Home / editor (page 11)

editor

ಉಮ್ರಾ ಯಾತ್ರಿಕರು ತಮ್ಮ ಲಗೇಜ್‌ನಲ್ಲಿ ಯಾವುದೇ ನಿಷೇಧಿತ ವಸ್ತುಗಳಿಲ್ಲ ಎಂಬುದನ್ನು ಖಚಿತಪಡಿಸುವುದು ಕಡ್ಡಾಯ

ರಿಯಾದ್: ಉಮ್ರಾ ಯಾತ್ರಿಕರು ತಮ್ಮ ಲಗೇಜ್‌ನಲ್ಲಿ ಯಾವುದೇ ನಿಷೇಧಿತ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಸಿದೆ. ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಚಿವಾಲಯ ಮತ್ತೆ ಬಿಡುಗಡೆ ಮಾಡಿದೆ. ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಚಿವಾಲಯ ಮಾಹಿತಿ ನೀಡಿದೆ. ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಪಟಾಕಿ, ನಕಲಿ ಕರೆನ್ಸಿ, ಮಾದಕ ವಸ್ತುಗಳು, ಅಕ್ರಮ ಗೌಪ್ಯತೆ ಸಾಧನಗಳು, ಸ್ಪೀಡ್ ರಾಡಾರ್ ಡಿಟೆಕ್ಟರ್‌ಗಳು, ಎಲೆಕ್ಟ್ರಿಕ್ ಶಾಕರ್‌ಗಳು, ಹಾನಿಕಾರಕ ಲೇಸರ್ …

Read More »

ಮಕ್ಕಳೊಂದಿಗೆ ಸೇರಿ ಬಾಳಬೇಕಾದ ಮಾತಾಪಿತರು..

✍️ ಸಿ.ಟಿ. ಸುಹೈಬ್ ಮಕ್ಕಳು ಜೀವನದ ಮಹತ್ತರವಾದ ಅನುಗ್ರಹ ಹಾಗೂ ಅಲಂಕಾರವಾಗಿದೆ. ಮಕ್ಕಳು ಸುಂದರವಾಗಿ ಬಾಳಿ ಬದುಕಬೇಕೆಂಬುದು ಪ್ರತಿಯೋರ್ವ ಮಾತಾಪಿತರ ಪ್ರಾರ್ಥನೆಯಾಗಿದೆ. ಅವರ ಪ್ರತಿಚಲನವಲನಗಳ ಮೇಲೆ ಅವರು ಸದಾ ನಿಗಾ ವಹಿಸುತ್ತಾರೆ. ಅವರು ಬೆಳೆಯುವವರೆಗೆ ಅವರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಜೊತೆಗೆ ಆತಂಕವೂ ಅವರಲ್ಲಿರುತ್ತದೆ. ಅವರಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಾಮಾಜಿಕವಾಗಿಯೂ ಆರ್ಥಿಕವಾಗಿಯೂ ಉತ್ತಮ ಸ್ಥಿತಿಗೆ ತಲುಪಿಸಲು ಎಲ್ಲ ತಂದೆ-ತಾಯಂದಿರೂ ಶ್ರಮಿಸುತ್ತಾರೆ. ಲೌಕಿಕವಾದ ಏಳಿಗೆಯ ಬಗ್ಗೆ ಕನಸು …

Read More »

