Home / ವಾರ್ತೆಗಳು / ‘ಶತ್ರುವತ್ಸಲ ಪ್ರವಾದಿ ಮುಹಮ್ಮದ್(ಸ)’ ಪುಸ್ತಕ ಪರಿಚಯ

‘ಶತ್ರುವತ್ಸಲ ಪ್ರವಾದಿ ಮುಹಮ್ಮದ್(ಸ)’ ಪುಸ್ತಕ ಪರಿಚಯ

ತನ್ನನ್ನು ನಿರಂತರವಾಗಿ ಪೀಡಿಸಿ ದೇಶ ಭ್ರಷ್ಟರನ್ನಾಗಿ ಮಾಡಿದ ಶತ್ರುಗಳಿಗೂ ಪ್ರವಾದಿ ಮುಹಮ್ಮದ್ (ಸ) ಅವರು ಪ್ರೀತಿ ವಾತ್ಸಲ್ಯವನ್ನು ಧಾರೆಯೆರೆಯಲಾದ ಇನ್ನೊಂದು ಉದಾಹರಣೆ ಜಗತ್ತಿನ ಇತಿಹಾಸದಲ್ಲಿ ಬೇರೆ ಸಿಗಲಾರದು.

ಪ್ರವಾದಿವರ್ಯರಿಗೆ(ಸ) ಸತ್ಯದ ಸ್ಥಾಪನೆಗಾಗಿ ಎಂತೆಂತಹ ಭೀಕರ ಸಂಕಷ್ಟಗಳನ್ನು, ಸತ್ವಪರೀಕ್ಷೆಗಳನ್ನು ಎದುರಿಸಬೇಕಾಯಿತು; ಅವರ ಮೇಲೆ ಏನೆಲ್ಲ ಗತಿಸಿತು ಎಂಬುದನ್ನು ಯೋಚಿಸುವಾಗಲೇ ಮೈ ನವಿರೇಳುತ್ತದೆ. ಅಂತಹ ಘಟನೆಗಳ ಪೈಕಿ ಕೆಲವೊಂದನ್ನು ಇತಿಹಾಸದ ಪುಟಗಳಿಂದ ಆಯ್ದು ಯುವ ಲೇಖಕ ಮುಹಮ್ಮದ್ ಅಶ್ರಫ್ ಅವರು ‘ಶತ್ರುವತ್ಸಲ ಪ್ರವಾದಿ ಮುಹಮ್ಮದ್(ಸ)’ ಎಂಬ ಈ ಕೃತಿಯಲ್ಲಿ ಸುಂದರವಾಗಿ ಪೋಣಿಸಿ ಸಿದ್ಧಪಡಿಸಿದ್ದಾರೆ.

ಲೋಕದಲ್ಲಿ ಪ್ರವಾದಿ ಮುಹಮ್ಮದ್(ಸ)ರ ಜೀವನ ಚರಿತ್ರೆಗೆ ಸಂಬಂಧಿಸಿ ರಚಿಸಲಾದಷ್ಟು ಕಿರು ಪುಸ್ತಕಗಳು ಮತ್ತು ಅನೇಕ ಸಂಪುಟಗಳುಳ್ಳ ಬೃಹತ್ ಗ್ರಂಥಗಳು ಬೇರೆ ಯಾರ ಬಗ್ಗೆಯೂ ರಚಿಸಲಾಗಿಲ್ಲವೆಂಬುದು ವಾಸ್ತವ. ಇಂದಿಗೂ ಈ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಈ ಕೃತಿಯಲ್ಲಿ, ವೈರಿಗಳ ದ್ವೇಷ, ಕ್ರೋಧಭರಿತ ವರ್ತನೆ ಮತ್ತು ಅದಕ್ಕೆ ಪ್ರವಾದಿವರ್ಯರ(ಸ) ಪ್ರೀತಿ-ವಾತ್ಸಲ್ಯಗಳೇ ತುಂಬಿದ ಪ್ರತಿಕ್ರಿಯೆಯನ್ನು ಬಹಳ ಸೊಗಸಾಗಿ ಚಿತ್ರಿಸಲಾಗಿದೆ. ನಾಡಿನ ಹಿರಿಯ ಸಾಹಿತಿ ಏರ್ಯ ಲಕ್ಷೀ ನಾರಾಯಣ ಅಲ್ವಾ ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ, ಪ್ರವಾದಿ (ಸ) ಮತ್ತು ಇಸ್ಲಾಮನ್ನು ಪರಿಚಯಿಸಲು ಈ ಕೃತಿಯು ಅತ್ಯುತ್ತಮವಾಗಿದೆ .

ಪುಟಗಳು :128 | ಮುಖಬೆಲೆ : 90

▬▬▬● ಶಾಂತಿ ಪ್ರಕಾಶನ ●▬▬▬
+91 9448696490 | +91 9449333496

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …