ಅಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗಿದ್ದ ಗುರು ನಾನಕರ ಗಮನವನ್ನು ಬೇರೆಡೆಗೆ ಹರಿಸಲಿಕ್ಕಾಗಿ ಅವರ ತಂದೆ ಅವರನ್ನು ವ್ಯಾಪಾರದಲ್ಲಿ ತೊಡಗಲು ಹೇಳಿದರು. ಹತ್ತಿರದ ಪೇಟೆಯಿಂದ ವಸ್ತುಗಳನ್ನು ಖರೀದಿಸಿ ತರಲು ಬೇಕಾದ ಹಣವನ್ನು ನೀಡಿದರು. ಪೇಟೆಗೆ ಹೋಗುವ ದಾರಿಯಲ್ಲಿ ಗುರು ನಾನಕ್ ಕೆಲವು ಮಂದಿ ಬಡವರನ್ನು ಭೇಟಿಯಾದರು. ನಾವು ಊಟ ಮಾಡಿ ಬಹಳ ದಿನವಾದುವು ಎಂದು ಅವರು ಗುರು ನಾನಕ್ರಿಗೆ ಹೇಳಿದರು. ಆಗ ತನ್ನ ಬಳಿಯಿದ್ದ ಹಣವನ್ನೆಲ್ಲಾ ಅವರಿಗೆ ನೀಡಿ ಗುರು ನಾನಕ್ …
Read More »ಕಂಪ್ಯೂಟರ್ ನಲ್ಲಿ ಎಸೆಸೆಲ್ಸಿ ಪರೀಕ್ಷೆ ಬರೆದು A+ ಶ್ರೇಣಿಯೊಂದಿಗೆ ಉತ್ತೀರ್ಣನಾದ ಅಂಧ ವಿದ್ಯಾರ್ಥಿ ಹಾರೂನ್ ಕರೀಂ; ಕೇರಳದ ವಿದ್ಯಾರ್ಥಿಯ ಸಾಧನೆಗೆ ವ್ಯಾಪಕ ಪ್ರಶಂಸೆ
ತಿರುವನಂತಪುರಂ: ಕಂಪ್ಯೂಟರ್ ಬಳಸಿ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದ ರಾಜ್ಯದ 15 ವರ್ಷದ ಅಂಧ ವಿದ್ಯಾರ್ಥಿ ಹಾರೂನ್ ಕರೀಂ ಟಿ. ಕೆ. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ A+ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ. ಎಸೆಸೆಲ್ಸಿ ಪರೀಕ್ಷೆಯನ್ನು ಕಂಪ್ಯೂಟರ್ ಮೂಲಕ ಬರೆದ ಮೊದಲ ವಿದ್ಯಾರ್ಥಿಯಾಗಿದ್ದಾನೆ ಹಾರೂನ್. ಕಂಪ್ಯೂಟರ್ ಬಳಸಿದಲ್ಲಿ ಅಂಧ ವಿದ್ಯಾರ್ಥಿಗಳು ಇತರರನ್ನು ಅವಲಂಬಿಸಬೇಕಿಲ್ಲ ಎಂಬ ಆಧಾರದಲ್ಲಿ ಆತ ಸರಕಾರದ ಮುಂದೆ ಈ ಬೇಡಿಕೆ ಇಟ್ಟಿದ್ದ. ಕೊನೆಗೆ ಸರಕಾರದ ಅನುಮತಿ ದೊರೆತು ಕಂಪ್ಯೂಟರ್ …
Read More »ತಲಾಕ್ನ ಸರಿಯಾದ ಕ್ರಮ
ತಲಾಕ್ ಅಥವಾ ವಿವಾಹ ವಿಚ್ಛೇದನವು ಒಂದು ಅರೋಚಕ ಮತ್ತು ಅಪ್ರಿಯ ಕ್ರಿಯೆ ಎಂಬುದು ನಿರ್ವಿವಾದ. ಆದರೂ ಅದು ಮನುಷ್ಯ ಸಮಾಜದ ಒಂದು ಅನಿವಾರ್ಯತೆ. ತಲಾಕ್ನ ದ್ವಾರವು ಮುಚ್ಚಲ್ಪಟ್ಟರೆ ಪತಿಯು ತನಗೆ ಒಲ್ಲದ ಪತ್ನಿಯಿಂದ ಮುಕ್ತಿ ಪಡೆಯಲು ಅವಳನ್ನು ವಿಷ ಹಾಕಿ, ಕತ್ತು ಹಿಸುಕಿ, ಸುಟ್ಟು ಹಾಕಿ ಅಥವಾ ಇನ್ನಾವುದೇ ವಿಧಾನದಿಂದ ಸಾಯಿಸುತ್ತಾನೆ. ಇಲ್ಲವೆ ಅವಳ ಹಕ್ಕು ಬಾಧ್ಯತೆಗಳನ್ನು ಪೂರೈಸದೆ ಆಕೆಯನ್ನು ಜೀವನದಾದ್ಯಂತ ತ್ರಿಶಂಕು ಸ್ಥಿತಿಯಲ್ಲಿ ಹಾಕಿಡುತ್ತಾನೆ. ಹೀಗೆ ಆ ಬಡಪಾಯಿ …
Read More »ಜಮಾಅತೆ ಇಸ್ಲಾಮೀ ಹಿಂದ್ನಿಂದ, ಮತ್ತೆ ಬಡ ಕುಟುಂಬಕ್ಕೆ ಮನೆ ಹಸ್ತಾಂತರ!
ಮಂಗಳೂರು: ಹೌದು, ಕನಸ್ಸಲ್ಲೂ ಊಹಿಸಲು ಸಾಧ್ಯವಿಲ್ಲದ್ದಿದು. ಮನೆ ಬಿಡಿ, ಸ್ವಂತದ್ದೆಂದು ಕನಿಷ್ಠ ಒಂದು ಕೋಣೆಯನ್ನೂ ನಾನು ಊಹಿಸಿರಲಿಲ್ಲ. ಅಲ್ ಹಮ್ದುಲಿಲ್ಲಾಹ್, ಅಲ್ಲಾಹನು ನಮ್ಮನ್ನು ಈ ಅವಸ್ಥೆಗೆ ತಲುಪಿಸಿದ… ವಿಧವೆಯ ಮನಸ್ಸು ತುಂಬಿದ ಮಾತಿದು. ಹೌದು, ಕಳೆದ ಹಲವು ವರ್ಷಗಳಿಂದ ತನ್ನ ನಾಲ್ಕು ಅನಾಥ ಹೆಣ್ಣು ಮಕ್ಕಳೊಂದಿಗೆ, ಬಹಳ ಸಂಕಷ್ಟದ ಬದುಕು ಸವೆಸುತ್ತಿದ್ದ ವಿಧವೆಯೋರ್ವರಿಗೆ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ವತಿಯಿಂದ, ಬಂಟ್ವಾಳ ತಾಲೂಕಿನ ಕುಕ್ಕಾಜೆ …
Read More »ಕೇರಳ: ‘ಪೀಪಲ್ಸ್ ವಿಲೇಜ್’ ನಾಳೆ ಫಲಾನುಭವಿಗಳ ಕೈಗೆ
ಮಲಪ್ಪುರಂ,ಜು.2: 2018ರ ಪ್ರಳಯದ ನಂತರ ಪೀಪಲ್ಸ್ ಫೌಂಡೇಶನ್ ಘೋಷಿಸಿದ ಯೋಜನೆಯಲ್ಲಿ ನಿರ್ಮಾಣಗೊಂಡಿರುವ ನಿಲಂಬೂರ್ ಪೀಪಲ್ಸ್ ವಿಲೇಜ್ ಶುಕ್ರವಾರ ಫಲಾನುಭವಿಗಳಿಗೆ ಸಮರ್ಪಿಸಲಾಗುವುದು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹನ್ನೆರಡು ಮನೆಗಳು ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯ ಹೊಂದಿರುವ ವಿಲೇಜ್ ಇದು. ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ನಂಬೂರಿಪಾಟ್ಟಿಯಲ್ಲಿ ಕೊರೋನ ಮಾನದಂಡ ಪಾಲಿಸಿ ಕಾರ್ಯಕ್ರಮ ನಡೆಯಲಿದೆ. ನೆರೆಯಿಂದಾಗಿ ನಂಬೂರಿಪ್ಪಾಡ್ ಮತ್ತು ಪರಿಸರದಲ್ಲಿ ವ್ಯಾಪಕ ನಾಶನಷ್ಟ ಸಂಭವಿಸಿತ್ತು. ಇವರಿಗೆ ಪೀಪಲ್ಸ್ ವಿಲೇಜ್ನಲ್ಲಿ ಮನೆಯನ್ನು ಕೊಡಲಾಗುತ್ತಿದೆ. …
Read More »ಬೀದರ್: HRS ವತಿಯಿಂದ ಉಚಿತ ಆಹಾರ ವಿತರಣೆಯ 100 ದಿನಗಳು
ಬೀದರ್,ಜು.1: ನಗರದ ಬ್ರಿಮ್ಸ್ ಆಸ್ಪತ್ರೆ ಎದುರು ನಾಲ್ಕು ಚಕ್ರ ವಾಹನದಲ್ಲಿ ಹುಮನಿಟೇರಿಯನ್ ರಿಲೀಫ್ ಸೊಸೈಟಿ ವತಿಯಿಂದ ಕೊರೋನಾದಿಂದ ತತ್ತರಿಸಿದ ಬಡ ಜನರು ಹಾಗೂ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳೊಂದಿಗೆ ಬಂದಂತಹ ಜನರಿಗೆ ಆಹಾರ ವಿತರಣೆ ಮಾಡಲಾಗುತ್ತಿದೆ. ಸೋಮವಾರಕ್ಕೆ ಈ ಸೇವೆಯು 100 ದಿನಗಳನ್ನು ಕಳೆದಿದ್ದು ನಿರಂತರವಾಗಿ ಸಂಸ್ಥೆಯಿಂದ ಉಚಿತ ಆಹಾರ, ಹಣ್ಣು ಹಂಪಲು, ಸ್ಯಾನಿಟೈಸರ್ಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ವಿತರಣೆ ಮಾಡಲಾಗುತ್ತಿದೆ. 100 ದಿನಗಳು ಕಳೆದ ನಂತರ ಜೂನ್ 29 …
Read More »ಸ್ತ್ರೀ: ಶಿಕ್ಷಣ ಮತ್ತು ಇತರ ಹಕ್ಕುಗಳು
ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯಲು ಸ್ತ್ರೀಯರಿಗೆ ಅನುಮತಿ ನೀಡಲಾಗಿರುವುದು ಮಾತ್ರವಲ್ಲ ಸ್ತ್ರೀ ಶಿಕ್ಷಣಕ್ಕೂ ಪುರುಷರ ಶಿಕ್ಷಣದಷ್ಟೆ ಮಹತ್ವವನ್ನು ಇಸ್ಲಾಮ್ ಕಲ್ಪಿಸಿದೆ. ಪುರುಷರಂತೆ ಸ್ತ್ರೀಯರೂ ಪ್ರವಾದಿ ಮುಹಮ್ಮದ್ರಿಂದ(ಸ) ಧಾರ್ಮಿಕ ಮತ್ತು ನೈತಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಆದರೆ ಸ್ತ್ರೀಯರ ಶಿಕ್ಷಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೇ ರೀತಿ ಪ್ರವಾದಿಯ ಪತ್ನಿಯರು ಅದರಲ್ಲಿಯೂ ವಿಶೇಷವಾಗಿ ಪ್ರವಾದಿ ಪತ್ನಿ ಹ. ಆಯಿಶಾರವರು(ರ) ಸ್ತ್ರೀಯರಂತೆ ಪುರುಷರಿಗೂ ಕಲಿಸುತ್ತಿದ್ದರು. ಪ್ರವಾದಿ ವರ್ಯರ(ಸ) ಅನೇಕ ಸಂಗಾತಿಗಳು ಮತ್ತು ಅವರ …
Read More »ಆರೋಗ್ಯ ಸಂರಕ್ಷಣೆ ಮತ್ತು ಪ್ರವಾದಿ ಚರ್ಯೆ
@ ಮುಹಮ್ಮದ್ ಯೂಸುಫ್, ಇಸ್ಲಾಹಿ ಆರೋಗ್ಯವು ದೇವನ ಮಹಾ ಅನುಗ್ರಹ ಮತ್ತು ನಮಗೆ ನೀಡಿದ ಒಂದು ಅಮಾನತ್ ಆಗಿದೆ. ಆರೋಗ್ಯ ಸಂರಕ್ಷಣೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ಅದರ ಬೆಲೆಯನ್ನು ಅರಿತು ನಾವು ಬಾಳಬೇಕಾಗಿದೆ. ಒಮ್ಮೆ ಕ್ಷೀಣಿಸಿದ ಶರೀರವು ಪುನಃ ಪೂರ್ವ ಸ್ಥಿತಿಗೆ ಬರಲು ಬಹಳ ಶ್ರಮ ವಹಿಸಬೇಕಾಗುತ್ತದೆ. ಸಣ್ಣ ಗೆದ್ದಲುಗಳು ದೊಡ್ಡ ದೊಡ್ಡ ಗ್ರಂಥಗಳನ್ನೇ ತಿನ್ನುವಂತೆ ಸಣ್ಣ ಪುಟ್ಟ ರೋಗಗಳು ನಮ್ಮ ಜೀವವನ್ನು ಅಪಾಯಕ್ಕೀಡು ಮಾಡಲು ಸಾಕಾಗುತ್ತದೆ. ಆರೋಗ್ಯ ಸಂರಕ್ಷಣೆಯ …
Read More »ಆಚಾರ-ಸಂಪ್ರದಾಯಗಳು: ಪರ್ದಾ
ಪ್ರಕೃತಿಯು ಇತರ ಎಲ್ಲ ಸೃಷ್ಟಿಗಳಂತೆ ಮಾನವರನ್ನೂ ಜೋಡಿಗಳಾಗಿ ಸೃಷ್ಟಿಸಿದೆ ಮತ್ತು ಅವರ ಮಧ್ಯೆ ಪರಸ್ಪರ ಆಕರ್ಷಣೆ-ಆಸಕ್ತಿಗಳನ್ನು ಇರಿಸಿದೆ. ಇತರ ಸೃಷ್ಟಿಗಳಲ್ಲಿ ಈ ಸ್ತ್ರೀ-ಪುರುಷ ವರ್ಗೀಕರಣ ಮತ್ತು ಆಕರ್ಷಣೆಯು ಸಂತಾನಾಭಿವೃದ್ದಿಗಾಗಿ ಮಾತ್ರ ಸೀಮಿತವಾಗಿದೆ. ಆದರೆ ಮಾನವರಲ್ಲಿ ಈ ವಿಂಗಡನೆ ಮತ್ತು ಆಕರ್ಷಣೆಯು ಸೀಮಾತೀತವಾಗಿದೆ, ಅನಿಯಂತ್ರಿತವಾಗಿದೆ ಮತ್ತು ಇತರ ಎಲ್ಲ ಜೀವಿಗಳಿಗಿಂತ ಹೆಚ್ಚಾಗಿದೆ. ಅದಕ್ಕೆ ಸಮಯ ಮತ್ತು ಋತುವಿನ ಬಂಧನವಿಲ್ಲ. ಸ್ತ್ರೀ-ಪುರುಷರಲ್ಲಿ ಪರಸ್ಪರ ಶಾಶ್ವತವಾದ ಆಕರ್ಷಣೆಯನ್ನೂ ಇರಿಸಲಾಗಿದೆ. ಅವರಲ್ಲಿ ಒಬ್ಬರನ್ನೊಬ್ಬರು ಬಯಸುವ ಮತ್ತು …
Read More »ಅಲ್ಲಿ ಕ್ರಿಸ್ಚಿಯನ್, ಇಲ್ಲಿ ಹನೀಫ್: ಹೆಸರು ಮಾತ್ರ ಬೇರೆ
ಏ.ಕೆ. ಕುಕ್ಕಿಲ ಇತ್ತೀಚೆಗೆ ಒಂದು ಘಟನೆ ಸುದ್ದಿಗೀಡಾಗಿತ್ತು. ಅಮೇರಿಕದ ನ್ಯೂಯಾರ್ಕ್ನಲ್ಲಿರುವ ಉದ್ಯಾನವು ಈ ಘಟನೆಯ ಕೇಂದ್ರ ಬಿಂದು. ಹಕ್ಕಿಗಳ ಬಗ್ಗೆ ಅಪಾರ ಒಲವು ಇರುವ ಮತ್ತು ಅವುಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುವ ಹವ್ಯಾಸವುಳ್ಳ ಕ್ರಿಸ್ಚಿಯನ್ ಕೂಪರ್ ಅನ್ನುವ ವ್ಯಕ್ತಿ ಅಲ್ಲಿದ್ದ. ಆತ ಕರಿಯ ಜನಾಂಗದ ವ್ಯಕ್ತಿ. ಅಲ್ಲಿಗೆ ಆ್ಯಮಿ ಕೂಪರ್ ಎಂಬ ಹೆಸರಿನ ಮಹಿಳೆ ತನ್ನ ನಾಯಿಯೊಂದಿಗೆ ಬರುತ್ತಾಳೆ. ಆಕೆ ಬಿಳಿಯ ಹೆಣ್ಣು. ನಾಯಿಯನ್ನು ಬಿಗಿಯಾಗಿ ಹಿಡಿದುಕೋ ಎಂದು ಕ್ರಿಸ್ಚಿಯನ್ …
Read More »
IslamKannada News Portal