Home / editor (page 79)

editor

‘ಅದಾನ್’ ಅಥವಾ ಬಾಂಗ್ ಮತ್ತು ನಮಾಝ್

ನಮಾಝ್ ಮುಸ್ಲಿಮರು ದಿನಕ್ಕೆ ಐದು ಬಾರಿ ಮಸೀದಿಗೆ ಹೋಗಿ ಸಾಮೂಹಿಕವಾಗಿ ನಮಾಝ್ ಮಾಡುವುದು ಕಡ್ಡಾಯವಾಗಿದೆ. ನಮಾಝ್ ಎಂಬುದು ಇಸ್ಲಾಮ್ ಧರ್ಮದ ವಿಶಿಷ್ಟ ಪ್ರಾರ್ಥನೆ. ಅದನ್ನು ವಯಸ್ಕರಾದ ಸ್ತ್ರೀ-ಪುರುಷರೆಲ್ಲರೂ ಕಡ್ಡಾಯವಾಗಿ ನಿರ್ವಹಿಸಬೇಕು. ಪುರುಷರು ಅದನ್ನು ಮಸೀದಿಗಳಲ್ಲಿ ಸಂಘಟಿತವಾಗಿ ನೆರವೇರಿಸಬೇಕೆಂಬುದು ಇಸ್ಲಾಮಿನ ವಿಧಿ. ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ ಅಥವಾ ಬಾಂಗ್ ಈ ನಮಾಝ್‍ನ ಕರೆಯಾಗಿದೆ. ಅನೇಕ ದೇಶ ಬಾಂಧವರು ಈ ‘ಅದಾನ್’ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. …

Read More »

ಜೋಗಿಬೆಟ್ಟು: ಮೃತ ಯೋಧನಿಗೆ ರಿಫಾಯಿ ಜುಮಾ ಮಸೀದಿ ಎದುರು ಅಂತಿಮ ನಮನ

ಉಪ್ಪಿನಂಗಡಿ :  ಹೃದಯಾಘಾತದಿಂದ ಮೃತಪಟ್ಟ ಭಾರತೀಯ ಸೇನೆಯ ಯೋಧ ಸಂದೇಶ್ ಶೆಟ್ಟಿ (34) ಅವರಿಗೆ ರಿಫಾಯಿ ಜುಮಾ ಮಸೀದಿ ಜೋಗಿಬೆಟ್ಟು ಎದುರು ಮಸೀದಿಯ ಅಧ್ಯಕ್ಷರ ಸಮ್ಮುಖದಲ್ಲಿ ರಾಷ್ಟ್ರಧ್ವಜ ಹಿಡಿದು ಅಂತಿಮ ನಮನ ಸಲ್ಲಿಸಲಾಯಿತು. ರಜೆಯಲ್ಲಿ ಊರಿಗೆ ಬಂದಿದ್ದ ಅವರು ಸೋಮವಾರವಷ್ಟೇ ಕರ್ತವ್ಯಕ್ಕೆಂದು ಉತ್ತರ ಪ್ರದೇಶದ ಮಥುರಾಕ್ಕೆ ತೆರಳಿದ್ದರು. ಅಲ್ಲಿ ಕ್ವಾರೆಂಟೈನ್ ಕೇಂದ್ರದಲ್ಲಿ ಇರುವಾಗಲೇ ಸಂದೇಶ್ ಹೃದಯಾಘಾತವಾಗಿ ನಿಧನ ಹೊಂದಿದ್ದರು. ಕೃಪೆ: ವಾರ್ತಾ ಭಾರತಿ

Read More »

ಪರಲೋಕ ವಿಶ್ವಾಸ

ಇಸ್ಲಾಮ್ ಧರ್ಮದ ದೃಷ್ಟಿಯಲ್ಲಿ ಮನುಷ್ಯನ ಈ ಲೌಕಿಕ ಜೀವನವು ಒಂದು ಶಿಕ್ಷೆಯಾಗಲೀ ಪುರಸ್ಕಾರವಾಗಲೀ ಅಲ್ಲ. ಇದು ಹಿಂದಿನ ಜನ್ಮದ ಪಾಪಗಳಿಗೆ ಸಿಕ್ಕಿದ ಶಿಕ್ಷೆಯೂ ಅಲ್ಲ. ಹಿಂದಿನ ಜನ್ಮದ ಪುಣ್ಯಗಳಿಗೆ ಸಿಕ್ಕಿದ ಪುರಸ್ಕಾರವೂ ಅಲ್ಲ. ವಾಸ್ತವದಲ್ಲಿ ಇದು ಮನುಷ್ಯನ ಪರೀಕ್ಷಾರ್ಥವಾಗಿ ಅವನಿಗೆ ಲಭಿಸಿದ ಜೀವನವಾಗಿದೆ. ಇಲ್ಲಿ ಅವನಿಗೆ ವಿಚಾರ-ಆಚಾರಗಳ ತಾತ್ಕಾಲಿಕ ಸ್ವಾತಂತ್ರ್ಯ ನೀಡಲಾಗಿದೆ. ಆತನು ತನ್ನ ನೈಜ ಸೃಷ್ಟಿಕರ್ತನನ್ನು ಯಥಾವತ್ತಾಗಿ ಗುರುತಿಸಿ ಅವನ ಆರಾಧನೆ, ದಾಸ್ಯ ಮತ್ತು ಅನುಸರಣೆ ಮಾಡಲು ಸಿದ್ಧನಾಗುತ್ತಾನೆಯೇ …

