Home / editor (page 74)

editor

ಅಪಘಾತದ ಗಾಯಾಳು ಸೈನಿಕರ ರಕ್ಷಣೆಗೆ ಧಾವಿಸಿದ ಕಾಶ್ಮೀರಿಗಳು: ವೈರಲ್ ಆದ ‘ಕಾಶ್ಮೀರಿ ಇನ್ಸಾನಿಯತ್’

ಮೆಚ್ಚುಗೆಯ ಟ್ವೀಟ್ ಮಾಡಿದ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಶ್ರೀನಗರ,ಆ.20: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೇತ್‌ಪೊರಾದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ಸ್ಥಳೀಯರು ನೆರವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಛಾಯಾಚಿತ್ರದಿಂದ ಪ್ರೇರಿತವಾಗಿ ಭಾರತೀಯ ಸೇನಾಪಡೆಯ ಲೆಫ್ಟಿನೆಂಟ್ ಜನರಲ್ ಜೀತ್‌ಸಿಂಗ್ ಧಿಲ್ಲೋನ್ ಅವರು ‘ಕಾಶ್ಮೀರಿಯತ್ ಸೂಫಿಯತ್ ಇನ್ಸಾನಿಯತ್ ’ ಎಂಬ ಹೃದಯಸ್ಪರ್ಶಿ ಸಂದೇಶದೊಂದಿಗೆ ಟ್ವೀಟ್ ಮಾಡಿದ್ದಾರೆ. ಆಗಸ್ಟ್ 20ರಂದು ಸೇನಾಪಡೆಯ ವಾಹನವೊಂದು ಲೇತ್ ಪೊರಾ ಸಮೀಪದ ಹೆದ್ದಾರಿಯಲ್ಲಿ …

Read More »

ಸೃಷ್ಟಿಕರ್ತನೆಡೆಗೆ ಮರಳುವ ಕರೆ

@ ರೈಹಾನ್ ವಿ.ಕೆ., ಸಚೇರಿಪೇಟೆ ಈ ಪ್ರಪಂಚ ಒಂದು ನಿರ್ದಿಷ್ಟ ನಿಯಮಕ್ಕೆ ಬದ್ದವಾಗಿ ಚಲಿಸುತ್ತಿದೆ. ಸೂರ್ಯ ಚಂದ್ರ ನಕ್ಷತ್ರಗಳೆಲ್ಲವೂ ತನ್ನದೇ ಆದ ಕಕ್ಷೆಯಲ್ಲಿ ಚಲಿಸುತ್ತಿವೆ. ಹಾಗೆಯೇ ಮನುಷ್ಯನ ಅಂಗಾಂಗಗಳು ಕೂಡಾ ತನಗೇನು ಆಜ್ಞಾಪಿಸಲಾಗಿದೆಯೋ ಅದರಂತೆಯೇ ಕಾರ್ಯ ನಿರ್ವಹಿಸುತ್ತಿವೆ. ಮನುಷ್ಯನು ಇಲ್ಲಿ ನಿರ್ದಿಷ್ಟ ಜೀವನ ವ್ಯವಸ್ಥೆಗೆ ಬದ್ಧನಾಗಿದ್ದಾನೆ. ಯಾರು ತನಗೆ ಇಲ್ಲಿ ಜೀವಿಸಲು ಅವಕಾಶ ಮಾಡಿ ಕೊಟ್ಟಿರುವನೋ ಅವನ ಆದೇಶದಂತೆ ಜೀವಿಸುವುದರ ಮೂಲಕ ನಾವು ಅವನಿಗೆ  ಕೃತಜ್ಞರಾಗಬೇಕಿದೆ. ನಾವೆಲ್ಲರೂ ಒಂದು ದಿನ …

Read More »