ನಮ್ಮ ಧರ್ಮ ನಮ್ಮೊಂದಿಗೆ, ನಮ್ಮ ಪ್ರೀತಿ ಎಲ್ಲರೊಂದಿಗೆ: ಮುಹಮ್ಮದ್ ಕುಂಞಿ

ನಮ್ಮ ಧರ್ಮ ನಮ್ಮೊಂದಿಗೆ ನಮ್ಮ ಪ್ರೀತಿ ಎಲ್ಲರೊಂದಿಗೆ ಇರಲಿ. ನಾವು ನಮ್ಮ ಧರ್ಮಗಳನ್ನು ಪಾಲಿಸೋಣ, ಆದರೆ ಎಲ್ಲರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳಬೇಕಾಗಿದೆ ಎಂದು ಶಾಂತಿ ಪ್ರಕಾಶನ ಸಂಸ್ಥೆಯ ಮುಹಮ್ಮದ್ ಕುಂಞಿ ಹೇಳಿದರು. ಬೆಳಗಾವಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯಿಂದ ಸರ್ವಧರ್ಮಗಳ ಗುರುಗಳನ್ನು ಸೇರಿಸಿ ಹಮ್ಮಿಕೊಂಡಿದ್ದ ಸದ್ಭಾವನಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. “ಸಮಾಜದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಪರಸ್ಪರ ಸಹಕಾರ ವಾತಾವರಣ, ಬೆಳೆಯುವ ಅವಕಾಶಗಳನ್ನು ಪ್ರೋತ್ಸಾಹಿಸುವುದು, ಸಾಮಾಜಿಕ ಪಿಡುಗುಗಳ ನಿರ್ಮೂಲನೆ, ಸಂವಿಧಾನ …

Read More »

ಹಜ್ಜ್ ಯಾತ್ರೆ: ಮಕ್ಕಾಗೆ ವಿದಾಯ ಹೇಳಿದ ಭಾರತೀಯರು

ಹಜ್ ನಿರ್ವಹಿಸುವುದಕ್ಕಾಗಿ ಮಕ್ಕಾಕ್ಕೆ ತೆರಳಿರುವ ಎಲ್ಲ ಭಾರತೀಯರೂ ಇದೀಗ ಮಕ್ಕಾಕ್ಕೆ ವಿದಾಯ ಕೋರಿದ್ದಾರೆ ಎಂದು ವರದಿಯಾಗಿದೆ. ಬಹುತೇಕ ಎಲ್ಲಾ ಭಾರತೀಯರೂ ಭಾರತಕ್ಕೆ ಮರಳಿದ್ದಾರೆ. ಕೆಲವರು ಮದೀನಾ ಸಂದರ್ಶನಕ್ಕಾಗಿ ತೆರಳಿದ್ದಾರೆ. ಅವರು ಅಲ್ಲಿಂದಲೇ ಭಾರತಕ್ಕೆ ಮರಳಲ್ಲಿದ್ದಾರೆ. ಆದರೆ ಹಜ್ ಗಾಗಿ ತೆರಳಿರುವ ಯಾವ ಭಾರತೀಯರೂ ಈಗ ಮಕ್ಕಾದಲ್ಲಿ ಉಳಿದುಕೊಂಡಿಲ್ಲ ಎಂದು ವರದಿಯಾಗಿದೆ. ಹಜ್ ಮುಗಿದ ತಕ್ಷಣ ಜೂನ್ 22 ರಿಂದಲೇ ಜಿದ್ದಾದ ಮೂಲಕ ಹಾಜಿಗಳು ಭಾರತಕ್ಕೆ ಮರಳಲು ಪ್ರಾರಂಭಿಸಿದ್ದರು. ಜುಲೈ ಒಂದರಿಂದ …

Read More »

ಪ್ರವಾದಿಯವರ ಇಷ್ಟದ ಮದೀನಾದ ಅಲ್ ಕರ್ ಝ್ ಬಾವಿಯ ನವೀಕರಣ: ಪ್ರವಾಸಿಗರ ಪ್ರವೇಶಕ್ಕೆ ಮುಕ್ತ

ಪ್ರವಾದಿ ಇತಿಹಾಸಕ್ಕೆ ಸಂಬಂಧಿಸಿ ಪ್ರಸಿದ್ಧವಾಗಿರುವ ಮದೀನಾದ ಅಲ್ ಕರ್ ಝ್ ಬಾವಿಯ ಪುನರ್ನವೀಕರಣ ಕಾರ್ಯ ಮುಗಿದಿದ್ದು ಇದೀಗ ಪ್ರವಾಸಿಗರ ಪ್ರವೇಶಕ್ಕೆ ತೆರೆಯಲಾಗಿದೆ. ಈ ಬಾವಿಯನ್ನು ಟೂರಿಸಂ ಪ್ರದೇಶವಾಗಿ ಪರಿವರ್ತಿಸುವುದಕ್ಕೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳು ಈವರೆಗೆ ನಡೆಯುತ್ತಿತ್ತು. ಹಜ್ ಮತ್ತು ಉಮ್ರಾ ಮಾಡಲು ಬರುವವರು ಪ್ರವಾದಿಯವರಿಗೆ ಸಂಬಂಧಿಸಿದ ಐತಿಹಾಸಿಕ ಸ್ಥಳಗಳನ್ನು ಕಾಣುವ ಉತ್ಸಾಹವನ್ನು ತೋರುತ್ತಾರೆ. ಅವರನ್ನು ಗುರಿಯಾಗಿಸಿಯೇ ಈ ಬಾವಿಯ ಪುನರ್ ನವೀಕರಣ ನಡೆದಿದೆ. ಪ್ರವಾದಿ ಮುಹಮ್ಮದರು ಇಷ್ಟಪಟ್ಟ ಬಾವಿ ಇದಾಗಿತ್ತು. …

Read More »

ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?

