Home / ವಾರ್ತೆಗಳು / ಜೋಪಡಿಗೆ ಹೊಸ ರೂಪ ಕೊಟ್ಟ ಜಮಾಅತೆ ಇಸ್ಲಾಮೀ!

ಜೋಪಡಿಗೆ ಹೊಸ ರೂಪ ಕೊಟ್ಟ ಜಮಾಅತೆ ಇಸ್ಲಾಮೀ!

ಸಮಾಜ ಸೇವಾ ಘಟಕ, ಜಮಾ‌ಅತೆ‌ ಇಸ್ಲಾಮೀ ಹಿಂದ್‌ ಮಂಗಳೂರು ನಗರ ಶಾಖೆಯ ವತಿಯಿಂದ, ಕಸ್ಬಾಬೆಂಗರೆ ಎಂಬಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜೋಪಡಿಯಲ್ಲಿ ಬದುಕು ಸವೆಸುತ್ತಿದ್ದ, ಐದು ಮಕ್ಕಳಿರುವ ಬಡ ದಂಪತಿಗಳ ಕುಟುಂಬಕ್ಕೆ ದಾನಿಗಳ ನೆರವಿನಿಂದ ಅವಶ್ಯಕ ಸವಲತ್ತುಗಳುಳ್ಳ ಚೆಂದದ ಮನೆಯೊಂದನ್ನು ನಿರ್ಮಿಸಿ ಕೊಡಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ನಗರ ಶಾಖೆಯ ಸಮಾಜ ಸೇವಾ ಘಟಕದ ಸಂಚಾಲಕರಾದ ಜ| ಅಬ್ದುಲ್ ಗಫೂರ್‌ ಕುಳಾಯಿಯವರು ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮನೆಯ ಗಾತ್ರಕ್ಕಿಂತ ಮನೆಯಲ್ಲಿ ಮನಶ್ಶಾಂತಿ ಬಹುಮುಖ್ಯ ಮುಖ್ಯವೆನ್ನುತ್ತಾ ಸಂದರ್ಭೋಚಿತವಾಗಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರಪಾಲಿಕೆ ಸದಸ್ಯರಾದ ಜ| ಮುಹಮ್ಮದ್ ಮುನೀಬ್‌, ಇಂತಹ ಮಾನವೀಯ ಸೇವೆಗಳು ಸದಾ ಜೀವಂತವಾಗಿರ ಬೇಕೆಂದು ಹರಸಿದರು.‌ ಅನಸ್ ಬಿನ್ ಮಾಲಿಕ್‌ ಮಸೀದಿಯ ಇಮಾಮರಾದ ಶೈಖ್‌ ಅಹ್ಮದ್‌ ಅಸ್ಗರ್‌, ಮೋನಾಕ, ಇಬ್ರಾಹಿಮ್‌ ಬಿ.ಎ., ಮುಕ್ರಿ ಬಶೀರಾಕ ಇತರರು ಉಪಸ್ಥಿತರಿದ್ದರು. ಸಹಕರಿಸಿದ ದಾನಿಗಳ ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಲಾಹನು ಧಾರಾಳ ಬರ್ಕತ್‌ ಸುರಿಸಲಿ ಮತ್ತು ಪರಲೋಕದಲ್ಲೂ ಅವರಿಗೆ ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ. ಆಮೀನ್!

Social Service Unit, Jamaat-e-Islami Hind, Mangalore. 9945923640, 9535445101

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …