ಪ್ರವಾದಿ ಮುಹಮ್ಮದ್(ಸ)ರ ಚಾರಿತ್ರ್ಯದ ಕುರಿತು ಪವಿತ್ರ ಕುರ್ಆನ್ ಈ ರೀತಿ ಸಾಕ್ಷಿ ನೀಡುತ್ತದೆ. “ನಿಶ್ಚಯವಾಗಿಯೂ ನೀವು ಚಾರಿತ್ರ್ಯದ ಅತ್ಯುನ್ನತ ಮಟ್ಟದಲ್ಲಿದ್ದೀರಿ.” (ಅಲ್ ಕಲಮ್: 4) ಪ್ರವಾದಿ ಮುಹಮ್ಮದ್(ಸ)ರು ಈ ರೀತಿ ಹೇಳಿರುವರು, “ಉತ್ತಮ ಚಾರಿತ್ರ್ಯವನ್ನು ಪರಿಪೂರ್ಣಗೊಳಿಸಲಿಕ್ಕಾಗಿ ನನ್ನನ್ನು ಅಲ್ಲಾಹನ ವತಿಯಿಂದ ನಿಯೋಗಿಸಲಾಗಿದೆ.” (ಮೂಅತ್ತಾ) 1.ಸತ್ಯಸಂಧ: ಪ್ರವಾದಿ ಮುಹಮ್ಮದ್(ಸ)ರು ಸತ್ಯಸಂಧ ವ್ಯಕ್ತಿಯಾಗಿದ್ದರು. ಅವರು ತಮ್ಮ ಜೀವಮಾನದಲ್ಲಿ ಎಂದೂ ಸುಳ್ಳು ಹೇಳಿದವರಲ್ಲ. ಪ್ರವಾದಿತ್ವಕ್ಕಿಂತ ಮೊದಲೇ ಜನರು ಅವರನ್ನು ‘ಅಸ್ಸಾದಿಕ್’ (ಸತ್ಯಸಂಧ) ಮತ್ತು ‘ಅಲ್ …
Read More »ಪ್ರವಾದಿ(ಸ) ಮತ್ತು ಜಾಗತಿಕ ಕಾನೂನುಗಳು
✍️ ಮುಷ್ತಾಕ್ ಹೆನ್ನಾಬೈಲ್ ಅರೇಬಿಯಾದಲ್ಲಿ ಪ್ರವಾದಿ ಮುಹಮ್ಮದರು(ಸ) ಪ್ರವರ್ಧಮಾನಕ್ಕೆ ಬರುವವರೆಗೆ ಜಗತ್ತಿನ ಯಾವುದೇ ಸಾಮ್ರಾಜ್ಯ, ಸಮಾಜ, ಸಮುದಾಯ, ದೇಶಗಳ ಆಡಳಿತಗಳು ನಿರ್ದಿಷ್ಟ ಅಥವ ನಿಖರ ಸಿದ್ಧಾಂತ-ಸಂವಿಧಾನಗಳ ಅಡಿಯಲ್ಲಿ ಆಡಳಿತಗಳನ್ನು ನಡೆಸುತ್ತಿರಲಿಲ್ಲ. ರಾಜ, ಮಂತ್ರಿ ಅಥವಾ ನಾಯಕನ ವಿವೇಚನೆಯಂತೆ ಆಡಳಿತ ಮತ್ತು ನ್ಯಾಯ ವ್ಯವಸ್ಥೆ ನಡೆಯುತ್ತಿತ್ತು. ಸ್ವಾಭಾವಿಕವಾದ ಕೆಲವು ನಾಗರಿಕ ಹಕ್ಕುಗಳನ್ನು ಹೊರತುಪಡಿಸಿದರೆ ಉಳಿದಂತೆ ಪ್ರಭುತ್ವದ ಅಡಿಯಲ್ಲಿ ಪ್ರಜೆಗಳು ಅಕ್ಷರಶ: ಗುಲಾಮರು. ಹೀಗಿನ ಹಕ್ಕುಗಳು ಕೂಡ ಆಡಳಿತಗಾರನ ಔದಾರ್ಯವೆಂದು ಪರಿಗಣಿತವಾಗಿತ್ತು. ಭೌತಿಕವಾದ …
Read More »ಪ್ರವಾದಿ(ಸ) ಬಡ್ಡಿಯನ್ನು ವಿರೋಧಿಸಿದ್ದೇಕೆ?