✍️ ಎ.ಕೆ.ಕುಕ್ಕಿಲ ಕ್ರಿ.ಶ. 622, ಮುಹರ‍್ರಮ್ 1ರಂದು ಪ್ರವಾದಿ(ಸ) ಮತ್ತು ಅವರ ಸಂಗಡಿಗ ಅಬೂಬಕರ್(ರ)ರು ಮಕ್ಕಾದಿಂದ ಮದೀನಾಕ್ಕೆ ಐತಿಹಾಸಿಕ ವಲಸೆ  (ಹಿಜ್‌ರಾ) ಆರಂಭಿಸಿದ್ದರು. ಬಳಿಕ ದ್ವಿತೀಯ ಖಲೀಫಾ ಉಮರ್(ರ)ರು ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಮುಹರ‍್ರಮ್ ಅನ್ನೇ  ಆಯ್ಕೆ ಮಾಡಿಕೊಂಡರು. ಇಲ್ಲೊಂದು  ಪ್ರಶ್ನೆಯಿದೆ. ಯಾಕೆ ಪ್ರವಾದಿ(ಸ)ರ ಹಿಜ್‌ರಾ ದಿನಾಂಕವನ್ನೇ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ  ತಿಂಗಳಾಗಿ ಆಯ್ಕೆ ಮಾಡಿಕೊಳ್ಳಲಾಯಿತು? ಇಸ್ಲಾಮೀ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಬದ್ರ್ ಹೋರಾಟ ನಡೆದಿರುವುದು  ರಮಝಾನ್ 17ರಂದು. …

Read More »

ಹಿಂದ್ ರಜಬ್ ಬಗ್ಗೆ ನಿಮಗೇನು ಗೊತ್ತು?

✍️ ಪಿ.ಕೆ. ನಿಯಾಝ್ ಗಾಝಾದ ಬಗ್ಗೆ ಮಾತನಾಡುವಾಗ ಹಿಂದ್ ರಜಬ್ ಎಂಬ ಆರು ವಯಸ್ಸಿನ ಬಾಲಕಿ ಆಡಿದ ಮಾತುಗಳು ಕಿವಿಯಲ್ಲಿ ಸದಾ ಗುಂಯ್‌ಗುಡುತ್ತಿರುತ್ತದೆ. ಒಂದು ಕಾರಿನಲ್ಲಿ ಸಂಚರಿಸುತ್ತಿದ್ದ ಆ ಬಾಲಕಿಯ ಜೊತೆ ಹದಿನೈದರ ಹರೆಯದ ಮತ್ತೋರ್ವ ಸಂಬಂಧಿಕಳಾದ ಲಯಾನ್ ಹಮದ ಕೂಡಾ ಇದ್ದಳು. ಇವರು ಸಂಚರಿಸುತ್ತಿದ್ದ ಕಾರಿನ ಮೇಲೆ ಇಸ್ರೇಲ್ ಪಡೆ ಗುಂಡಿನ ಮಳೆಗೆರೆಯುತ್ತದೆ. ಈರ್ವರೂ ಶಹೀದ್ ಆಗುತ್ತಾರೆ. 355 ಮದ್ದು ಗುಂಡುಗಳನ್ನು ಅವರ ಕಾರನ್ನು ಗುರಿಯಾಗಿರಿಸಿ ಹಾರಿಸಲಾಗಿತ್ತು. ಈ ಬಗ್ಗೆ …

Read More »

ಆ ಹತ್ತು ಮಂದಿಯನ್ನು ಪ್ರವಾದಿ ಆಕ್ಷೇಪಿಸಲು ಕಾರಣವೇನು?

