್ದೇವೆ. ಓದಿದ್ದೇವೆ. ಆದರೆ ಕೊರೋನಾ ಕಾಲದಲ್ಲಿ ನಾವು ಅರಿತುಕೊಂಡ ವಾಸ್ತವಿಕತೆಗಳಲ್ಲಿ ಅತ್ಯಂತ ಮುಖ್ಯವಾಗಿ ಮನುಷ್ಯ ತನ್ನ ಮರಣದ  ಕುರಿತು ಧಾರಾಳವಾಗಿ ನೆನಪಿಸಿಕೊಂಡಿದ್ದಾನೆ. ಮರಣವು ನಿಷೇಧಿಸಲಾಗದ ಸತ್ಯವೆಂಬ ಅರಿವಿದ್ದೂ, ಅದು ತನ್ನ ಬಳಿಗೆ ತಲುಪಲು ಇನ್ನೂ ಸಮಯವಿದೆಯೆಂದೇ ಸಾಮಾನ್ಯವಾಗಿ ಹೆಚ್ಚಿನೆಲ್ಲರ ಭಾವನೆಯಾಗಿರುತ್ತದೆ. ಆದರೆ ಎಂಥ ಆರೋಗ್ಯವಂತನೂ ಕ್ಷಣಾರ್ದದಲ್ಲೇ ರೋಗಿಯಾಗಿ, ಕೆಲವೇ …

Read More »

ಶಿಥಿಲಾವಸ್ಥೆಯಲ್ಲಿದ್ದ ಮನೆ ದುರಸ್ತಿ ಮಾಡಿದ ಜಮಾಅತೆ ಇಸ್ಲಾಮೀ ಹಿಂದ್‌

ಮಂಗಳೂರು,ಆ.4: ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಸಮಾಜ ಸೇವಾ ಘಟಕದ ವತಿಯಿಂದ ಫರಂಗಿಪೇಟೆ ಸಮೀಪದ ಅಮ್ಮೆಮಾರ್‌ ಎಂಬಲ್ಲಿನ ಬಡ ಕುಟುಂಬದ ಮನೆಯೊಂದನ್ನು ದಾನಿಗಳ ನೆರವಿನಿಂದ ಸಂಗ್ರಹಿಸಿದ ಸುಮಾರು ಎರಡು ಲಕ್ಷ ರೂಪಾಯಿ ವ್ಯಯಿಸಿ ದುರಸ್ತಿಗೊಳಿಸಿ, ಚೆಂದ ಮಾಡಿಸಿ ಕೊಡಲಾಯಿತು. ಈ ಸತ್ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಜಮಾಅತೆ ಇಸ್ಲಾಮೀ ಹಿಂದ್ ಕೃತಜ್ಞತೆ ಸಲ್ಲಿಸಿದೆ.

Read More »

ಯುಪಿಎಸ್‍ಸಿ ಪರೀಕ್ಷೆ: ಈ ಬಾರಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆ; ಟಾಪ್ 100ರಲ್ಲಿ ಸ್ಥಾನ ಪಡೆದ ಸಫ್ನಾ ನಝರುದ್ದೀನ್

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ 2019ರಲ್ಲಿ ನಡೆಸಿದ ಪರೀಕ್ಷೆಯಲ್ಲಿ 42 ಮುಸ್ಲಿಂ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ಕಳೆದ ವರ್ಷ ಒಟ್ಟು 28 ಮಂದಿ ತೇರ್ಗಡೆಗೊಂಡಿದ್ದರು. ಪಿಎಸ್‍ಸಿ ರ್ಯಾಂಕ್ ಪಟ್ಟಿಯಲ್ಲಿ 45ನೇ ರ್ಯಾಂಕ್ ಗಳಿಸಿರುವ ಸಫ್ನಾ ನಝರುದ್ದೀನ್ ಅವರು ಟಾಪ್ 100ರಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ. ಮಂಗಳವಾರ ಬಿಡುಗಡೆಯಾದ ಫಲಿತಾಂಶದಲ್ಲಿ ಒಟ್ಟು 829 ಮಂದಿ ತೇರ್ಗಡೆಗೊಂಡಿದ್ದು, ಅವರ ಪೈಕಿ ಮುಸ್ಲಿಂ ಅಭ್ಯರ್ಥಿಗಳು ಶೇ 5ರಷ್ಟಿದ್ದಾರೆ. ಕಳೆದ ವರ್ಷ ತೇರ್ಗಡೆಯಾದ ಒಟ್ಟು …

Read More »

ಆ ಬಾಲಕನನ್ನು ಕಂಡು ನಾನು ದಂಗಾದೆ

@ ಡಾ| ಅಬ್ದುರ್ರಹ್ಮಾನ್ ಅಸ್ಸುಮೈತ್ವು ಕುವೈಟ್ ಸಮಾಜ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಪ್ರಸಿದ್ಧ ಸಂದೇಶ ಪ್ರಚಾರಕರೂ ಆದ ಡಾ. ಅಬ್ದುರ್ರಹ್ಮಾನ್ ಅಸ್ಸುಮೈತ್ವ್ ತಮ್ಮ ಅನುಭವವನ್ನು ವಿವರಿಸುತ್ತಾರೆ. ಆಫ್ರಿಕಾ ದೇಶಗಳ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಓರ್ವ ಬಡ ಮಹಿಳೆಯ ದೀನರೋಧನ ಗಮನಕ್ಕೆ ಬಂತು. ನಮ್ಮ ತಂಡದಲ್ಲಿದ್ದ ವೈದ್ಯರೊಡನೆ ಅವರು ಸಹಾಯ ಯಾಚಿಸುತ್ತಿದ್ದರು. ತನ್ನ ಮಗನ  ವಿದ್ಯಾಭ್ಯಾಸದ ವೆಚ್ಚವನ್ನು ಯಾವುದಾದರೂ ದಾನಿಗಳು ಭರಿಸುವಂತೆ ಮಾಡಬೇಕು. ತನ್ನ ಮಗನನ್ನು ಅಂತಹ ಪಟ್ಟಿಯಲ್ಲಿ ಸೇರಿಸಬೇಕು ಎಂಬುದು ಆಕೆಯ …

Read More »

ಹಜ್ಜ್ ನ ಮೂಲ ಸ್ವರೂಪ

ಹಜ್ಜ್ ಇಸ್ಲಾಮಿನ 5 ಸ್ತಂಭಗಳಲ್ಲಿ ಕೊನೆಯದು. ಏಕದೇವತ್ವ (ಅಲ್ಲಾಹನೇ ಸೌರ ಮಂಡಲದ ಸಾರ್ವಭೌಮ ಹಾಗೂ ಪ್ರವಾದಿ ಮುಹಮ್ಮದ್(ಸ) ಅಲ್ಲಾಹನ ದೂತರು,  ನಮಾಝ್, ಉಪವಾಸ, ಝಕಾತ್ (ಸಂಪತ್ತಿನ ಸ್ವಲ್ಪ ಭಾಗವನ್ನು ಬಡವರಿಗೆ ಕೊಡುವುದು ಹಜ್ಜ್- ಇವು ಇನ್ನಿತರ ನಾಲ್ಕು ಸ್ತಂಭಗಳು. ಹಜ್ಜ್ ಎಂದರೆ ತೀರ್ಥಯಾತ್ರೆ  ಅರ್ಥಾತ್ ಪವಿತ್ರ ಸ್ಥಳಗಳ ಸಂದರ್ಶನ. ಇಸ್ಲಾಂ ಕ್ಯಾಲೆಂಡರಿನ ಕೊನೆಯದಾದ ದುಲ್ ಹಜ್ಜ್ ತಿಂಗಳ 8ನೇ ತಾರೀಖಿನಿಂದ 12ನೇ ತಾರೀಖಿನವರೆಗೆ 5 ದಿನಗಳ ಕಾಲ ಮಕ್ಕಾದಿಂದ ಹೊರಟು …

Read More »