ಜಮಾಅತೆ ಇಸ್ಲಾಮೀ, ಹೆಚ್.ಆರ್.ಎಸ್ ತಂಡದಿಂದ ಬೆಳ್ತಂಗಡಿ ಭೇಟಿ

ಬೆಳ್ತಂಗಡಿ: ಕಳೆದ ವರ್ಷ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳ ಅರ್ಹ ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ಮನೆ ರಿಪೇರಿ ಹಾಗೂ ಇನ್ನಿತರ ಅಗತ್ಯಗಳಿಗಾಗಿ ಜಮಾಅತೆ ಇಸ್ಲಾಮೀ, ಹೆಚ್.ಆರ್.ಎಸ್. ವತಿಯಿಂದ ಸಹಾಯ ನೀಡಲಾಗಿತ್ತು. ಅದರ ಬೆಳವಣಿಗೆಯ ಬಗ್ಗೆ ಪರಿಶೀಲನೆ ನಡೆಸಲು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸಲು ಆಗಸ್ಟ್ 18ರಂದು ಮಂಗಳವಾರ ಜಮಾಅತ್‌, ಹೆಚ್.ಆರ್.ಎಸ್. ತಂಡ ಪುನಃ ಬೆಳ್ತಂಗಡಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ …

Read More »

ಮುಸ್ಲಿಮ್ ಸಮುದಾಯ ಹೇಗೆ ಪ್ರತಿಕ್ರಿಯಿಸಬೇಕಿತ್ತು?

ಎ. ಕೆ. ಕುಕ್ಕಿಲ ಬೆಂಗಳೂರು ಮತ್ತು ಶೃಂಗೇರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಘಟನೆಗಳು ನಡೆದಿವೆ. ಈ ಎರಡೂ ಘಟನೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ ಏಕಪ್ರಕಾರವಾಗಿರಲಿಲ್ಲ. ಬೆಂಗಳೂರು ಮತ್ತು ಶೃಂಗೇರಿ ಘಟನೆಗಳಿಗೆ ಮೂಲ ಕಾರಣ ನವೀನ್ ಮತ್ತು ಮಿಲಿಂದ್. ಪ್ರವಾದಿ ಮುಹಮ್ಮದ್‍ರನ್ನು(ಸ) ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ನವೀನ್ ಒಂದು ಪೋಸ್ಟ್ ಹಾಕುತ್ತಾನೆ. ನಡೆದಿರುವುದು ಇಷ್ಟೇ. ಆದರೆ ಆ ಬಳಿಕದಿಂದ ಇವತ್ತಿನವರೆಗೆ ಚರ್ಚೆಯಲ್ಲಿರುವುದು ನವೀನನಲ್ಲ, ಮುಸ್ಲಿಮ್ ಸಮುದಾಯ. ಪೊಲೀಸರು ಬಂಧಿಸುತ್ತಿರುವುದು …

Read More »

“ಅಹಂ ಬಿಟ್ಟು ಸೃಷ್ಟಿಕರ್ತನ ಕಡೆಗೆ ಮರಳೋಣ” ಅಂತರ್ ಧರ್ಮೀಯ ವೆಬಿನಾರ್ ಸಂದೇಶದಲ್ಲಿ ವಿವಿಧ ಧರ್ಮದ ಮುಖಂಡರ ಕರೆ

ಬೆಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಹಮ್ಮಿಕೊಂಡಿರುವ `ಕೋವಿಡ್-19- ಮರಳಿ ಸೃಷ್ಟಿಕರ್ತನ ಕಡೆಗೆ’ ಪಾಕ್ಷಿಕ ಅಭಿಯಾನ ಪ್ರಯುಕ್ತ ರಾಜ್ಯದ ವಿವಿಧ ಧಾರ್ಮಿಕ ವಿದ್ವಾಂಸರನ್ನೊಳಗೊಂಡ ಅಂತರ್ ಧರ್ಮೀಯ ಸಂದೇಶ ಸಮಾರಂಭವು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾ. ಬೆಳಗಾಮಿ ಮುಹಮ್ಮದ್ ಸಾದ್ ವಹಿಸಿಕೊಂಡಿದ್ದರು. “ಜಗತ್ತಿನಲ್ಲಿ ಉದ್ಭವಿಸಿರುವ ದೈವಿಕ ವಿಪತ್ತು ಇಡೀ ಮನುಷ್ಯ ಕುಲವನ್ನೇ ನಡುಗಿಸುವಂತೆ ಮಾಡಿದ್ದು ವೈಜ್ಞಾನಿಕ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯ ನಡುವೆಯೂ …

Read More »