Read More »

ಕುರ್‍ಆನ್‍ನಿಂದ ಜೀವನ ಸಾಫಲ್ಯ : ಡಾ| ಯೂಸುಫುಲ್ ಕರ್ಝಾವಿ

ಡಾ| ಯೂಸುಫುಲ್ ಕರ್ಝಾವಿ ಕಂಠಪಾಠ ಮಾಡಲು ಹೃದ್ಗತ ಮಾಡಿಕೊಳ್ಳುವ ರೀತಿಯಲ್ಲಿ ಕುರ್‍ಆನ್ ಅತ್ಯಂತ ಸರಳವಾದ ಗ್ರಂಥವಾಗಿದೆ. ಚಿಂತನೆ ನಡೆಸಲು, ಅರ್ಥೈಸಿಕೊಳ್ಳಲು ಸಾಧ್ಯವಿರುವ ಗ್ರಂಥ ಎಂಬುದು ಕುರ್‍ಆನ್‍ನ ಸವಿಶೇಷತೆಯಾಗಿದೆ. “ನಾವು ಈ ಕುರ್‍ಆನನ್ನು ಉಪದೇಶಕ್ಕಾಗಿ ಸುಲಭ ಸಾಧನವಾಗಿ ಮಾಡಿರುವೆವು. ಉಪದೇಶ ಪಡೆಯುವವರು ಯಾರಾದರೂ ಇದ್ದಾರೆಯೇ?” (ಅಲ್‍ಕಮರ್: 17) ಕುರ್‍ಆನ್‍ನ ಪದಗಳು, ವಾಕ್ಯಗಳು, ಸೂಕ್ತಗಳು ಸುಲಭವೂ, ಸರಳವೂ, ಸುಂದರವೂ ಆಗಿದೆ. ಹೃದಯದಲ್ಲಿ ಕುರ್‍ಆನನ್ನು ತುಂಬಿಕೊಳ್ಳಲು, ಕಂಠಪಾಠ ಮಾಡಲು, ಹೃದಯವನ್ನು ಕುರ್‍ಆನ್ ನಂತೆ ರೂಪಿಸಿಕೊಳ್ಳಬಯಸುವವರಿಗೆ …

Read More »

ಅವರ ಸಂಕಟ ನನಗೂ ಗೊತ್ತು, ನಾನೂ ಒಬ್ಬ ವಲಸೆ ಕಾರ್ಮಿಕ ಸೋನು: ಸೂದ್, ಚಿತ್ರ ನಟ

ಈ ಮುಂಬೈ ಮಹಾ ನಗರಕ್ಕೆ ನಾನು ಕೂಡಾ ವಲಸೆ ಕಾರ್ಮಿಕನಾಗಿ ಜೀವನ ದಡ ಸೇರಿಸಲು ಬಂದ ವ್ಯಕ್ತಿ. ಈಗ ಸಂಕಷ್ಟದ ಕಾಲದಲ್ಲಿ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ಕಳಿಸುವುದಕ್ಕೆ ನಾನು ನನ್ನಿಂದಾಗುವ ಸಹಾಯ ಮಾಡಲು ಮುಂದಾಗಿದ್ದು, ಅವರ ನೋವು ಅರಿವಿರುವವರಲ್ಲಿ ನಾನೂ ಒಬ್ಬ ಎಂದಾದ್ದರಿಂದ ರಾಜಕೀಯ ಸಹಿತ ಬೇರೆ ಯಾವ ಉದ್ದೇಶವೂ ಅದರ ಹಿಂದಿಲ್ಲ. ರಾಜಕೀಯದಲ್ಲಿ ಆಸಕ್ತಿಯಿಲ್ಲದವನು ನಾನು. ನಾನೇನು ಮಾಡಿದೆನೋ ಅದೆಲ್ಲವೂ ಅಂತರಾಜ್ಯ ವಲಸೆ ಕಾರ್ಮಿಕರ ಮೇಲಿನ ಪ್ರೀತಿಯಿಂದ …

