Home / ವಾರ್ತೆಗಳು / ಉಸ್ತಾದರುಗಳ ಮನೆ ಬಾಗಿಲಿಗೆ ರೇಷನ್

ಉಸ್ತಾದರುಗಳ ಮನೆ ಬಾಗಿಲಿಗೆ ರೇಷನ್

ಕೊರೋನಾ ಲಾಕ್‌ಡೌನ್ ನಿಮಿತ್ತ, ಕಳೆದ ಐದಾರು ತಿಂಗಳುಗಳಿಂದ ಉದ್ಯೋಗವಿಲ್ಲದೆ ಮನೆಯಲ್ಲೇ ಉಳಿದಿರುವ ಮಸೀದಿ-ಮದ್ರಸಗಳ ಉಸ್ತಾದರುಗಳ ಮನೆ ಬಾಗಿಲಿಗೆ, ಬೋಳಂಗಡಿ ಹವ್ವಾ ಜುಮ್ಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮದನಿಯವರ ನೇತೃತ್ವದಲ್ಲಿ ಸುಮಾರು ಮೂವತ್ತೆಂಟು ಕುಟುಂಬಗಳಿಗೆ ಎರಡು ಸಾವಿರ ರೂಪಾಯಿಯ ರೇಷನ್‌ ಕಿಟ್ಟನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ, ವಿತರಿಸಲಾಯಿತು.

ಬರೀ ಉಸ್ತಾದರುಗಳನ್ನು ಮಾತ್ರ ಗುರಿಯಾಗಿಸಿ ಹಮ್ಮಿಕೊಂಡ ಯೋಜನೆಯಾಗಿತ್ತಿದು. ಕೆಲವು ಮಸೀದಿ ಕಮಿಟಿಗಳು ಉಸ್ತಾದರುಗಳಿಗೆ ಅರ್ಧ ಸಂಬಳವಾದರೂ ಕೊಟ್ಟು ದಯೆ ತೋರಿದ್ದರು. ಆದರೆ, ಇನ್ನಿತರ ಕಮಿಟಿಗಳು ಉಸ್ತಾದರುಗಳನ್ನು ಲಾಕ್‌ಡೌನ್‌ನ ಸಂದರ್ಭದಲ್ಲಿ ಮನೆಗೆ ಕಳುಹಿಸಿ ಕೊಟ್ಟು, ಸದ್ಯಕ್ಕೆ ಬರಬೇಡಿ, ಅಗತ್ಯವಿದ್ದರೆ ನಾವೇ ಫೋನ್‌ ಮಾಡುತ್ತೇವೆ ಎಂದವರು ಇದುವರೆಗೂ ತಿರುಗಿ ನೋಡಲಿಲ್ಲ.

ಇಲ್ಲಿ ಹೆಚ್ಚು ಸಂಕಷ್ಟಕ್ಕೊಳಗಾದದ್ದು ಮುಅಲ್ಲಿಮ್‌(ಅಧ್ಯಾಪಕರು)ಗಳು. ಅವರು ಮದ್ರಸದ ಮಕ್ಕಳಿಗೆ ಅರಿವು ಹಂಚುವವರು. ಲಾಕ್‌ಡೌನ್‌ನಲ್ಲಿ ಜಮಾಅತ್‌ ಸದಸ್ಯ ಕುಟುಂಬಗಳ ತಿಂಗಳ ವಂತಿಕೆ ಬರುತ್ತಿಲ್ಲ ಎಂಬ ನೆಪ ಮುಂದಿಟ್ಟು, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಉಸ್ತಾದರುಗಳನ್ನು ಈ ರೀತಿ ಕಡೆಗಣಿಸಿದ್ದು ಸರಿಯೇ ಎಂದು ಕಮಿಟಿಯವರು ಆತ್ಮಾವಲೋಕನ ನಡೆಸಬೇಕು. ಉಸ್ತಾದರುಗಳಿಗೆ ಮಸೀದಿ-ಮದ್ರಸ ಬಿಟ್ಟು ಇತರ ಕೆಲಸ ಮಾಡಿ ಹವ್ಯಾಸವಿಲ್ಲ ತಾನೆ? ಜತೆಗೆ ಒಂದು ಸಲಹೆ. ಹಲವು ವರ್ಷಗಳಿಂದ ಮಸೀದಿ-ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಸ್ತಾದರುಗಳ ಮನೆಬಾಗಿಲಿಗೆ ಅಪರೂಪಕ್ಕೊಮ್ಮೆಯಾದರೂ ಭೇಟಿ ನೀಡಿ, ಅವರ ಆರ್ಥಿಕ ಪರಿಸ್ಥಿತಿಯನ್ನು ಹತ್ತಿರದಿಂದ ಅರಿಯಬೇಕು.

ನಮ್ಮ ಈ ಸೇವೆಯಿಂದ ಖುಷಿಪಟ್ಟ ಓರ್ವ ಉಸ್ತಾದರು, ವಾಯ್ಸ್‌ ಮೂಲಕ ಕೃತಜ್ಞತೆ ಮತ್ತು ದುಆವನ್ನು ಕಳುಹಿಸಿ ಕೊಟ್ಟರು. ಹಾಗೆಯೇ, ಅಲ್ಲಾಹನ ದೀನಿನ ಮಾರ್ಗದಲ್ಲಿ ಧಾರಾಳ ಕೆಲಸ ಮಾಡಿ, ಇಂದು ಅನಾರೋಗ್ಯದಿಂದಾಗಿ ವಿಶ್ರಾಂತಿಯಲ್ಲಿರುವ ಹಲವರನ್ನು, ಇದೇ ಸಂದರ್ಭದಲ್ಲಿ ಕಂಡು ಕುಶಲೋಪರಿ ವಿಚಾರಿಸಲಾಯಿತು. ಅಲ್ಲಾಹನು ಈ ಉಮ್ಮತ್ತನ್ನು ಅನುಗ್ರಹಿಸಲಿ. ದಾನಿಗಳ ವ್ಯಾಪಾರ-ವ್ಯವಹಾರಗಳಲ್ಲಿ ಧಾರಾಳ ಬರ್ಕತ್‌ ಸುರಿಸಲಿ. ಜನಪರವಾದ ಇಂತಹ ಯೋಜನೆಗಳಿಗೆ ನೆರವಾಗುವವರು ನಮ್ಮನ್ನು ಸಂಪರ್ಕಿಸಬಹುದು.
*Social Service Unit, Jamaathe Islami Hind, Mangalore. 9945923640, 9535445101*

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …