ರಿಯಾದ್: ಉಮ್ರಾ ಯಾತ್ರಿಕರು ತಮ್ಮ ಲಗೇಜ್‌ನಲ್ಲಿ ಯಾವುದೇ ನಿಷೇಧಿತ ವಸ್ತುಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಸಿದೆ. ನಿಷೇಧಿತ ವಸ್ತುಗಳ ಪಟ್ಟಿಯನ್ನು ಸಚಿವಾಲಯ ಮತ್ತೆ ಬಿಡುಗಡೆ ಮಾಡಿದೆ. ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸಚಿವಾಲಯ ಮಾಹಿತಿ ನೀಡಿದೆ.
ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಪಟಾಕಿ, ನಕಲಿ ಕರೆನ್ಸಿ, ಮಾದಕ ವಸ್ತುಗಳು, ಅಕ್ರಮ ಗೌಪ್ಯತೆ ಸಾಧನಗಳು, ಸ್ಪೀಡ್ ರಾಡಾರ್ ಡಿಟೆಕ್ಟರ್‌ಗಳು, ಎಲೆಕ್ಟ್ರಿಕ್ ಶಾಕರ್‌ಗಳು, ಹಾನಿಕಾರಕ ಲೇಸರ್ ಪೆನ್‌ಗಳು ಮತ್ತು ಹಿಡನ್ ಕ್ಯಾಮೆರಾಗಳು ಸೇರಿವೆ.
ಪ್ರಯಾಣಕ್ಕೆ ತಯಾರಿ ಮಾಡುವ ಮೊದಲು ಅಂತಹ ವಸ್ತುಗಳು ಲಗೇಜ್‌ನಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯ ಹೇಳಿದೆ. ಈ ಮೊದಲು ಉಮ್ರಾ ವೀಸಾಗಳನ್ನು 30 ದಿನಗಳಿಗೆ ನೀಡಲಾಗುತ್ತಿತ್ತು, ಅದನ್ನು ಈಗ 90 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಯಾತ್ರಿಕರು ಉಷ್ಣತೆಯಿಂದ ರಕ್ಷಣೆ ಪಡೆಯಲು ಮುಂಜಾಗರೂಕತೆ ವಹಿಸಬೇಕೆಂದು ಕೂಡ ಸಚಿವಾಲಯ ತಿಳಿಸಿದೆ.