Read More »

ಪ್ರವಾದಿ ಮುಹಮ್ಮದ್‍ರ(ಸ) ವಿವಾಹಗಳು

ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳು ಸಾಮಾನ್ಯವಾಗಿ ಮುಸ್ಲಿಮೇತರ ಬಂಧುಗಳಲ್ಲಿ ಗೊಂದಲಕ್ಕೆ ಕಾರಣವಾಗುವುದಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದನೆಯದಾಗಿ ಬಹುಪತ್ನಿತ್ವ ಸಂಪ್ರದಾಯವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಎರಡನೆಯದಾಗಿ ಪಾಶ್ಚಾತ್ಯ ಇಸ್ಲಾಮ್ ವಿರೋಧಿಗಳು ಮತ್ತು ಅವರ ಪೌರ್ವಾತ್ಯ ಅಂಧಾನುಯಾಯಿಗಳು ಇಸ್ಲಾಮಿನ ವಿರುದ್ಧ ನಡೆಸುವ ಯೋಜಿತ ಕುಪ್ರಚಾರಗಳಲ್ಲಿ ಬಹುಪತ್ನಿತ್ವ, ಅದರಲ್ಲೂ ವಿಶೇಷವಾಗಿ ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳು ಪ್ರಮುಖ ವಿಷಯವಾಗಿವೆ. ಮೂರನೆಯದಾಗಿ ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ …

Read More »

ಜಮಾಅತೆ ಇಸ್ಲಾಮೀ ಸಮಾಜ ಸೇವಾ ಘಟಕ ಉಳ್ಳಾಲ ವತಿಯಿಂದ ಮಾನವೀಯ ಸೇವೆ

ಉಳ್ಳಾಲ,ಜೂ.13: ಗ್ಯಾಂಗ್ರೀನ್(ಅಂಗ ಕೊಳೆತ) ರೋಗದಿಂದಾಗಿ ಕಾಲು ಕಳೆದುಕೊಂಡ ಉಳ್ಳಾಲದ ಸೋಮೇಶ್ವರ ನಿವಾಸಿ ಪುಷ್ಪಕಿರಣ್ ರವರ ಮನೆಗೆ ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ನ ಸಮಾಜ ಸೇವಾ ವಿಭಾಗದ ಸದಸ್ಯರು ದ್ವಿತೀಯ ಬಾರಿಗೆ ಭೇಟಿ ನೀಡಿದರು. ದಾನಿಗಳಿಂದ ಸಂಗ್ರಹಿಸಿದ 53000 ರೂಪಾಯಿ ಧನಸಹಾಯ ಹಾಗೂ 3000/- ರುಪಾಯಿಯ ರೇಷನ್ ಕಿಟ್‌ನ್ನು ನೀಡಿ ಸಾಂತ್ವಾನದ ಮಾತಿನ ಮೂಲಕ ಭರವಸೆಯನ್ನು ನೀಡಲಾಯಿತು. ಪುಷ್ಪಕಿರಣ್ ರವರಿಗೆ ಸಹಾಯ ನೀಡಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಜಮಾಅತೆ ಇಸ್ಲಾಮೀ …

Read More »

ಜಮಾಅತೆ ಇಸ್ಲಾಮೀ-ಪೀಪಲ್ಸ್ ಫೌಂಡೇಶನ್ ವತಿಯಿಂದ ಕೇರಳ ಪ್ರವಾಹ ಪೀಡಿತ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸ್ವಾವಲಂಬಿ ಪಟ್ಟಣ ನಿರ್ಮಾಣ

ವಯನಾಡ್,ಜೂ.13: ಕೇರಳ ಪ್ರವಾಹದ ನಷ್ಟವನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಕೇರಳದ ಎನ್‌ಜಿಓ ಪೀಪಲ್ಸ್ ಫೌಂಡೇಶನ್, ವಯನಾಡ್ ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಕುಟುಂಬಗಳಿನ್ನು ಪುನರ್ವಸತಿಗೊಳಿಸಲು ಯಶಸ್ವಿ ಮಾದರಿ ಪಟ್ಟಣವನ್ನು ರೂಪಿಸಿದ್ದು, ಇಂದು ಉದ್ಘಾಟನೆಗೊಂಡಿದೆ. ವಯನಾಡಿನ ಪೀಪಲ್ಸ್ ಫೌಂಡೇಶನ್‌ 2018 ಕೇರಳ ಪ್ರವಾಹ ಪೀಡಿತರಿಗೆ ಪುನರ್ವಸತಿ ಯೋಜನೆಯ ಭಾಗವಾಗಿ 25 ಮನೆಗಳು, ಪ್ರೀ-ಸ್ಕೂಲ್‌ಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಟದ ಮೈದಾನಗಳನ್ನು ಹೊಂದಿರುವ ‘ಪೀಪಲ್ಸ್ ವಿಲೇಜ್’ಎಂಬ ಸ್ವಾವಲಂಬಿ ಪಟ್ಟಣವನ್ನು ನಿರ್ಮಿಸಿದ್ದು,ನಿರಾಶ್ರಿತರ ಬಾಳಿಗೆ ಬೆಳಕನ್ನು …

Read More »

ಪ್ರವಾದಿ ಮುಹಮ್ಮದ್(ಸ)

ಈಗಾಗಲೇ ತಿಳಿಸಿರುವಂತೆ ಇಸ್ಲಾಮಿನ ಮೂಲ ವಚನವು “ಅಲ್ಲಾಹನ ಹೊರತು ಆರಾಧ್ಯನಿಲ್ಲ. ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬರ್ಥದ ಪವಿತ್ರ ವಚನವಾಗಿದೆ. ಈ ಪೈಕಿ “ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದವರು ಯಾರೂ ಇಲ್ಲ”ವೆಂಬ ವಿಶ್ವಾಸವನ್ನು ಪ್ರಥಮ ಅಧ್ಯಾಯದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಈಗ ಅದರ ದ್ವಿತೀಯಾರ್ಧವನ್ನು ತೆಗೆದುಕೊಳ್ಳೋಣ. “ಮುಹಮ್ಮದ್(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ” ಎಂಬುದೇ ಆ ವಾಕ್ಯ. – ಪ್ರವಾದಿತ್ವ ಈ ಲೋಕದಲ್ಲಿ ಮಾನವನ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಮಾಡಿರುವ ವ್ಯವಸ್ಥೆಯೇ ಪ್ರವಾದಿತ್ವ. ಭೂಮುಖದ ಮೇಲೆ ಮಾನವ …

Read More »

ಭೂಕುಸಿತದಿಂದ ತಾಯಿ, ಪತ್ನಿ-ಮಗುವನ್ನು ಕಳೆದುಕೊಂಡ ಶರತ್‌ಗೆ ಶಿಹಾಬ್ ತಂಙಳ್ ಕುಟುಂಬದಿಂದ ನೂತನ ಮನೆ ಹಸ್ತಾಂತರ

ಕೋಝೀಕೋಡ್,ಜೂ.11: ಕಳೆದ ವರ್ಷ ಆಗಸ್ಟ್‌ನಲ್ಲಿ ಇಲ್ಲಿನ ಕೊಟ್ಟಕ್ಕುನ್ನು ಎಂಬಲ್ಲಿ ನಡೆದ ಭೂ ಕುಸಿತದಲ್ಲಿ ಕುಟುಂಬ ಮತ್ತು ಮನೆಯನ್ನು ಕಳೆದುಕೊಂಡಿರುವ ಶರತ್‌ಗೆ ಪಾನಕ್ಕಾಡ್‌ನ ಪ್ರಸಿದ್ಧ ಶಿಹಾಬ್ ತಂಙಳ್ ಕುಟುಂಬವು ಬುಧವಾರ ನೂತನ ಮನೆಯನ್ನು ಹಸ್ತಾಂತರಿಸಿತು. ಶಿಹಾಬ್ ಕುಟುಂಬವು ಪನಕ್ಕಾಡ್ ಬಳಿಯ ಪಟ್ಟಾರ್ಕಡವಿನಲ್ಲಿ ನಿರ್ಮಿಸಿದ ಮನೆಯು ‘ಧಾರ್ಮಿಕ ಭಿನ್ನತೆಗಳಿಗಿಂತ ಮಾನವೀಯತೆಯೇ ಮೇಲು’ ಎಂಬ ಸುಂದರ ಕ್ಷಣಗಳಿಗೆ ಸಾಕ್ಷಿಯಾಯಿತು. ಕುಟುಂಬದ ಮುಖ್ಯಸ್ಥ ಸಯ್ಯದ್ ಹೈದರಾಲಿ ಶಿಹಾಬ್ ತಂಙಳ್, ಮನೆಯ ಕೀಲಿಯನ್ನು ಶರತ್‌ಗೆ ಹಸ್ತಾಂತರಿಸಿದರು. ದೀಪ …

Read More »