ಆಯಿಶಾರ ಪ್ರಶ್ನೆ, ಪ್ರವಾದಿಯ ಉತ್ತರ

@ ಏ.ಕೆ. ಕುಕ್ಕಿಲ 1. ಉಹುದ್ 2. ತಾಯಿಫ್ ಮಕ್ಕಾದಲ್ಲಿ ಪ್ರವಾದಿ ಮುಹಮ್ಮದರ(ಸ) ಪಾಲಿಗೆ ದೊಡ್ಡ ಶಕ್ತಿಯಾಗಿದ್ದ ದೊಡ್ಡಪ್ಪ ಅಬೂತಾಲಿಬ್ ಮತ್ತು  ಪತ್ನಿ ಖದೀಜಾ- ಇಬ್ಬರೂ ಬೆನ್ನು ಬೆನ್ನಿಗೇ ಮೃತಪಟ್ಟ ಬಳಿಕ ಪ್ರವಾದಿ ಅನಾಥತೆಯನ್ನು ಅನುಭವಿಸಿದರು. ಅಬೂತಾಲಿಬ್ ಜೀವಿಸಿರುವವರೆಗೆ ಅವರಿಗೆ ಅಸ್ತಿತ್ವದ ಸಮಸ್ಯೆ ಕಾಡಿರಲಿಲ್ಲ. ಅಬೂತಾಲಿಬ್ ಅಭಯ ನೀಡಿದ್ದರು. ಅಬೂತಾಲಿಬ್‍ರನ್ನು ಎದುರು ಹಾಕಿಕೊಂಡು ಪ್ರವಾದಿ ಮುಹಮ್ಮದ್‍ರೊಂದಿಗೆ ಜಗಳ ಕಾಯುವ ಮತ್ತು ಅವರನ್ನು ಮಕ್ಕಾದಿಂದ ಹೊರ ಹಾಕುವ ಧೈರ್ಯ ಯಾರಿಗೂ ಇರಲಿಲ್ಲ. …

Read More »

ಬೆಂಗಳೂರು: ಉದ್ರಿಕ್ತರಿಂದ ದೇವಾಲಯವನ್ನು ರಕ್ಷಿಸಿದ ಮುಸ್ಲಿಮ್ ಯುವಕರು – ವಿಡಿಯೋ

ಬೆಂಗಳೂರು: ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಪ್ರವಾದಿ ನಿಂದೆ ಆರೋಪದಲ್ಲಿ ಬೆಂಗಳೂರಿನಲ್ಲಿ ಉದ್ರಿಕ್ತ ಗುಂಪಿನಿಂದ ಹಿಂಸಾಚಾರ ಭುಗಿಲೆದಿತ್ತು. ಈ ನಡುವೆ ಮುಸ್ಲಿಮ್ ಯುವಕರ ಗುಂಪೊಂದು ಬೆಂಗಳೂರು ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಾಲಯದ ಸುತ್ತಲೂ ಒಂದು ಮಾನವ ಸರಪಳಿಯನ್ನು ರಚಿಸುವ ಮೂಲಕ ಉದ್ರಿಕ್ತರಿಂದ ದೇವಾಲಯಕ್ಕೆ ಹಾನಿ ಸಂಭವಿಸದಂತೆ ರಕ್ಷಿಸಿದ ದ್ರಶ್ಯವು ಕಂಡು ಬಂತು ಎಂಬುದಾಗಿ ಎಎನ್ಐ ಟ್ವೀಟ್ ಮಾಡಿದೆ. #WATCH Karnataka: A group of Muslim …

Read More »

ಗಣಪತಿ ಮೂರ್ತಿಗಳನ್ನು ಒಡೆದು ಹಾಕಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ ಬಹರೈನ್‍ ಪೊಲೀಸರು

ಮನಾಮ: ಬಹರೈನ್‍ ನ ರಾಜಧಾನಿ ಮನಾಮ ಇಲ್ಲಿನ ಜುಫ್ಫೈರ್ ಪ್ರದೇಶದ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬಳು ಗಣೇಶನ ವಿಗ್ರಹಗಳಿಗೆ ಹಾನಿಗೊಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಉದ್ದೇಶಪೂರ್ವಕ ಹಾನಿ ಹಾಗೂ ಸಾರ್ವಜನಿಕವಾಗಿ ಧಾರ್ಮಿಕ ಚಿಹ್ನೆಯೊಂದಕ್ಕೆ ಅವಮಾನಿಸಿದ ಆರೋಪ ಆಕೆಯ ಮೇಲೆ ಹೊರಿಸಲಾಗಿದೆ. ಈ ಘಟನೆಯ ವೀಡಿಯೋ ವೈರಲ್ ಆದಂತೆಯೇ 54 ವರ್ಷದ ಆ ಮಹಿಳೆಗೆ ರವಿವಾರ ಸಮನ್ಸ್ ಕಳುಹಿಸಲಾಗಿತ್ತು ಎಂದು …

