ಆಧುನಿಕ ಮನ-ಮಸ್ತಿಷ್ಕಗಳು ಸರೆಗೊಳ್ಳುವಂತಹ ‘ತಫ್ಹೀಮುಲ್ ಕುರ್ಆನ್’ ಸೆಯ್ಯದ್ ಅಬುಲ್ ಆಲಾ ಮೌದೂದಿ (ರ) ಅವರು ಅನುವಾದಿಸಿರುವ “ಪವಿತ್ರ ಕುರ್’ಆನ್’ ನ “ಜಗದ್ವಿಖ್ಯಾತ ವ್ಯಾಖ್ಯಾನ” ಗ್ರಂಥವಾಗಿದೆ. ಇದೊಂದು ಕೇವಲ ಕುರ್ಆನಿನ ಅನುವಾದ ಮಾತ್ರ ಅಲ್ಲ ;ಬದಲಾಗಿ ಪವಿತ್ರ ಕುರ್ಆನನ್ನು ವಿಶಾಲವಾಗಿ ಗ್ರಹಿಸಲು ಸಾಧ್ಯವಾಗಿಸುವ ಅಗಾಧ ಜ್ಞಾನ ಭಂಡಾರವಾಗಿದೆ.
ಈ ಗ್ರಂಥದ ಅಧ್ಯಯನವು ; ಈ ಭೌತಿಕ ಜಗತ್ತಿನ ವಾಸ್ತವಿಕತೆ ಏನು, ಇದರಲ್ಲಿ ತಾನು ಮತ್ತು ತನ್ನ ಪಾತ್ರ ಹೊಣೆಗಾರಿಕೆಗಳೇನು ಎಂಬುದನ್ನು ಸವಿವರವಾಗಿ ಹ್ರದಯಕ್ಕೆ ನಾಟುವಂತೆ ವಿವರಿಸುತ್ತದೆ. ವಿಭಿನ್ನ ಸಿದ್ಧಾಂತಗಳ ಮೋಹಕ ಜಾಲಕ್ಕೆ ಸಿಲುಕಿ ಧರ್ಮ ಧಿಕ್ಕಾರದ ದಾರಿಯತ್ತ ಸಾಗುತ್ತಿದ್ದ ಸಮೂಹವನ್ನು ಅವುಗಳಿಂದ ರಕ್ಷಿಸುವಲ್ಲಿ ಈ ಕುರ್’ಆನ್ ವ್ಯಾಖ್ಯಾನ ಅಪಾರ ಯಶಸ್ಸು ಕಂಡಿದೆ.
‘ತಫ್ಹೀಮುಲ್ ಕುರ್ಆನ್’ ನ ಕನ್ನಡ ಭಾಷಾಂತರವು ಆರು ಸಂಪುಟಗಳಲ್ಲಿ ಲಭ್ಯವಿದ್ದು , ಇದು ಕನ್ನಡ ಸಾಹಿತ್ಯ ಲೋಕಕ್ಕೆ ಶಾಂತಿ ಪ್ರಕಾಶನದ ಅಮೂಲ್ಯ ಕೊಡುಗೆಯಾಗಿದೆ. ಪಿ. ನೂರ್ ಮುಹಮ್ಮದ್ ಉಪ್ಪಿನಂಗಡಿ ಮತ್ತು ಎಂ. ಸಾದುಲ್ಲಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
● ಶಾಂತಿ ಪ್ರಕಾಶನ
+91 9448696490 | +91 9449334496
IslamKannada News Portal
