Home / ವಾರ್ತೆಗಳು / “ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ” ಪುಸ್ತಕ ಪರಿಚಯ

“ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಸಂದೇಶ” ಪುಸ್ತಕ ಪರಿಚಯ

-ಪ್ರೊ| ಜವರೇಗೌಡ ಈ ಗ್ರಂಥದ ಮುನ್ನುಡಿಯಲ್ಲಿ ಬರೆಯುತ್ತಾರೆ….
ಮುಹಮ್ಮದ್‍ರಂತಹ(ಸ) ಮಹಾ ಪ್ರವಾದಿಗಳ ಜೀವನ ಯಾತ್ರೆಯ ಪಥ ಸಸಿನವೂ ಅಲ್ಲ; ಸರಾಗವೂ ಅಲ್ಲ ; ನಿಷ್ಕಂಟಕವೂ ಅಲ್ಲ ಎಂಬುದು ಲೋಕವೇದ್ಯ. ಅವರು ಮುಳ್ಳಿನ ಕಿರೀಟ ಧರಿಸಿ, ಮುಳ್ಳಿನ ಹಾವುಗೆಯ ಮೇಲೆ, ಅಗ್ನಿಜ್ವಾಲೆಯ ನಡುವೆ, ಕೆಂಡದ ಕೊಂಡದಲ್ಲಿ ನಡೆಯಬೇಕಾಗುತ್ತದೆ.
ದೇವನ ಪ್ರೀತಿ ಅವರಿಗೆ ಬಲು ಸುಲಭದಲ್ಲಿ ದೊರೆಯಲಿಲ್ಲ. ಅವರನುಭವಿಸಿದ ಕಷ್ಟ-ಸಂಕಷ್ಟಗಳಿಗೆ, ಬೇನೆ-ಬವಣೆಗಳಿಗೆ ಲೆಕ್ಕವಿಲ್ಲ. ದಿನ ಬೆಳಗಾದರೆ ಅವರು ಅಪಾಯದ ಅಂಚಿನಲ್ಲಿರುತ್ತಿದ್ದರು. ಭಾವುಕರಿಗೆ ಅದೊಂದು ಕಣ್ಣೀರಿನ ಕತೆ.
ವಿರೋಧಿಗಳು ಅವರ ಕಣ್ಣಿಗೆ ಮರಳು ಧೂಳುಗಳನ್ನು ತೂರಿದಾಗ, ಕಲ್ಲೆಸೆದು ಅವರ ಮೈಯಿಂದ ರಕ್ತ ಹರಿಯುತ್ತಿದ್ದಾಗ, ಅವರನ್ನು ಬಾಣಗಳಿಂದಿರಿದಾಗ, ತಮ್ಮಲ್ಲಿದ್ದುದನ್ನು ಪರರಿಗಿತ್ತು ತಾವು ಹಸಿದಾಗ, ತಮ್ಮ ಮಡದಿಯರನ್ನೂ, ಅಳಿಯಂದಿರನ್ನೂ ಅವರ ಮೇಲೆತ್ತಿ ಕಟ್ಟಿದಾಗ ಯಾವ ಓದುಗನಾದರೂ ಕಣ್ಣೀರಿನಲ್ಲಿ ಮೀಯದಿರುತ್ತಾನೆಯೇ? ನಾನಂತೂ ಅತ್ತಿದ್ದೇನೆ.
ಅರೇಬಿಯಾ ಮರುಭೂಮಿಯಲ್ಲಿ ಆಧ್ಯಾತ್ಮಿಕ ಪ್ರವಾಹವನ್ನು ಹರಿಸಿ, ಧಾರ್ಮಿಕ ಬೀಜವನ್ನು ಬಿತ್ತಿ, ಉಚ್ಚ ಸಂಸ್ಕøತಿಯ ಬೆಳಕನ್ನು ಪಡೆದು, ಇಡೀ ಜಗತ್ತಿಗೆ ಹಂಚಿದ ಪುಣ್ಯಜೀವಿ ಮುಹಮ್ಮದ್‍ರು(ಸ) ಅವರು `ಲಾ ಇಲಾಹ ಇಲ್ಲಲ್ಲಾಹ್’ ಮಂತ್ರಜ್ಯೋತಿಯಿಂದ ಇಡೀ ವಿಶ್ವವನ್ನೇ ಬೆಳಗಿದ ಮಹಾತ್ಮರವರು.
ಇತಿಹಾಸವನ್ನು ನಿರ್ಮಿಸಿದ ಈ ಭವ್ಯ ಮಾನವ ಈ ನೆಲದ ಮೇಲೆ ಹರಿದಾಡದಿದ್ದರೆ ಜಗತ್ತು ಅಜ್ಞಾನಾಂಧಕಾರದಲ್ಲಿ ಮೌಢ್ಯ ಮಾಲಿನ್ಯದ ಕೆಸರುಸುಬಿನಲ್ಲಿ, ಅನಾಗರಿಕತೆಯ ಬಸಿರಲ್ಲಿ ತೊಳಲಾಡುತ್ತಿದ್ದಿರಬೇಕೆಂಬುದರಲ್ಲಿ ಅನುಮಾನವಿಲ್ಲ.
● ಶಾಂತಿ ಪ್ರಕಾಶನ
9449333496 | 7795837394
( ಈ ಪುಸ್ತಕವು Amazon ನಲ್ಲಿ ಲಭ್ಯವಿದೆ )
SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …