Home / ವಾರ್ತೆಗಳು / 1 ಮಿಲಿಯನ್ ರೋಟಿ ಯೋಜನೆ ; 10 ಸಾವಿರ ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಅಜೀಜ್ ಅಹ್ಮದ್ ಶಾಹ್ನ – Video

1 ಮಿಲಿಯನ್ ರೋಟಿ ಯೋಜನೆ ; 10 ಸಾವಿರ ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಅಜೀಜ್ ಅಹ್ಮದ್ ಶಾಹ್ನ – Video

ಯಾದಗೀರ್ : ಯಾದಗೀರ್ ನಗರ ಪುರಸಭೆಯ ಎಲ್ಲಾ 31 ವಾರ್ಡ್‌ಗಳಲ್ಲಿ ಎಲ್ಲಾ ಸಮುದಾಯದ 10,000 ನಿರ್ಗತಿಕ ಕುಟುಂಬಗಳಿಗೆ ಗುಣಮಟ್ಟದ 10 ಕೆಜಿ ಗೋಧಿ ಹಿಟ್ಟು (ಆಟಾ) ಆಹಾರ ಕಿಟ್ ವಿತರಿಸಲಾಗಿದೆ. ಸಿಎಂಸಿ ಯಾದಗೀರ್ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ಅಜೀಜ್ ಅಹ್ಮದ್ ಶಹ್ನಾ ಅವರು ಲಾಕ್ ಡೌನ್ ಸಂದಿಗ್ದ ಪರಿಸ್ಥಿತಿಯನ್ನು ನೋಡಿ ಈ ಯೋಜನೆ ರೂಪಿಸಿದ್ದಾರೆ.

ಹಸಿವಿಗೆ ಧರ್ಮ ಇಲ್ಲ. ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಏಕೋದರ ಸಹೋದರರು ಎಂಬ ಉದ್ದೇಶವನ್ನು ಮುಂದಿಟ್ಟು “ಒಂದು ಮಿಲಿಯನ್ ರೋಟಿ ಯೋಜನೆ” ರೂಪಿಸಿ ಅದನ್ನು ಅಕ್ಷರಶಃ ಕಾರ್ಯ ರೂಪಕ್ಕೆ ತಂದಿದ್ದಾರೆ. ಈ ಆಹಾರ ಕಿಟ್ ವಿತರಣೆ ಕಾರ್ಯದಲ್ಲಿ ಎಚ್‌ಆರ್‌ಎಸ್, ಟೀಮ್ ವೆಲ್ಫೇರ್, ಎಸ್‌ಐಒ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಯಾದಗೀರ್ ಮುಂತಾದ ಸಂಘಟನೆಗಳ ಕಾರ್ಯಕರ್ತರು ಸಹಕಾರ ನೀಡಿದರು.

 

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …