Home / editor (page 72)

editor

” ಇಸ್ಲಾಮ್ ಧರ್ಮ ” ಪುಸ್ತಕ ಪರಿಚಯ

“ರಿಸಾಲ ಯೆ ದೀನಿಯ್ಯಾತ್’” – ಇದು ವಿಶ್ವವಿಖ್ಯಾತ ವಿದ್ವಾಂಸರಾದ ಸಯ್ಯದ್ ಅಬುಲ್ ಆಲಾ ಮೌದೂದಿಯವರು(ರ) 1937 ರಲ್ಲಿ ರಚಿಸಿದ ಸುಪ್ರಸಿದ್ಧ ಉರ್ದು ಸಾಹಿತ್ಯವಾಗಿದೆ. ಈ ಪುಸ್ತಕವು ಈಗಾಗಲೇ ದೇಶದ ಎಲ್ಲ ರಾಜ್ಯ ಭಾಷೆಗಳಲ್ಲಿಯೂ ಪ್ರಕಟಗೊಂಡಿದೆ ಮತ್ತು ವಿಶ್ವದ ನಾನಾ ಭಾಷೆಗಳಿಗೆ ಅನುವಾದಗೊಂಡಿದೆ. ಇಂಗ್ಲೀಷ್ ನಲ್ಲಿ ಇದು Towards Understanding Islam ಎಂಬ ಹೆಸರಿನಲ್ಲಿ ಖ್ಯಾತವಾಗಿದೆ. ಅನೇಕ ಶಾಲಾ ಕಾಲೇಜುಗಳಲ್ಲಿ ಇಸ್ಲಾಮ್’ನ ಅಧ್ಯಯನಕ್ಕಾಗಿ ಈ ಪುಸ್ತಕವನ್ನು ಪಠ್ಯವಾಗಿ ಕಲಿಸಲಾಗುತ್ತಿದೆ. ಶಾಂತಿ ಪ್ರಕಾಶನವು …

Read More »

HRS ವತಿಯಿಂದ ಮಂದಿರ, ಮಸೀದಿಗಳಲ್ಲಿ ಸ್ಯಾನಿಟೈಜರ್ ಸಿಂಪಡಣೆ

ಸಿಂಧನೂರು, ಸೆ 02: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ನಗರದ ಸಾರ್ವಜನಿಕ ಸ್ಥಳಗಳಾದ ಮಂದಿರ ಮತ್ತು ಮಸೀದಿಗಳಲ್ಲಿ ಸ್ಯಾನಿಟೈಜರ್ ಔಷಧ ಸಿಂಪಡಿಸಲಾಯಿತು. ಹಳೇ ಬಜಾರದ ಹುದಾ ಮಸೀದಿ, ಹನುಮಾನ ದೇವರ ಗುಡಿ, ಬಡಿಬೇಸ್ ಮಸೀದಿ ಸೇರಿದಂತೆ ಇಂದು ಒಟ್ಟಾರೆ ನಾಲ್ಕು ಮಂದಿರ ಎಂಟು ಮಸೀದಿಗಳಲ್ಲಿ ಔಷಧ ಸಿಂಪಡಿಸಲಾಗಿದೆ.

Read More »

ನೀವು ಕುರ್‍ಆನನ್ನು ಹೇಗೆ ಓದುತ್ತಿದ್ದೀರಿ?

@ ಡಾ| ಮುಹಮ್ಮದ್ ಪಿ. ಕುರ್‍ಆನ್‍ನ ಒಂದು ಅಕ್ಷರ ಓದಿದರೆ ಒಂದು ಪ್ರತಿಫಲವಿದೆ ಎಂಬ ಪ್ರವಾದಿ ವಚನವು (ತಿರ್ಮಿದಿ) ಅರ್ಥವರಿಯದೆ ಕುರ್‍ಆನ್ ಓದಿದರೂ ಪ್ರತಿಫಲ ಲಭಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪವಿತ್ರ ಕುರ್‍ಆನ್‍ನೊಂದಿಗಿನ ಪ್ರೀತಿ, ಗೌರವವೂ ಪ್ರತಿಫಲಾರ್ಹವಾಗಿದೆ. ಕುರ್‍ಆನ್‍ನ ಶೈಲಿ, ಓದುವ ಕ್ರಮಬದ್ಧತೆ, ರಾಗ ಮೊದಲಾದವುಗಳು ಅರ್ಥ ತಿಳಿಯದ ಹೃದಯಗಳನ್ನೂ ಅತ್ಯಧಿಕವಾಗಿ ಆಕರ್ಷಿಸಿದೆಯೆಂಬುದಕ್ಕೆ ಇತಿಹಾಸದಲ್ಲಿ ಧಾರಾಳ ಉದಾಹರಣೆಗಳಿವೆ. ಹೀಗಿದ್ದರೂ, ಕುರ್‍ಆನ್‍ನ ನೈಜ ಉದ್ಧೇಶ, ಚೈತನ್ಯವನ್ನು ಅನುಭವಿಸಲು ಅರ್ಥವರಿಯದ ಪಾರಾಯಣದಿಂದ ಅಸಾಧ್ಯ ಎಂಬುದು …

Read More »

ಧನವ್ಯಯ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) “ಅಲ್ಲಾಹನ ಮಾರ್ಗದಲ್ಲಿ ತಮ್ಮ ಸಂಪತ್ತನ್ನು ಖರ್ಚು ಮಾಡುವವರ ಖರ್ಚಿನ ಉಪಮೆಯು ಒಂದು ಕಾಳನ್ನು ಬಿತ್ತಿ ಅದರಿಂದ ಏಳು ತೆನೆಗಳು ಹೊರಟು, ಪ್ರತಿಯೊಂದು ತೆನೆಯಲ್ಲಿ ನೂರು ಕಾಳುಗಳಿರುವಂತಿದೆ. ಇದೇ ರೀತಿಯಲ್ಲಿ ಅಲ್ಲಾಹನು ತಾನುದ್ದೇಶಿಸಿದವನ ಕರ್ಮಗಳಿಗೆ ವೃದ್ಧಿಯನ್ನು ದಯಪಾಲಿಸುತ್ತಾನೆ. ಅವನು ಅತ್ಯಂತ ಉದಾರಿಯೂ ಸರ್ವಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್‍ಆನ್, 2:261) ದೇವ ಮಾರ್ಗದಲ್ಲಿ ಸಂಪತ್ತನ್ನು ವ್ಯಯಿಸುವುದರ ಮಹತ್ವವನ್ನು ಒಂದು ಅರ್ಥಪೂರ್ಣ ಉದಾಹರಣೆಯ ಮೂಲಕ ಈ ಶ್ಲೋಕದಲ್ಲಿ …

Read More »

ಪ್ರವಾದಿವರ್ಯರ (ಸ) ವಿವಾಹಗಳು ಮತ್ತು ಬುಡ ರಹಿತ ವಿವಾದಗಳು

ಪ್ರವಾದಿ ಮುಹಮ್ಮದ್(ಸ) ಅವರ ವೈವಾಹಿಕ ಜೀವನದ ಮಾಹಿತಿ ಮತ್ತು ಅದರ ವಾಸ್ತವಿಕತೆಗಳ ಕುರಿತ ವಸ್ತುನಿಷ್ಠ ಬರಹ : ಅಬ್ದುಸ್ಸಲಾಮ್ ಪುತ್ತಿಗೆ (ಪ್ರಧಾನ ಸಂಪಾದಕರು : ವಾರ್ತಾಭಾರತಿ ದೈನಿಕ) ● ಕೃತಿ : ಪ್ರವಾದಿ ಮುಹಮ್ಮದ್ (ಸ)-ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್(ಸ) ಅವರ ವೈವಾಹಿಕ ಬದುಕನ್ನು ಕೇಂದ್ರವಾಗಿಟ್ಟು ಅವರ ನಿರ್ಮಲ ವ್ಯಕ್ತಿತ್ವದ ಮೇಲೆ ಕೆಸರು ಚೆಲ್ಲುವ ಶ್ರಮ ಬಹುಕಾಲದಿಂದ ನಡೆದು ಬಂದಿದೆ. ಹಲವರು ಪ್ರವಾದಿವರ್ಯರ ಬದುಕನ್ನು ಪರಿಚಯಿಸುವಾಗ ಸದಾ …

Read More »

“ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ” ಪುಸ್ತಕ ಪರಿಚಯ

-ಪ್ರೊ| ಜವರೇಗೌಡ ಈ ಗ್ರಂಥದ ಮುನ್ನುಡಿಯಲ್ಲಿ ಬರೆಯುತ್ತಾರೆ…. ಮುಹಮ್ಮದ್‍ರಂತಹ(ಸ) ಮಹಾ ಪ್ರವಾದಿಗಳ ಜೀವನ ಯಾತ್ರೆಯ ಪಥ ಸಸಿನವೂ ಅಲ್ಲ; ಸರಾಗವೂ ಅಲ್ಲ ; ನಿಷ್ಕಂಟಕವೂ ಅಲ್ಲ ಎಂಬುದು ಲೋಕವೇದ್ಯ. ಅವರು ಮುಳ್ಳಿನ ಕಿರೀಟ ಧರಿಸಿ, ಮುಳ್ಳಿನ ಹಾವುಗೆಯ ಮೇಲೆ, ಅಗ್ನಿಜ್ವಾಲೆಯ ನಡುವೆ, ಕೆಂಡದ ಕೊಂಡದಲ್ಲಿ ನಡೆಯಬೇಕಾಗುತ್ತದೆ. ದೇವನ ಪ್ರೀತಿ ಅವರಿಗೆ ಬಲು ಸುಲಭದಲ್ಲಿ ದೊರೆಯಲಿಲ್ಲ. ಅವರನುಭವಿಸಿದ ಕಷ್ಟ-ಸಂಕಷ್ಟಗಳಿಗೆ, ಬೇನೆ-ಬವಣೆಗಳಿಗೆ ಲೆಕ್ಕವಿಲ್ಲ. ದಿನ ಬೆಳಗಾದರೆ ಅವರು ಅಪಾಯದ ಅಂಚಿನಲ್ಲಿರುತ್ತಿದ್ದರು. ಭಾವುಕರಿಗೆ ಅದೊಂದು …

Read More »

‘ತಫ್ಹೀಮುಲ್ ಕುರ್‍ಆನ್’ ಆರು ಸಂಪುಟಗಳಲ್ಲಿ…

ಆಧುನಿಕ ಮನ-ಮಸ್ತಿಷ್ಕಗಳು ಸರೆಗೊಳ್ಳುವಂತಹ ‘ತಫ್ಹೀಮುಲ್ ಕುರ್‍ಆನ್’ ಸೆಯ್ಯದ್ ಅಬುಲ್ ಆಲಾ ಮೌದೂದಿ (ರ) ಅವರು ಅನುವಾದಿಸಿರುವ “ಪವಿತ್ರ ಕುರ್’ಆನ್’ ನ “ಜಗದ್ವಿಖ್ಯಾತ ವ್ಯಾಖ್ಯಾನ” ಗ್ರಂಥವಾಗಿದೆ. ಇದೊಂದು ಕೇವಲ ಕುರ್‍ಆನಿನ ಅನುವಾದ ಮಾತ್ರ ಅಲ್ಲ ;ಬದಲಾಗಿ ಪವಿತ್ರ ಕುರ್‍ಆನನ್ನು ವಿಶಾಲವಾಗಿ ಗ್ರಹಿಸಲು ಸಾಧ್ಯವಾಗಿಸುವ ಅಗಾಧ ಜ್ಞಾನ ಭಂಡಾರವಾಗಿದೆ. ಈ ಗ್ರಂಥದ ಅಧ್ಯಯನವು ; ಈ ಭೌತಿಕ ಜಗತ್ತಿನ ವಾಸ್ತವಿಕತೆ ಏನು, ಇದರಲ್ಲಿ ತಾನು ಮತ್ತು ತನ್ನ ಪಾತ್ರ ಹೊಣೆಗಾರಿಕೆಗಳೇನು ಎಂಬುದನ್ನು ಸವಿವರವಾಗಿ …

Read More »

‘ಶತ್ರುವತ್ಸಲ ಪ್ರವಾದಿ ಮುಹಮ್ಮದ್(ಸ)’ ಪುಸ್ತಕ ಪರಿಚಯ

ತನ್ನನ್ನು ನಿರಂತರವಾಗಿ ಪೀಡಿಸಿ ದೇಶ ಭ್ರಷ್ಟರನ್ನಾಗಿ ಮಾಡಿದ ಶತ್ರುಗಳಿಗೂ ಪ್ರವಾದಿ ಮುಹಮ್ಮದ್ (ಸ) ಅವರು ಪ್ರೀತಿ ವಾತ್ಸಲ್ಯವನ್ನು ಧಾರೆಯೆರೆಯಲಾದ ಇನ್ನೊಂದು ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ಬೇರೆ ಸಿಗಲಾರದು. ಪ್ರವಾದಿವರ್ಯರಿಗೆ(ಸ) ಸತ್ಯದ ಸ್ಥಾಪನೆಗಾಗಿ ಎಂತೆಂತಹ ಭೀಕರ ಸಂಕಷ್ಟಗಳನ್ನು, ಸತ್ವಪರೀಕ್ಷೆಗಳನ್ನು ಎದುರಿಸಬೇಕಾಯಿತು; ಅವರ ಮೇಲೆ ಏನೆಲ್ಲ ಗತಿಸಿತು ಎಂಬುದನ್ನು ಯೋಚಿಸುವಾಗಲೇ ಮೈ ನವಿರೇಳುತ್ತದೆ. ಅಂತಹ ಘಟನೆಗಳ ಪೈಕಿ ಕೆಲವೊಂದನ್ನು ಇತಿಹಾಸದ ಪುಟಗಳಿಂದ ಆಯ್ದು ಯುವ ಲೇಖಕ ಮುಹಮ್ಮದ್ ಅಶ್ರಫ್ ಅವರು ‘ಶತ್ರುವತ್ಸಲ ಪ್ರವಾದಿ …