✍️ ಏ.ಕೆ. ಕುಕ್ಕಿಲ 1. ಶರಾಬಿಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸುವವರು 2. ಶರಾಬು ತಯಾರಿಸುವವರು 3. ಶರಾಬು ಕುಡಿಯುವವರು 4. ಶರಾಬು ಕುಡಿಸುವವರು 5. ಶರಾಬು ಸರಬರಾಜು ಮಾಡುವವರು 6. ಯಾರಿಗಾಗಿ ಸರಬರಾಜು ಮಾಡಲಾಗುತ್ತದೋ ಅವರು 7. ಶರಾಬು ಮಾರಾಟ ಮಾಡುವವರು 8. ಶರಾಬು ಖರೀದಿಸುವವರು 9. ಉಡುಗೊರೆಯಾಗಿ ನೀಡುವವರು 10. ಶರಾಬಿನ ವರಮಾನದಿಂದ ಬದುಕುವವರು ಈ ಹತ್ತು ವಿಧದ ಜನರನ್ನು ಪ್ರವಾದಿ ಮುಹಮ್ಮದ್(ಸ) ಶಪಿಸಿದ್ದಾರೆ. ಅಂದಹಾಗೆ, ಶಾಪಕ್ಕೆ ಅಪವಾದವೆಂಬಂತೆ …

Read More »

ಜುಲೈ 8, ಸೋಮವಾರ, ಮುಹರ್ರಂ ತಿಂಗಳ ಆರಂಭ

ಮಂಗಳೂರು, ಜುಲೈ 6: ಶನಿವಾರ ಅಸ್ತಮಿಸಿದ ರವಿವಾರ ರಾತ್ರಿ ಮುಹರಂ ತಿಂಗಳ ಪ್ರಥಮ ಚಂದ್ರದರ್ಶನವಾದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಜು.7ರ ರವಿವಾರ ಅಸ್ತಮಿಸಿದ ಸೋಮವಾರ ರಾತ್ರಿ ಮುಹರಂ 1 ಆಗಲಿರುವುದಾಗಿ ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಲಾಜ್ ತ್ವಾಖಾ ಅಹ್ಮದ್ ಮುಸ್ಲಿಯಾ‌ರ್ ತಿಳಿಸಿದ್ದಾರೆ. ಜು.16ರಂದು ಮುಹರಂ 9 ತಾಸೂಆ ಹಾಗೂ ಜು.17ರಂದು ಮುಹರಂ 10 ಆಶೂರಾಅ್ ದಿನವಾಗಿರುತ್ತದೆ. ಆ ದಿನ ಉಪವಾಸ ಸುನ್ನತ್ ಆಗಿದೆ ಎಂದು ಝೀನತ್ ಬಕ್ಷ್ …

Read More »

ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಪವಿತ್ರ ಕುರ್ ಆನಿನ ಪ್ರಶ್ನೆ

ನೀವು ಸುರಿಸುವ ವೀರ್ಯದ ಕುರಿತು ನೀವೆಂದಾದರೂ ವಿವೇಚಿಸಿರುವಿರಾ? ಅದರಿಂದ ಶಿಶುವನ್ನು ಉಂಟು ಮಾಡುವವರು ನೀವೋ ಅಥವಾ ಅದನ್ನುಂಟು ಮಾಡುವವರು ನಾವೋ?” ಪವಿತ್ರ ಕುರ್ ಆನ್ 56: 58-59) ಈ ಸಂಕ್ಷಿಪ್ತ ನುಡಿಗಳಲ್ಲಿ ಒಂದು ಪ್ರಮುಖ ಪ್ರಶ್ನೆಯನ್ನು ಮಾನವನ ಮುಂದಿರಿಸಲಾಗಿದೆ. ಈ ಜಗತ್ತಿನ ಇತರೆಲ್ಲ ವಿಷಯಗಳನ್ನು ಬದಿಗಿರಿಸಿ ಮಾನವನು ತನ್ನನ್ನು ಹೇಗೆ ಸೃಷ್ಟಿಸಲಾಗಿದೆಯೆಂದು ಕೇವಲ ಸ್ವಂತದ ಬಗ್ಗೆ ಆಲೋಚಿಸಿ ನೋಡಲಿ. ಹಾಗಾದರೆ ಆತನಲ್ಲಿ ಕು‌ರ್ ಆನಿನ ಮೂಲ ಶಿಕ್ಷಣವಾಗಿರುವ ಏಕದೇವತ್ವ ಮತ್ತು …

Read More »