Home / editor (page 78)

editor

ವಿಧವೆಯ ಮೂರು ತಿಂಗಳ ಮನೆಬಾಡಿಗೆ ತೀರಿಸಿದ ಜಮಾಅತೆ ಇಸ್ಲಾಮೀ ಹಿಂದ್

ಮಂಗಳೂರು: ಜೂ.26. ತೊಕ್ಕೊಟ್ಟು ಸಮೀಪದ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿ ವಾಸವಿರುವ 30 ರ ಹರೆಯದ ವಿಧವೆಯೋರ್ವರು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದು ಕೆಲಸ ಕಳಕೊಂಡು ಮನೆಯಲ್ಲೇ ಉಳಿದಿದ್ದರು.ಪರಿಣಾಮ ಮೂರು ತಿಂಗಳ ಮನೆ ಬಾಡಿಗೆ ಬಾಕಿ ಉಳಿದಿತ್ತು. ಮಹಿಳೆಯ ಅಸಹಾಯಕತೆಯ ಬಗ್ಗೆ ತಿಳಿದ ತೊಕ್ಕೊಟ್ಟಿನ ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕವು ಮಹಿಳೆಯು ಉಳಿದಿರುವ ಬಾಡಿಗೆ ಮನೆ ಮಾಲಕಿಗೆ ಬಾಕಿ ಉಳಿದಿರುವ ಮೂರು ತಿಂಗಳ ಬಾಡಿಗೆ ಹಣವನ್ನು ಪಾವತಿಸಿದ್ದಲ್ಲದೆ, ವಿಧವೆಯ ಅಂಗಾಂಗ …

Read More »

ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?

ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್‍ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್‍ರವರ(ಸ) ಮೇಲೆ ಅವತೀರ್ಣಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್‍ಆನ್ ಅನೇಕ ಕಡೆ …

Read More »

ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಪರಿವರ್ತಿಸಿದ ಜಮಾಅತೆ ಇಸ್ಲಾಮೀ ಮಹಾರಾಷ್ಟ್ರ

ಮಹಾರಾಷ್ಟ್ರ,ಜೂ.26: ಜಮಾಅತೆ ಇಸ್ಲಾಮೀ ಹಿಂದ್, ಎಂಪಿಜೆ, ಶಾಂತಿನಗರ ಟ್ರಸ್ಟ್ ವತಿಯಿಂದ ಕೋವಿಡ್-19 ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವ ಉದ್ದೇಶದಿಂದ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಪರಿವರ್ತಿಸಿದ್ದು, ವ್ಯಾಪಕ ಶ್ಲಾಘನೆಗೆ ಒಳಗಾಗಿದೆ‌.ಭಿಂವಾಡಿಯ ಮಕ್ಕಾ ಮಸೀದಿಯನ್ನು ಆಮ್ಲಜನಕ ಸೆಂಟರ್ ಆಗಿ ಪರಿವರ್ತನೆಗೊಳಿಸಲಾಗಿದೆ‌. Makkah Masjid Bhiwandi, Converted into Oxygen Centre, providing free for COVID-19 Patient.by Jamaat-e-Islami, MPJ, Shanti Nagar trust. @rais_shk @swachh_bhiwandi @sardesairajdeep @BDUTT @sahiljoshii …

Read More »

ಎಂ.ಫ್ರೆಂಡ್ಸ್, ಮೈ ಕಮ್ಯೂನಿಟಿ ಫೌಂಡೇಶನ್‌ನಿಂದ ಬಾಡಿಗೆ ವಿಮಾನ ವ್ಯವಸ್ಥೆ: ದುಬೈನಿಂದ ಮಂಗಳೂರಿಗೆ ತಲುಪಿದ 166 ಅನಿವಾಸಿಗಳು

ಮಂಗಳೂರು,ಜೂ.24: ಎಂ.ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದಲ್ಲಿ ದುಬೈಯಿಂದ ಮಂಗಳೂರಿಗೆ ಹೊರಟ ‘ಫ್ಲೈ ದುಬೈ’ ವಿಮಾನವು ಮಂಗಳವಾರ ಸಂಜೆ 7:20ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿತು. ಒಟ್ಟು 187 ಪ್ರಯಾಣಿಕರಲ್ಲಿ 166 ಸದಸ್ಯರು ಆಗಮಿಸಿದ್ದು, ದುಬೈ ವಿಮಾನ ನಿಲ್ದಾಣದ ತಾಂತ್ರಿಕ ತೊಂದರೆಯಿಂದಾಗಿ 21 ಅನವಾಸಿಗಳನ್ನು ಕೈಬಿಡಲಾಯಿತು. 128 ಪುರುಷರು ಹಾಗೂ 38 ಮಹಿಳೆಯರು ಆಗಮಿಸಿದ್ದು,ಗರ್ಭಿಣಿಯರು, ವಯಸ್ಕರು, ಆನಾರೋಗ್ಯ ಪೀಡಿತರು, ಅತಂತ್ರ ಕಾರ್ಮಿಕರು ಇದ್ದರು. ದುಬೈಯಲ್ಲಿ ಮೈ …

Read More »

ಜಿಹಾದ್: ಧರ್ಮ ಸಂಸ್ಥಾಪನೆಗಾಗಿ ಹೋರಾಟ

ಮುಸ್ಲಿಮನೆಂದರೆ, “ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್‍ಆನ್ ಹಿಡಿದುಕೊಂಡು ಒಂದೋ ಕುರ್‍ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು” ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ ‘ಜಿಹಾದ್’ ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು ಮಾಡುವಂತಹ ಯುದ್ಧ ಎಂದು ಭಾವಿಸಲಾಗುತ್ತದೆ. ಆದರೆ ಪವಿತ್ರ ಕುರ್‍ಆನ್, ಪ್ರವಾದಿ …

Read More »

25 ವರ್ಷ ಕಳೆದರೂ ಅಳಿಯದ ಮಾನವೀಯತೆಯ ಅತ್ಯಂತ ಹೆಮ್ಮೆಯ ಅವಿಸ್ಮರಣೀಯ ಘಟನೆ

25 ವರ್ಷಗಳ ಹಿಂದಿನ ಘಟನೆ. ಅಂದು ನವ ಮಂಗಳೂರಿನ NMPT ಸಮೀಪ ಒಂದು ಟ್ರಕ್ ಗೆ ಒಂದು ಕಾರು ಬಲವಾಗಿ ಹೊಡೆದು ಭೀಕರ ಅವಘಡವಾಯಿತು. ಕಾರಿನಲ್ಲಿದ್ದ ಉಡುಪಿ ಕಡೆಯ ಬಂಟ್ಸ್ ಸಮುದಾಯದ ಇಬ್ಬರು ಗಂಡ ಹೆಂಡತಿ ತೀವ್ರವಾಗಿ ಜಖಂ ಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ಕ್ಷಣದಲ್ಲಿ ಸ್ಥಳಕ್ಕೆ ಧಾವಿಸಿದ ಶರೀಫ್ (proprietor of Shaan Construction & logistic) ಎಂಬವರು ಆ ಕೂಡಲೇ ಈ ಅಪರಿಚಿತ ದಂಪತಿಗಳನ್ನು ಎತ್ತಿ …

Read More »

ಹಜ್ಜ್: ವಿಶ್ವ ಭ್ರಾತೃತ್ವ ಸಮ್ಮೇಳನ

ಪ್ರವಾದಿ ಮುಹಮ್ಮದ್(ಸ) ಹೇಳಿರುವರು: ಇಸ್ಲಾಮಿನ ಸೌಧವನ್ನು ಪಂಚ ಬುನಾದಿಗಳ ಮೇಲೆ ಕಟ್ಟಲಾಗಿದೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲವೆಂದೂ ಮುಹಮ್ಮದ್(ಸ) ಅಲ್ಲಾಹನ ಪ್ರವಾದಿಯಾಗಿರುವರೆಂದೂ ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮಝಾನ್ ತಿಂಗಳ ಉಪವಾಸ ವ್ರತ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು. ಹಜ್ಜ್ ಇಸ್ಲಾಮಿನ ಐದು ಬುನಾದಿ ಅಥವಾ ಸ್ತಂಭಗಳ ಪೈಕಿ ಒಂದಾಗಿದೆ ಎಂಬುದು ಈ ಪ್ರವಾದಿ ವಚನದಿಂದ ವ್ಯಕ್ತವಾಗುತ್ತದೆ. ನಮಾಝ್, ಝಕಾತ್ ಮತ್ತು ಉಪವಾಸ ವ್ರತದಂತೆಯೇ ಹಜ್ಜ್ ಕೂಡಾ ಒಂದು …

Read More »

ಕೊರೋನ ಸಂಕಷ್ಟ ಹಿನ್ನೆಲೆ: ಮಡಿಕೇರಿಯ ಕ್ರೆಸ್ಸೆಂಟ್ ಶಾಲೆಯಿಂದ ಉಚಿತ ಶಿಕ್ಷಣ ಘೋಷಣೆ- ವಿಡಿಯೋ

ಮಡಿಕೇರಿ,ಜೂ.22: ಕೊರೋನಾ ವೈರಸ್ ಪರಿಣಾಮದಿಂದ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಮಡಿಕೇರಿಯ ಕ್ರೆಸ್ಸೆಂಟ್ ಶಾಲೆ ಎಲ್ಲಾ ವರ್ಗದ ಮಕ್ಕಳಿಗೆ ಈ ವರ್ಷ ಉಚಿತ ಪ್ರವೇಶಾತಿಯನ್ನು ಘೋಷಿಸಿದೆ. ಶಾಲೆಯ ಕಾರ್ಯದರ್ಶಿ ಗೋಳ್ತಮಜಲ್ ಹನೀಫ್ ರವರು ಮಲ್ನಾಡ್ ನ್ಯೂಸ್ ನೊಂದಿಗೆ ಮಾತಾನಾಡುತ್ತಾ ಶಾಲೆಯ ಶಿಕ್ಷಕರು ನಮಗೆ ಈ ನಿರ್ಣಯ ತೆಗೆದುಕೊಳ್ಳಲು ಪ್ರೋತ್ಸಾಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. Posted by Golthamajal Habib Mohammed Haneef on Sunday, June 21, …

Read More »

ಝಕಾತ್: ಧನಿಕರ ಸೊತ್ತಿನಲ್ಲಿರುವ ಬಡವರ ಹಕ್ಕು

ನಮಾಝ್‍ನಂತೆಯೇ ಝಕಾತ್ ಕೂಡಾ ಇಸ್ಲಾಮಿನ ಒಂದು ಆರಾಧನಾ ವಿಧಿ. ನಮಾಝ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ನಡೆಸುವ ಆರಾಧನೆ. ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮನೂ ತನ್ನ ಸೊತ್ತು-ಸಂಪತ್ತುಗಳ ಒಂದಂಶವನ್ನು ಪ್ರತಿ ವರ್ಷ ಬಡ ಬಗ್ಗರಿಗೆ, ದೀನ ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ, ಪ್ರಯಾಣಿಕರಿಗೆ, ಧರ್ಮ ಸಂಸ್ಥಾಪನೆಯ ಕಾರ್ಯಗಳಿಗೆ ಕಡ್ಡಾಯವಾಗಿ ನೀಡಬೇಕು. ವರ್ಷಾಂತ್ಯದಲ್ಲಿ ಒಬ್ಬ ಸ್ಥಿತಿವಂತ ಮುಸ್ಲಿಮನ ಬಳಿಯಿರುವ ನಗದು, ವ್ಯಾಪಾರ ಸರಕು, ಬೆಳ್ಳಿ, ಬಂಗಾರಗಳು ಇತ್ಯಾದಿಗಳ ನಲ್ವತ್ತನೇ ಒಂದಂಶವನ್ನು ಝಕಾತ್ ನೀಡಬೇಕು. …

Read More »

ವಿಜಯಪುರ: ಚನ್ನಮ್ಮ ವೃತ್ತಕ್ಕೆ ಕೋಟಿ ರೂ. ಬೆಲೆ ಬಾಳುವ ಆಸ್ತಿ ದಾನ ಮಾಡಿದ ಶೌಕತ್ ಅಲಿ

ವಿಜಯಪುರ, ಜೂ.16: ವಿಜಯಪುರ ಜಿಲ್ಲೆಯ ಸಿಂದಗಿಯ ಚನ್ನಮ್ಮ ವೃತ್ತಕ್ಕೆ ಶೌಕತ್ ಅಲಿ ಸುಂಬಡ್ ಎನ್ನುವವರು ತಮ್ಮ ಜಮೀನು ನೀಡಿ, ಈ ನೆಲದ ನಿಜ ಸೌಹಾರ್ದತೆ ಮೆರೆದಿದ್ದಾರೆ. ಶೌಕತ್ ಅಲಿ ಅವರು ಕೋಟಿ ಬೆಲೆ ಬಾಳುವ ಜಾಗವನ್ನು ಚನ್ನಮ್ಮ ವೃತ್ತಕ್ಕೆ ದಾನವಾಗಿ ನೀಡಿದ್ದು, ಆ ಜಾಗದಲ್ಲಿ ಕೋಟೆ ಮಾದರಿಯ ಕಟ್ಟಡದ ಜೊತೆಗೆ ಕಿತ್ತೂರು ಚನ್ನಮ್ಮಳ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ. ಚನ್ನಮ್ಮ ವೃತ್ತಕ್ಕೆ ಚಾಲನೆ ನೀಡಿದ ಪಂಚಮಸಾಲಿ ಪೀಠದ ಬಸವಜಯ ಮೃತ್ಯಂಜಯ ಶ್ರೀಗಳು, ಶೌಕತ್ …

Read More »