Read More »

ಇಸ್ಲಾಮ್ ಮತ್ತು ಸ್ವಾತಂತ್ರ ಹೋರಾಟ

ಸಂಗ್ರಹ: ಎನ್.ಎಂ. ಪಡೀಲ್ ಅನ್ ಅಬೀದರ್ರ್(ರ) ಕಾಲ, ಕುಲ್ತು ಯಾ ರಸೂಲಲ್ಲಾಹ್ ಅಯ್ಯುಲ್ ಅಅïಮಾಲಿ ಅಫ್‍ದಲು? ಅಲ್ ಈಮಾನುಬಿಲ್ಲಾಹಿ ವಲ್ ಜಿಹಾದು ಫೀ ಸಬೀಲಿಹಿ. ಅಬೂದರ್(ರ) ಹೇಳುತ್ತಾರೆ: ನಾನು ಪ್ರವಾದಿಯವರೊಡನೆ(ಸ) ಕೇಳಿದೆ, “ಕರ್ಮಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಯಾವುದು?” ಪ್ರವಾದಿ(ಸ)ರು ಉತ್ತರಿಸಿದರು- ಅಲ್ಲಾಹನ ಮೇಲಿನ  ವಿಶ್ವಾಸ ಮತ್ತು ಅಲ್ಲಾಹನ ಮಾರ್ಗದ ಹೋರಾಟ. ಜಿಹಾದ್ ಎಂದು ಹೇಳಿದರೆ ವ್ಯಕ್ತಿ, ಸಮೂಹ, ರಾಷ್ಟ್ರದ ಒಳಿತು ಮತ್ತು ಅಭಿವೃದ್ಧಿಗಾಗಿ ಮಾಡುವ ಎಲ್ಲಾ ಕರ್ಮಗಳಿಗೆ ಉಪಯೋಗಿಸುವ ಒಂದು …

Read More »

ಕೊರೋನಾ-ಇಸ್ಲಾಮಿನ ದೃಷ್ಟಿಯಲ್ಲಿ

ಸಂಗ್ರಹ: ಎನ್.ಎಂ. ಪಡೀಲ್   ಅನ್ ಅಬ್ದುರ್ರಹ್ಮಾನ್ ಬಿನ್ ಔಫ್(ರ) ಕಾಲ, ಸಮಿಅïತು ರಸೂಲುಲ್ಲಾಹಿ ಸಲ್ಲಲ್ಲಾಹು ಅಲೈಹಿವಸಲ್ಲಂ ಯಕೂಲು, ಇದಾ ಸಮಿಅïತುಂ ಬಿಹಿ (ಅಯ್‍ಬಿತ್ವಾಊನ್) ಬಿಅರ್‍ದಿನ್ ಫಲಾ ತಕ್‍ದಮೂ  ಅಲೈಹಿ, ವಇದಾ ವಕಅ ಬಿಅರ್‍ದಿನ್ ವಅನ್ತುಂ ಬಿಹಾ, ಫಲಾ ತಕ್‍ರುದೂ ಫಿರಾರನ್ ಮಿನ್‍ಹು. (ರವಾಹುಲ್ ಬುಖಾರಿ) ಅಬ್ದುರ್ರಹ್ಮಾನ್ ಬಿನ್ ಔಫ್(ರ)ರಿಂದ ವರದಿ ಯಾಗಿದೆ, ಪ್ರವಾದಿ(ಸ) ಈ ರೀತಿ ಹೇಳುವುದನ್ನು ಕೇಳಿದೆ: ಒಂದು ಊರಿನಲ್ಲಿ ಪ್ಲೇಗ್ ಎಂಬ ಸಾಂಕ್ರಾಮಿಕ ರೋಗವಿದೆ ಎಂದು ತಿಳಿದರೆ …

Read More »