Read More »

ದುಃಖ, ನೋವನ್ನು ಇಳಿಸಿಬಿಡಿ

@ ಮುಹಮ್ಮದ್ ಯೂಸುಫ್ ಇಸ್ಲಾಹಿ ಆತ್ಮವಿಶ್ವಾಸ ಕುಂದಿ ಹೋಗದೆ, ಸಂದಿಗ್ಧ ಘಟ್ಟಗಳನ್ನು ಅತ್ಯಂತ ಶಾಂತಿಯಿಂದ ಎದುರಿಸಿ, ದುಃಖ ಹಾಗೂ ಸಂಕಟಗಳಲ್ಲಿ ಮಿತಿಯ ಪರಿಧಿಯನ್ನು ಮೀರದಂತೆ ನಾವು  ಬದುಕಬೇಕು. ದುಃಖ, ದುರಂತ, ಪರೀಕ್ಷೆ, ಆಪತ್ತು ಇವುಗಳಿಂದೆಲ್ಲಾ ಮುಕ್ತನಾದ ಯಾರೂ ಈ ಲೋಕದಲ್ಲಿ ಇರಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸುವ  ವಿಷಯದಲ್ಲಿ ಸತ್ಯವಿಶ್ವಾಸಿ ಮತ್ತು ಅವಿಶ್ವಾಸಿಯ ನಡುವೆ ಬಹಳ ವ್ಯತ್ಯಾಸವಿದೆ. ದುಃಖ ನೋವು ಸಂಕಟಗಳಿಂದ ಪರಿಭ್ರಾಂತವಾಗಿ ನಿರಾಶೆಯ ಕಡಲಲ್ಲಿ ಮುಳುಗಿ ಕೆಲವೊಮ್ಮೆ ಆತ್ಮಹತ್ಯೆಯಲ್ಲಿ ಅಭಯ …

Read More »

ಮೂಸಾ(ಅ)ರ ಲಾಠಿ, ಕುರ್‍ಆನ್ ಮತ್ತು ಕಲಿಮತುತ್ವಯ್ಯಿಬ

@ ರೈಹಾನ ವಿ.ಕೆ ಹ. ಮೂಸಾ(ಅ)ರ ಊರುಗೋಲಿಗೆ ಅದ್ಭುತವಾದಂತಹ ಶಕ್ತಿಯಿತ್ತು. ಸಮುದ್ರಕ್ಕೆ ಅದರಿಂದ ಹೊಡೆದಾಗ; ಅದು ಅಲ್ಲಾಹನ ಆಜ್ಞೆಯಂತೆ ಸಮುದ್ರವನ್ನು ಇಬ್ಭಾಗವನ್ನಾಗಿಸಿ  ಬಹಳ ಎತ್ತರವಾದಂತಹ ಪರ್ವತದಂತಾಗಿಸಿತು. ಸೂರಃ ತಾಹಾದಲ್ಲಿ ಅಲ್ಲಾಹನು ಹೇಳುತ್ತಾನೆ: “ಲಾಠಿಯಿಂದ ಹೊಡೆದಾಗ ಸಮುದ್ರದ ನೀರು ಇಬ್ಭಾಗವಾಗಿ ಮಹಾ ಪರ್ವತದಂತೆ ನಿಂತು ಬಿಟ್ಟಿತು. ಮಾತ್ರವಲ್ಲ ಆ ಬಳಿಕ ಗೋಚರವಾದ ದಾರಿಯು ಒಣಗಿತ್ತು.” ಇಂತಹ ಒಂದು ಅದ್ಭುತ ಪವಾಡವು ಮೂಸಾ(ಅ)ರ ಚಾಟಿಯಿಂದ ಸಂಭವಿಸುತ್ತದೆ. ಮಾತ್ರವಲ್ಲ; ಜನರು ಇಂದೂ ಸಹ ಅದನ್ನು …

Read More »