✍️ ಕೆ.ಎಂ. ಅಶ್ರಫ್ ಸಾಮಾಜಿಕ, ಆರ್ಥಿಕ ಮತ್ತು ಆರೋಗ್ಯದ ದೃಷ್ಟಿಯಿಂದ ಸಕಲ ಮಾನವಕುಲಕ್ಕೆ ಮಾರಕವಾದ ವಿಷಯಗಳಲ್ಲಿ ಅಮಲು ಪದಾರ್ಥಗಳು ಮತ್ತು ಬಡ್ಡಿ ವ್ಯವಹಾರಗಳು ಅತೀ ಪ್ರಮುಖವಾಗಿವೆ. ಇವೆರಡೂ ಜಾಗತಿಕವಾಗಿ ಕೋಟಿಗಟ್ಟಲೆ ವ್ಯವಹಾರ ಹೊಂದಿವೆ. ಇತಿಹಾಸದುದ್ದಕ್ಕೂ ಶ್ರೀಮಂತ ಮತ್ತು ಬಡವರ ನಡುವೆ ಅಂತರವನ್ನು ಹೆಚ್ಚಿಸುವಲ್ಲಿ ಬಡ್ಡಿ ವ್ಯವಹಾರ ಪ್ರಮುಖ ಪಾತ್ರ ವಹಿಸಿದೆ. ಬಡ ಮತ್ತು ಜನ ಸಾಮಾನ್ಯರನ್ನು ಶೋಷಿಸಿ, ಅವರನ್ನು ಗುಲಾಮರನ್ನಾಗಿಸಿ ತನ್ನ ಪ್ರಭುತ್ವವನ್ನು ಸ್ಥಾಪಿಸಿ ಕಾಯ್ದುಕೊಳ್ಳುವಲ್ಲಿ ಬಂಡವಾಳ ಶಾಹಿಗಳ ಅತೀ ಉಪಯುಕ್ತವಾದ …
Read More »ಪ್ರವಾದಿ ಮುಹಮ್ಮದ್ (ಸ) ಲೇಖನ ಸಂಕಲನ ಬಿಡುಗಡೆ
ಪ್ರವಾದಿ ಮುಹಮ್ಮದ್ (ಸ) ರವರ ಬದುಕು ಮತ್ತು ಸಂದೇಶಗಳ ಬಗ್ಗೆ ವಿಶ್ವ ವಿಖ್ಯಾತ ಲೇಖಕರು, ಚಿಂತಕರು, ಮೇಧಾವಿಗಳು ಹಾಗೂ ನಾಡಿನ ಹೆಸರಾಂತ ಸಾಹಿತಿಗಳ ಲೇಖನಗಳ ಸಂಕಲನ. ಪ್ರವಾದಿವರ್ಯರ ವ್ಯಕ್ತಿತ್ವ ಹಾಗೂ ಅವರ ಸಂದೇಶ ಅವರ ಅನುಯಾಯಿಗಳಲ್ಲದವರನ್ನು ಕೂಡಾ ಎಷ್ಟು ಗಾಢವಾಗಿ ಪ್ರಭಾವಿತಗೊಳಿಸಿದೆ ಎಂಬುದನ್ನು ಇದರಲ್ಲಿ ಸಂಕಲಿಸಿದ ಒಂದೊಂದು ಲೇಖನಗಳೂ ವ್ಯಕ್ತಪಡಿಸುತ್ತದೆ. ಮೈಕೆಲ್ ಹೆಚ್ ಹಾರ್ಟ್ ಕ್ರಷ್ಣ ಚೈತನ್ಯ ಥಾಮಸ್ ಕಾರ್ಲೈಲ್ ಲಾ ಮಾರ್ಟಿನ್ ಸಯ್ಯದ್ ಸುಲೈಮಾನ್ ನದ್ವಿ ಜಾನ್ ಎಸ್ಪಿಸಿಟೋ …
Read More »ನೈತಿಕ, ಅನೈತಿಕ ಮತ್ತು ವರ್ತಮಾನದ ತಲ್ಲಣಗಳು
ಜಮಾಅತೆ ಇಸ್ಲಾಮೀ ಹಿಂದ್ನ ‘ನೈತಿಕತೆಯೇ ಸ್ವಾತಂತ್ರ್ಯ’ ಎಂಬ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ವಿಶೇಷ ಲೇಖನ ✍️ ಏ.ಕೆ. ಕುಕ್ಕಿಲ ನೈತಿಕ ಅನೈತಿಕ ವರ್ತಮಾನ ಕಾಲದ ಅತ್ಯಂತ ವಿವಾದಾಸ್ಪದ ಪದಗಳಿವು. ವ್ಯಕ್ತಿಯಿಂದ ವ್ಯಕ್ತಿಗೆ ಈ ಎರಡೂ ಪದಗಳ ವ್ಯಾಖ್ಯಾನಗಳು ಇವತ್ತು ಬದಲಾಗುತ್ತಿವೆ. ಮದ್ಯಪಾನವನ್ನು ನೈತಿಕ ಪಟ್ಟಿಯಲ್ಲಿಟ್ಟು ಸಮರ್ಥಿಸುವವರು ಇರುವಂತೆಯೇ ಅನೈತಿಕವೆಂದು ಸಾರಿ ವಿರೋಧಿಸುವವರೂ ಇದ್ದಾರೆ. ಹೆಣ್ಣಿನ ಉಡುಗೆ ತೊಡುಗೆಯ ಬಗ್ಗೆಯೂ ಇಂಥದ್ದೇ ಭಿನ್ನ ನಿಲುವುಗಳಿವೆ. ಅತ್ಯಾಚಾರಕ್ಕೆ ತುಂಡುಡುಗೆಯದ್ದೂ ಕೊಡುಗೆ ಇದೆ ಎಂದು …
Read More »“ನೈತಿಕತೆಯೇ ಸ್ವಾತಂತ್ರ್ಯ” ಪ್ರಬಂಧ ಸ್ಪರ್ಧೆ
ಮಂಗಳೂರು: “ನೈತಿಕತೆಯೇ ಸ್ವಾತಂತ್ರ್ಯ” ಎಂಬ ಕೇಂದ್ರೀಯ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗವು ಸೆಪ್ಟೆಂಬರ್ ತಿಂಗಳ 1 ರಿಂದ 30 ರ ವರೆಗೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್, ಮಂಗಳೂರು ಮಹಿಳಾ ವಿಭಾಗವು ಮಂಗಳೂರು ನಗರಮಟ್ಟದಲ್ಲಿ ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹಾಗೂ 30 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ಕನ್ನಡ ಹಾಗೂ …
Read More »ಮಕ್ಕಾದ ಮಸ್ಜಿದ್ ಹರಾಮ್ ನಲ್ಲಿ ವಿಶ್ವದ ಅತೀ ದೊಡ್ಡ ಎಸಿ
ಮಕ್ಕಾದ ಮಸ್ಜಿದ್ ಹರಾಮ್ ಗೆ ಜೋಡಿಸಲಾಗಿರುವ ಎಸಿ ವ್ಯವಸ್ಥೆಯು ಜಗತ್ತಿನಲ್ಲಿ ಅತ್ಯಂತ ದೊಡ್ಡದೆಂದು ಗುರುತಿಸಲಾಗಿದೆ. 1,55,000 ಟನ್ ಸಾಮರ್ಥ್ಯದ ಈ ಎಸಿ ವ್ಯವಸ್ಥೆ ಜಾಗತಿಕವಾಗಿ ಅತಿ ದೊಡ್ಡ ವ್ಯವಸ್ಥೆಯಾಗಿ ಮಾನ್ಯವಾಗಿದೆ. ಹರಮ್ ನ ಎರಡು ಸ್ಥಳಗಳಲ್ಲಿ ಈ ಎಸಿ ವ್ಯವಸ್ಥೆ ಮಾಡಲಾಗಿದೆ. ಶಾಮಿಯ ಮತ್ತು ಅಜಿಯಾದ್ ಎಂಬ ಸ್ಥಳಗಳಲ್ಲಿ ಈ ಎಸಿಯನ್ನು ವ್ಯವಸ್ಥೆ ಗೊಳಿಸಲಾಗಿದೆ. ಈ ಮೂಲಕ 1,55,000 ಟನ್ ಸಾಮರ್ಥ್ಯದ ಏಸಿ ಕಾರ್ಯಪ್ರವೃತ್ತವಾಗಿದೆ. ಹರಮ್ ನಿಂದ ಬೇರೆ ಬೇರೆ …
Read More »ಅಂತಾರಾಷ್ಟ್ರೀಯ ಕುರ್ ಆನ್ ಸ್ಪರ್ಧೆ ಮುಕ್ತಾಯ; ವಿಜೇತರಾದ ಸೌದಿ, ಬಾಂಗ್ಲಾ, ಫ್ರೆಂಚ್ ಪ್ರಜೆಗಳು
ಮಕ್ಕಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಕುರ್ ಆನ್ ಪಾರಾಯಣ ಸ್ಪರ್ಧೆ ಕೊನೆಗೊಂಡಿದ್ದು ಸೌದಿ ಬಾಂಗ್ಲಾದೇಶಿ ಮತ್ತು ಫ್ರಾನ್ಸ್ ನ ಸ್ಪರ್ಧಿಗಳು ವಿಜೇತರಾಗಿದ್ದಾರೆ. ಒಟ್ಟು ಎಂಟು ಕೋಟಿ ರೂಪಾಯಿ ಬಹುಮಾನ ಮೊತ್ತದ ಈ ಸ್ಪರ್ಧೆಯಲ್ಲಿ 123 ರಾಷ್ಟ್ರಗಳಿಂದ ಆರು ಸಾವಿರಕ್ಕಿಂತಲೂ ಅಧಿಕ ಸ್ಪರ್ಧಿಗಳು ಭಾಗಿಯಾಗಿದ್ದರು. ಆಗಸ್ಟ್ ಹತ್ತರಂದು ಈ ಸ್ಪರ್ಧೆಯ ಕೊನೆಯ ಸುತ್ತು ಆರಂಭವಾಗಿತ್ತು. ಇದು ಮಕ್ಕಾದಲ್ಲಿ ನಡೆದ 43ನೇ ಕಿಂಗ್ ಅಬ್ದುಲ್ ಅಝೀಝ್ ಅಂತಾರಾಷ್ಟ್ರೀಯ ಕುರ್ ಆನ್ ಸ್ಪರ್ಧೆಯಾಗಿದೆ. 13 ದಿವಸಗಳ …
Read More »ಮೌಲಾನರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಲು ಕಾರಣವೇನು?