ಹಜ್ಜ್ ಆತಿಥ್ಯ: ಹಿಂದಿನ ಕಾಲದಿಂದ…

@ ರಮ್ಲಾ ಖಾನ್ ಮಕ್ಕಾದಲ್ಲಿ ಕಅಬಾ ಭವನದ ಸುತ್ತಲೂ ಶಾಶ್ವತ ಮನೆಗಳನ್ನು ನಿರ್ಮಿಸಿಲಾಯಿತಾದರೂ ಅವುಗಳಿಗೆ ಬಾಗಿಲುಗಳಿರಲಿಲ್ಲ. ಬಾಗಿಲುಗಳಿಲ್ಲದ ಈ ಮನೆಗಳು ಹಜ್ಜ್ ಗೆ  ಆಗಮಿಸುವ ಯಾತ್ರಿಗಳ ಆತಿಥ್ಯಕ್ಕೆ ಸದಾ ತೆರೆದುಕೊಂಡವುಗಳಾಗಿದ್ದವು. ಮಕ್ಕಾದ ಜನರು ಯಾತ್ರಿಕರನ್ನು ಅರಬ್ ಶುಭಾಶಯ `ಅಹಲನ್ ವ ಸಹ್‍ಲನ್’ ಎನ್ನುವುದರ  ಮೂಲಕ ಸ್ವಾಗತಿಸುತ್ತಿದ್ದರು. ಆತಿಥ್ಯ ಪೂರ್ವ ಇಸ್ಲಾಮಿಕ್ ಕಾಲದಲ್ಲಿ ಪೂರ್ವ ಇಸ್ಲಾಮಿಕ್ ಕಾಲಘಟ್ಟದಲ್ಲಿ ಮಕ್ಕಾದ ಜನರಿಗೆ ಕಅಬಾ ಭವನ ಮತ್ತು ಅದರ ಸಂದರ್ಶನಕ್ಕೆ ಆಗಮಿಸುವ ನೆರೆಯ ದೇಶಗಳ …

Read More »

ಜಮಾಅತೆ ಇಸ್ಲಾಮೀ ಹಿಂದ್‌ ನಿಂದ ವಿದ್ಯುತ್ ಆಮ್ಲಜನಕ ವಿಷನ್ ಹಸ್ತಾಂತರ

ಮಂಗಳೂರು: ಮಂಗಳೂರು ತಾಲೂಕಿನ ತಲಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಲಿಕೂರು ಎಂಬಲ್ಲಿಯ ಬಡ ಕುಟುಂಬವೊಂದರಲ್ಲಿ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೊರೋನ ಕಾರಣದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿರುವುದರಿಂದ ವಿದ್ಯುತ್ ಆಕ್ಸಿಜನ್ ಅವಶ್ಯಕತೆ ಇದ್ದು, ದಾನಿಗಳು ವಿದ್ಯುತ್ ಆಮ್ಲಜನಕದ ಮಿಷನ್ ನೀಡಲು ಮುಂದಾಗಬೇಕೆಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಸಂದೇಶವನ್ನು ಗಮನಿಸಿ, ಸ್ಪಂದಿಸಿದ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಹಾಗೂ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ 50 ಸಾವಿರ …

Read More »

ಕೊರೊನ ಪ್ರತಿರೋಧಕ್ಕಾಗಿ ಹರಿಯಾಣಕ್ಕೆ ಒಂದೂವರೆ ಕೋಟಿ ರೂ. ಧನ ಸಹಾಯವಿತ್ತ ಎಂ ಎ ಯೂಸಫಲಿ

ಛತ್ತಿಸ್‍ಗಡ, ಆ.: ಕೊರೊನ ಪ್ರತಿರೋಧಕ್ಕಾಗಿ ಹರಿಯಾಣ ಮುಖ್ಯಮಂತ್ರಿಯ ಸಂತ್ರಸ್ತ ನಿಧಿಗೆ ಲುಲುಗ್ರೂಪ್ ಅಧ್ಯಕ್ಷ ಎಂ ಎ ಯೂಸುಫಲಿ ಒಂದೂವರೆ ಕೋಟಿ ರೂಪಾಯಿ ನೀಡಿದ್ದಾರೆ. ಮುಖ್ಯಮಂತ್ರಿ ಮನೋಹರ ಖಟ್ಟರ್ ಅವರ ಚಂಡೀಗಡ ಕಚೇರಿಗೆ ಲುಲು ಗ್ರೂಪ್‍ನ ಪ್ರತಿನಿಧಿಗಳಾದ ನಜುಮುದ್ದೀನ್, ಜಯಕುಮಾರ್ ಹೋಗಿ ಚೆಕ್ ಹಸ್ತಾಂತರಿಸಿದ್ದಾರೆ. ಇದಲ್ಲದೆ ಹರಿಯಾಣದ ವೇಮಾವತ್ ಜಿಲ್ಲಾಡಳಿತದ ಸಿಎಸ್‍ಆರ್ ಫಂಡ್‍ಗೆ ಯೂಸುಫಲಿ ಅವರು ಐವತ್ತು ಲಕ್ಷ ರೂಪಾಯಿ ನೀಡಿದ್ದಾರೆ. ಮೇವಾತ್ ಜಿಲ್ಲಾ ಡೆಪ್ಯುಟಿ ಕಮಿಶನರ್ ಮತ್ತು ಜಿಲ್ಲಾಧಿಕಾರಿಯಾದ ಪಂಕಜ್‍ರು …

Read More »

ಕೋವಿಡ್-19 ಶವ ಸಂಸ್ಕಾರ ತರಬೇತಿ: ಎಸ್.ಐ.ಓ ಕಾರ್ಯಕರ್ತರು ಭಾಗಿ

ಉಡುಪಿ,ಆ.3: ಜಿಲ್ಲಾ ಸರಕಾರಿ ಆಸ್ಪತ್ರೆ ಶವಾಗಾರದ ಬಳಿ ಸೋಮವಾರ ನೊಂದಾಯಿಸಿಕೊಂಡ ಸ್ವಯಂ ಸೇವಕರಿಗೆ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಉಡುಪಿ ಜಿಲ್ಲಾ ಎಸ್.ಐ.ಓ ಕಾರ್ಯಕರ್ತರು ಭಾಗವಹಿಸಿ ತರಬೇತಿ ಪಡೆದರು. ಈ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಜನರು ಜಾಗೃತರಾಗಿ ಇಂತ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ವೈರಸ್ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಸ್ವಯಂ ಸೇವಕರ ಅಗತ್ಯ …

Read More »

ಹಾಜಿ, ನೀವು ಮರಳುವಾಗ ಏನನ್ನು ತರುತ್ತೀರಿ?

@ ಕೆ.ಪಿ. ಪ್ರಸನ್ನನ್ ಕೆಲವು ಪದಗಳು, ವಾಕ್ಯಗಳು, ಸಂದರ್ಭಗಳು… ನಿಮ್ಮನ್ನು ಆ ಯಾತ್ರೆಗೆ ಪ್ರೇರೇಪಿಸುತ್ತದೆ. ಅದು ನನ್ನಲ್ಲಿ ಸಂಭವಿಸಲು `ಮೀಕಾತ್’ ಎಂಬ ಪದದ ವಿವರಣೆಯಿಂದಾಗಿತ್ತು.  ನನಗೆ ಅರಬಿಯಲ್ಲಿ ಅಷ್ಟೊಂದು ಹಿಡಿತವಿಲ್ಲ. ಆದ್ದರಿಂದ ಕೆಲವು ಅರ್ಥಗಳನ್ನು ನನ್ನದೇ ರೀತಿಯಲ್ಲಿ ವಿಕಸಿಸಿ ನಾನು ಒಂದು ನಿಲುವಿಗೆ ಬರುತ್ತೇನೆ. ಮನದಲ್ಲೇ ಅದನ್ನು ಜೋಪಾನವಾಗಿಸಿ ನನ್ನ ಸಮಾಧಾನದೊಂದಿಗೆ ಸೇರಿಸಿಕೊಳ್ಳುತ್ತೇನೆ. ಅದರ ಸರಿ-ತಪ್ಪುಗಳ ಕುರಿತು ತರ್ಕ ಮಾಡಲು ತಯಾರಿಲ್ಲ. ಏಕೆಂದರೆ ಅದು ನನ್ನದು ಮಾತ್ರ. ಕೆಲವು ಪ್ರೀತಿ …

Read More »