ಮಂಗಳೂರು,ಜೂ.24: ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈ ಕಮ್ಯೂನಿಟಿ ಫೌಂಡೇಶನ್ ನೇತೃತ್ವದಲ್ಲಿ ದುಬೈಯಿಂದ ಮಂಗಳೂರಿಗೆ ಹೊರಟ ‘ಫ್ಲೈ ದುಬೈ’ ವಿಮಾನವು ಮಂಗಳವಾರ ಸಂಜೆ 7:20ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿತು.
ಒಟ್ಟು 187 ಪ್ರಯಾಣಿಕರಲ್ಲಿ 166 ಸದಸ್ಯರು ಆಗಮಿಸಿದ್ದು, ದುಬೈ ವಿಮಾನ ನಿಲ್ದಾಣದ ತಾಂತ್ರಿಕ ತೊಂದರೆಯಿಂದಾಗಿ 21 ಅನವಾಸಿಗಳನ್ನು ಕೈಬಿಡಲಾಯಿತು. 128 ಪುರುಷರು ಹಾಗೂ 38 ಮಹಿಳೆಯರು ಆಗಮಿಸಿದ್ದು,ಗರ್ಭಿಣಿಯರು, ವಯಸ್ಕರು, ಆನಾರೋಗ್ಯ ಪೀಡಿತರು, ಅತಂತ್ರ ಕಾರ್ಮಿಕರು ಇದ್ದರು.
ದುಬೈಯಲ್ಲಿ ಮೈ ಕಮ್ಯೂನಿಟಿ ಫೌಂಡೇಶನ್ ಮುಖ್ಯಸ್ಥರಾದ ಅಶ್ರಫ್ ಅಬ್ಬಾಸ್, ಎಂ. ಫ್ರೆಂಡ್ಸ್ ಎನ್ಆರ್ಐ ಸದಸ್ಯರಾದ ಹನೀಫ್ ಪುತ್ತೂರು ಹಾಗೂ ನವಾಝ್ ಕಾನತ್ತಡ ಊರಿಗೆ ಮರಳುವ ಅನಿವಾಸಿಗಳನ್ನು ಬೀಳ್ಕೊಟ್ಟರು.
ಮಂಗಳೂರಿನಲ್ಲಿ ಅಂತರ್ ರಾಷ್ಟ್ರ ಪ್ರಯಾಣಿಕರ ನೋಡಲ್ ಅಧಿಕಾರಿ ಯತೀಶ್ ಉಳ್ಳಾಲ್, ಎಂ.ಫ್ರೆಂಡ್ಸ್ ಸ್ಥಾಪಕರಾದ ರಶೀದ್ ವಿಟ್ಲ, ಜೊತೆ ಕಾರ್ಯದರ್ಶಿ ಹನೀಫ್ ಕುದ್ದುಪದವು, ಸದಸ್ಯರಾದ ತುಫೈಲ್ ಅಹ್ಮದ್, ಮಹಮ್ಮದ್ ಟೋಪ್ಲೋ, ಆಶಿಕ್ ಕುಕ್ಕಾಜೆ, ಸೌಹಾನ್ ಎಸ್.ಕೆ., ಅಶ್ಲಾಕ್ ವಿಲಾಯತ್, ಇಂತಿಯಾಝ್ ಐ ಪ್ರೇಮ್, ಸಿರಾಜ್ ಮದಕ ಮೊದಲಾದವರು ಅನಿವಾಸಿಗಳನ್ನು ಬರ ಮಾಡಿಕೊಂಡರು.
IslamKannada News Portal