✍️ಏ.ಕೆ.ಕುಕ್ಕಿಲ ಸ್ವಾತಂತ್ರ್ಯ ಅಂದರೆ ಬಿಡುಗಡೆ. ಒಂದರ್ಥದಲ್ಲಿ ವಿಮೋಚನೆ. 1947 ಆಗಸ್ಟ್ 15 ಈ ದೇಶದ ಪಾಲಿಗೆ ಯಾಕೆ ಮುಖ್ಯ ಅಂದರೆ, ಆವತ್ತು ಈ ದೇಶ ಬ್ರಿಟಿಷರಿಂದ ಬಿಡುಗಡೆಗೊಂಡಿತು. ಇತಿಹಾಸದ ಉದ್ದಕ್ಕೂ ಇಂಥ ವಿಮೋಚನೆಗಳು ನಡೆದಿವೆ ಮತ್ತು ಇಂಥ ಇಸವಿಗಳನ್ನು ದಪ್ಪಕ್ಷರಗಳಲ್ಲಿ ಬರೆದಿಡಲಾಗಿದೆ. ಮುಸ್ಲಿಮರ ಮಟ್ಟಿಗೆ ಈ ‘ಬಿಡುಗಡೆ’ ಎಂಬ ಪದ ಹೊಸತಲ್ಲ. ಮದ್ರಸ ಕಲಿಕೆಯ ಸಂದರ್ಭದಲ್ಲೇ ಅವರು ಈ ಪದವನ್ನು ಮತ್ತು ಅದರ ಭಾವ-ಬೇಡಿಕೆಗಳನ್ನು ಅರಿತಿರುತ್ತಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ …
Read More »ವೈಚಾರಿಕ ವಿಶ್ಲೇಷಣೆಗೆ ಒಳಪಡಬೇಕಾದ ಹಿಜ್ರಾ
✍️ ಏ.ಕೆ. ಕುಕ್ಕಿಲ ಮಕ್ಕಾದಲ್ಲಿ ಅವತೀರ್ಣವಾದ ಪವಿತ್ರ ಕುರ್ಆನಿನ ಆರಂಭದ 50ಕ್ಕಿಂತಲೂ ಅಧಿಕ ಅಧ್ಯಾಯಗಳನ್ನು ಅದು ಅವತೀರ್ಣಗೊಂಡ ಕ್ರಮದಲ್ಲೇ ಓದಲು ಪ್ರಯತ್ನಿಸಿದ ಯಾರಿಗೇ ಆಗಲಿ, ಮಕ್ಕಾದಲ್ಲಿ ಪ್ರವಾದಿ(ಸ) ಅನುಭವಿಸಿದ ಯಾತನೆಗಳು ಕಣ್ಮುಂದೆ ಬಂದೀತು. ಮಕ್ಕಾ ಬದುಕಿನ 13 ವರ್ಷಗಳ ಬಳಿಕ ಅವರು ಮದೀನಾಕ್ಕೆ ವಲಸೆ ಹೋದರು. ಆದರೆ ಈ ವಲಸೆಯನ್ನು ಅನಿವಾರ್ಯಗೊಳಿಸಿದ ಹತ್ತು-ಹಲವು ಸನ್ನಿವೇಶಗಳಿವೆ. ಈ ಸನ್ನಿವೇಶಗಳೆಲ್ಲ ಏಕಪ್ರಕಾರವಾಗಿರಲಿಲ್ಲ. ಒಂದಕ್ಕಿಂತ ಒಂದು ಭಿನ್ನವಾದ ಮತ್ತು ಪರಿಣಾಮದಲ್ಲೂ ಒಂದನ್ನೊಂದು ಮೀರಿಸುವ ರೀತಿಯಲ್ಲಿ …
Read More »
IslamKannada News Portal