@ ಶಿಹಾಬುದ್ದೀನ್ ಇಬ್ನು ಹಂಝ ಕೆಲವು ವರ್ಷಗಳ ಹಿಂದೆ ಕೇರಳದ ಕಡಲುಂಡಿಯಲ್ಲಿ ನಡೆದ ರೈಲು ಅಪಘಾತದ ಘಟನೆಯನ್ನು ಪ್ರಸ್ತಾಪಿಸಿ ಗೆಳೆಯ ಒಂದು ವಿಚಾರವನ್ನು ತಿಳಿಸಿದ್ದ. ಪ್ರಸ್ತುತ ರೈಲಿನಲ್ಲಿ ಪ್ರಯಾಣ ಮಾಡಬೇಕಾಗಿದ್ದ ಆತ ಮನೆಯಿಂದ ಹೊರಡುವಾಗ ತಡವಾಗಿತ್ತು. ಗಡಿಬಿಡಿಯಿಂದ ರೈಲು ನಿಲ್ದಾಣದತ್ತ ಧಾವಿಸಿದ. ಓಡುತ್ತಾ ಬರುವಾಗ “ದೇವಾ ಆ ರೈಲು ಸಿಗುವಂತೆ ಮಾಡು ದೇವಾ” ಎಂದು ಪ್ರಾರ್ಥಿಸುತ್ತಾ ಲಗು ಬಗನೆ ಧಾವಿಸಿದ್ದ. ಆದರೆ ರೈಲು ನಿಲ್ದಾಣ ತಲುಪುವಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟಿತ್ತು. …
Read More »ಸಂಕಷ್ಟದಲ್ಲಿರುವ ನೂರಾರು ವಲಸೆ ಕಾರ್ಮಿಕರಿಗೆ ಫೋನ್ ಮೂಲಕ ಸಹಾಯ ಮಾಡುತ್ತಿರುವ ಆತಿಫುಲ್ ಹುಸೈನ್
ಈ ಯುವ ವಕೀಲನ ‘ಕಾಲ್ ಸೆಂಟರ್’ಗೆ ಭಾರೀ ಮೆಚ್ಚುಗೆ ಗುವಾಹಟಿ: ಅಸ್ಸಾಂ ರಾಜ್ಯದ 26 ವರ್ಷದ ಯುವಕ ಆತಿಫುಲ್ ಹುಸೈನ್ ಅವರನ್ನು ‘ಏಕ ವ್ಯಕ್ತಿ ಕಾಲ್ ಸೆಂಟರ್’ ಎಂದರೂ ತಪ್ಪಾಗದು. ಲಾಕ್ ಡೌನ್ನಿಂದ ಅತಂತ್ರರಾಗಿರುವ ನೂರಾರು ವಲಸಿಗ ಕಾರ್ಮಿಕರಿಗೆ ಅವರು ಕೇವಲ ಫೋನ್ ಮೂಲಕವೇ ಸಹಾಯ ಮಾಡಿದ್ದಾರೆ. ಅಸ್ಸಾಂನ ಬರ್ಪೇಟ ಜಿಲ್ಲೆಯವರಾದ ಆತಿಫುಲ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಲಾಕ್ ಡೌನ್ ಜಾರಿಯಾದ ಕೆಲವೇ ದಿನಗಳಲ್ಲಿ ತಮ್ಮ ಗ್ರಾಮದ ಹಲವಾರು ಮಂದಿ ಹರ್ಯಾಣದಲ್ಲಿ …
Read More »ಮನೆಯೇ ಆರಾಧನಾಲಯವಾಗುವಾಗ…
“ಇಹಲೋಕದಲ್ಲಿ ಒಂದು ಸ್ವರ್ಗವಿದೆ. ಆ ಸ್ವರ್ಗದಲ್ಲಿ ಪ್ರವೇಶಿಸದವನು ಪರಲೋಕದ ಸ್ವರ್ಗದಲ್ಲೂ ಪ್ರವೇಶಿಸಲಾರ.” ಹಿಂದೆ ಓರ್ವ ಜ್ಞಾನಿಯು ಹೇಳಿದ ಮಾತಿದು. ಇಹಲೋಕದ ಸ್ವರ್ಗವೇನೆಂದು ಅವರು ವಿವರಿಸಿದರು. ವಿಶ್ವಾಸ ಮತ್ತು ಅಲ್ಲಾಹನ ಸಾಮಿಪ್ಯ ಪಡೆಯುವ ಅಲೌಕಿಕ ಮಾಧುರ್ಯವದು. ಹೇಳಲು ಸಾಧ್ಯವಾಗದಂತಹ ಆಧ್ಯಾತ್ಮಿಕ ಅನುಭವ. ಕುರ್ಆನ್ನ ಭಾಷೆಯಲ್ಲಿ ಹೇಳುವುದಾದರೆ ಆಗ ಮಾತ್ರ ಹೃದಯವು ಶಾಂತವಾಗುತ್ತದೆ. ಮಹಾನುಭಾವರಾದ ಓರ್ವ ವಿದ್ವಾಂಸರನ್ನು ಆಡಳಿತಗಾರರು ಅನ್ಯಾಯವಾಗಿ ಸೆರೆ ಮನೆಗೆ ತಳ್ಳಿದಾಗ ಆ ವ್ಯಕ್ತಿ ಕೇಳಿದ ಪ್ರಶ್ನೆಯೊಂದಿದೆ- ಸ್ವರ್ಗವು ನನ್ನ …
Read More »ಕೊರೋನಾ ನಿವಾರಣೆಗೆ ಕುರ್ಆನಿನ ಪರಿಹಾರ
ಜಗತ್ತು ಇಂದು ಭಯಾನಕವಾದ ಮಾರಕ ಕಾಯಿಲೆಗೆ ಬಲಿಯಾಗಿದೆ. ಈ ಕಾಯಿಲೆಗೆ ಕಾರಣವಾದ ವೈರಸ್ ಮುಖ್ಯವಾಗಿ ಮನುಷ್ಯರನ್ನೇ ಬೇಟೆಯಾಡುತ್ತಿದೆ. ಅದು ಒಂದು ನಿರ್ದಿಷ್ಟ ಜಾತಿ, ಧರ್ಮ ಅಥವಾ ಒಂದು ನಿರ್ದಿಷ್ಟ ಜನಾಂಗವನ್ನು ಹುಡುಕಿ ಹೊರಟಿಲ್ಲ. ಜಾತಿ ಮತ ಧರ್ಮ ಭೇದವಿಲ್ಲದೆ ಸಮಾನವಾಗಿ ಕಾಡುತ್ತಿದೆ. ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿರುವ ಈ ವೈರಸ್ ಹೊಸ ಸವಾಲನ್ನು ತಂದಿದೆ, ಮನುಷ್ಯನನ್ನು ಮುಂದೇನು ಎನ್ನುವ ಪ್ರಶ್ನಾರ್ಥಕ ಚಿಹ್ನೆಯಲ್ಲಿ ನಿಲ್ಲಿಸಿದೆ. ಜಗತ್ತು ತತ್ತರಿಸಿದೆ! ಜಗತ್ತಿನೆಲ್ಲೆಡೆ ಶುಚಿತ್ವ ಹಾಗೂ ಶುದ್ಧೀಕರಣದ …
Read More »ಸ್ವಯಂ ಉದ್ಯೋಗಕ್ಕೆ 25 ಸಾವಿರ ಮೌಲ್ಯದ ಅಂಗಡಿ ಸಾಮಾಗ್ರಿಗಳನ್ನು ನೀಡಿದ ಜಮಾಅತೆ ಇಸ್ಲಾಮೀ ಮಂಗಳೂರು
ಮಂಗಳೂರು,ಮೇ.29: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ವತಿಯಿಂದ ಬಂಟ್ವಾಳದಲ್ಲಿ ಸಣ್ಣ ಉದ್ಯಮಕ್ಕೆ ಚಾಲನೆ ನೀಡಲು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಮೌಲ್ಯದ ಅಗತ್ಯ ಸಾಮಾಗ್ರಿಗಳನ್ನು ನೀಡುವ ಮೂಲಕ ಚಾಲನೆ ನೀಡಲಾಯ್ತು. ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುತ್ತಾ ಬಂದಿರುವ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸೇವಾ ಕಾರ್ಯಾಚರಣೆಗಳನ್ನು ಕೊರೋನಾ ಸಂದಿಗ್ಧತೆಯ ನಡುವೆಯೂ ಮುಂದುವರೆಸಿಕೊಂಡಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡ ದಾನಿಗಳಿಗೆ ಧನ್ಯವಾದ ತಿಳಿಸಿದೆ. ಈ ಸಂದರ್ಭದಲ್ಲಿ ಸಿದ್ದೀಕ್ ಜಕ್ರಿಬೆಟ್ಟು, ಮುಖ್ತಾರ್ ಅಹ್ಮದ್ …
Read More »ಕೋವಿಡ್- 19 ಮತ್ತು ಪ್ರವಾದಿ ಅಯ್ಯೂಬ್(ಅ)
ಪ್ರವಾದಿ ಅಯ್ಯೂಬ್(ಅ)ರಿಗೆ ಸಂಬಂಧಿಸಿದ ಹಲವು ವಿಷಯಗಳು ಪವಿತ್ರ ಕುರ್ಆನ್ ಮತ್ತು ಪ್ರವಾದಿ ವಚನಗಳಲ್ಲಿ ಪ್ರಸ್ತಾವಿಸಲಾಗಿದೆ. ಪ್ರವಾದಿಗಳಲ್ಲಿ ಅತ್ಯಂತ ದೀರ್ಘ ಕಾಲ ರೋಗವನ್ನು ಅನುಭವಿಸಿರುವ ವ್ಯಕ್ತಿಯಾಗಿ ಇಂದಿನ ಈ ಕಾಲದಲ್ಲಿ ಅವರ ಜೀವನವು ಚರಿತ್ರೆಯು ಹೆಚ್ಚಿನ ಪ್ರಾಧಾನ್ಯತೆಯನ್ನು ಪಡೆದಿದೆ. ಕುರ್ಆನ್ನಲ್ಲಿ ಎರಡು ಸೂರಃಗಳಲ್ಲಿ ಅಯ್ಯೂಬ್(ಅ)ರಿಗೆ ಸಂಬಂಧಿಸಿದ ಸ್ವಾದ್ 40 ನೇ ಸೂಕ್ತವು ಆ ಕುರಿತು ಬೆಳಕು ಚೆಲ್ಲುತ್ತದೆ. ಅಯ್ಯೂಬ್(ಅ)ರು ಅಂದಿನ ಸಮಾಜದಲ್ಲಿ ಆರ್ಥಿಕವಾಗಿ ಉತ್ತಮ ಸ್ತರದಲ್ಲಿದ್ದರು. ವಿಶಾಲವಾದ ಕೃಷಿ ಭೂಮಿ, ಅಸಂಖ್ಯಾತ …
Read More »ನ್ಯಾಯ ಪರಿಪಾಲನೆ
ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬ್ದುಲ್ಲಾಹಿಬ್ನು ಅಮ್ರ್ ಬಿನ್ ಆಸ್ ರದಿಯಲ್ಲಾಹು ಅನ್ಹುಮ ಕಾಲ; ಕಾಲ ರಸೂಲುಲ್ಲಾಹಿ(ಸ) ಇನ್ನಲ್ ಮುಕ್ಸಿತೀನ ಇಂದಲ್ಲಾಹಿ ಅಲಾ ಮನಾಬಿರ ಮಿನ್ನೂರ್ ಅಲ್ಲಝೀನ ಯಅದಿಲೂನ ಫೀ ಹುಕ್ಮಿಹಿಂ ವಅಹ್ಲೀಹಿಮ್ ವಮಾ ವಲ್ಲೂ (ರವಾಹು ಮುಸ್ಲಿಮ್) ನ್ಯಾಯಪಾಲಕರು ಅಲ್ಲಾಹನ ಪ್ರಕಾಶಧಾರೆಯಲ್ಲಿರುತ್ತಾರೆ. ಅವರು ಅಧಿಕಾರ ದೊರೆತಾಗ ತಮ್ಮ ಅವಧಿಯಲ್ಲಿ ತಮ್ಮ ಪ್ರಜೆಗಳನ್ನು ನ್ಯಾಯಯುತವಾಗಿ ನಡೆಸಿಕೊಳ್ಳುತ್ತಾರೆ. ಫೆಬ್ರವರಿ 20ನ್ನು ಸಾಮಾಜಿಕ ನ್ಯಾಯ ದಿನವೆಂದು ಆಚರಿಸಲಾಯಿತು. 2007ರಲ್ಲಿ ವಿಶ್ವಸಂಸ್ಥೆಯು ಪ್ರತಿ ವರ್ಷ …
Read More »ಅಂತಿಮವಾಗಿ ತಾಯಿಗೆ ನಮಸ್ಕರಿಸುತ್ತಿದ್ದಾನೆಂದು ಭಾವಿಸಿದ್ದೆವು ಆದರೆ, ಮಗ ಕಾಲ್ಗೆಜ್ಜೆಗಳನ್ನು ತೆಗದುಕೊಂಡು ದೂರ ನಿಂತನು: ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಿರತ ಕೊರೋನಾ ವಾರಿಯರ್ಸ್ ಬಿಚ್ಚಿಟ್ಟ ಕತೆಗಳು…
ಇಂದೋರ್: ಲುನಿಯಾಪುರ ಕಬರಿಸ್ತಾನವನ್ನು ಪ್ರವೇಶಿಸಿದಾಗ, ರಫಿಕ್ ಷಾ ಎಂಬುವವರು ಕುಳಿತಿರುವುದು ಕಂಡು ಬಂತು. ಕೋವಿಡ್ನಿಂದ ಮರಣ ಹೊಂದಿದ ಜನರು ಕುರಿತು ಹೇಳಬೇಕೆಂದು ಕೇಳಿದಾಗ… “ನೋಡಿ ಸರ್, ಇವತ್ತು ಹುಟ್ಟಿದವರು ನಾಳೆ ಸಾಯಲೇಬೇಕು. ಸಾವು ಯಾರಿಗೂ ಪ್ರೀಯವಲ್ಲ, ಆದರೆ ಸಾವಿನ ವಿಷಯದಲ್ಲು ಇಂದು ನಾನಾದರೆ ಅದು ನಾಳೆ ನಿಮ್ಮ ಸರದಿ. ನಾನು 30 ವರ್ಷಗಳಿಂದ ಈ ಸ್ಮಶಾನದಲ್ಲಿದ್ದೇನೆ, ಆದರೆ ಈ ಎರಡು ತಿಂಗಳಲ್ಲಿ ಶವವನ್ನು ಇಷ್ಟು ಬೇಗ ಬೇಗನೆ ಬರುವುದನ್ನು ನಾನು …
Read More »1 ಮಿಲಿಯನ್ ರೋಟಿ ಯೋಜನೆ ; 10 ಸಾವಿರ ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಅಜೀಜ್ ಅಹ್ಮದ್ ಶಾಹ್ನ – Video
ಯಾದಗೀರ್ : ಯಾದಗೀರ್ ನಗರ ಪುರಸಭೆಯ ಎಲ್ಲಾ 31 ವಾರ್ಡ್ಗಳಲ್ಲಿ ಎಲ್ಲಾ ಸಮುದಾಯದ 10,000 ನಿರ್ಗತಿಕ ಕುಟುಂಬಗಳಿಗೆ ಗುಣಮಟ್ಟದ 10 ಕೆಜಿ ಗೋಧಿ ಹಿಟ್ಟು (ಆಟಾ) ಆಹಾರ ಕಿಟ್ ವಿತರಿಸಲಾಗಿದೆ. ಸಿಎಂಸಿ ಯಾದಗೀರ್ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ಅಜೀಜ್ ಅಹ್ಮದ್ ಶಹ್ನಾ ಅವರು ಲಾಕ್ ಡೌನ್ ಸಂದಿಗ್ದ ಪರಿಸ್ಥಿತಿಯನ್ನು ನೋಡಿ ಈ ಯೋಜನೆ ರೂಪಿಸಿದ್ದಾರೆ. ಹಸಿವಿಗೆ ಧರ್ಮ ಇಲ್ಲ. ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಏಕೋದರ ಸಹೋದರರು ಎಂಬ …
Read More »4 ಕೋಟಿ ರೂಪಾಯಿಗಿಂತಲೂ ಮಿಕ್ಕಿ ಪರಿಹಾರ ಕಾರ್ಯಗಳನ್ನು ನಿರ್ವಹಿಸಿದ ಹೆಚ್.ಆರ್.ಎಸ್.
ಬೆಂಗಳೂರು: ದೇಶಾದ್ಯಂತ ಜಾರಿ ಗೊಳಿಸಲಾಗಿರುವ ಲಾಕ್ಡೌನ್ ಪರಿಣಾಮದಿಂದಾಗಿ ರಾಜ್ಯದೆಲ್ಲೆಡೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ಅಗತ್ಯವುಳ್ಳವರ ಸಹಾಯಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ 29 ಏಪ್ರಿಲ್ ರವರೆಗೆ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್ಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಹೇಳಿಕೆ ಬಿಡುಗಡೆ …
Read More »
IslamKannada News Portal